X

ನಮ್ಮ ಬಗ್ಗೆ

ಕರ್ನಾಟಕ.ಕಾಂ ಅನ್ನು ಬಿ ಜಿ ಮಹೇಶ್ 1996 ರಲ್ಲಿ ಸ್ಥಾಪಿಸಿದರು. ಭಾರತದ ಮೊಟ್ಟಮೊದಲ ವೆಬ್ ತಾಣಗಳಲ್ಲಿ ಒಂದಾದ ಮಹೇಶ್.ಕಾಂ ಅನ್ನು ಆರಂಭಿಸಿದವರೂ ಮಹೇಶ್ ಅವರೇ. ಅದು 1990 ರಲ್ಲಿ.

1990ರಲ್ಲಿ ಭಾರತೀಯ ಸಮುದಾಯದ ಅತ್ಯಂತ ವಿಶ್ವಾಸಾರ್ಹ ವೆಬ್ ತಾಣವೆಂಬ ಗೌರವಕ್ಕೆ ಮಹೇಶ್.ಕಾಂ ಪಾತ್ರವಾಗಿತ್ತು. 1999ರಲ್ಲಿ ಬಿ ಜಿ ಮಹೇಶ್ ಇಂಡಿಯಾಇನ್ಫೊ.ಕಾಂ ಸಹಸ್ಥಾಪಕರಾದರು.

ಆನಂತರದಲ್ಲಿ ಮಹೇಶ್ ಗ್ರೇನಿಯಂ ಕಂಪನಿಯನ್ನು ಆರಂಭಿಸಿದರು. ಕಂಪನಿಯ ಸ್ಥಾಪಕರು ಮತ್ತು ಆಡಳಿತ ನಿರ್ದೇಶಕರೂ ಅವರೇ. ಗ್ರೇನಿಯಂ ಕಂಪನಿಯ ಒಡೆತನದಲ್ಲಿ ಆರಂಭವಾದದ್ದು ಒನ್ ಇಂಡಿಯ.ಕಾಂ. ಇದು ಅನೇಕ ಭಾರತೀಯ ಭಾಷಾ ವೆಬ್ ತಾಣಗಳನ್ನು ಒಳಗೊಂಡಿದೆ.

ಕರ್ನಾಟಕದ ಬಗ್ಗೆ ನಿಖರವಾದ ಮಾಹಿತಿ ನೀಡುವ ಜಾಲತಾಣವಾಗಿ ಕರ್ನಾಟಕ.ಕಾಂ ಕಾರ್ಯನಿರ್ವಹಿಸುತ್ತಿದೆ. ಗಮನಿಸಿ : ಈ ತಾಣ ಕರ್ನಾಟಕ ಸರಕಾರದ ಅಧಿಕೃತ ಜಾಲತಾಣವಲ್ಲ. ಸರಕಾರದ ಅಧಿಕೃತ ತಾಣ karnataka.gov.in.

ಕರ್ನಾಟಕ.ಕಾಂ ನಿಂದ ನೀವೇನನ್ನು ನಿರೀಕ್ಷಿಸಬಹುದು ?

ದೈನಂದಿನ ಸುದ್ದಿಗಳನ್ನು ಪೂರೈಸುವ ಇರಾದೆ ನಮ್ಮ ತಾಣಕ್ಕಿಲ್ಲ. ಆದರೆ, Oneindia Kannada ತಾಣಕ್ಕೆ ಭೇಟಿ ನೀಡುವುದಕ್ಕೆ ಶಿಫಾರಸ್ಸು ಮಾಡುತ್ತೇವೆ.

ಕರ್ನಾಟಕಕ್ಕೆ ಭೇಟಿ

ಭಾರತಕ್ಕೆ ಭೇಟಿ ನೀಡಲು ಬಯಸುವಿರಾ? ಹಾಗಾದರೆ, ImmigrationWorld.com ಒಮ್ಮೆ ನೋಡಿ. ಭಾರತಕ್ಕೆ ವೀಸಾ ಮತ್ತಿತರ ಪೂರಕ ಮಾಹಿತಿಗಳನ್ನು ಈ ತಾಣ ನೀಡುತ್ತದೆ

ನೀವು ನಮಗೆ ಹೇಗೆ ನೆರವಾಗಬಹುದು?

ಜಾಲಿಗರಿಗೆ ಉಪಯುಕ್ತವಾಗುವ ಯಾವುದೇ ಮಾಹಿತಿಯನ್ನು ನೀವು ನಮಗೆ ಕಳಿಸಿಕೊಡಬಹುದು. ಮಾಹಿತಿ, ಚಿತ್ರಗಳನ್ನು ಕಳಿಸುವ ಫ್ರೀ ಲಾನ್ಸರ್ಸ್ ಸಹಯೋಗದಿಂದ ತಾಣವನ್ನು ಮಾಹಿತಿ ಕಣಜ ಮಾಡುವತ್ತ ನಮ್ಮ ಗಮನವಿದೆ, ಸದ್ಯಕ್ಕೆ.