ಮಾರ್ಚ್ ೪ ರಂದು ರಾಜ್ಯದ ವಿತ್ತ ಸಚಿವರಾಗಿರುವ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು. ಕರ್ನಾಟಕ ವಿಧಾನ ಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ಹಿನ್ನಲ್ಲೆಯಲ್ಲಿ ಇದು ಈ ಸರಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿದೆ. ಮುಂದಿನ ವರ್ಷ ಈ ಸರಕಾರ ಲೇಖಾನುದಾನ ಮಂಡಿಸಿ, ಹೊಸ ಸರಕಾರಕ್ಕೆ ಪೂರ್ಣಾವಧಿ ಬಜೆಟ್ ಮಂಡಿಸುವ ಅವಕಾಶ ನೀಡುವ ಸಾಧ್ಯತೆ ಇದೆ. ರಾಜ್ಯ ಬಜೆಟ್ ತೆರಿಗೆದಾರರು ನಿಟ್ಟುಸಿರುವಂತೆ ಮಾಡಿದೆ. ಏಕೆಂದರೆ ಈ ಬಜೆಟ್ ನಲ್ಲಿ […]
ಕರ್ನಾಟಕ ಸರ್ಕಾರ
ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಕರ್ನಾಟಕ ಸರ್ಕಾರ, ರಾಜ್ಯದ 30 ಜಿಲ್ಲೆಗಳ ಆಡಳಿತವನ್ನು ನಡೆಸುತ್ತಿದೆ. ಮುಖ್ಯಮಂತ್ರಿ ಮತ್ತು ಅವರ / ಅವಳ ಸಚಿವ ಸಂಪುಟವನ್ನು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ, ರಾಜ್ಯಪಾಲರು ನೇಮಿಸುತ್ತಾರೆ. ಕರ್ನಾಟಕದ ಶಾಸಕಾಂಗ ದ್ವಿ ಸದನ ಮಾದರಿ ಹೊಂದಿದೆ . ಅವುಗಳೆಂದರೆ ವಿಧಾನಸಭೆ ಮತ್ತು ವಿಧಾನ ಪರಿಷತ್ತು.
ಕರ್ನಾಟಕ ಶಾಸಕಾಂಗವು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ವಿಧಾನ ಸೌಧದಿಂದ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಈಗ ಮೂರು ಪ್ರಮುಖ ರಾಜಕೀಯ ಪಕ್ಷಗಳಿವೆ. ಅವುಗಳೆಂದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಭಾರತೀಯ ಜನತಾ ಪಕ್ಷ ಮತ್ತು ಜಾತ್ಯತೀತ ಜನತಾದಳ.
ಪ್ರಸ್ತುತ, ಭಾರತೀಯ ಜನತಾ ಪಕ್ಷ ಕರ್ನಾಟಕದ ಆಡಳಿತ ಪಕ್ಷವಾಗಿದ್ದು, ಬಿ ಎಸ್ ಯಡಿಯೂರಪ್ಪ ಅವರು ರಾಜ್ಯದ ಚುನಾಯಿತ ಮುಖ್ಯಮಂತ್ರಿಯಾಗಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಅನ್ನ ಭಾಗ್ಯ, ಕ್ಷೀರ ಭಾಗ್ಯ, ಋಣಮುಕ್ತ ಭಾಗ್ಯ ಮತ್ತು ವಿದ್ಯಾ ಸಿರಿ ಮುಂತಾದ ಅನೇಕ ಜನ ಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿದೆ. ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆಯನ್ನು ಪ್ರಕಟಿಸಿದ್ದು, ಇದರ ಅಡಿಯಲ್ಲಿ 2017-18ನೇ ಸಾಲಿನಲ್ಲಿ ಸರ್ಕಾರಿ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ದಾಖಲಾಗುವ ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್ ಪಡೆಯುತ್ತಾರೆ.
