X

ಕೋಲಾರದ ಕೀರ್ತಿ ಕೋಟಿಲಿಂಗೇಶ್ವರ ದೇವಾಲಯ

    Categories: Kolar

ನಮ್ಮ ರಾಜ್ಯದ ಪ್ರಖ್ಯಾತ ಶಿವ ದೇಗುಲಗಳಲ್ಲೊಂದು ಕೋಲಾರ ಜಿಲ್ಲೆಯ ಕೋಟಿಲಿಂಗೇಶ್ವರ ದೇಗುಲ. ಇಲ್ಲಿಗೆ ದಕ್ಷಿಣ ಭಾರತದಾದ್ಯಂತದಿಂದ ಭಕ್ತಾದಿಗಳು ಭೇಟಿ ನೀಡುತ್ತಾರೆ. ಇದು  ಜಿಲ್ಲೆಯ ಕಮ್ಮಸಂದ್ರ ಎಂಬ ಸಣ್ಣ ಹಳ್ಳಿಯಲ್ಲಿದೆ.  ಈ ದೇಗುಲದ ವಿಶೇಷತೆ ಎಂದರೆ, ಇಲ್ಲಿ,    ವಿಶ್ವದ   ಅತಿದೊಡ್ಡ ಮತ್ತು ಎತ್ತರದ ಶಿವಲಿಂಗವಿದೆ. ಈ ದೇವಾಲಯಕ್ಕೆ ಪ್ರತಿ ವರ್ಷ ೨  ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿ ಕೃತಾರ್ಥರಾಗುತ್ತಿದ್ದರೆ. ಇದು ಈ ದೇಗುಲದ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಈ ದೇಗುಲ  ಮಹಾ ಶಿವರಾತ್ರಿ ಸಂಭ್ರಮಾಚರಣೆಗೆ ಬಲು  ಪ್ರಸಿದ್ಧಿ.  ಈ ಸಂದರ್ಭದಲ್ಲಿ  ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಕೆ ಜಿ ಎಫ್ ಮೂಲಕ ಈ ದೇಗುಲವನ್ನು ನಾವು ಸುಲಭವಾಗಿ ತಲುಪ ಬಹುದು.

ಕೋಟಿ ಲಿಂಗೇಶ್ವರ: ಚಿತ್ರ ಕೃಪೆ: ಮಿಥಿಲಾ

ಈ ದೇಗುಲದಲ್ಲಿನ ಶಿವಲಿಂಗ ೩೩ ಮೀಟರ್ ಎತ್ತರ ವಾಗಿದೆ.  ಇದು ವಿಶ್ವದ ಅತಿ ಎತ್ತರದ ಶಿವನ ಆಕೃತಿ.  ಇದರ ಪಕ್ಕದಲ್ಲೇ ೧೧   ಮೀಟರ್ ಎತ್ತರವಿರುವ ಬಸವ ಪ್ರತಿಮೆ ಇದೆ. ಬಸವ ಶಿವನ ವಾಹನ.  ಈ ದೊಡ್ಡ ಶಿವ ಲಿಂಗದ ಸುತ್ತಲೂ  ನೂರಾರು ಸಂಖ್ಯೆಯ ಸಣ್ಣ ಸಣ್ಣ ಶಿವ ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ.  ಈ ದೇಗುಲದ ಯೋಜನೆಯು ಒಂದು ಕೋಟಿ ಶಿವಲಿಂಗಗಳ ಸ್ಥಾಪನೆಯ ಧ್ಯೇಯೋದ್ದೇಶ ಹೊಂದಿದೆ.  ಆದ್ದರಿಂದ ಇದನ್ನು ಕೋಟಲಿಂಗೇಶ್ವರ ಎಂದು ಹೆಸರಿಸಲಾಗಿದೆ. ಇಲ್ಲಿ ಅದಕ್ಕಿಂತಲು ಮಿಗಿಲಾದ ಸಂಖ್ಯೆಯಲ್ಲಿ ಲಿಂಗಗಳನ್ನು ಸ್ಥಾಪಿಸಲಾಗಿದೆ.

