X

ಕರ್ನಾಟಕ ಬಜೆಟ್ 2024: ಮುಖ್ಯಾಂಶಗಳು

    Categories: Government

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ದಾಖಲೆಯ  15ನೇ ಬಜೆಟ್ ಮಂಡಿಸಿದರು. ಐದು ಖಾತರಿ ಯೋಜನೆಗಳ ಅನುಷ್ಠಾನದ ಜೊತೆ ಜೊತೆಗೆ, ರಾಜ್ಯದ ಅಭಿವೃದ್ಧಿಗೆ ಈ ಬಜೆಟ್ ನಲ್ಲಿ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ.  ಐದು ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಲೇ ಈ ಬಾರಿ ಮುಖ್ಯ ಮಂತ್ರಿಯವರು ತಮ್ಮ ದಾಖಲೆಯ ೧೫ನೇ ಬಜೆಟ್ ನಲ್ಲಿ ನಾನಾ ಹೊಸ ಘೋಷಣೆಗಳನ್ನು ಮಾಡಿದ್ದಾರೆ. ನಿರೀಕ್ಷೆಯಂತೆ ಕೃಷಿ, ಅರೋಗ್ಯ, ಗ್ರಾಮೀಣಾಭಿವೃದ್ಧಿ, ಐಟಿ & ಬಿಟಿ ಕ್ಷೇತ್ರಗಳಿಗೆ ಹೆಚ್ಚಿನ ನೆರವು ಪ್ರಕಟಿಸಲಾಗಿದೆ. 

ಬಜೆಟ್ ಪ್ರಕಾರ ರಾಜ್ಯದ  ಆದಾಯದ ಸ್ವೀಕೃತಿ ಹೊಸ ಆರ್ಥಿಕ ವರ್ಷದಲ್ಲಿ  2,63,178 ಕೋಟಿಗಳೆಂದು  ಅಂದಾಜಿಸಲಾಗಿದೆ, ಅದರಲ್ಲಿ ರೂ. 1,89,893 ಕೋಟಿಗಳು ರಾಜ್ಯದ ಸ್ವಂತ ತೆರಿಗೆ ಆದಾಯ ಮತ್ತು ರೂ. 13,500 ಕೋಟಿ ಆದಾಯ ತೆರಿಗೆಯೇತರ ಆದಾಯ ಮೂಲಗಳಿಂದ ದೊರೆಯುವ ಆದಾಯವಾಗಿದೆ. 

ಬಜೆಟ್ ದಾಖಲೆಗಳ ಪ್ರಕಾರ 2024-25ರ ಆರ್ಥಿಕ ವರ್ಷದಲ್ಲಿ ರಾಜ್ಯ ಸರಕಾರದ  ಒಟ್ಟು ವೆಚ್ಚವು ರೂ. 3,71,383 ಕೋಟಿಗಳು.  ಇದರಲ್ಲಿ ಆದಾಯ ವೆಚ್ಚ ರೂ. 2,90,531 ಕೋಟಿಗಳು, ಹಾಗು  ಬಂಡವಾಳ ವೆಚ್ಚ ರೂ. 55,877 ಕೋಟಿ. ಜೊತೆಗೆ ರಾಜ್ಯ   ಸಾಲ ಮರುಪಾವತಿಗಾಗಿ  ರೂ. 24,974 ಕೋಟಿಯನ್ನು ವ್ಯಯಿಸುತ್ತದೆ. ಬಜೆಟ್ ಪ್ರಕಾರ ರಾಜ್ಯದ  ಆದಾಯ ಕೊರತೆ 27,354 ಕೋಟಿ ಎಂದು ಅಂದಾಜಿಸಲಾಗಿದೆ. ವಿತ್ತೀಯ ಕೊರತೆಯು ಅಂದಾಜು ರೂ. 82,981 ಕೋಟಿಗಲಾಗಿದ್ದು ಇದು ರಾಜ್ಯದ ನಿವ್ವಳ ಉತ್ಪನ್ನದ   2.95%. 

