ಕೋವಿಡ್ ೧೯ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮೇ 12 ಬೆಳಗ್ಗೆ 6 ಗಂಟೆಯವರೆಗೆ ಈ ಕ್ರಮಗಳು ಜಾರಿಯಲ್ಲಿರುತ್ತವೆ.
- ಈ ಅವಧಿಯಲ್ಲಿ ಜನರ ಓಡಾಟ ಸಂಪೂರ್ಣ ನಿಷೇದಿಸಲಾಗಿದೆ.
- ತುರ್ತು, ಅವಶ್ಯಕ ಸೇವೆಗಳು ಮಾತ್ರ ಲಭ್ಯವಿರುತ್ತವೆ.
- ವ್ಯಕ್ತಿಗಳು ತುರ್ತು ಸೇವೆಗಳಿಗಾಗಿ ಓಡಾಡಬಹುದು.
- ಹೊಟೇಲಿಂದ ಪಾರ್ಸೆಲ್ ಸೇವೆಗೆ ಅವಕಾಶ
- ರೈಲು ಹಾಗು ವಿಮಾನ ಸೇವೆ ಲಭ್ಯವಿರುತ್ತದೆ.
- ಯಾವುದೇ ಬಸ್ ಸಂಚಾರ ಇರುವುದಿಲ್ಲ
- ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ.
- ಆಟೋ ಸಂಚಾರ ರದ್ದು
- ಅಂತರ್ ಜಿಲ್ಲಾ – ಅಂತರ್ ರಾಜ್ಯ ಪ್ರಯಾಣಕ್ಕೆ ಅವಕಾಶವಿಲ್ಲ. ಅನಿವಾರ್ಯ ಸಂದರ್ಭಗಲ್ಲಿ ಪೊಲೀಸ್ ಅನುಮತಿಯೊಂದಿಗೆ ಅವಕಾಶ ನೀಡಬೇಕು.
- ಹೋಟೆಲ್ ಗಳಿಂದ ದಿನದ ೨೪ ಗಂಟೆಯೂ ಪಾರ್ಸೆಲ್ ಸೇವೆಗೆ ಬೆಂಬಲ.
- ದಿನಸಿ ಅಂಗಡಿಗಳಿಗೆ ಬೆಳಗ್ಗೆ ೬ರಿಂದ ೧೦ರವರೆಗೆ ಅವಕಾಶ
ನಿಷೇದಿಸಲಾಗಿರುವ ಚಟುವಟಿಕೆಗಳು
- ಶಾಲಾ- ಕಾಲೇಜುಗಳು, ತರಭೇತಿ ಸಂಸ್ಥೆಗಳನ್ನು ಈ ಅವಧಿಯಲ್ಲಿ ಮುಚ್ಚಬೇಕು. ಆನ್ ಲೈನ್- ದೂರ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು.
- ಸಿನಿಮಾ ಮಂದಿರಗಳು, ಶಾಪಿಂಗ್ ಮಾಲ್ಸ್, ಈಜು ಕೊಳಗಳು, ಕ್ರೀಡಾ ಸಂಕೀರ್ಣಗಳು, ಯೋಗ ಸಂಸ್ಥೆಗಳು, ಬಾರ್ ಗಳು, ಮನೋರಂಜನಾ ತಾಣಗಳು ಈ ಅವಧಿಯಲ್ಲಿ ಮುಚ್ಚಲ್ಪಟ್ಟಿರುತ್ತವೆ.
- ಈಜು ಸಂಸ್ಥೆಯಿಂದ ಮಾನ್ಯತೆ ಪಡೆದ ಈಜು ಕೊಳಗಳನ್ನು ಕೇವಲ ಈಜು ಪಟುಗಳ ಅಭ್ಯಾಸಕ್ಕಾಗಿ ಮಾತ್ರ ತೆರೆಯಬಹುದು.
- ಕ್ರೀಡಾ ಸಂಕೀರ್ಣಗಳನ್ನು ಪ್ರೇಕ್ಷಕರಿಲ್ಲದೆ ಪಂದ್ಯಾವಳಿಗಳನ್ನು ನಡೆಸಲು ಹಾಗು ಕ್ರೀಡಾಪಟುಗಳ ತರಭೇತಿಗೆ ಮಾತ್ರ ತೆರೆದಿಡಬಹುದು.
