X

ಕರ್ನಾಟಕದಲ್ಲಿ ಸರಿಯಾದ ಪಿಯು ಕಾಲೇಜು ಆಯ್ಕೆ

    Categories: Education

ಕರ್ನಾಟಕದಲ್ಲಿ ಪಿಯುಸಿ ಅಧ್ಯಯನ ಮಾಡಲು ಇಚ್ಛೆ ಇದೆಯಾ? ಹಾಗಾದರೆ ಇಲ್ಲಿನ   ಪಿಯು  ಕಾಲೇಜುಗಳ ಬಗ್ಗೆ ತಿಳಿದು ಕೊಳ್ಳೋಣ. ಪಿಯು ಕೋರ್ಸ್, ಐಚ್ಚಿಕ ವಿಷಯಗಳ ಬಗ್ಗೆ ನಿಮಗೆ ಇಲ್ಲಿ ಸಮಗ್ರ ಮಾಹಿತಿ ಇದೆ. 

ಕರ್ನಾಟಕದಲ್ಲಿ, ವಿದ್ಯಾರ್ಥಿಗಳು ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಮುಂದಿನ ಹಂತದ   ‘ಪ್ರಿ ಯೂನಿವರ್ಸಿಟಿ ಕಾಲೇಜು’ (ಪಿಯು ಕಾಲೇಜು)/ ಪದವಿ ಪೂರ್ವ ಕಾಲೇಜು ಪ್ರವೇಶ ಪಡೆಯ ಬಹುದು.  ಈ ಕೋರ್ಸ್ ನ ಅವಧಿ  ೨  ವರ್ಷಗಳು.  ವಿದ್ಯಾಭ್ಯಾಸದ ಮುಂದಿನ ಹಂತವಾದ ಪದವಿ  ಕೋರ್ಸ್  ಗಳಿಗೆ ಪ್ರವೇಶ ಪಡೆಯಬೇಕಾದರೆ,  ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಈ ಎರಡು ವರ್ಷದ ಕೋರ್ಸ್ ಅನ್ನು ತೇರ್ಗಡೆ ಹೊಂದಲೇ ಬೇಕು.   ಈ ಕೋರ್ಸ್ ನ  ೨ ನೇ   ವರ್ಷದ ಕೊನೆಯಲ್ಲಿ ರಾಜ್ಯ ಮಟ್ಟದ ಪಬ್ಲಿಕ್ ಪರೀಕ್ಷೆ ನಡೆಸಲಾಗುವುದು. ವಿಜ್ಞಾನ ವಿಷಯಗಳಲ್ಲಿ  ೨೦ ಅಂಕಗಳು ಪ್ರಾಯೋಗಿಕ ಪರೀಕ್ಷೆಗಳಿಗೆ ಮೀಸಲಾಗಿದ್ದು ೮೦ ಅಂಕೆಗಳಿಗೆ ಅಂತಿಮ ಪರೀಕ್ಷೆ ನಡೆಸಲಾಗುತ್ತದೆ. 

ಪಿಯು “ಕೋರ್” ವಿಷಯಗಳು 

ಕರ್ನಾಟಕದಲ್ಲಿ ಪದವಿ ಪೂರ್ವ ಶಿಕ್ಷಣ ಮಂಡಳಿ, ಮೂರು ಕೋರ್ ವಿಷಯಗಳನ್ನು ಆಯ್ಕೆ ಮಾಡುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ. ಕಲೆ, ವಾಣಿಜ್ಯ ಮತ್ತು ವಿಜ್ಞಾನ ಈ ಕೋರ್ ವಿಷಯಗಳಾಗಿವೆ. ನೀವು ಆಯ್ಕೆ ಮಾಡುವ ವಿಭಾಗದ ಲ್ಲಿ   ವಿದ್ಯಾರ್ಥಿಗಳು ೪  ಪ್ರಮುಖ ವಿಷಯಗಳನ್ನು, ಹಾಗು ಎರಡು ಭಾಷೆಗಳನ್ನು ಅಧ್ಯಯನ ಮಾಡಬೇಕು. ಇಂಗ್ಲಿಷ್  ಮತ್ತು ಎರಡನೇ ಭಾಷೆಯನ್ನು   ಆಯ್ಕೆ ಮಾಡುವ ಅವಕಾಶ ವಿದ್ಯಾರ್ಥಿಗಳಿಗಿದೆ. 