ರೂಪಾಯಿ ಲೆಕ್ಕದಲ್ಲಿ ರಾಜ್ಯದ ಆದಾಯ 

  • ರಾಜ್ಯ ತೆರಿಗೆ ಆದಾಯ: 52 ಪೈಸೆ
  • ಸಾಲಗಳು: 28 ಪೈಸೆ
  • ಕೇಂದ್ರ ತೆರಿಗೆಗಳಲ್ಲಿ ಪಾಲು: 12 ಪೈಸೆ
  • ಕೇಂದ್ರ ಸರ್ಕಾರದಿಂದ ಅನುದಾನ: 4 ಪೈಸೆ
  • ರಾಜ್ಯದ  ತೆರಿಗೆಯೇತರ ಆದಾಯ: 4 ಪೈಸೆ

ರೂಪಾಯಿ ಹೇಗೆ ಖರ್ಚಾಗುತ್ತದೆ? 

  • ಸಾಲ/ ಸಾಲದ ಮೇಲಿನ ಬಡ್ಡಿ  ಮರುಪಾವತಿ  : 18 ಪೈಸೆ
  • ಇತರೆ ಸಾಮಾನ್ಯ ಸೇವೆಗಳು: 17 ಪೈಸೆ
  • ಸಮಾಜ ಕಲ್ಯಾಣ: 15 ಪೈಸೆ
  • ಇತರೆ ಆರ್ಥಿಕ ಸೇವೆಗಳು: 15 ಪೈಸೆ
  • ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ: 14 ಪೈಸೆ
  • ಶಿಕ್ಷಣ: 11 ಪೈಸೆ
  • ಆರೋಗ್ಯ: 4 ಪೈಸೆ
  • ಇತರ ಸಾಮಾಜಿಕ ಸೇವೆಗಳು: 3 ಪೈಸೆ
  • ನೀರು ಸರಬರಾಜು, ನೈರ್ಮಲ್ಯ: 3 ಪೈಸೆ.

ಒಟ್ಟು ಹಂಚಿಕೆಗಳು

  • ಇತರೆ ಸೇವೆಗಳು: ರೂ. 1.24 ಲಕ್ಷ ಕೋಟಿ.
  • ಶಿಕ್ಷಣ: ರೂ. 44,442 ಕೋಟಿ
  • ಮಹಿಳಾ ಮತ್ತು ಮಕ್ಕಳ ಕಲ್ಯಾಣ: 34,406 ಕೋಟಿ ರೂ
  • ಶಕ್ತಿ: ರೂ.23,1559 ಕೋಟಿಗಳು.
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್: ರೂ.21,160 ಕೋಟಿ.

ವಲಯವಾರು ಹೊಸ ಯೋಜನೆಗಳು

ಸಿಎಂ ತಮ್ಮ ಬಜೆಟ್‌ನಲ್ಲಿ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಹೊಸ ಘೋಷಣೆ ಮಾಡಿದ್ದಾರೆ. ಈ ಪೈಕಿ ಪ್ರಮುಖವಾದುವುದು ಇಲ್ಲಿವೆ. 

