ಬೆಂಗಳೂರು ಆಸ್ತಿ ತೆರಿಗೆ, ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯ ಆಸ್ತಿ ಮಾಲೀಕರಿಂದ ಸಂಗ್ರಹಿಸುವ ಒಂದು ಸ್ಥಳೀಯ ತೆರಿಗೆಯಾಗಿದೆ. ಈ ತೆರಿಗೆ ಹಣವನ್ನು ನಗರದಲ್ಲಿ ನಾನಾ ಸೇವೆಗಳನ್ನು ಒದಗಿಸಲು ಬಳಸಲಾಗುತ್ತದೆ. ಈ ಸ್ಥಳೀಯ ತೆರಿಗೆಗಳೆಂದರೆ, ರಸ್ತೆ ನಿರ್ವಹಣೆ, ಉದ್ಯಾನವನಗಳ ನಿರ್ವಹಣೆ, ಒಳಚರಂಡಿಗಳು, ಬೀದಿ ದೀಪ ನಿರ್ವಹಣೆ, ಇತ್ಯಾದಿಗಳು. ಬೆಂಗಳೂರಿನ ನಿವಾಸಿಗಳು ಈ ಆಸ್ತಿ ತೆರಿಗೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಪಾವತಿಸಬೇಕಾಗುತ್ತದೆ. ಈ ಲೇಖನದಲ್ಲಿ ನಾವು, ಆನ್‍ಲೈನ್‍ನಲ್ಲಿ ನಿಮ್ಮ ಆಸ್ತಿ ತೆರಿಗೆ ಪಾವತಿಸುವ ಮಾಹಿತಿಯನ್ನು ನೀಡುತ್ತೇವೆ.
ಆಸ್ತಿತೆರಿಗೆಯನ್ನುಪಾವತಿಸುವಎರಡುವಿಧಾನಗಳು
ನಮ್ಮ ಬೆಂಗಳೂರಿನಲ್ಲಿ ಆಸ್ತಿ ತೆರಿಗೆಯನ್ನು ಎರಡು ರೀತಿಯಲ್ಲಿ ಬಿಬಿಎಂಪಿಗೆ ಪಾವತಿಸಬಹುದಾಗಿದೆ. ಮೊದಲನೆಯದು ಮ್ಯಾನ್ಯುವಲ್ ಅಂದರೆ, ಸಾಂಪ್ರದಾಯಿಕ ಪಾವತಿ ವಿಧಾನ. ತೆರಿಗೆ ಪಾವತಿಗೆ ಅಗತ್ಯವಾದ ನಿಮ್ಮ ಅರ್ಜಿ ನಮೂನೆಗಳನ್ನು ಭರ್ತಿ ಮಾಡಿ, ಚೆಕ್ ಅಥವಾ ಬ್ಯಾಂಕ್ ಹುಂಡಿ (ಡಿಡಿ)
ನಿಗದಿತ ಮೊತ್ತ ಪಾವತಿಸಬೇಕು.
ಆನ್‌ಲೈನ್ ಮೂಲಕ ತೆರಿಗೆ ಪಾವತಿಸುವುದು ಎರಡನೆಯ ವಿಧಾನವಾಗಿದೆ. ಸಾಂಪ್ರದಾಯಿಕ ವಿಧಾನಕ್ಕೆ ಹೋಲಿಸಿದರೆ, ತೆರಿಗೆ ಪಾವತಿಸಲು ಇದು ಅನುಕೂಲಕರ ವಿಧಾನ. ಆಸ್ತಿ ಮಾಲೀಕರು, ಆನ್‌ಲೈನ್‌ನಲ್ಲಿ ನಿಗದಿತ ನೂಮೂನೆಯನ್ನು ಭರ್ತಿ ಮಾಡಿ ಬಳಿಕ ನಗದು ವರ್ಗಾವಣೆ, ಕ್ರೆಡಿಟ್ ಕಾರ್ಡ್‌ಗಳು ಅಥವಾ ಡೆಬಿಟ್ ಕಾರ್ಡ್‌ಗಳ ಮೂಲಕ ಬಿಬಿಎಂಪಿ ನಿಗದಿ ಪಡಿಸಿದ ಮೊತ್ತ ಪಾವತಿಸಬಹುದು.