ಕರ್ನಾಟಕ ಸರಕಾರದ ಬಗ್ಗೆ ಹೆಚ್ಚಿನ ಮಾಹಿತಿ - ಓದು ಇಲ್ಲಿದೆ
ಇ ಖಾತಾ: ಇದು ಭೌತಿಕ ದಾಖಲೆಯಷ್ಟೇ ಸ್ವೀಕಾರಾರ್ಹ
ಬೆಂಗಳೂರು: ಸ್ವಂತ ಮನೆ/ ಅಪಾರ್ಟ್ಮೆಂಟ್ ಎಲ್ಲರ ಕನಸು. ಅದರಲ್ಲೂ ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಸ್ವಂತ ಸೈಟ್ ಹೊಂದಬೇಕು ಎಂಬ ಕನಸು ಸದಾ ಇರುತ್ತದೆ. ಬೆಂಗಳೂರು ನಗರದಲ್ಲಿ ಸ್ವಂತ ಸೈಟ್ ಖರೀದಿಸಲು ಇಚ್ಛಿಸುವವರು ಈ ಲೇಖನ ಓದಲೇಬೇಕು. ಆಸ್ತಿಗೆ ಸಂಬಂಧಿಸಿದ ವಹಿವಾಟುಗಳಿಗೆ ಅತ್ಯಗತ್ಯ ದಾಖಲಾತಿ ಈ ಆಗಿರುವ ಖಾತಾ ಬಗ್ಗೆ ನೀವು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕು. ಈ ದಾಖಲಾತಿ ಪಾತ್ರವನ್ನು ಸುಭದ್ರಗೊಳಿಸಲು ಹಾಗು ಯಾರು ಮೋಸ ಮಾಡದಂತೆ ಮಾಡಲು ರಾಜ್ಯ ಸರಕಾರ ಅನೇಕ ಹೊಸ ಯೋಜನೆಗಳು, ಕಾನೂನುಗಳು […]
ಮನೆ ಬಾಗಿಲಿಗೆ ಸೇವೆ ಒದಗಿಸಲಿರುವ “ಜನ ಸೇವಕ”
ಸರಕಾರದ ಯೋಜನೆ ಮನೆ ಬಾಗಿಲಿಗೆ.. ಈ ಘೋಷಣೆಯೊಂದಿಗೆ, ಆರಂಭವಾದ ಕಾರ್ಯಕ್ರಮ ಜನ ಸೇವಕ. ಸರಕಾರ ನಿಜವಾದ ಜನ ಸೇವಕ ಎಂಬ ಪರಿಕಲ್ಪನೆಯಡಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ 4 ವಿಧಾನ ಸಭಾ ಕ್ಷೇತ್ರಗಳಲ್ಲಿ ಯಶಸ್ವಿ ಯಾಗಿ ಜಾರಿಗೊಳಿಸಿದ ಬಳಿಕ, ಇದೀಗ, ರಾಜ್ಯ ಸರಕಾರ ಇದನ್ನು ಬೆಂಗಳೂರಿನಲ್ಲಿ ಆರಂಭಿಸಿದೆ. ರಾಜ್ಯದ 66ನೇ ರಾಜ್ಯೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಈ ಜನಸೇವಕ ಕಾರ್ಯಕ್ರಮದಡಿ ೫೬ ಸರ್ಕಾರಿ ಸೇವೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಯೋಜನೆಯನ್ನು ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಲ್ಲಿ […]
ಬೆಂಗಳೂರಿನಲ್ಲಿ ಟ್ರಾಫಿಕ್ ದಂಡವನ್ನು ಆನ್‌ಲೈನ್‌ನಲ್ಲಿ ಪಾವತಿಸುವುದು ಹೇಗೆ?
