X

ಡಿಜಿಟಲ್ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಲಭ್ಯವಿರುವ ಆನ್ ಲೈನ್ ಸೇವೆಗಳು

ನವೆಂಬರ್ 2, 2020ರಿಂದ ರಾಜ್ಯದ  ಮೂರು ಉಪ ನೋಂದಣಾಧಿಕಾರಿ ಕಚೇರಿಗಳು  ಸಂಪೂರ್ಣ ಡಿಜಿಟಲ್ ಮಾಯವಾಗಿಲಿವೆ. ಈ ಕಚೇರಿಗಳಲ್ಲಿ ಎಲ್ಲ ಸೇವೆಗಳು  ಆನ್‌ಲೈನ್‌ನಲ್ಲಿ ಸಂಪೂರ್ಣವಾಗಿ ದೊರೆಯಲಿವೆ.

ಈ ಮೂರು ಕಚೇರಿಗಳೆಂದರೆ

  1. ಉಪ ನೋಂದಣಾಧಿಕಾರಿ  ಕಚೇರಿ, ಜಯನಗರ, ಬೆಂಗಳೂರು
  2. ಉಪ ನೋಂದಣಾಧಿಕಾರಿ  ಕಚೇರಿ, ಬೈಲಹೊಂಗಲ, ಬೆಳಗಾವಿ ಜಿಲ್ಲೆ
  3. ಉಪ ನೋಂದಣಾಧಿಕಾರಿ  ಕಚೇರಿ ಕಚೇರಿ, ತುಮಕೂರು

ಈ ಮೂರು ಕಚೇರಿಗಳಲ್ಲಿ ಯಾವ  ಸೇವೆಗಳು  ಆಫ್ ಲೈನ್ ನಲ್ಲಿ ಅಂದರೆ ಕಾಗದ ಪಾತ್ರದ ಮೂಲಕ ನಡೆಯುವುದಿಲ್ಲ

ಕರ್ನಾಟಕದ ಡಿಜಿಟಲ್ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಲಭ್ಯವಿರುವ ಸೇವೆಗಳು

ರಾಜ್ಯದ ಈ ಮೂರೂ   ಡಿಜಿಟಲ್ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಈ ಕೆಳಗಿನ  ಸೇವೆಗಳು ಲಭ್ಯವಿರುತ್ತವೆ.

  1. ಆಸ್ತಿ ನೋಂದಾವಣೆ
  2. ದಾಖಲೆಗಳ ನೋಂದಾವಣೆಗೆ ಮುಂಗಡವಾಗಿ ಸಮಯ ನಿಗದಿಪಡಿಸಿಕೊಳ್ಳಿ.
  3. ಆಸ್ತಿ ದೃಢೀಕರಣ ಪತ್ರ.
  4. ಆಸ್ತಿ ದಾಖಲೆ ಪತ್ರಗಳ ಹುಡುಕಾಟ ಹಾಗು ದೃಡೀಕರಣ.  ಆಸ್ತಿ ಮಾರಾಟ ಮೇಲಿನ ಸಂಪೂರ್ಣ ದಾಖಲೆಗಳು.
  5. ಆಸ್ತಿ ದಾಖಲೆಗಳ  ಪ್ರಮಾಣೀಕೃತ ಪ್ರತಿಗಳನ್ನು ಇಲ್ಲಿ ನೀಡಲಾಗುತ್ತದೆ.
  6. ಆಸ್ತಿ  ಮೌಲ್ಯಮಾಪನ.
  7. ನೋಂದಣಿ ಶುಲ್ಕದ ಆನ್‌ಲೈನ್ ದೃಢೀಕರಣ.
  8. ಸ್ಟಾಂಪ್ ಡ್ಯೂಟಿಯ ಆನ್‌ಲೈನ್ ದೃಢೀಕರಣ.
  9. ಸಮೀಪದ  ಉಪ ನೋಂದಣಾಧಿಕಾರಿ  ಕಚೇರಿಯನ್ನು ಹುಡುಕುವುದು.
  10. ಆನ್‌ಲೈನ್‌ನಲ್ಲಿ ಆಸ್ತಿ ಮಾರಾಟಕ್ಕೆ ಸಂಬಂಧಿಸಿದ ತೆರಿಗೆ ಮತ್ತು ಇತರ ಶುಲ್ಕಗಳ  ನಿರ್ಧರಣೆ ಹಾಗು  ಪಾವತಿ.
  11. ನಿಗದಿಪಡಿಸಿದ ಮೊತ್ತ  ಪಾವತಿ  ನಂತರ ನೋಂದಾವಣೆ  ದಿನಾಂಕವನ್ನು ನೀಡಲಾಗುತ್ತದೆ
  12. ನಿಗದಿ ಪಡಿಸಿದ ದಿನಾಂಕದಂದು ಖರೀದಿದಾರ ಮತ್ತು ಮಾರಾಟಗಾರ ನಿರ್ದಿಷ್ಟ ಉಪ ನೋಂದಾವಣೆ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ
  13. ಅಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ  ಆಸ್ತಿ ಖರೀದಿ  ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಈಗ ಲಭ್ಯವಿರುವ ಆನ್‌ಲೈನ್ ಸೇವೆಗಳನ್ನು ಬಳಸಿಕೊಳ್ಳಲು  ಈ ಕೆಳಗಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. 