ಬೆಂಗಳೂರುಆಸ್ತಿತೆರಿಗೆ: ನೀವುತಿಳಿದುಕೊಳ್ಳಬೇಕಾದ ಅಂಶಗಳು
ನೀವು, ಮೊದಲ ಬಾರಿಯ ಆಸ್ತಿ ತೆರಿಗೆ ಪಾವತಿದಾರರಾಗಿದ್ದರೆ, ನಿಮ್ಮ ಆಸ್ತಿ ತೆರಿಗೆಯನ್ನು ಪಾವತಿಸುವ ಮುನ್ನ ನೀವು ಒಂದಿಷ್ಟು ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಅಗತ್ಯ. ಈ ವಿವರಗಳು, ನಿಮ್ಮ ಆಸ್ತಿಯ ಬಗ್ಗೆಗೆ ಸಂಬಂಧಿಸಿದ್ದಾಗಿದೆ.
- ನಿಮ್ಮ ಆಸ್ತಿಯ ವಾರ್ಷಿಕ ಮೌಲ್ಯ
- ನಿಮ್ಮ ಆಸ್ತಿಯ ವರ್ಗೀಕರಣ (ಅದು ವಸತಿ, ವಸತಿಯೇತರ, ಅಂಗಡಿ, ಇತ್ಯಾದಿ)
- ವಲಯ ವರ್ಗೀಕರಣ
- ನಿಮ್ಮ ಆಸ್ತಿಯ ಅಳತೆ
- ನಿಮ್ಮ ಆಸ್ತಿಯಲ್ಲಿ ನಿರ್ಮಿತ ಪ್ರದೇಶ
- ನೆಲಮಾಳಿಗೆಯನ್ನು ಒಳಗೊಂಡಂತೆ ನಿಮ್ಮ ಆಸ್ತಿಯ ಒಟ್ಟು ಮಹಡಿಗಳ ಸಂಖ್ಯೆ
- ಪ್ರತಿಯೊಂದು ಮಹಡಿಯ ನಿರ್ಮಿತ ಪ್ರದೇಶ
2022-23 ಸಾಲಿನಆಸ್ತಿತೆರಿಗೆಯನ್ನುಆನ್‌ಲೈನ್‌ನಲ್ಲಿಪಾವತಿಸುವವಿಧಾನ
ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ರೂಪಿಸಲಾಗಿರುವ, ಬಿಬಿಎಂಪಿಯ ಆಸ್ತಿ ತೆರಿಗೆ ಪಾವತಿಸ ಹೊಸ ಅಂತರ್ಜಾಲ ತಾಣದಲ್ಲಿ, ಆಸ್ತಿ ತೆರಿಗೆವನ್ನು ಸುಲಭವಾಗಿ ಪಾವತಿಸಬಹುದಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಆಸ್ತಿಯ ಒಡೆತನ, ಬಳಕೆ ಮತ್ತು ತಮ್ಮ ಆಸ್ತಿಯ ಹಿಡುವಳಿಯಲ್ಲಿ ಯಾವುದೇ ಬದಲಾವಣೆ ಇಲ್ಲವಾದರೆ, ಈ ವರ್ಷ ಸುಲಭವಾಗಿ, ಸರಳವಾಗಿ ಆಸ್ತಿ ತೆರಿಗೆ ಪಾವತಿಸಬಹುದು.
ಪ್ರತಿವರ್ಷ, ಏಪ್ರಿಲ್ 30 ರೊಳಗೆ ಆಸ್ತಿ ತೆರಿಗೆ ಪಾವತಿಸಿದರೆ, ತೆರಿಗೆದಾರರಿಗೆ ೫% ರಿಯಾಯತಿ ನೀಡಲಾಗುತ್ತದೆ.
ಒಂದೊಮ್ಮೆ, ನಿಮ್ಮ ಆಸ್ತಿಯಲ್ಲಿ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಲಾಗಿದ್ದರೂ, ನಿಮ್ಮ ಆಸ್ತಿ ತೆರಿಗೆ ಪಾವತಿ ಪ್ರಕ್ರಿಯೆ ಈಗ ಸರಳವಾಗಿದೆ. ಬಿಬಿಎಂಪಿ ಜಾಲತಾಣ ಬಳಸಿ ಈ ಕೆಳಗೆ ಕೊಟ್ಟಿರುವ ಹಂತಗಳನ್ನು ಎಚ್ಚರಿಕೆಯಿಂದ ಅನುಸರಿಸಿ, ನಿಮ್ಮ ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಬಹುದು.
- ಹೊಸ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.