- ಎಲ್ಲ ರೀತಿಯ ಧಾರ್ಮಿಕ, ರಾಜಕೀಯ, ಸಾಮಾಜಿಕ, ಮನೋರಂಜನಾ ಸಮಾರಂಭಗಳು ಹಾಗು ಇತರ ಸಭೆಗಳು.
- ಎಲ್ಲಾ ಧಾರ್ಮಿಕ ಸ್ಥಳಗಳು. ದೇಗುಲದ ಪೂಜೆ- ನಿರ್ವಹಣೆ ಮಾಡುವವರಿಗಷ್ಟೇ ಅವಕಾಶ
- ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶ
- ಬಾರ್ ನಿಂದ ಮದ್ಯ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶವಿದೆ.
ನಿರ್ಮಾಣ ಕಾಮಗಾರಿಗಳು
- ಎಲ್ಲಾ ನಿರ್ಮಾಣ ಹಾಗು ಮುಂಗಾರು ಪೂರ್ವ ಕಾಮಗಾರಿಗಳನ್ನು ಅನುಮತಿಸಲಾಗಿದೆ. ಆದರೆ ಎಲ್ಲಾ ಕೋವಿಡ್ ೧೯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಕೈಗಾರಿಕಾ ಕ್ಷೇತ್ರ
* ಗಾರ್ಮೆಂಟ್ ಹೊರತು ಪಡಿಸಿ ಎಲ್ಲಾ ಕೈಗಾರಿಕೆಗಳಿಗೆ ಈ ಅವಧಿಯಲ್ಲಿ ಅನುಮತಿಸಲಾಗಿದೆ. ಆದರೆ, ಕೋವಿಡ್ ೧೯ ನಿಯಮಗಳನ್ನು ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಪಾಲಿಸಬೇಕು. ನೌಕರರ ಓಡಾಟಕ್ಕೆ ಅಗತ್ಯವಾದ ಗುರುತಿನ ಚೀಟಿ ನೀಡಬೇಕು.
ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಗಳು
- ನ್ಯಾಯ ಬೆಲೆ ಅಂಗಡಿಗಳು, ಮೀನು, ಮಾಂಸ, ಹಾಲು ಮಾರಾಟ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ.
- ಹೂವು, ಹಣ್ಣು, ತರಕಾರಿ ಮಾರುಕಟ್ಟೆ ಗಳನ್ನು ವಿಶಾಲ ಪ್ರದೇಶಗಳಿಗೆ ಸ್ಥಳಾಂತರಿಸಬೇಕು. ಇಲ್ಲಿ ಕೋವಿಡ್ ೧೯ ನೀತಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
- ಆಹಾರ ಸಂಸ್ಕರಣಾ ಘಟಕಗಳಿಗೆ ಅವಕಾಶ ನೀಡಲಾಗಿದೆ.
- ಬ್ಯಾಂಕ್, ಎಟಿಎಂ ಗಳಿಗೆ ಅವಕಾಶ.
- ಮಾಧ್ಯಮಗಳಿಗೆ ಅವಕಾಶ
- ಈ ಕಾಮರ್ಸ್ ಸಂಸ್ಥೆಗಳಿಗೆ ಅವಕಾಶ.
- ಹಣಕಾಸು ಸಂಸ್ಥೆಗಳ ಕಾರ್ಯ ನಿರ್ವಹಣೆಗೆ ಅವಕಾಶ
- ಶೀತಲೀಕರಣ ಘಟಕಗಳು ಕಾರ್ಯ ನಿರ್ವಹಿಸಬಹುದು.
- ಖಾಸಗಿ ಸುರಕ್ಷತಾ ಸೇವೆ ನೀಡುವ ಸಂಸ್ಥೆಗಳಿಗೆ ಅವಕಾಶ.
ಸರಕಾರಿ/ ಖಾಸಗಿ ಕಚೇರಿಗಳ ಕಾರ್ಯನಿರ್ವಹಣೆಗೆ ಮಾರ್ಗಸೂಚಿ
- ಅತಿ ಕಡಿಮೆ ನೌಕರರ ಮೂಲಕ ಕಚೇರಿ ನಿರ್ವಹಣೆ. ಸಾಧ್ಯವಾದಲ್ಲೆಲ್ಲ ಮನೆಯಿಂದಲೇ ನೌಕರರ ಕಾರ್ಯ ನಿರ್ವಹಣೆಗೆ ಅವಕಾಶ.
