X

ಕರ್ನಾಟಕ ಲೋಕಸಭಾ ಚುನಾವಣೆ: ಕುತೂಹಲಕಾರಿ ಸಂಗತಿಗಳು

    Categories: Elections

2024ರ ಲೋಕಸಭಾ ಚುನಾವಣೆಗೆ ಕರ್ನಾಟಕ ಸಜ್ಜಾಗಿದೆ.  2019ರ ಲೋಕ ಸಭಾ  ಚುನಾವಣೆಯಲ್ಲಿ, ರಾಜ್ಯದ ಒಟ್ಟು  28 ಲೋಕಸಭಾ ಕ್ಷೇತ್ರಗಳ ಪೈಕಿ, ಆಡಳಿತಾರೂಢ  ಬಿಜೆಪಿ 26 ಸ್ಥಾನಗಳನ್ನು ಗೆದ್ದಿತ್ತು.  ಅಂದು ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ   ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಲಾ  ಒಂದು ಸ್ಥಾನವನ್ನು ಗೆಲ್ಲುವಲ್ಲಿ ಮಾತ್ರ ಸಫವಾಗಿದ್ದವು.  ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ  ಪಕ್ಷೇತರ ಅಭ್ಯರ್ಥಿ, ನಟಿ  ಸುಮಲತಾ ಅಂಬರೀಷ್  ಗೆಲುವು ಸಾಧಿಸಿದ್ದರು.  ಅವರು ತಮ್ಮ ಎದುರಾಳಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ  ನಿಖಿಲ್ ಕುಮಾರಸ್ವಾಮಿಯವರನ್ನು ಸೋಲಿಸಿದ್ದರು.

2024ರ ಲೋಕಸಭಾ ಚುನಾವಣೆ:  ಕೆಲವು ಆಸಕ್ತಿದಾಯಕ ಅಂಶಗಳು 

 ಈ ಬಾರಿ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕ, ಹಾಗು ಎರಡನೇ ಹಂತದಲ್ಲಿ ಉತ್ತರ ಕರ್ನಾಟಕ- ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮತದಾನ ನಡೆಯಲಿವೆ. 

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್  ಮೈತ್ರಿ ಮೂಲಕ ಸ್ಪರ್ಧಿಸಿದ್ದವು. ಈ ಬಾರಿ ಜೆಡಿಎಸ್ ಪಕ್ಷವು ಬಿಜೆಪಿ ಜೊತೆಗೆ ಕೈ  ಜೋಡಿಸಿ ಸ್ಪರ್ಧಿಸುತ್ತಿದೆ.  ಎನ್ ಡಿಎ ಘಟಕ ಪಕ್ಷವಾಗಿ ಜೆಡಿಎಸ್  ಕೋಲಾರ, ಹಾಸನ, ಹಾಗು ಮಂಡ್ಯ ಲೋಕ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸುತ್ತಿದೆ. 

ಮೊದಲ ಹಂತದ ಮತದಾನ

ಭಾರತದ ಚುನಾವಣಾ ಆಯೋಗವು (ಇಸಿಐ) ಏಪ್ರಿಲ್ 26 ರಂದು ರಾಜ್ಯದ  14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ದಿನಾಂಕ ನಿಗದಿಪಡಿಸಿದೆ.   ಈ ದಿನ ಮತದಾನ ನಡೆಯುವ ಕ್ಷೇತ್ರಗಳ ಪಟ್ಟಿ ಇಲ್ಲಿದೆ.

  •  ಬೆಂಗಳೂರು  ದಕ್ಷಿಣ
  •  ಬೆಂಗಳೂರು ಉತ್ತರ
  •  ಬೆಂಗಳೂರು ಕೇಂದ್ರ
  •  ಬೆಂಗಳೂರು ಗ್ರಾಮಾಂತರ
  •  ಚಿಕ್ಕಬಳ್ಳಾಪುರ
  •  ಕೋಲಾರ
  •   ಮಂಡ್ಯ
  •  ಮೈಸೂರು
  •   ತುಮಕೂರು
  •  ಉಡುಪಿ
  •  ದಕ್ಷಿಣ ಕನ್ನಡ
  •  ಚಾಮರಾಜನಗರ
  •  ಹಾಸನ
  •  ಚಿತ್ರದುರ್ಗ

ಪ್ರಮುಖ ದಿನಾಂಕಗಳು

  • ಜಿಲ್ಲಾಧಿಕಾರಿಗಳಿಂದ ಚುನಾವಣಾ ಅಧಿಸೂಚನೆ : ಮಾರ್ಚ್ 28
  • ನಾಮಪತ್ರ   ಸಲ್ಲಿಸಲು ಕೊನೆಯ ದಿನಾಂಕ:  ಏಪ್ರಿಲ್ 4
  • ಮತದಾನ:  ಏಪ್ರಿಲ್ 26

ಎರಡನೇ ಹಂತದ ಮತದಾನ

ಉಳಿದ 24 ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದೆ. ಈ ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳ ಪಟ್ಟಿ ಹೀಗಿದೆ.