- ಮುಖ ಪುಟದಲ್ಲಿ ಎಸ್‌ಎಎಸ್ ಆಧಾರಿತ ಅರ್ಜಿ ಸಂಖ್ಯೆಯನ್ನು ನಮೂದಿಸಿ ಹಾಗು ಮಾಹಿತಿ ಪಡೆದು ಕೊಳ್ಳುವ ಆಯ್ಕೆಯನ್ನು ಆಯ್ಕೆಮಾಡಿಕೊಳ್ಳಿ. ಒಂದು ವೇಳೆ ನಿಮಗೆ ನಿಮ್ಮ ಅರ್ಜಿ ಸಂಖ್ಯೆಯ ಕುರಿತು ಖಚಿತತೆ ಇಲ್ಲವೆಂದಾದಲ್ಲಿ, ನೀವು ʼರಿನೀವಲ್ ಅಪ್ಲಿಕೇಶನ್ ನಂಬರ್ʼ ಗೆ ಕ್ಲಿಕ್ ಮಾಡಬಹುದು. ಎಸ್‌ಎಎಸ್ ಗೆ ನಿಮ್ಮ ಹಿಂದಿನ ವರ್ಷದ ಅರ್ಜಿ ಸಂಖ್ಯೆಯನ್ನು ನಮೂದಿಸಿ. ನೀವು ಮುಂದಿನ ಹಂತಕ್ಕೆ ಹೋಗಲು ನಿಮ್ಮ ಪಿಐಡಿ ಸಂಖ್ಯೆಯನ್ನು ಕೂಡ ನಮೂದಿಸಬಹುದು.
- ಹೀಗೆ, ನೀವು ನಮೂದಿಸಿದ ಪಿಐಡಿ ಅಥವಾ ಎಸ್‌ಎಎಸ್ ಸಂಖ್ಯೆ ಸರಿಯಾಗಿದ್ದರೆ, ಆಸ್ತಿಯ ಮಾಲೀಕನ ಹೆಸರು ಗೋಚರಿಸುತ್ತದೆ. ಈ ಮಾಹಿತಿ ಸರಿಯೆಂದಾದರೆ, ನೀವು ʼಕನ್ಫರ್ಮ್ʼ ಅನ್ನು ಕ್ಲಿಕ್ ಮಾಡಿ ಮುಂದುವರಿಯಬೇಕು.
- ಈ ಬಳಿಕದ ಪುಟದಲ್ಲಿ, ನಿಮ್ಮ ಆಸ್ತಿಯ ವಿವರಗಳನ್ನು ನೀಡಲಾಗಿರುತ್ತದೆ. ಈ ವಿವರಗಳು ಅತ್ಯಂತ ಪ್ರಾಮುಖ್ಯ. ಹೀಗಾಗಿ, ಜಾಗರೂಕತೆಯಿಂದ ಅದನ್ನು ಪರಿಶೀಲಿಸಿ
- ನಿಮ್ಮ ಆಸ್ತಿ ವಿವರಗಳಲ್ಲಿ ಏನಾದರೂ ಬದಲಾವಣೆ ಮಾಡಬೇಕಿದ್ದರೆ, ಅಂದರೆ ಪ್ರದೇಶ, ಹಿಡುವಳಿಯ ಈಗಿನ ಸ್ಥಿತಿಗತಿ, ಅಥವಾ ಆಸ್ತಿಯ ಬಳಕೆ ಇತ್ಯಾದಿಗಳಿದ್ದರೆ, ಈ ಹಂತದಲ್ಲಿ ಬದಲಾವಣೆ ಮಾಡಬೇಕು.
- ನಿಮ್ಮ ಆಸ್ತಿ ವಿವರಗಳಲ್ಲಿ ಏನಾದರೂ ಬದಲಾವಣೆ ಮಾಡಬೇಕಿದ್ದರೆ, ಅಂದರೆ ಪ್ರದೇಶ, ಹಿಡುವಳಿಯ ಈಗಿನ ಸ್ಥಿತಿಗತಿ, ಅಥವಾ ಆಸ್ತಿಯ ಬಳಕೆ ಇತ್ಯಾದಿಗಳಿದ್ದರೆ, ಈ ಹಂತದಲ್ಲಿ ಬದಲಾವಣೆ ಮಾಡಬೇಕು.