ಬೆಂಗಳೂರು ಅಭಿವೃದ್ಧಿ 

  •  ಬೆಂಗಳೂರಿನಲ್ಲಿ 20 ಲಕ್ಷ ಆಸ್ತಿಗಳ ಡಿಜಿಟಲೀಕರಣ.
  • ಹೆಬ್ಬಾಳದಲ್ಲಿ ಸುರಂಗ ಮಾರ್ಗ.
  • 250 ಮೀಟರ್ ಎತ್ತರದ ಸ್ಕೈಡೆಕ್.
  • ಬಿಎಂಟಿಸಿಗೆ  1,334 ಹೊಸ ವಿದ್ಯುತ್  ಬಸ್‌ಗಳು ಮತ್ತು 820 ಬಿಎಸ್ -6 ಡೀಸೆಲ್ ಬಸ್‌ಗಳು.
  • ಬಿಎಂಟಿಸಿ ಮಹಿಳಾ ಪ್ರಯಾಣಿಕರಿಗಾಗಿ ವಾಹನ ಟ್ರ್ಯಾಕಿಂಗ್ ಮೊಬೈಲ್ ಅಪ್ಲಿಕೇಶನ್.
  • ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ  ಸರ್ವಜ್ಞ ಉದ್ಯಾನವನ
  • ಹೋಟೆಲ್ ಮತ್ತಿತರ ಆರ್ಥಿಕ ಸಂಸ್ಥೆಗಳನ್ನು  ಮಧ್ಯರಾತ್ರಿ 1 ಗಂಟೆಯವರೆಗೆ ತೆರೆಯಲು ಅನುಮತಿ
  • ಬೆಂಗಳೂರು ಸುತ್ತಮುತ್ತಲಿನ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ಮಾಗಡಿ ಮತ್ತು ಬಿಡದಿ ಪಟ್ಟಣಗಳನ್ನು ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಸ್ಯಾಟಲೈಟ್ ಟೌನ್‌ಶಿಪ್‌ಗಳಾಗಿ ಅಭಿವೃದ್ಧಿ 
  • ಬೆಂಗಳೂರು ಸಮೀಪ 2000 ಎಕರೆ ಪ್ರದೇಶದಲ್ಲಿ ಹೊಸ ಜ್ಞಾನ, ಆರೋಗ್ಯ ರಕ್ಷಣೆ, ನಾವೀನ್ಯತೆ ಮತ್ತು ಸಂಶೋಧನಾ ನಗರ (KHIR). ಈ ಹೊಸ ನಗರವು  ರೂ.40,000 ಕೋಟಿ ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು ಸುಮಾರು 80,000 ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಎಂದು ಅಂದಾಜಿಸಲಾಗಿದೆ.
  • ಬೆಂಗಳೂರು ಉತ್ತರ ತಾಲೂಕಿನಲ್ಲಿ 70 ಎಕರೆ ಪ್ರದೇಶದಲ್ಲಿ ಕ್ರೀಡಾ ನಗರ.
  • ಖಾಸಗಿ ಸಹಭಾಗಿತ್ವದಲ್ಲಿ ನಾಲ್ಕು ಕ್ರೀಡಾ ಸಂಕೀರ್ಣಗಳು.
  • ಪೊಲೀಸ್ ಸುಲಿವಾನ್ ಆಟದ ಮೈದಾನದಲ್ಲಿ ಆಸ್ಟ್ರೋ ಟರ್ಫ್ ಹಾಕಿ ಮೈದಾನ.
  • ಕೃಷಿ ತಂತ್ರಗಳನ್ನು ಪ್ರಸಾರ ಮಾಡುವ ಜ್ಞಾನ ಕೇಂದ್ರವಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಆರ್ ಕೆ  ಶಾಲಾ ಕೃಷಿ ಫಾರ್ಮ್  ಅಭಿವೃದ್ಧಿ
  • ಪೂಜೇನಹಳ್ಳಿ ಗ್ರಾಮದಲ್ಲಿ ಆಹಾರ  ಪಾರ್ಕ್.
  • ಖಾಸಗಿ ಪಾಲುದಾರಿಕೆಯಲ್ಲಿ ಹೂವಿನ ಮಾರುಕಟ್ಟೆ 
  • ಜೈವಿಕ ದ್ರುವೀಕೃತ ಅನಿಲ   ಸ್ಥಾವರ
  • ಕೆಸಿ ಜನರಲ್ ಆಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ.
  • ನಗರದಲ್ಲಿ ಕೈಗೆಟಕುವ ದರದಲ್ಲಿ ಮತ್ತು ಗುಣಮಟ್ಟದ ಪ್ರಯೋಗಾಲಯ ಸೇವೆಯನ್ನು ಒದಗಿಸಲು ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ 430 ಪ್ರಯೋಗಾಲಯಗಳನ್ನು ಸ್ಥಾಪಿಸಲು ಮುಂದಿನ ಎರಡು ವರ್ಷಗಳಲ್ಲಿ 20 ಕೋಟಿ ರೂಪಾಯಿ ಬೆಂಬಲ.
  • ಬೆಂಗಳೂರಿನ ಇನ್‌ಸ್ಟಿಟ್ಯೂಟ್ ನೆಫ್ರೋ-ಯೂರಾಲಜಿಯಲ್ಲಿ ರೋಬೋಟಿಕ್ ಸರ್ಜರಿ (ರೂ. 20 ಕೋಟಿ)