  •  ಚಿಕ್ಕೋಡಿ
  •  ಬೆಳಗಾವಿ
  •  ಬಾಗಲಕೋಟ
  •  ವಿಜಯಪುರ
  •  ಕಲ್ಬುರ್ಗಿ
  •   ರಾಯಚೂರು
  •  ಬೀದರ್
  •   ಕೊಪ್ಪಳ
  •  ಬಳ್ಳಾರಿ
  •   ಹಾವೇರಿ
  •   ಧಾರವಾಡ
  •   ಉತ್ತರ ಕನ್ನಡ
  •  ಶಿವಮೊಗ್ಗ
  •  ದಾವಣಗೆರೆ

ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯೂ ಮೇ 7ರಂದು ನಡೆಯಲಿದೆ.

ಪ್ರಮುಖ ದಿನಾಂಕಗಳು

  • ಜಿಲ್ಲಾಧಿಕಾರಿಗಳಿಂದ  ಅಧಿಸೂಚನೆ :  ಏಪ್ರಿಲ್ 12
  • ನಾಮನಿರ್ದೇಶನ ಸಲ್ಲಿಸಲು ಕೊನೆಯ ದಿನಾಂಕ:  ಏಪ್ರಿಲ್ 19
  • ಮತದಾನ:  ಮೇ 7

ಲೋಕಸಭಾ ಚುನಾವಣೆ 2024:  ಕರ್ನಾಟಕದಲ್ಲಿ ಮತದಾರರ ಸಂಖ್ಯೆ

ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಗಣನೀಯ ಸಂಖ್ಯೆಯಲ್ಲಿ ಹೊಸ ಮತದಾರರ ಸೇರ್ಪಡೆಯಾಗಿದೆ. ಮಾರ್ಚ್ ೩೧ರವರೆಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು  ಸೇರಿಸಲು ಮತದಾರರಿಗೆ ಅವಕಾಶವಿದೆ. 

ಮತದಾರರ ಸಂಖ್ಯೆ 

  •  ಒಟ್ಟು ಮತದಾರರ ಸಂಖ್ಯೆ: 5,42,54,500
  •  ಪುರುಷ ಮತದಾರರು:  2,71,66,220
  •  ಮಹಿಳಾ  ಮತದಾರರು: 2,70,83,347
  •  ಇತರ ಮತದಾರರು:  4,933

ಹೆಚ್ಚಿದ ಮತದಾರರ ಸಂಖ್ಯೆ

2019 ರ ಚುನಾವಣೆಗೆ ಹೋಲಿಸಿದರೆ, ಮತ ಚಲಾಯಿಸಲು ಅರ್ಹರಾದ ಮತದಾರರ ಸಂಖ್ಯೆಯಲ್ಲಿ ಶೇಕಡಾ 6 ರಷ್ಟು ಹೆಚ್ಚಳವಾಗಿದೆ.

  •  ಹೆಚ್ಚಳಗೊಂಡ  ಪುರುಷ ಮತದಾರರ ಸಂಖ್ಯೆ:  5%
  •  ಹೆಚ್ಚಳಗೊಂಡ  ಮಹಿಳಾ  ಮತದಾರರ ಸಂಖ್ಯೆ:  7%
  •  ಹೆಚ್ಚಳಗೊಂಡ  ಇತರ ವರ್ಗದ   ಮತದಾರರ ಸಂಖ್ಯೆ:  7%
  •  ಹೆಚ್ಚಳಗೊಂಡ  ಅಂಗವಿಕಲ    ಮತದಾರರ ಸಂಖ್ಯೆ:  42%
  •  ಒಟ್ಟು ಮತಗಟ್ಟೆಗಳು :  58,834
  •  ನಗರ  ಪ್ರದೇಶದಲ್ಲಿರುವ ಮತಗಟ್ಟೆಗಳ ಸಂಖ್ಯೆ: 21,595

17 ಕ್ಷೇತ್ರಗಳಲ್ಲಿ ಮಹಿಳಾ  ಮತದಾರರೇ ಅಧಿಕ

ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ರಾಜ್ಯದ 17 ಲೋಕಸಭಾ ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚು.