- ಕೇವಲ ಅವಶ್ಯಕ ನೌಕರರು ಕಚೇರಿಯಿಂದ ಸೇವೆ ಸಲ್ಲಿಸಲು ಅವಕಾಶ. ಉಳಿದವರಿಗೆ ಮನೆಯಿಂದ ಕಾರ್ಯ ನಿರ್ವಹಣೆಗೆ ಅವಕಾಶ.
- ಇಂಟರ್ನೆಟ್ ಸೇವಾದಾತಾ ಸಂಸ್ಥೆಗಳಿಗೆ ದಿನವಿಡೀ ಕಾರ್ಯನಿರ್ವಹಣೆಗೆ ಅವಕಾಶ.
- ಸರಕಾರಿ, ಅರೆ ಸರಕಾರಿ, ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ ೫೦% ನೌಕರರೊಂದಿಗೆ ಸೇವೆ. ಉಳಿಕೆ ಅಧಿಕಾರಿಗಳು, ನೌಕರರನ್ನು ಕೋವಿಡ್ ೧೯ ಸಂಬಂಧಿ ಸೇವೆಗಳಿಗೆ ಬಳಸಿಕೊಳ್ಳುವುದು.
- ನ್ಯಾಯಾಲಯಗಳು ರಾಜ್ಯ ಹೈ ಕೋರ್ಟ್ ಸೂಚನೆಯಂತೆ ಕೋವಿಡ್ ೧೯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು.
- ಕೇಂದ್ರ ಸರಕಾರ ಸ್ವಾಮ್ಯದ ಸಂಸ್ಥೆಗಳು ಕೇಂದ್ರ ಸರಕಾರದ ಸೂಚನೆಯನ್ನು ಪಾಲಿಸುವುದು.
- ಎಲ್ಲಾ ಪೆಟ್ರೋಲ್ ಬಂಕ್ ಗಳು ಕೋವಿಡ್ ೧೯ ಸುರಕ್ಷತಾ ಕ್ರಮಗಳೊಂದಿಗೆ ಕಾರ್ಯ ನಿರ್ವಹಿಸುವುದು.
ಸರಕು ಸಾಗಣೆ: ಯಾವುದೇ ನಿರ್ಬಂಧವಿಲ್ಲ
- ಕೃಷಿ- ಕೃಷಿ ಸಂಬಂಧಿಸಿದ ಚಟುವಟಿಕೆಗಳು: ಯಾವುದೇ ನಿರ್ಬಂಧವಿಲ್ಲ (ಕಂಟೈನ್ಮೆಂಟ್ ವ್ಯಾಪ್ತಿಯ ಹೊರಗೆ)
- ಅರೋಗ್ಯ ಸೇವೆಗಳು: ಅಭಾದಿತವಾಗಿ ಮುಂದುವರಿಯಲಿವೆ. (ಕಂಟೈನ್ಮೆಂಟ್ ವ್ಯಾಪ್ತಿಯ ಹೊರಗೆ)
- ಮದುವೆ ಹಾಗು ಇನ್ನಿತರ ಶುಭ ಸಮಾರಂಭಗಳು: ಕೇವಲ ೫೦ ಮಂದಿಗೆ ಅವಕಾಶ. ಕೋವಿಡ್ ೧೯ ನಿಯಮ ಪಾಲನೆ ಕಡ್ಡಾಯ.
- ಅಂತ್ಯಕ್ರಿಯೆ: 5 ಜನರಿಗೆ ಅವಕಾಶ. ಕೋವಿಡ್ ೧೯ ನಿಯಮ ಪಾಲನೆ ಕಡ್ಡಾಯ.
ಕೆಲಸದ ಸ್ಥಳಗಳಿಗೆ ಹೆಚ್ಚುವರಿ ನಿರ್ದೇಶನಗಳು
- ಮನೆಯಿಂದ ಕೆಲಸಕ್ಕೆ ಹೆಚ್ಚಿನ ಪ್ರೋತ್ಸಾಹ
- ಕಚೇರಿ ವೇಳೆಯಲ್ಲಿ ಬದಲಾವಣೆಗಳು
- ಕಡ್ಡಾಯವಾಗಿ ದೈಹಿಕ ಅಂತರ ಕಾಪಾಡಿಕೊಳ್ಳುವಿಕೆ
- ನಿಯಮಿತವಾಗಿ ಕಚೇರಿ ಶುದ್ದೀಕರಣ
Related Readings
- In English: April 20 – Weekend And Night Curfew In Bangalore – What’s Allowed And What’s Not