X

ಭಕ್ತರ ಹರಸುತ್ತಿರುವ ಶ್ರೀ ಭೂ ವರಾಹಸ್ವಾಮಿ ದೇವಾಲಯ

    Categories: Mysore

ಮೈಸೂರು ಎಂದರೆ ದೇಗುಲಗಳ ನಾಡು. ಇಲ್ಲಿ ಹಳ್ಳಿ ಹಳ್ಳಿಗಳ್ಲಲೂ ಪುರಾಣ ಪ್ರಸಿದ್ದ ದೇಗುಲಗಳನ್ನು ನೋಡಬಹುದು. ಈ ಪೈಕಿ ಅತ್ಯಂತ ಪ್ರಸಿದ್ಧ ದೇಗುಲಗಳಲ್ಲೊಂದು  ಭೂ ವರಾಹಸ್ವಾಮಿ ದೇವಾಲಯ, ಕಲ್ಲಳ್ಳಿ.   ಈ ದೇಗುಲ  ವಿಷ್ಣುವಿನ ಮೂರನೇ ಅವತಾರಕ್ಕೆ (ವರಾಹಾವತಾರ)ಕ್ಕೆ  ಸಮರ್ಪಿತವಾಗಿದೆ. ಈ ದೇವಾಲಯವು  ಹೇಮಾವತಿ ನದಿಯ ದಂಡೆಯಲ್ಲಿದ್ದು ಭಕ್ತರನ್ನು ಆಕರ್ಷಿಸುತ್ತಿದೆ.  

ಈ  ದೇಗುಲದಲ್ಲಿರುವ ಶ್ರೀ ಭೂ ವರಾಹ ಸ್ವಾಮಿಯ ವಿಗ್ರಹವು   18 ಅಡಿ ಎತ್ತರವಿದ್ದು, ಬೂದು ಕಲ್ಲಿನಿಂದ ಮಾಡಲ್ಪಟ್ಟಿದೆ.  ಇಲ್ಲಿ ವಿಗ್ರಹವು ಕುಳಿತ ಭಂಗಿಯಲ್ಲಿದೆ. ಜೊತೆಗೆ ವರಾಹ ಸ್ವಾಮಿಯು   ಭೂದೇವಿಯನ್ನು ತನ್ನ ಎಡ ತೊಡೆಯ ಮೇಲೆ  ಕುಳ್ಳಿರಿಸಿಕೊಂಡಿರುವ ಚಿತ್ರಣ ಇಲ್ಲಿದೆ.  ಭೂದೇವಿ ವಿಗ್ರಹವು 3.5 ಅಡಿ ಎತ್ತರವಿದೆ. ಮುಖ್ಯ ವಿಗ್ರಹದ ಕೆಳಗೆ ಹನುಮಂತನ ವಿಗ್ರಹವನ್ನು ಸಹ ಕೆತ್ತಲಾಗಿದೆ. ಭೂ ವರಾಹಸ್ವಾಮಿ ದೇವಾಲಯವು  ಹಲವು ಕಾರಣಿಕಗಳನ್ನು ಹೊಂದಿದ್ದು, ಅತ್ಯಂತ ಪ್ರಭಾವಶಾಲಿ ಎಂದು ಸ್ಥಳೀಯರು ಹೇಳುತ್ತಾರೆ. 

ಮೂಲತ ಮಂಡ್ಯ ಜಿಲ್ಲೆಯ ಈ ದೇಗುಲ ಮೈಸೂರು ನಗರಕ್ಕೆ ಹತ್ತಿರದಲ್ಲಿಯೇ. ಮೈಸೂರು ಪ್ರವಾಸದ ಭಾಗವಾಗಿ ಈ ದೇಗುಲಕ್ಕೆ ಭೇಟಿ ನೀಡಬಹುದು. 

ಭೂ ವರಾಹಸ್ವಾಮಿ ದೇವಾಲಯ,  ಮೈಸೂರು / Bhoo Varahaswamy Temple, Mysuru

ಈ   ದೇವರ ವಿಗ್ರಹದ  ಮೇಲಿನ ಕೈಯು ಶಂಖ ಮತ್ತು ಚಕ್ರ  ವನ್ನು  ಹಿಡಿದಿರುತ್ತದೆ. ವಿಗ್ರಹದ ಕೆಳಗಿನ ಎಡಗೈ ಭೂದೇವಿ ದೇವಿಯನ್ನು ಹರಸುತ್ತಿದೆ ಮತ್ತು ಕೆಳಗಿನ ಬಲಗೈ ಅಭಯ ಮುದ್ರೆಯಲ್ಲಿದೆ. ವಿಗ್ರಹದ ಹಿಂಭಾಗದಲ್ಲಿ ಸುದರ್ಶನ ಚಕ್ರವನ್ನು ಕೆತ್ತಲಾಗಿದೆ. 

ಈ ಭೂ ವರಾಹಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಹೇಮಾವತಿ ನದಿ ಹರಿಯುತ್ತದೆ. ಆದರೆ ಇಲ್ಲಿ ನೀರಿನ ಪ್ರವಾಹ ಜೋರಾಗಿದೆ. ಹಾಗಾಗಿ ಇಲ್ಲಿ ಈಜುವುದು ಅಪಾಯಕರ.  ಮಳೆಗಾಲದಲ್ಲಿ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಾಗ  ನದಿ  ನೀರು ದೇವಾಲಯದ ಗೋಡೆಯ ಅಂಚನ್ನು ತಲುಪುತ್ತದೆ. 

ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನೀರು ಕಡಿಮೆಯಾದ ನಂತರ ವಾರ್ಷಿಕ ಉತ್ಸವ ಮತ್ತು ವರಾಹ ಜಯಂತಿಯನ್ನು  ಈ ದೇಗುಲದಲ್ಲಿ  ಆಚರಿಸಲಾಗುತ್ತದೆ. ಈ ಉತ್ಸವದಲ್ಲಿ ಸುತ್ತಮುತ್ತಲಿನ ನಾನಾ ಹಳ್ಳಿಗಳ ಭಕ್ತರು ಭಾಗವಹಿಸುತ್ತಾರೆ. 

ದೇವಾಲಯದ ಬಗ್ಗೆ  ಆಸಕ್ತಿದಾಯಕ   ಸಂಗತಿಗಳು

  • ದೇಗುಲದ ಸಮಯ : ಬೆಳಗ್ಗೆ 7.30 ರಿಂದ  ಅಪರಾಹ್ನ 1.30 
  • ಸಂಜೆ: 3.30 ರಿಂದ 7.30 

ವಿಳಾಸ: ಕಲ್ಲಹಳ್ಳಿ, ಗಂಜಿಗೆರೆ ಅಂಚೆ, ಬೂಕನಕೆರೆ ಹೋಬಳಿ ಕೆ ಆರ್ ಪೇಟೆ ತಾಲೂಕು (ಮಂಡ್ಯ ಜಿಲ್ಲೆ  ನಕ್ಷೆ)

ಇತಿಹಾಸ 

ಈ ಭೂ ವರಾಹಸ್ವಾಮಿ ದೇವಾಲಯವು ಸುಮಾರು 2500 ವರ್ಷಗಳಿಗಿಂತಲೂ ಹಳೆಯದು ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ  ಋಷಿ ಗೌತಮರು   ತಪಸ್ಸು ಮಾಡಿದರೆಂದು  ನಂಬಲಾಗಿದೆ.  ಆದ್ದರಿಂದ ಈ ದೇವಾಲಯವನ್ನು ಸ್ಥಳೀಯರು ಬಹಳ ಆದರಿಸುತ್ತಾರೆ ಹಾಗು ಸ್ವಾಮಿಗೆ ಪೂಜೆ ಸಲ್ಲಿಸುತ್ತಾರೆ. 

ಈ ದೇವಾಲಯದ ಹಿಂದೆ  ಒಂದು ದೊಡ್ಡ ಇತಿಹಾಸವಿದೆ.  ಹೊಯ್ಸಳ  ರಾಜ  ವೀರ ಬಲ್ಲಾಳ ರಾಜನು ಈ ಭಾಗದಲ್ಲಿ  ಬೇಟೆಯಾಡಲು ಬಂದಿದ್ದಾಗ, ಅವನಿಗೆ ದಾರಿ ತಪ್ಪುತ್ತದೆ.  ಹಾಗು ಕಾಡಿನಲ್ಲಿ ತಿರುಗಾಡಲು ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಬಳಲಿದ ಆತ  ಕಾಡಿನ  ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿರುತ್ತಾನೆ. ಹೀಗೆ  ವಿಶ್ರಮಿಸುತ್ತಿರುವಾಗ, ಆತ  ಒಂದು ವಿಚಿತ್ರವಾದ ಸಂಗತಿ  ಗಮನಿಸಿಸುತ್ತಾನೆ.  ನಾಯಿಯೊಂದು ಮೊಲವನ್ನು ಬೆನ್ನಟ್ಟುತ್ತಿರುತ್ತದೆ. ಆದರೆ  ಒಂದು  ನಿರ್ದಿಷ್ಟ ಜಾಗ ತಲುಪಿದಾಗ   ಮೊಲಕ್ಕೆ ಶಕ್ತಿ ಬಂದು ಅದು  ನಾಯಿಯನ್ನು ಬೆನ್ನಟ್ಟಲು ಪ್ರಾರಂಭಿಸಿತು.

ಈ ಘಟನೆ ನೋಡಿ ಆಶ್ಚರ್ಯಗೊಂಡ ರಾಜ ಆ ಸ್ಥಳವನ್ನು ಅಗೆಯಲು ಆರಂಭಿಸುತ್ತಾನೆ. ಆತನ ಪ್ರಕಾರ ಅಲ್ಲಿ ಯಾವುದೊ ಒಂದು ದೊಡ್ಡ ಶಕ್ತಿ ಇರುವ ಅದಾಗಿತ್ತು. ಆತ ನೆಲ ಅಗೆದಂತೆ  ಅಲ್ಲಿ ಆತನಿಗೆ   ವರಾಹಸ್ವಾಮಿ ಮೂರ್ತಿ ಸಿಕ್ಕಿತು. ರಾಜ ಅಲ್ಲೊಂದು ಭವ್ಯ ದೇಗುಲ ನಿರ್ಮಿಸಿ, ದಿನ ಪೂಜಿಸಲು ಆರಂಭಿಸುತ್ತಾನೆ. 

ಕಲ್ಹಳ್ಳಿ ಗ್ರಾಮವು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿದೆ. ಈ ಗ್ರಾಮವು ಮಂಡ್ಯ ಜಿಲ್ಲೆಯ ಪಾಂಡುಪುರದಿಂದ 32 ಕಿ.ಮೀ ದೂರದಲ್ಲಿದೆ. ಹತ್ತಿರದ ಬಸ್ ನಿಲ್ದಾಣವು ಗ್ರಾಮದಿಂದ 2 ಕಿ.ಮೀ ದೂರದಲ್ಲಿದೆ.

Related Readings

Jolad Rotti:
Related Post