ವಿದ್ಯಾರ್ಥಿಗಳು ಆಯ್ಕೆ ಮಾಡಬಹುದಾದ  ಭಾಷೆಗಳು;  ಹಿಂದಿ, ಕನ್ನಡ, ಉರ್ದು, ಸಂಸ್ಕೃತ, ತಮಿಳು, ಮಲಯಾಳಂ, ತೆಲುಗು, ಮರಾಠಿ, ಜರ್ಮನ್, ಫ್ರೆಂಚ್ ಮತ್ತು ಅರೇಬಿಕ್ ಸೇರಿವೆ.

ನಿಮ್ಮ ವೈಯಕ್ತಿಕ ಆದ್ಯತೆಯ ಹೊರತಾಗಿ, ನಿಮ್ಮ ಹತ್ತನೇ ತರಗತಿ ಸ್ಕೋರ್ ನಿಮ್ಮ ವಿಷಯಗಳ ಆಯ್ಕೆಯ ಮೇಲೂ ಪರಿಣಾಮ ಬೀರುತ್ತದೆ. ವಿಜ್ಞಾನದ ವಿಭಾಗ  ಅತ್ಯಧಿಕ ಕಟ್ ಆಫ್ ಹೊಂದಿದ್ದರೆ, ಕಲಾ ವಿಭಾಗ  ಕಡಿಮೆ ಕಟ್-ಆಫ್ ಹೊಂದಿದೆ. ವಿಜ್ಞಾನ ವಿಷಯಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ನಂತರ ತಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳಬಹುದು ಮತ್ತು ಕಲಾ ವಿಷಯಗಳಿಗೆ ವಾಣಿಜ್ಯವನ್ನು ಆಯ್ಕೆ ಮಾಡಿಕೊಳ್ಳಬಹುದು. 

ಕಲಾ ವಿಭಾಗದ ಐಚ್ಚಿಕ ವಿಷಯಗಳು 

ಕಲಾ ವಿಭಾಗದಲ್ಲಿ, ಮಾನವಿಕ ವಿಷಯಗಳನ್ನು ಬೋಧಿಸಲಾಗುತ್ತದೆ. ಕರ್ನಾಟಕದಲ್ಲಿ ಸದ್ಯ ಭೋಧಿಸಲಾಗುತ್ತಿರುವ ಕಲಾ ವಿಭಾಗದ ಐಚ್ಚಿಕ ವಿಷಯಗಳೆಂದರೆ 

* ಇತಿಹಾಸ

* ಮನೋವಿಜ್ಞಾನ

* ಭೂಗೋಳ

* ರಾಜಕೀಯ ವಿಜ್ಞಾನ

* ಸಮಾಜಶಾಸ್ತ್ರ

* ಶಿಕ್ಷಣ

* ತರ್ಕ ಶಾಸ್ತ್ರ 

* ಗೃಹ ವಿಜ್ಞಾನ

* ಐಚ್ಛಿಕ ಕನ್ನಡ

ಸಾಮಾನ್ಯವಾಗಿ ಕಲಾ ವಿಭಾಗಕ್ಕೆ ಸೇರುವ ವಿದ್ಯಾರ್ಥಿಗಳು ಕಾನೂನು, ಆಡಳಿತ ಸೇವೆ, ಪತ್ರಿಕೋದ್ಯಮ, ಸಮಾಜ ಸೇವೆ, ಶಿಕ್ಷಣ, ನೀತಿ ನಿರೂಪಣೆ, ಲಲಿತ ಕಲೆಯಂತಹ ವಿಷಯಗಳಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಒಟ್ಟು ನೀಡುತ್ತಾರೆ. 

ಸಾಮಾನ್ಯ ವಾಣಿಜ್ಯ ವಿಷಯಗಳು

ಕರ್ನಾಟಕದ ಪದವಿ ಪೂರ್ವ ಕಾಲೇಜು ಗಳಲ್ಲಿ, ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಈ ಕೆಳಗಿನ ವಿಷಯಗಳನ್ನು ಭೋದಿಸಲಾಗುತ್ತದೆ. 

* ಅಕೌಂಟೆನ್ಸಿ

* ವ್ಯಾಪಾರ ಅಧ್ಯಯನ

* ಮೂಲ ಗಣಿತ

* ಕಂಪ್ಯೂಟರ್ ಸೈನ್ಸ್ 

* ಸಂಖ್ಯಾಶಾಸ್ತ್ರ 

* ಭೂಗೋಳ

* ಇತಿಹಾಸ

* ಅರ್ಥಶಾಸ್ತ್ರ 

ಸಾಮಾನ್ಯವಾಗಿ ಪಿಯು ಹಂತದಲ್ಲಿ ವಾಣಿಜ್ಯ ವಿಷಯ ಆಯ್ದುಕೊಳ್ಳುವವರು  ಅಕೌಂಟೆನ್ಸಿ, ಕಂಪನಿ ಕಾರ್ಯದರ್ಶಿ, ಹಣಕಾಸು ಯೋಜನೆ, ಕಾಯಿದೆ ಮತ್ತು ಚಾರ್ಟರ್ಡ್ ವಿಶ್ಲೇಷಕರು, ಇನ್ವೆಸ್ಟ್ಮೆಂಟ್ ಬ್ಯಾಂಕರ್,  ವ್ಯವಸ್ಥಾಪನಾ ಪದವಿಗಳು ಹೀಗೆ ನಾನಾ ವಿಷಯಗಳಲ್ಲಿ ಉನ್ನತ ಅಧ್ಯಯನಕ್ಕೆ ಒಲವು ತೋರುತ್ತಾರೆ.  