ಕೋಟಿ ಲಿಂಗೇಶ್ವರ: ಚಿತ್ರ ಕೃಪೆ: ಪಿ ಪೊಣ್ಣದ 

ಕೋಟಿಲಿಂಗೇಶ್ವರ ದೇವಾಲಯ: ನೀವು ಅರಿಯ ಬೇಕಾದ ಸಂಗತಿಗಳು

  • ಭೇಟಿ ನೀಡಲು ಅತ್ಯುತ್ತಮ ಸಮಯ: ಜುಲೈ ನಿಂದ ಜನವರಿ ತಿಂಗಳು
  • ವಿಳಾಸ: ಕೋಟಿಲಿಂಗಮ್ ದೇವಾಲಯ ರಸ್ತೆ, ಘಟ್ಟಕಾಮಧೇನಹಳ್ಳಿ, ಕೋಲಾರ, ೫೬೩೧೨೧
  • ದೇಗುಲದ ತೆರೆದಿರುವ ಸಮಯ: ಬೆಳಗ್ಗೆ ೬ರಿಂದ ರಾತ್ರಿ ೯ರವರೆಗೆ.
  • ಪ್ರವೇಶ ಶುಲ್ಕ: ೨೦ ರೂಪಾಯಿ.
  • ಕ್ಯಾಮೆರಾ: ೧೦೦ ರೂಪಾಯಿ
  • ವಾಹನ ಪಾರ್ಕಿಂಗ್: ೩೦ ರೂಪಾಯಿ
  • ಲಿಂಗ ಪ್ರತಿಷ್ಠಾಪನೆ: ರೂಪಾಯಿ ೬,೦೦೦ ದಿಂದ ಆರಂಭ.
  • ಛಾಯಾ ಚಿತ್ರ: ಕೋಟಿ ಲಿಂಗೇಶ್ವರ ದೇಗುಲದ ಮನೋಹರ ದೃಶ್ಯ: ಚಿತ್ರ ಕೃಪೆ: ವಿಶು ರಾವ್ ೪ ಆಲ್

ಈ ದೇಗುಲದ ಇತಿಹಾಸ 

ಈ ದೇಗುಲಕ್ಕೊಂದು ಸುಂದರ ಇತಿಹಾಸವಿದೆ. ಈ ದೇವಾಲಯವನ್ನು ಸ್ವಾಮಿ ಶಾಂಭಶಿವ ಮೂರ್ತಿ ಅವರು ೧೯೮೦ ರಲ್ಲಿ ನಿರ್ಮಿಸಿದ್ದಾರೆ. ಮೊದಲ ಲಿಂಗವನ್ನು ೧೯೮೦ ರಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ, ಈ  ದೇವಾಲಯದಲ್ಲಿ ಶಿವ ಲಿಂಗ ಸ್ಥಾಪನೆ ನಿರಂತರವಾಗಿ ಸಾಗಿದೆ.  ಈ ಶಿವಲಿಂಗದ ಪಕ್ಕದಲ್ಲಿ ಬೃಹತ್  ಗಾತ್ರದ  ನಂದಿಯನ್ನು ಸ್ಥಾಪಿಸಲಾಗಿದೆ. ನಂದಿ 11 ಮೀಟರ್ ಎತ್ತರವಿದೆ. ಇದು ಇಲ್ಲಿನ ಪ್ರಧಾನ ಶಿವ ಲಿಂಗದ ಪಕ್ಕದಲ್ಲಿದೆ.

ಈ ದೇವಾಲಯದ ಇನ್ನೊಂದು ವಿಶೇಷತೆ ಎಂದರೆ, ಇಲ್ಲಿನ  ಆವರಣದಲ್ಲಿ, ವಿವಿಧ ದೇವತೆಗಳಿಗಾಗಿ ಸುಮಾರು ಹನ್ನೊಂದು ಇತರ ದೇವಾಲಯಗಳಿವೆ. ಅವುಗಳಲ್ಲಿ ಮೊದಲನೆಯದು ಭಗವಾನ್ ವಿಷ್ಣು, ಬ್ರಹ್ಮ ಮತ್ತು ಮಹೇಶ್ವರ ದೇವಾಲಯಗಳು .

ಇದರ ನಂತರ ಕೋಟಲಿಂಗೇಶ್ವರ ದೇವಾಲಯವಿದೆ.