ಬೆಂಗಳೂರಿನ ನಾಗರಿಕರು ಎದುರಿಸುವ ಬಹುದೊಡ್ಡ ಸಮಸ್ಯೆ ಎಂದರೆ ಅದು ವಾಹನ ನಿಲುಗಡೆ. ಈ ಕಾರಣಕ್ಕಾಗಿ ಹಲವಾರು ಬಾರಿ ನೋ ಪಾರ್ಕಿಂಗ್ ಜೋನ್ ನಲ್ಲಿ ವಾಹನ ನಿಲ್ಲಿಸಿ ದಂಡ ಪಾವತಿಸುವ ಸಮಸ್ಯೆಯನ್ನು ಅವರು ಎದುರಿಸುತ್ತಾರೆ. ಜೊತೆಗೆ ಒನ್ ವೇ, ಸಿಗ್ನಲ್ ಜಂಪ್ ಹೀಗೆ ನಾನಾ ಕಾರಣಗಳಿಗಾಗಿ ದಂಡ ವಿಧಿಸಲಾಗುತ್ತದೆ. ದಂಡ ವಿಧಿಸುವಲ್ಲಿ ಎದುರಾಗುವ ಅತಿ ದೊಡ್ಡ ಸಮಸ್ಯೆಯೆಂದರೆ, ಹಣ ಪಾವತಿ. ಈ ಲೇಖನದಲ್ಲಿ ನಾವು ಆನ್ಲೈನ್ ಮೂಲಕ ನೀವು ಹೇಗೆ ದಂಡ ಪಾವತಿಸಬಹುದು ಎಂದು ತಿಳಿಸಿಕೊಡುತ್ತೇವೆ. ಬೆಂಗಳೂರು ನಗರದಲ್ಲಿ […]
ಕೋವಿಡ್ ಸಂತ್ರಸ್ತ ಮಕ್ಕಳಿಗೆ ಬಾಲ ಸ್ವರಾಜ್ – ಬಾಲ ಸೇವಾ ಯೋಜನೆ
ಕೋವಿಡ್ ೧೯ ಸಾಂಕ್ರಾಮಿಕ ರೋಗ ಹಲವಾರು ಚಿಕ್ಕ ಮಕ್ಕಳನ್ನು ಅನಾಥವಾಗಿಸಿದೆ. ಈ ಹಿನ್ನಲೆಯಲ್ಲಿ ನೊಂದ ಮಕ್ಕಳ ರಕ್ಷಣೆ ಹಾಗು ಪೋಷಣೆಗೆ ಕೇಂದ್ರ ಹಾಗು ರಾಜ್ಯ ಸರಕಾರಗಳೆರಡೂ ಮುಂದಾಗಿವೆ. ರಾಜ್ಯ ಸರಕಾರ ಬಾಲ ಸೇವಾ ಯೋಜನೆ ಹಾಗು ಕೇಂದ್ರ ಸರಕಾರ ಬಾಲ್ ಸ್ವರಾಜ್ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಕೋವಿಡ್ ೧೯ ಮೊದಲ ಹಾಗು ದ್ವಿತೀಯಯ ಅಲೆಗಳಲ್ಲಿ ದೇಶಾದ್ಯಂತ ಸುಮಾರು ೩೦,೦೦೦ ಕ್ಕೂ ಅಧಿಕ ಕುಟುಂಬಗಳಲ್ಲಿ ಮಕ್ಕಳು ತಮ್ಮ ಇಬ್ಬರು ಪೋಷಕರು […]
ವೈದ್ಯಕೀಯ ಆಮ್ಲಜನಕ ಹಾಗು ರೆಮಿಡಿಸಿವಿರ್ ಲಸಿಕೆ ಪೂರೈಕೆ ವಾರ್ ರೂಮ್
ವೈದ್ಯಕೀಯ ಆಮ್ಲಜನಕ ಹಾಗು ರೆಮಿಡಿಸಿವಿರ್ ಲಸಿಕೆ ಪೂರೈಕೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಒಂದು ವಾರ್ ರೂಮ್ ತೆರೆದಿದೆ. ಈ ವಾರ್ ರೂಮ್ ದಿನದ 24 ಗಂಟೆಯೂ ತೆರೆದಿರುತ್ತದೆ. ರೋಗಿಗಳು ಹಾಗು ಸರಕಾರ ಈ ವಾರ್ ರೂಮ್ ಮೂಲಕ ಅಗತ್ಯ ವಸ್ತುಗಳನ್ನು ಪಡೆದು