- ಇದಕ್ಕಾಗಿ, ಅಲ್ಲಿ ಕೊಡಲಾಗುವ ಚೆಕ್‌ಬಾಕ್ಸ್‌ನಲ್ಲಿ ಮೊದಲು ಗುರುತು ಮಾಡಿ ಬಳಿಕ ʼಮುಂದುವರಿಯಿರಿ ʼ ಅನ್ನು ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಆಸ್ತಿ ತೆರಿಗೆಯ ಅರ್ಜಿ ನಮುನೆ 5 ದೊರೆಯುತ್ತದೆ. ಈ ಪುಟದಲ್ಲಿ ನಿಮಗೆ ನಿಮ್ಮ ಆಸ್ತಿ ಕುರಿತಾದ ಮಾಹಿತಿಯ ಬದಲಾವಣೆ ಮತ್ತು ಈ ಹಿಂದೆ ನೀಡಲಾದ ಮಾಹಿತಿಯನ್ನು ಪರಿಷ್ಕರಿಸಲು ಸಾಧ್ಯವಾಗುತ್ತದೆ. ಅಗತ್ಯ ಬದಲಾವಣೆಗಳನ್ನು ಮಾಡಿದ ಬಳಿಕ ʼಪ್ರೊಸೀಡ್ ಟು ನೆಕ್ಸ್ಟ್ ಸ್ಟೆಪ್ʼ ಅನ್ನು ಒತ್ತಿರಿ. ಇಲ್ಲಿ ನಿಮಗೆ ಒದಗಿಸಿದ ಮಾಹಿತಿ ವಿವರದ ಆಧಾರದ ಮೇಲೆ ನಿಮ್ಮ ಆಸ್ತಿಯ ತೆರಿಗೆ ಲೆಕ್ಕಾಚಾರಗಳನ್ನು ನೋಡಲು ಸಾಧ್ಯವಾಗುತ್ತದೆ.
- ನಿಮ್ಮ ಆಸ್ತಿಯಲ್ಲಿ ಬದಲಾವಣೆಗಳಿದ್ದರೆ ʼಪ್ರೊಸೀಡ್ʼ ಅನ್ನು ಕ್ಲಿಕ್ ಮಾಡಿ. ಅದು ನಿಮ್ಮನ್ನು ಅರ್ಜಿ ನಮುನೆ ಸಂಖ್ಯೆ ೪ಕ್ಕೆ ಕೊಂಡೊಯ್ಯುತ್ತದೆ.
- ಮುಂದಿನ ಪುಟದಲ್ಲಿ ಈ ಹಿಂದೆ, ಖಚಿತ ಪಡಿಸಲಾದ ಮಾಹಿತಿಗಳನ್ನೊಳಗೊಂಡ ವಿವರಗಳಿರುತ್ತವೆ.
- ಕೊನೆಯ ಪುಟದ ಚೆಕ್‌ಬಾಕ್ಸ್ ನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ತೋರಿಸಿದರೆ, ಈ ಪುಟದ ಯಾವುದೇ ಮಾಹಿತಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರ್ಥ. ನೀವು ಈ ಪುಟದಲ್ಲಿ ನಿಮ್ಮ ದೂರವಾಣಿ ಸಂಖ್ಯೆಯನ್ನಷ್ಟೇ ಬದಲಿಸಬಹುದು. ಆದರೆ, ನಿಮ್ಮ ಸುರಕ್ಷತೆ ದೃಷ್ಟಿಯಿಂದ, ಮಾಹಿತಿ ಸರಿಯಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
- ಬಳಿಕ, ನೀವು ಇದೆ ಪುಟದಲ್ಲಿ ಮುಂದುವರಿದು ಆಸ್ತಿ ತೆರಿಗೆ ಪಾವತಿಸಿ. ಈ ತೆರನಾಗಿ, ನೀವು ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದು. ಇಲ್ಲವಾದರೆ, ಬಿಬಿಎಂಪಿಯ ವಾರ್ಡ್ ಕಛೇರಿಯಲ್ಲಿ ಇಡಲಾಗಿರುವ ಚಲನ್ ಮೂಲಕವೂ ಪಾವತಿಸಬಹುದು.
- ನೀವು ನಿಮ್ಮ ಆಸ್ತಿ ತೆರಿಗೆ ಪಾವತಿಗೆ, ಆನ್‌ಲೈನ್ ವಿಧಾನ ಆರಿಸಿಕೊಂಡರೆ, ನೀವು ನೆಟ್ ಬ್ಯಾಂಕಿಂಗ್, ಇ-ವ್ಯಾಲೆಟ್, ಡೆಬಿಟ್ ಕಾರ್ಡ್, ಅಥವಾ ಕ್ರೆಡಿಟ್ ಕಾರ್ಡ್ ಮೂಲಕವೂ ನಿಗದಿಪಡಿಸಿದ ಮೊತ್ತ ಪಾವತಿಸಬಹುದು.