ಐಟಿ  ಮತ್ತು ಬಿಟಿ 

  • ನವ  ಮಹಿಳಾ ಉದ್ಯಮಿಗಳಿಗೆ ಬೆಂಬಲ 
  • 10 ಕೋಟಿ ವೆಚ್ಚದಲ್ಲಿ ಫಿನ್‌ಟೆಕ್, ಸ್ಪೇಸ್‌ಟೆಕ್ ಮತ್ತು ಆಟೋಮೋಟಿವ್ ಟೆಕ್‌ನಲ್ಲಿ ಎಕ್ಸಲೆನ್ಸ್ ಕೇಂದ್ರ (COE).
  • ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರಗಳ  ನೀತಿ
  • ರಾಜ್ಯದಲ್ಲಿ ಅಗ್ರಿ-ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ಸಲುವಾಗಿ ಸಿ-ಕ್ಯಾಂಪ್ ಅಗ್ರಿ ಇನ್ನೋವೇಶನ್ ಪಾರ್ಕ್‌ಗೆ ಐದು ಎಕರೆ ಭೂಮಿ
  • ಕಲಬುರಗಿ, ಶಿವಮೊಗ್ಗ, ಹುಬ್ಬಳ್ಳಿ ಮತ್ತು ತುಮಕೂರುಗಳಲ್ಲಿ  ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕಿಯೋನಿಕ್ಸ್  ಸಹಯೋಗದೊಂದಿಗೆ ಕರ್ನಾಟಕ ಇನ್ನೋವೇಶನ್ ಆಫ್ ಟೆಕ್ನಾಲಜಿ ಸೊಲ್ಯೂಷನ್ಸ್ (KITS) ನಿಂದ ಕೌಶಲ್ಯ ಮತ್ತು ನಾವೀನ್ಯತೆ ಕೇಂದ್ರಗಳ ಸ್ಥಾಪನೆ 
  • ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಜಿನೋಮ್ ಎಡಿಟಿಂಗ್ ಮತ್ತು ಜೀನ್ ಥೆರಪಿ
  • 2024-2029 ರ ಅವಧಿಗೆ ಹೊಸ ಎ ವಿ ಜಿ ಸಿ -ಎಕ್ಷ ಆರ್   3.0 ನೀತಿ. 
  • ಈ ವರ್ಷ ಬೆಂಗಳೂರು ಇಂಡಿಯಾ ನ್ಯಾನೋ ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜನೆ  
  • ಬೆಂಗಳೂರಿನಲ್ಲಿ ವಿಜ್ಞಾನ ನಗರ.

ಪ್ರವಾಸೋದ್ಯಮ

  •  ಮಂಡ್ಯದ ಕೃಷ್ಣರಾಜಸಾಗರ ಅಣೆಕಟ್ಟಿನ ಬೃಂದಾವನ ಉದ್ಯಾನದಲ್ಲಿ  ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ವಿಶ್ವದರ್ಜೆಯ ಪ್ರವಾಸಿ ಆಕರ್ಷಣೆ
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಕ್ರೂಸ್ ಮತ್ತು ಪ್ರವಾಸೋದ್ಯಮ ಬಂದರನ್ನು (ICTP) ಅಭಿವೃದ್ಧಿಪಡಿಸಲು ಐಐಟಿ  ಮದ್ರಾಸ್ ಸಹಯೋಗದಲ್ಲಿ ಕಾರ್ಯಸಾಧ್ಯತಾ ವರದಿ ತಯಾರಿ 
  • ಮಂಗಳೂರಿನ ಗುರುಪುರ ಮತ್ತು ನೇತ್ರಾವತಿ ನದಿಯಲ್ಲಿ ವಾಟರ್ ಮೆಟ್ರೋ ಸೇವೆ ಆರಂಭಿಸಲು ಕಾರ್ಯಸಾಧ್ಯತಾ ವರದಿ 
  • ರಾಯಚೂರು ಮತ್ತು ಕಾರವಾರದಲ್ಲಿ ವಿಮಾನ ನಿಲ್ದಾಣ
  • ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಿಗ್ನೇಚರ್ ಬ್ಯುಸಿನೆಸ್ ಪಾರ್ಕ್
  • ಹನುಮ ದೇವರು ಜನಿಸಿದನೆಂದು  ಭಾವಿಸಲಾಗಿರುವ  ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ 100 ಕೋಟಿ ರೂಪಾಯಿ ನೆರವು 
  • ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ, ಬಂಡೀಪುರ, ದಾಂಡೇಲಿ ಮತ್ತು ಕಬಿನಿಯಲ್ಲಿ ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳಿಂದ ವ್ಯಾಖ್ಯಾನ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