ಕೊಳ್ಳಲು ಸೂಚಿಸಲಾಗಿದೆ. ಈ ವಾರ್ ರೂಮ್ ಮುಂದಿನ ಆದೇಶದ ವರೆಗೆ ತೆರೆದಿರುತ್ತದೆ. ಬೆಳಗ್ಗೆ 6ರಿಂದ ಮಧ್ಯಾನ್ಹ 2 ಗಂಟೆಯವರೆಗೆ ಅಧಿಕಾರಿಗಳ ಹೆಸರು ಸಂಪರ್ಕ ಸಂಖ್ಯೆ ಯಶೋದಾ ಎಸ್ ವಿ: 94491-96029 ಚಂದ್ರ ಪ್ರಭಾ ಕೆ: […]
ಕೋವಿಡ್ ೧೯ ಕರ್ಫ್ಯೂ ನಿಯಮಾವಳಿಗಳು
ಕೋವಿಡ್ ೧೯ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮೇ 12 ಬೆಳಗ್ಗೆ 6 ಗಂಟೆಯವರೆಗೆ ಈ ಕ್ರಮಗಳು ಜಾರಿಯಲ್ಲಿರುತ್ತವೆ. ಈ ಅವಧಿಯಲ್ಲಿ ಜನರ ಓಡಾಟ ಸಂಪೂರ್ಣ ನಿಷೇದಿಸಲಾಗಿದೆ. ತುರ್ತು, ಅವಶ್ಯಕ ಸೇವೆಗಳು ಮಾತ್ರ ಲಭ್ಯವಿರುತ್ತವೆ. ವ್ಯಕ್ತಿಗಳು ತುರ್ತು ಸೇವೆಗಳಿಗಾಗಿ ಓಡಾಡಬಹುದು. ಹೊಟೇಲಿಂದ ಪಾರ್ಸೆಲ್ ಸೇವೆಗೆ ಅವಕಾಶ ರೈಲು ಹಾಗು ವಿಮಾನ ಸೇವೆ ಲಭ್ಯವಿರುತ್ತದೆ. ಯಾವುದೇ ಬಸ್ ಸಂಚಾರ ಇರುವುದಿಲ್ಲ ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ. ಆಟೋ ಸಂಚಾರ ರದ್ದು ಅಂತರ್ ಜಿಲ್ಲಾ – ಅಂತರ್ ರಾಜ್ಯ ಪ್ರಯಾಣಕ್ಕೆ […]
ಕ್ಯೂಆರ್ ಕೋಡ್ ಮೂಲಕ ಮೈಸೂರು ನಗರದಲ್ಲಿ ಆಸ್ತಿ ತೆರಿಗೆ ಪಾವತಿ
ಕರ್ನಾಟಕದ ಪ್ರತಿಯೊಂದು ನಗರ-ಹಳ್ಳಿಗಳಲ್ಲೂ ವಾರ್ಷಿಕ ಆಸ್ತಿ ತೆರಿಗೆ ಪಾವತಿ ಕಡ್ಡಾಯ. ಹೀಗೆ ನಾಗರಿಕರು ಪಾವತಿಸುವ, ಆಸ್ತಿ ತೆರಿಗೆಯನ್ನು ನಾನಾ ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗುತ್ತದೆ. ಆದರೆ, ಬೆಂಗಳೂರು ಹೊರತು ಪಡಿಸಿ, ರಾಜ್ಯದ ಉಳಿದ ಪಟ್ಟಣ ಹಾಗೂ ಗ್ರಾಮಗಳಲ್ಲಿ ಜನರು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯೆಂದರೆ, ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್ ಮೂಲಕ ಅವಕಾಶ ಇಲ್ಲದಿರುವುದು. ಆದರೆ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕ್ಯೂ ಆರ್ ಕೋಡ್ ಬಳಸಿ, ಆಸ್ತಿ ತೆರಿಗೆ ಪಾವತಿಸುವ ಹೊಸ ವ್ಯವಸ್ಥೆಯೊಂದನ್ನು ಮೈಸೂರು ಮಹಾನಗರ ಪಾಲಿಕೆ […]