  • ಕಾವೇರಿ ಆನ್‌ಲೈನ್ ಪೋರ್ಟಲ್‌ನಲ್ಲಿ ಹೆಸರು ನೋಂದಾವಣೆ.
  • ಇದು ಕರ್ನಾಟಕ ಸರ್ಕಾರದ ನೋಂದಣಿ ಇಲಾಖೆಯ ಅಧಿಕೃತ ಆನ್‌ಲೈನ್  ಅಂತರ್ಜಾಲ ತಾಣವಾಗಿದೆ.
  • ನಿಮ್ಮ ಹೆಸರು ನೋಂದಾಯಿಸಿಕೊಂಡ ಬಳಿಕ,  ನೀವು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

ಕರ್ನಾಟಕದ ಡಿಜಿಟಲ್ ಉಪ ನೋಂದಾವಣೆ ಕಚೇರಿಗಳಲ್ಲಿ ಸೇವೆ ಪಡೆಯುವುದು ಹೇಗೆ?

ಕರ್ನಾಟಕ ಸರಕಾರ  2018 ರಲ್ಲಿ ರಾಜ್ಯದ ಉದ್ದಗಲಕ್ಕೂ, ಆಸ್ತಿಯ ಆನ್‌ಲೈನ್ ನೋಂದಣಿಯನ್ನು  ಕಾವೇರಿ ಆನ್‌ಲೈನ್ ಅಂತರ್ಜಾಲ ತಾಣ ಮೂಲಕ ಪರಿಚಯಿಸಿತು.  ಆದರೆ ಇದರ ಜೊತೆಗೆ,

 ನೋಂದಾವಣೆಗೆ  ಆಫ್‌ಲೈನ್ ಆಯ್ಕೆ ಸಹ ಲಭ್ಯವಿದೆ.  ಪರಿಣಾಮವಾಗಿ, ಅತಿ ಕಡಿಮೆ ಸಂಖ್ಯೆಯಲ್ಲಿ ಜನ ಆನ್‌ಲೈನ್ ಮೂಲಕ  ನೋಂದಾವಣೆ ಸೇವೆಗಳನ್ನು ಪಡೆಯುತ್ತಿದ್ದಾರೆ.

ಇದನ್ನು ಗಮನದಲ್ಲಿಟ್ಟುಕೊಂಡು,  ನೋಂದಾವಣೆ  ಸೇವೆಗಳನ್ನು  ಕಾಗದರಹಿತವನ್ನಾಗಿಸಿ,  ಆನ್ಲೈನ್ ಮೂಲಕ ನಡೆಸಲು ಸರಕಾರ ಇತ್ತೀಚಿಗೆ ನಿರ್ಧರಿಸಿತು. ಈ ಡಿಜಿಟಲ್ ಆನ್ ಲೈನ್ ಪ್ರಕ್ರಿಯೆ,  ಕಡಿಮೆ ಸಮಯ, ಹಣ ಮತ್ತು ಶ್ರಮ ತೆಗೆದುಕೊಳ್ಳುತ್ತದೆ.

ಇದರ ಜೊತೆಗೆ, ಕೋವಿಡ್ ೧೯ ಹಿನ್ನಲೆಯಲ್ಲಿ, ಈ ಪ್ರಕ್ರಿಯೆ,  ಉಪ ನೋಂದಣೆ ಕಚೇರಿಗಳಲ್ಲಿ ಜನ ಸೇರುವುದನ್ನು ಕೂಡ ನಿಯಂತ್ರಿಸುತ್ತದೆ. ಈ ಮೂಲಕ, ಕೋವಿಡ್ ೧೯ ನಿಯಂತ್ರಣ ಸಾಧ್ಯ.

ಆರಂಭಿಕ ಹಂತದಲ್ಲಿ, ಕರ್ನಾಟಕ ಸರಕಾರ,

ಈ 3 ಕಚೇರಿಗಳಲ್ಲಿ  ಎಲ್ಲ ಸೇವೆಗಳನ್ನು  ಆನ್‌ಲೈನ್ ಗೊಳಿಸುತ್ತಿದೆ. ಆ ಬಳಿಕ, ಅದರ ಪರಿಣಾಮಕಾರಿತ್ವ ಮತ್ತು ಜನರ ಪ್ರತಿಕ್ರಿಯೆಯ ಆಧಾರದ ಮೇಲೆ ರಾಜ್ಯಾದ್ಯಂತ ಇರುವ  ಎಲ್ಲಾ  ಉಪ ನೋಂದಾವಣೆ ಅಧಿಕಾರಿಗಳ ಕಚೇರಿಗಳನ್ನು ಡಿಜಿಟಲೀಕರಣಗೊಳಿಸಲು ನಿರ್ಧರಿಸಲಿದೆ.

Related Readings

Jolad Rotti:
Related Post