ಕ್ರೀಡೆ

  • ಒಲಂಪಿಕ್ಸ್ ನಲ್ಲಿ  ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಪಡೆದ ಕ್ರೀಡಾಪಟುಗಳಿಗೆ  ರೂ. 6 ಕೋಟಿ, ರೂ. 4 ಕೋಟಿ ಅಥವಾ  3 ಕೋಟಿ ಬಹುಮಾನ 
  •  ಏಷ್ಯನ್ ಗೇಮ್ಸ್ ಮತ್ತು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕ್ರಮವಾಗಿ ಚಿನ್ನ, ಬೆಳ್ಳಿ ಅಥವಾ ಕಂಚಿನ ಪದಕ ಪಡೆದ ಕ್ರೀಡಾಪಟುಗಳಿಗೆ ರೂ  35 ಲಕ್ಷ , ರೂ  25 ಲಕ್ಷ ಅಥವಾ ರೂ. 15 ಲಕ್ಷ ಬಹುಮಾನ 

ಜಲ ಸಂಪನ್ಮೂಲ ಇಲಾಖೆ 

  • ಜಲಸಂಪನ್ಮೂಲ ಇಲಾಖೆಯ ಒಡೆತನದ ಅಣೆಕಟ್ಟುಗಳ  ಹಿನ್ನೀರಿನ ಮತ್ತು ಜಮೀನುಗಳಲ್ಲಿ ಸೋಲಾರ್ ಪಾರ್ಕ್‌ಗಳು

ಶಿಕ್ಷಣ

  • 2,000 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಶಾಲೆಗಳಾಗಿ (ಕನ್ನಡ ಮತ್ತು ಇಂಗ್ಲಿಷ್) ಮೇಲ್ದರ್ಜೆಗೇರಿಸಲಾಗುವುದು.
  • ಸುಮಾರು ೨೦,೦೦೦ ವಿದ್ಯಾರ್ಥಿಗಳಿಗೆ   NEET/JEE/CET ತರಬೇತಿ ಕಾರ್ಯಕ್ರಮ
  • ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಪದವಿ ಪೂರ್ವ ಕಾಲೇಜುಗಳವರೆಗೆ ಉಚಿತ ನೀರು ಮತ್ತು ವಿದ್ಯುತ್ ಪೂರೈಕೆ.
  • ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ ) ಅನ್ನು ಐಐಟಿ  ಆಗಿ ಮೇಲ್ದರ್ಜೆಗೇರಿಸಲು ರೂ.100 ಕೋಟಿ ನೆರವು 

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ

  • 15 ಜಿಲ್ಲೆಗಳಲ್ಲಿ ಅತ್ಯಾಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್‌ಗಳು.
  • ವಿಶ್ವವಿಖ್ಯಾತ ಯಾತ್ರಾಸ್ಥಳ ಶೃಂಗೇರಿಗೆ 100 ಹಾಸಿಗೆಯ ತಾಲೂಕು ಆಸ್ಪತ್ರೆ ಮಂಜೂರು 
  • ಎಲ್ಲಾ ಜಿಲ್ಲೆಗಳಲ್ಲಿ ಡೇ-ಕೇರ್ ಕಿಮೊಥೆರಪಿ ಕೇಂದ್ರಗಳು.
  • 20 ಜಿಲ್ಲಾ ಆಸ್ಪತ್ರೆಗಳಿಗೆ ಡಿಜಿಟಲ್ ಮ್ಯಾಮೊಗ್ರಫಿ ಯಂತ್ರಗಳು.
  • ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸಮಗ್ರ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ (IPHL).
  • ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 114 ಮಾಡ್ಯುಲರ್ ಒಟಿಗಳನ್ನು ರೂ.177 ಕೋಟಿ ವೆಚ್ಚದಲ್ಲಿ ಸ್ಥಾಪನೆ  
  • ಕೊಡಗು ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ವೈರಲ್ ರಿಸರ್ಚ್ & ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ (VRDL).