ಕರ್ನಾಟಕದಲ್ಲಿ ಉದ್ದಿಮೆ ಪರವಾನಿಗೆಗಳ ಸ್ವಯಂ ನವೀಕರಣ
ದೇಶದ ಉದ್ಯಮ ಸ್ನೇಹಿ ರಾಜ್ಯಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಕರ್ನಾಟಕ ರಾಜ್ಯದ್ದು. ಇದೀಗ ರಾಜ್ಯದಲ್ಲಿ ಉದ್ದಿಮೆ ಪರವಾನಿಗೆಯ ಸ್ವಯಂ- ನವೀಕರಣದ ಕನಸು ನನಸಾಗುತ್ತಿದೆ. ಈವರೆಗೆ, ಕರ್ನಾಟಕದಲ್ಲಿ ಉದ್ಯಮ ಸಂಸ್ಥೆಗಳ ಸ್ಥಾಪನೆ, ನಿಯಂತ್ರಣ ಕಾನೂನುಗಳು ಅತಿ ಕಠಿಣವಾಗಿದ್ದರಿಂದ ಇದು ಪ್ರಾಮುಖ್ಯತೆ ಪಡೆದುಕೊಂಡಿದೆ. ಕಳೆದ ಕೆಲವು ಸಮಯದಿಂದ ಕರ್ನಾಟಕ ಸರ್ಕಾರ ಉದ್ಯಮ ಸ್ನೇಹಿ ರಾಜ್ಯವಾಗುವತ್ತ ಹೆಜ್ಜೆ ಇಡುತ್ತಿದೆ. ರಾಜ್ಯದಲ್ಲಿ ಉದ್ಯಮ ಆರಂಭಿಸುವ ಹಾಗು ನಡೆಸುವ ಸಂಬಂಧ ಇರುವ ನೀತಿ ನಿಯಮಗಳನ್ನು ಸಡಿಲಿಕೆ ಮಾಡುವ ಸಂಬಂಧ […]
ನೇತ್ರದಾನ ಮೂಲಕ ಜೀವಸಾರ್ಥಕತೆ: ನೀವು ನೆನಪಿನಲ್ಲಿಟ್ಟುಕೊಳ್ಳಬೇಕು ಅಂಶಗಳು
ನಮ್ಮ ರಾಜ್ಯದಲ್ಲಿ ಲಕ್ಷಾಂತರ ಮಂದಿ, ತಮ್ಮ ಕುರುಡುತನ ನಿವಾರಿಸಿಕೊಳ್ಳಲು, ನೇತ್ರದಾನಿಗಳ ನಿರೀಕ್ಷೆಯಲ್ಲಿದ್ದಾರೆ. ನೇತ್ರ ದಾನ ಮಹಾದಾನವಾಗಿದ್ದು, ನಮ್ಮ ರಾಜ್ಯದಲ್ಲಿ ನೇತ್ರ ದಾನ ಮಾಡುವುದರಿಂದ ಒಂದು ಅಥವಾ ಹೆಚ್ಚಿನ ವ್ಯಕ್ತಿಗಳಲ್ಲಿ ಅಂಧತ್ವ ಸರಿಪಡಿಸಲು ಸಹಾಯ ಮಾಡಿದಂತಾಗುತ್ತದೆ. ಇದರರ್ಥ ಒಬ್ಬ ವ್ಯಕ್ತಿಯ ನೇತ್ರದಾನದಿಂದ, ಕನಿಷ್ಠ ಇಬ್ಬರು ವ್ಯಕ್ತಿಗಳ ಜೀವನವನ್ನು ಬೆಳಗಿಸಲು ಸಾಧ್ಯವಿದೆ. ಕರ್ನಾಟಕದಲ್ಲಿ ನೇತ್ರ ದಾನ ಎಂದ ಕೂಡಲೇ ನಮಗೆ ನೆನಪಾಗುವುದು ಖ್ಯಾತ ನಟ ಡಾ. ರಾಜ್ ಕುಮಾರ್. ಅವರು ರಾಜ್ಯದಲ್ಲಿ ನೇತ್ರ ದಾನದ ಬಗ್ಗೆ ಸಾಕಷ್ಟು ಜನ […]