ಕೋಟಿ ಲಿಂಗೇಶ್ವರ: ಚಿತ್ರ ಕೃಪೆ: ಪಿ ಪೊಣ್ಣದ 

ಇವುಗಳ ಜೊತೆಗೆ,  ಅನ್ನಪೂರ್ಣೇಶ್ವರಿ ದೇವಸ್ಥಾನ, ಕರುಮಾರಿ ಅಮ್ಮ ದೇವಸ್ಥಾನ, ಭಗವಾನ್ ವೆಂಕಟರಮಣ ಸ್ವಾಮಿ ದೇವಸ್ಥಾನ, ಭಗವಾನ್ ಪಾಂಡುರಂಗ ಸ್ವಾಮಿ ದೇವಸ್ಥಾನ, ಭಗವಾನ್ ರಾಮ, ಸೀತಾ ಮತ್ತು ಲಕ್ಷ್ಮಣ ದೇವಸ್ಥಾನ, ಭಗವಾನ್ ಪಂಚಮುಖಿ  ಗಣಪತಿ ದೇವಸ್ಥಾನ, ಭಗವಾನ್ ಅಂಜನೇಯ ದೇವಾಲಯ ಹೀಗೆ ಹಲವು ದೇವಾಲಯಗಳು ಇಲ್ಲಿವೆ. ಕನ್ನಿಕಾ ಪರಮೇಶ್ವರಿ ದೇಗುಲ ಇಲ್ಲಿನ ಇನ್ನೊಂದು ಆಕರ್ಷಣೆ.

ಕರ್ನಾಟಕ ರಾಜ್ಯ  ಸರ್ಕಾರವು ಈ ದೇವಾಲಯವನ್ನು ಪ್ರವಾಸಿ ತಾಣವೆಂದು ಘೋಷಿಸಿದೆ.  ಇದರಿಂದಾಗಿ ವಿಶ್ವದಾದ್ಯಂತದಿಂದ ನೂರಾರು ಪ್ರವಾಸಿಗರು ಪ್ರತಿ ವರ್ಷ ಇಲ್ಲಿಗೆ ಆಗಮಿಸುತ್ತಾರೆ. ಜೊತೆಗೆ ವಿಶ್ವದ  ಅತಿದೊಡ್ಡ ಶಿವ  ಲಿಂಗಕ್ಕೆ ಗೌರವ ಸಲ್ಲಿಸಿ, ಅದರ ಕೃಪೆಗೆ ಪಾತ್ರರಾಗುತ್ತಾರೆ.  ಒಂದು ನಾಗಲಿಂಗ ಮತ್ತು ಕ್ಯಾನನ್ ಬಾಲ್ ಹೆಸರಿನ ಎರಡು ಹೂವಿನ ಮರಗಳು ಇಲ್ಲಿವೆ.  ಅವಿವಾಹಿತ ಮಹಿಳೆಯರು ವೈವಾಹಿಕ ಈವನದ  ಆಶೀರ್ವಾದ ಮತ್ತು ಸಂತೋಷದ ದಾಂಪತ್ಯ ಜೀವನಕ್ಕಾಗಿ ಇಲ್ಲಿ  ಪ್ರಾರ್ಥಿಸುತ್ತಾರೆ.  

ಕೋಟಿ ಲಿಂಗೇಶ್ವರ: ಚಿತ್ರ ಕೃಪೆ: ಪಿ ಪೊಣ್ಣದ 

ದೇಗುಲದಲ್ಲಿನ ಸೇವೆಗಳು

ಈ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿರುವ  ಎಲ್ಲಾ ಶಿವಲಿಂಗಳಿಗೆ  ಪ್ರತಿದಿನ ಪೂಜೆ ಸಲ್ಲಿಸಲಾಗುತ್ತದೆ. ಇಲ್ಲಿನ ಕ್ಷೇತ್ರ  ಪುರೋಹಿತರು ಪೂಜಾ ಕೈಂಕರ್ಯ ನಡೆಸುತ್ತಾರೆ.   ಪೂಜೆಯನ್ನು ಸಂಗೀತ ಮತ್ತು ಡ್ರಮ್‌ಗ ಹಿಮ್ಮೇಳದ ಜೊತೆಗೆ  ನಡೆಸಲಾಗುತ್ತದೆ.  ಪುರೋಹಿತರ ಮಂತ್ರ  ಪಠಣ,  ಶಿವ ಲಿಂಗಗಳ ಜಲಾಭಿಷೇಕ ನಮ್ಮ ಕಣ್ಮನ ಸೆಳೆಯುತ್ತದೆ.