ಈ ಮಹಿಳಾ ಮತದಾರರು ಅಧಿಕವಿರುವ ಲೋಕ ಸಭಾ ಕ್ಷೇತ್ರಗಳ ವಿವರ ಹೀಗಿದೆ. 

  •  ಬೆಳಗಾವಿ
  •  ಬಾಗಲಕೋಟೆ
  •  ರಾಯಚೂರು
  •  ಬಳ್ಳಾರಿ
  •  ದಾವಣಗೆರೆ
  •  ಶಿವಮೊಗ್ಗ
  •  ಉಡುಪಿ
  •  ಹಾಸನ
  •  ದಕ್ಷಿಣ ಕನ್ನಡ
  •  ಚಿತ್ರದುರ್ಗ
  •  ತುಮಕೂರು
  •  ಮಂಡ್ಯ
  •  ಮೈಸೂರು
  •  ಚಾಮರಾಜನಗರ
  •  ಚಿಕ್ಕಬಳ್ಳಾಪುರ
  •  ಕೋಲಾರ

ಚುನಾವಣಾ ನೀತಿ ಸಂಹಿತೆ

ಚುನಾವಣಾ ಆಯೋಗ, ಚುನಾವಣಾ ದಿನಾಂಕ ಪ್ರಕಟಿಸುತ್ತಿದ್ದಂತೆ, ರಾಜ್ಯಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ.

 ದಾಖಲೆಗಳಿಲ್ಲದೆ ರೂ.50,000 ಕ್ಕಿಂತ ಹೆಚ್ಚಿನ ಹಣವನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ. ಇದರ ಜೊತೆಗೆ ದಾಖಲೆಗಳಿಲ್ಲದ ಚಿನ್ನಾಭರಣ, ಬಟ್ಟೆ, ಹಾಗು ಇತರ ಸಾಮಗ್ರಿಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.  ರಾಜ್ಯಾದ್ಯಂತ ಎಲ್ಲಾ ಜಿಲ್ಲೆ- ತಾಲೂಕುಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು,  ಆ ಮೂಲಕ ಎಲ್ಲ ವಹಿವಾಟಿನ ಮೇಲೆ ಹದ್ದಿನ ಕಣ್ಣು ಇಡಲಾಗಿದೆ.

ಈ ಬಾರಿ ಮಳೆಯ ಕೊರತೆ ಕಾರಣದಿಂದ ರಾಜ್ಯಾದ್ಯಂತ ಬರ ಪರಿಸ್ಥತಿ ಇದೆ. ಆದರೆ ಉಚಿತವಾಗಿ  ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವುದನ್ನೂ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತಿದೆ. ಎಲ್ಲಾ ಕೆಲಸಗಳಿಗೂ ಜಿಲ್ಲಾಡಳಿತದಿಂದ ಅನುಮತಿ ಕಡ್ಡಾಯ. 

ನಮ್ಮ ಬೆಂಗಳೂರಿನಲ್ಲಿ ಮತದಾನ

ನಮ್ಮ ಬೆಂಗಳೂರು ನಗರ ನಾಲ್ಕು ಲೋಕ ಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಅವುಗಳೆಂದರೆ

  •  ಬೆಂಗಳೂರು ಕೇಂದ್ರ
  •  ಬೆಂಗಳೂರು ದಕ್ಷಿಣ
  •  ಬೆಂಗಳೂರು  ಉತ್ತರ
  •  ಬೆಂಗಳೂರು ಗ್ರಾಮಾಂತರ

ಮತದಾನ ದಿನಾಂಕ

ನಮ್ಮ ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ. 78,90,480 ಮಂದಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಬೆಂಗಳೂರು ಉತ್ತರದಲ್ಲಿ ಅತಿ ಹೆಚ್ಚು ಮತದಾರರಿದ್ದು, 31,74,098 ಮತದಾರರಿದ್ದಾರೆ. ಬೆಂಗಳೂರು  ಕೇಂದ್ರ ಲೋಕಸಭಾ ವ್ಯಾಪ್ತಿಯಲ್ಲಿ  23,98,910 ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ 23,17,472 ಮಂದಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಅತಿ ಹೆಚ್ಚು ಮತದಾರರು 40 ರಿಂದ 49 ವರ್ಷ ವಯಸ್ಸಿನವರಾಗಿದ್ದು, ಈ ವಯೋಮಿತಿಯಲ್ಲಿ 25,90,772 ಮತದಾರರಿದ್ದಾರೆ. 25,63,307 ಮತದಾರರನ್ನು ಹೊಂದಿರುವ 30 ರಿಂದ 39 ವರ್ಷ ವಯಸ್ಸಿನವರು ಈ ವಯೋಮಾನವನ್ನು ಅನುಸರಿಸುತ್ತಾರೆ.