- ಒಮ್ಮೆ ನೀವು, ನಿಮ್ಮ ಆಸ್ತಿ ತೆರಿಗೆ ಪಾವತಿಸಿದ ಬಳಿಕ ನಿಮ್ಮ ಪಾವತಿಗೆ ಒಂದು ಒಂದು ರಶೀದಿ ಸಂಖ್ಯೆ ಸೃಜಿಸಲಾಗುತ್ತದೆ. ಬಿಬಿಎಂಪಿ ಜಾಲತಾಣದಲ್ಲಿ ಈ ಸಂಖ್ಯೆ ಸೃಜನೆಗೆ ಕೆಲವೊಮ್ಮೆ ೨೪ ಗಂಟೆ ಕೂಡ ಬೇಕಾಗಬಹುದು.
- ಈ ಲಿಂಕ್ ಬಳಸಿ ನೀವು ನಿಮ್ಮ ಆಸ್ತಿ ತೆರಿಗೆ ಪಾವತಿಯ ರಿಸಿಪ್ಟ್ ಪಡೆದುಕೊಳ್ಳಬಹುದು. ಇದನ್ನು ಡೌನ್ ಲೋಡ್ ಅಥವಾ ಪ್ರಿಂಟ್ ಔಟ್ ತೆಗೆದುಕೊಳ್ಳುವ ಆಯ್ಕೆ ನೀಡಲಾಗುತ್ತದೆ.
- ಒಂದೊಮ್ಮೆ, ಆನ್‌ಲೈನ್‌ನಲ್ಲಿ ನಿಮ್ಮ ಆಸ್ತಿ ತೆರಿಗೆ ಪಾವತಿಸಲು ನೀವು ಏನಾದರೂ ಸಮಸ್ಯೆ ಎದುರಿಸಿದರೆ, ಪಾವತಿಯ ಸ್ಥಿತಿಗತಿಯನ್ನು ಆನ್ಲೈನ್ ನಲ್ಲೆ ನೋಡಬಹುದು. ಅಥವಾ, ನಿಮ್ಮ 2018-19 ರ ಎಸ್‌ಎಎಸ್ ಅರ್ಜಿ ಸಂಖ್ಯೆಯನ್ನು ದಾಖಲಿಸಿ, ಈ ಲಿಂಕ್ ಬಳಸಿ ಪಾವತಿ ಪ್ರಕ್ರಿಯೆ ಮುಂದುವರಿಸಬಹುದು.
ಒಂದೊಮ್ಮೆ, ನಿಮ್ಮ ಆಸ್ತಿ ತೆರಿಗೆಯನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡುವ ಸಂಧರ್ಭದಲ್ಲಿ, ನಿಮಗೆ ಯಾವುದೇ ರೀತಿಯ ಸಮಸ್ಯೆ ಎದುರಾದರೆ, ಈ ಕೆಳಗಿನ ಆಯ್ಕೆಗಳ ಮೂಲಕ ನೀವು ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ದೂರು ಸಲ್ಲಿಸಲು ಈ ಲಿಂಕ್ ಒತ್ತಿರಿ
- ಇಮೇಲ್: dcrev@bbmp.gov.in
- ದೂರವಾಣಿ ಸಂಖ್ಯೆ: 080 2297 5555
ಸಹಾಯವಾಣಿ: 080 2266 0000
ತಮ್ಮ ಕಾನೂನು ಬದ್ದ ಆಸ್ತಿಗೆ ಸಕಾಲಕ್ಕೆ, ಸೂಕ್ತ ತೆರಿಗೆಯನ್ನು ಪಾವತಿಸುವುದು ಎಲ್ಲಾ ಆಸ್ತಿ ಮಾಲೀಕರ ಆದ್ಯ ಕರ್ತವ್ಯವಾಗಿದೆ. ನೀವು ಆಸ್ತಿ ಮಾಲೀಕರಾಗಿದ್ದರೆ, ನೀವು ಈ ಕರ್ತವ್ಯವನ್ನು ನಿಗದಿತ ಸಮಯದಲ್ಲಿ ಪಾಲಿಸಬೇಕು. ಜೊತೆಗೆ, ಯಾವುದೇ ಕಾನೂನು ಸಮಸ್ಯೆಯನ್ನು ಭವಿಷ್ಯದಲ್ಲಿ ನೀವು ಎದುರಿಸದಿರಲು, ನಿಮ್ಮ ಆಸ್ತಿ ತೆರಿಗೆಯನ್ನು ನೀವು ಸಮಯಕ್ಕೆ ಸರಿಯಾಗಿ ಪಾವತಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಆನ್‌ಲೈನ್‌ನಲ್ಲಿ ತೆರಿಗೆ ಪಾವತಿಸುವ ಹೊಸ ವಿಧಾನದೊಂದಿಗೆ,
ಈ ಕರ್ತವ್ಯ ಪಾಲನೆ ಈಗ ನಿಜಕ್ಕೂ ಸುಲಭ ಹಾಗು ಸರಳ.
ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಆಸ್ತಿ ತೆರಿಗೆಯ ವಲಯ ಕಚೇರಿ ಸಂಖ್ಯೆಗ ಳು ಇಲ್ಲಿವೆ
ಕ್ರ.ಸಂ. | ವಲಯ | ಕಚೇರಿ ಸಂಖ್ಯೆ | ನಿಯಂತ್ರಣ ಕೊಠಡಿ ಸಂಖ್ಯೆ |
---|---|---|---|
1 | ಎಸಿ/ಜೆಸಿ/ಡಿಸಿ (ಯಲಹಂಕ) | 080-2297-5935 / 080-2297-5949 | 080-2363-6671 / 080-2297-5936 |
2 | ಎಸಿ/ಜೆಸಿ/ಡಿಸಿ (ಮಹದೇವಪುರ) | 080-2851-1166 / 080-2851-2229 | 080-2851-2300 / 080-2851-2301 |
3 | ಎಸಿ/ಜೆಸಿ/ಡಿಸಿ (ದಾಸರಹಳ್ಳಿ) | 080-2297-5901 / 080-2297-5902 | 080-2839-4909 / 080-2839-3688 |
4 | ಎಸಿ/ಜೆಸಿ/ಡಿಸಿ (ರಾಜರಾಜೇಶ್ವರಿ ನಗರ) | 080-2860-4652 / 080-2860-3827 | 080-2860-0954 / 080-2860-1851 |
5 | ಎಸಿ/ಜೆಸಿ/ಡಿಸಿ (ಬೊಮ್ಮನಹಳ್ಳಿ) | 080-2573-2628 / 080-2573-5608 | 080-2573-2247 / 080-2573-5642 |
6 | ಎಸಿ/ಜೆಸಿ/ಡಿಸಿ (ಪಶ್ಚಿಮ) | 080-2297-5601 / 080-2346-4648 | 080-2356-1692 / 080-2346-3366 |
7 | ಎಸಿ/ಜೆಸಿ/ಡಿಸಿ (ದಕ್ಷಿಣ) | 080-2297-5701 / 080-2297-5731 | 080-2656-6362 |
8 | ಎಸಿ/ಜೆಸಿ/ಡಿಸಿ (ಪೂರ್ವ) | 080-2297-5801 / 080-2559-5239 | 080-2297-5803 |
ಬೆಳಗ್ಗೆ 9.00 ರಿಂದ ಮಧ್ಯಾಹ್ನ 12.30 ರವರೆಗೆ ಮತ್ತು ಮಧ್ಯಾಹ್ನ 3.00 ರಿಂದ ರಾತ್ರಿ 7.00 ರವರೆಗೆ ಈ ಎಲ್ಲ ಕಚೇರಿಗಳಲ್ಲಿ ನಿಮ್ಮ ಆಸ್ತಿ ತೆರಿಗೆ ಪಾವತಿಸಬಹುದು, ಅಥವಾ ನಿಮ್ಮ ದೂರುಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಇದ ಜೊತೆಗೆ ಈಗ, ನಿಮ್ಮ ಆಸ್ತಿ ತೆರಿಗೆಯನ್ನು ಬಿಬಿಎಂಪಿ ಸಹಾಯ ಕೇಂದ್ರಗಳು ಮತ್ತು ಬೆಂಗಳೂರು ಒನ್ ಕೇಂದ್ರಗಳಲ್ಲಿ ಪಾವತಿಸಬಹುದು. ಹೆಚ್ಚಿನ ಮಾಹಿತಿಗೆ ಬಿಬಿಎಂಪಿ ಸಹಾಯವಾಣಿ ಸಂಖ್ಯೆ 080-2266-0000 ಸಂಪರ್ಕಿಸಿ.
Related Articles
- In English: Pay Your Bangalore Property Tax online