ಈ ದೇಗುಲದಲ್ಲಿ ಭಕ್ತರು ಲಿಂಗಗಳನ್ನು ಸ್ಥಾಪಿಸುವ ಮೂಲಕ ವಿಶೇಷ ಪೂಜೆಗಳನ್ನು  ಸಲ್ಲಿಸಬಹುದು.   ಈ ಲಿಂಗಗಳನ್ನು ಭಕ್ತರು ತಮ್ಮ ಹೆಸರಿನಲ್ಲಿ ಆಯ್ಕೆ ಮಾಡಿದ ದಿನದಂದು  ಪ್ರತಿಷ್ಠಾಪಿಸಲಾಗುತ್ತದೆ. ಬಳಿಕ  ಇಲ್ಲಿ   ನಿಯಮಿತ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಲಿಂಗ ಪ್ರತಿಷ್ಠಾಪನೆಯ ದಿನ ಇಲ್ಲಿ ಭಕ್ತರ ಹೆಸರಿನಲ್ಲಿ  ಪೂಜೆ ಕೈಗೊಳ್ಳಲಾಗುತ್ತದೆ.

ಕೋಟಿ ಲಿಂಗೇಶ್ವರ: ಚಿತ್ರ ಕೃಪೆ: ಪಿ ಪೊಣ್ಣದ 

ದೇಗುಲದಲ್ಲಿ ಲಭ್ಯವಿರುವ ವ್ಯವಸ್ಥೆಗಳು

ದೇಗುಲದ  ಆವರಣದಲ್ಲಿ ಭಕ್ತರಿಗಾಗಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ, ಪ್ರತಿವರ್ಷ ಇಲ್ಲಿ ಉಚಿತ ಸಾಮೂಹಿಕ ವಿವಾಹಗಳನ್ನು ಆಯೋಜಿಸಲಾಗುತ್ತದೆ.   ಮಂಗಳ ವಾದ್ಯಗಳೊಂದಿಗೆ, ಮಂತ್ರಗಳ ಪಠಣದೊಂದಿಗೆ  ಪುರೋಹಿತರು ಈ ವಿವಾಹಗಳನ್ನು ನಡೆಸಿಕೊಡುತ್ತಾರೆ.  ಪ್ರಸ್ತುತ, ಪ್ರತಿ ವಾರ ಸುಮಾರು ಇಪ್ಪತ್ತು ವಿವಾಹಗಳನ್ನು  ಈ ದೇಗುಲದ್ಲಲಿ  ನಡೆಸಲಾಗುತ್ತದೆ.  ಮನ ಶಾಂತಿಯಿಂದ  ಧ್ಯಾನ ಮಾಡಲು ಬಯಸುವ ಭಕ್ತರಿಗಾಗಿ, ಆಧ್ಯಾತ್ಹ್ಮಿಕ ವಾತಾವರಣದ ಹಿನ್ನಲೆಯ  ಧ್ಯಾನ ಮಂದಿರವನ್ನು  ಕೂಡಾ ಇಲ್ಲಿ ನಿರ್ಮಿಸಲಾಗಿದೆ.

ಕೋಟಿ ಲಿಂಗೇಶ್ವರ ದೇಗುಲ:  ಚಿತ್ರ ಕೃಪೆ : ಮಿಥಿಲಾ 

ಈ ದೇಗುಲ ತಲುಪುವ ಬಗೆ ಹೇಗೆ? 

ವಿಮಾನ ಯಾನ: ಕೋಲಾರಕ್ಕೆ ಅತಿ ಸಮೀಪದ ವಿಮಾನ ನಿಲ್ದಾಣ ಬೆಂಗಳೂರು ವಿಮಾನ ನಿಲ್ದಾಣ. ದೇವನಹಳ್ಳಿ ಅಂತರಾಷ್ಟ್ರ್ಯ ವಿಮಾನ ನಿಲ್ದಾಣದಿಂದ ಪ್ರವಾಸಿಗರು ಕ್ಯಾಬ್ ಅಥವಾ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೂಲಕ ಇಲ್ಲಿಗೆ ತಲುಪ ಬಹುದಾಗಿದೆ.

ರೈಲು ಸಂಪರ್ಕ

ಬೆಂಗಳೂರು,  ಹಾಸನ, ಹುಬ್ಬಳ್ಳಿಯಿಂದ ಇಲ್ಲಿಗೆ ಉತ್ತಮ ರೈಲು ವ್ಯವಸ್ಥೆ ಇದೆ.

ರಸ್ತೆ ಸಾರಿಗೆ

ಬೆಂಗಳೂರು-ಕೋಲಾರ ರಸ್ತೆ ಮೂಲಕ, ಈ ದೇಗುಲ ತಲುಪ ಬಹುದು. ಬೆಂಗಳೂರು- ಕೋಲಾರ ನಡುವಣ ಪ್ರಯಾಣ ಅವಧಿ ಎರಡೂವರೆ ತಾಸು.

Jolad Rotti:
Related Post