ಮಹಿಳಾ ಮತ್ತು ಮಕ್ಕಳ ಕಲ್ಯಾಣ

  •  ಅಂಗನವಾಡಿ ಕಾರ್ಯಕರ್ತೆಯರಿಗೆ 75,938 ಸ್ಮಾರ್ಟ್ ಫೋನ್.
  • ಸೆರೆಬ್ರಲ್ ಪಾಲ್ಸಿ, ಮಸ್ಕ್ಯುಲರ್ ಡಿಸ್ಟ್ರೋಫಿ, ಪಾರ್ಕಿನ್ಸನ್ಸ್ ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್ ನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಆರೈಕೆ ಮಾಡುವವರಿಗೆ ರೂ.1,000 ಮಾಸಿಕ ಭತ್ಯೆ.
  • ಲಿಂಗ ಅಲ್ಪಸಂಖ್ಯಾತರ ಜೀವನವನ್ನು ಸುಧಾರಿಸುವ ದೃಷ್ಟಿಯಿಂದ, ಮೈತ್ರಿ ಯೋಜನೆಯಡಿ ಮಾಸಿಕ ಪಿಂಚಣಿಯನ್ನು ರೂ. 800 ರಿಂದ ರೂ. 1,200.

ಕೃಷಿ ಇಲಾಖೆ

  • ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ
  • ಸ್ಥಳೀಯ ತಳಿ ಬೀಜಗಳನ್ನು ಸಂರಕ್ಷಿಸಲು ಸಮುದಾಯ ಬೀಜ ಬ್ಯಾಂಕ್
  • ಸಿರಿಧಾನ್ಯ  ಕೃಷಿ ಮತ್ತು ಬಳಕೆಯನ್ನು ಉತ್ತೇಜಿಸಲು ನಮ್ಮ ಸಿರಿಧಾನ್ಯ  ಯೋಜನೆ.
  • ಅಂತರ್ಜಲ ಹೆಚ್ಚಳಕ್ಕೆ  5,000 ಜಲಮೂಲಗಳ ಅಭಿವೃದ್ಧಿ 
  • ಚಿಕ್ಕಮಗಳೂರಿನಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ 
  • ಮಹಿಳಾ ಸ್ವ ಸಹಾಯ ಗುಂಪುಗಳ ಒಂದು ಲಕ್ಷ ಮಹಿಳಾ ಸದಸ್ಯರಿಗೆ ಕಾಫಿ ಮಂಡಳಿಯ ಸಹಯೋಗದೊಂದಿಗೆ ಕಾಫಿ ಉದ್ಯಮಿಗಳಾಗಿ ತರಬೇತಿ ನೀಡಲಾಗುವುದು. 2,500 ಕಾಫಿ ಕಿಯೋಸ್ಕ್‌ಗಳನ್ನು  ಮಹಿಳಾ ಸ್ವ ಸಹಾಯ ಗುಂಪುಗಳ  ಮಹಿಳೆಯರಿಂದ ನಿರ್ವಹಣೆ. ಇದಕ್ಕಾಗಿ ರೂ. 25 ಕೋಟಿ ಬೆಂಬಲ 

ಮೀನುಗಾರಿಕೆ

  • ಮುರುಡೇಶ್ವರದಲ್ಲಿ ಸುಸಜ್ಜಿತ ಮೀನುಗಾರಿಕೆ ಬಂದರು
  • ವಿಜಯಪುರದ ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರ
  • ರಾಜ್ಯದ ಮೊದಲ ಸಮುದ್ರ ಆಂಬ್ಯುಲೆನ್ಸ್

Related Readings

Jolad Rotti:
Related Post