ಬೆಂಗಳೂರು ನಗರ ಪ್ರದೇಶದ ಹತ್ತೊಂಬತ್ತು ಮತದಾರರು 120 ವರ್ಷ ಮೇಲ್ಪಟ್ಟವರು!  

ಮನೆಯಯಿಂದಲೇ ಮತದಾನ ಸೌಲಭ

ಭಾರತೀಯ ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ದೈಹಿಕವಾಗಿ ಅಂಗವಿಕಲರು ತಮ್ಮ ಮನೆಯ ಸೌಕರ್ಯದಿಂದ ಮತ ಚಲಾಯಿಸಲು ಅವಕಾಶ ನೀಡುತ್ತದೆ. ಅದಕ್ಕಾಗಿ  ಬಿಬಿಎಂಪಿಯು ವಿಶೇಷ ವ್ಯವಸ್ಥೆ ಕಲ್ಪಿಸಲಿದೆ. ಮನೆಯಲ್ಲೇ ಚುನಾವಣಾಧಿಕಾರಿಗಳು, ಗೌಪ್ಯವಾಗಿ ಮತಚಲಾಯಿಸುವ ಅವಕಾಶ ಕಲ್ಪಿಸುತ್ತಾರೆ. ಈ ಪ್ರಕ್ರಿಯೆಯನ್ನು ವಿಡಿಯೋ ಮೂಲಕ ದಾಖಲಿಸಲಾಗುತ್ತದೆ. 

ಮತದಾರರಾಗಲೂ  ಇನ್ನೂ  ಅವಕಾಶವಿದೆ!

ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಲು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಾಯಿಸಲು ಇನ್ನು ಅವಕಾಶವಿದೆ.

ಚುನಾವಣಾ ಆಯೋಗದ ಪ್ರಕಾರ ಮಾರ್ಚ್ 31ಕ್ಕೆ 18 ವರ್ಷ ಪೂರೈಸುವವರು  ಇನ್ನೂ ಮತದಾರರ  ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಲು  ಅವಕಾಶವಿದೆ. ಅವರು ನಮೂನೆ ಸಂಖ್ಯೆ 6 ರ ಮೂಲಕ ದಾಖಲಾತಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಮತದಾರರ ನೋಂದಣಿ ಅತ್ಯಂತ ಸುಲಭವಾದ ಪ್ರಕ್ರಿಯೆ. 

ಭಾರತದ ನಾಗರಿಕರು ಇಲ್ಲಿಗೆ  ಭೇಟಿ ನೀಡಬಹುದು ಮತ್ತು 

ಇಲ್ಲಿ ಕ್ಲಿಕ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಅವರು ಫಾರ್ಮ್ 6 ಅನ್ನು ಭರ್ತಿ ಮಾಡಬಹುದು ಮತ್ತು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ತಮ್ಮ ಬಿಎಲ್ ಒ ಗೆ ಸಲ್ಲಿಸಬೇಕು 

ಅನಿವಾಸಿ ಭಾರತೀಯರು ಇಲ್ಲಿ

ಕ್ಲಿಕ್ ಮಾಡುವ ಮೂಲಕ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬಹುದು. ಅವರು ತಮ್ಮ ಹೆಸರನ್ನು ನೋಂದಾಯಿಸಲು ಫಾರ್ಮ್ ಸಂಖ್ಯೆ 6ಎ  ಅನ್ನು ಭರ್ತಿ ಮಾಡಬೇಕಾಗುತ್ತದೆ. ಪರ್ಯಾಯವಾಗಿ, ಅರ್ಹರು ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು

ಡೌನ್‌ಲೋಡ್ ಮಾಡಬಹುದು

ಮತದಾರರ ಸಹಾಯವಾಣಿ

ಮತದಾರರು ನೋಂದಣಿ ವಿವರಗಳಿಗಾಗಿ ಟೋಲ್ ಸಹಾಯವಾಣಿ 1950 ಅನ್ನು ಸಂಪರ್ಕಿಸಬಹುದು ಅಥವಾ ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಬಹುದು.

Jolad Rotti:
Related Post