ವಿಜ್ಞಾನ ವಿಷಯಗಳು

ಎಸ್ ಎಸ್ ಎಲ್ ಸಿ / ಸಿ ಬಿ ಎಸ್ ಸಿ ಹತ್ತನೇ ತರಗತಿ ಅಂತಿಮ ಪರೀಕ್ಷೆಯಲ್ಲಿ   ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳ ಪ್ರಥಮ ಆಯ್ಕೆ ಬಹುತೇಕ ವಿಜ್ಞಾನ ವಿಷಯವಾಗಿರುತ್ತದೆ.  ಈ ಪೈಕಿ ಅತ್ಯಂತ ಜನಪ್ರಿಯ ವಿಷಯಗಳೆಂದರೆ 

ಭೌತಶಾಸ್ತ್ರ

ಜೀವಶಾಸ್ತ್ರ

ರಸಾಯನಶಾಸ್ತ್ರ

ಗಣಿತ

ಗಣಕ ಯಂತ್ರ ವಿಜ್ಞಾನ

ಎಲೆಕ್ಟ್ರಾನಿಕ್ಸ್

ಗೃಹ ವಿಜ್ಞಾನ

ಭೂವಿಜ್ಞಾನ

ವಿಜ್ಞಾನ ವಿದ್ಯಾರ್ಥಿಗಳು ಬಹುತೇಕ  ವೈದ್ಯಕೀಯ, ಪಶು ವೈದ್ಯ ಶಾಸ್ತ್ರ, ಕೃಷಿ ವಿಜ್ಞಾನ, ಆಹಾರ ವಿಜ್ಞಾನ,     ಔಷಧ, ಎಂಜಿನಿಯರಿಂಗ್, ಸಂಶೋಧನೆ, ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಮಾನವಶಾಸ್ತ್ರ ವಿಷಯಗಳಲ್ಲಿ ಉನ್ನತ ಅಧ್ಯಯನಕ್ಕೆ ಆಸಕ್ತಿ ತೋರುತ್ತಾರೆ. 

ಕೋರ್ಸ್ ಆಯ್ಕೆ

ಪಿಯುಸಿ ಹಂತ, ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಭವಿಷ್ಯ ನಿರ್ಧರಿಸುತ್ತದೆ. ಈ ಕಾರಣದಿಂದ ಪೋಷಕರು ಹಾಗು ಮಕ್ಕಳು ಕೋರ್ಸ್ ಹಾಗು ಕಾಲೇಜು ಆಯ್ಕೆ ಮಾಡುವಾಗ ಅತ್ಯಂತ ಜಾಗರೂಕರಾಗಿರಬೇಕು. ವಿಜ್ಞಾನ ವಿದ್ಯಾರ್ಥಿಗಳಿಗೆ ಪದವಿ ಹಂತದಲ್ಲಿ ಕಲೆ- ವಾಣಿಜ್ಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಅದು ಕಲೆ- ವಾಣಿಜ್ಯ ವಿದ್ಯಾರ್ಥಿಗಳಿಗೆ ಸಾಧ್ಯವಿಲ್ಲ. 

ಪಿಯುಸಿ ಜೊತೆ ಜೊತೆಗೆ ನಾನಾ ವೃತ್ತಿಪರ ಪರೀಕ್ಷೆಗಳಿಗೆ ಕೂಡ ಮಕ್ಕಳು ಈ ಹಂತದಲ್ಲಿ ತಯಾರಾಗ ಬೇಕಾಗುತ್ತದೆ.   ಈ ಕಾರಣದಿಂದ ಅತ್ಯಂತ ಜಾಗರೂಕವಾಗಿ ವಿದ್ಯಾರ್ಥಿಗಳು ತಮ್ಮ ಇಚ್ಛೆಯ ಕೋರ್ಸ್ – ಕಾಲೇಜು ಆಯ್ಕೆ ಮಾಡಿಕೊಳ್ಳಬೇಕು. 

Related Readings

Jolad Rotti:
Related Post