X

ದಸರಾ 2023: 414 ನೇ ಮೈಸೂರು ದಸರಾದ ಬಗ್ಗೆ  ನೀವು ತಿಳಿಯಬೇಕಾದ ಸಂಗತಿಗಳು

    Categories: Mysore

ಮೈಸೂರು ದಸರಾಗೆ ಈವರ್ಷ  414ನೇ ವರ್ಷದ ಸಂಭ್ರಮ. ಈ ಬಾರಿ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ  ನಾಡಹಬ್ಬ ದಸರಾವನ್ನು ಚಾಮುಂಡಿ ಬೆಟ್ಟದ ಬೆಲೆ ಭಾನುವಾರ  ಉದ್ಘಾಟಿಸಿದರು. 

ಈ ಬಾರಿ ರಾಜ್ಯಾದ್ಯಂತ ಬರದ ಕಾರಣಕ್ಕೆ ದಸರಾವನ್ನು ಅತ್ತ ಅದ್ದೂರಿಯೂ ಅಲ್ಲದೆ, ಇತ್ತ ಸರಳವೂ ಅಲ್ಲದೆ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ. 

ಅಕ್ಟೋಬರ್ ೨೪, ಮಂಗಳ ವಾರದಂದು ವಿಶ್ವ ಪ್ರಸಿದ್ದ ಜಂಬೂ ಸವರಿ ನಡೆಯಲಿದೆ. 

ಅಂದು  ಮಧ್ಯಾಹ್ನ 1.46 ರಿಂದ 2.08 ಗಂಟೆಯವರೆಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ಹಾಗೂ ಸಂಜೆ 4.40 ರಿಂದ 5.00 ರವರೆಗೆ ಅರಮನೆ ಆವರಣದಲ್ಲಿ ವಿಜಯದಶಮಿ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಬನ್ನಿಮಂಪಟದಲ್ಲಿ ಪಂಜಿನ ಕವಾಯತು ನಡೆಯಲಿದೆ. 
ಈ ಬಾರಿಯ ದಸರಾ ವಿಶೇಷತೆ ಎಂದರೆ, ವಾಯು ಪಡೆಯಿಂದ ಏರ್ ಶೋ. ದಸರಾ ಕುರಿತ ಎಲ್ಲಾ ಮಾಹಿತಿಗಳು  ಈ ವೆಬ್ಸೈಟ್ ನಲ್ಲಿ ದೊರೆಯುತ್ತದೆ.

Mysuru: A view of the illuminated Mysore Palace during Dussehra celebrations

ದಸರಾ 2023: ವೈಶಿಷ್ಟ್ಯಗಳು 

ದಸರಾ ಹಬ್ಬದ ನೇರ ಪ್ರಸಾರಗಳನ್ನು ಇಲ್ಲಿ ಅಥವಾ   ಇಲ್ಲಿ ಅಥವಾ   ಇಲ್ಲಿ  ವರ್ಚುವಲ್ ಆಗಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. 

ದಸರಾ 2023: ನೀವು ನೋಡಲೇ ಬೇಕಾದ ಅರಮನೆ ವೇದಿಕೆ  ಕಾರ್ಯಕ್ರಮಗಳು 

ಅಕ್ಟೋಬರ್ .15: ಸಂಜೆ 7 ರಿಂದ ನಾದಸ್ವರ ವಿದ್ವಾನ್ ಎಸ್ ಪುಟ್ಟರಾಜು ಹಾಗೂ ಯದುಕುಮಾರ್ ರವರ  ತಂಡದಿoದ ನಾದಸ್ವರ,  ರಾಜಪ್ಪ ಮತ್ತು ಮಲ್ಲೇಶ್ ತಂಡದಿoದ ವೀರಭದ್ರ ಕುಣಿತ, ವಿದುಷಿ ಬಿ ರಶ್ಮಿ ತಂಡದವರಿoದ ನಾಡಗೀತೆ ಹಾಗೂ ಆಸ್ಥಾನ ಗೀತೆ ಗಾಯನ, ಚಲನಚಿತ್ರ ನಟಿ ಭಾವನ ರಾಮಣ್ಣ ರವರ ತಂಡದಿoದ ಶ್ರೀ ಚಾಮುಂಡೇಶ್ವರಿ ಮರ್ದಿನಿ ನೃತ್ಯ ರೂಪ ಮತ್ತು ರೂಪಕ ಸಿಂಹ ವಾಹಿನಿ ಸಂಗೀತಯಾನ, ಅಜಯ್ ವಾರಿಯರ್ ಮತ್ತು ಸುನಿತಾ ರವರ ತಂಡದಿoದ ಸಂಗೀತಯಾನ. 

ಅಕ್ಟೋಬರ್ 16:  ಪುಟ್ಟಸ್ವಾಮಿ ಅವರ ತಂಡದಿoದ ನಾದಸ್ವರ, ರಮ್ಯಾ ಮತ್ತು ಮೈಸೂರು ಸವಿತಾ ಕಿರುಕುನ್ನಯ್ಯ ಮಂಡ್ಯ ರವರ ತಂಡದಿoದ ಮಹಿಳಾ ಡೊಳ್ಳು ಮತ್ತು ಮಹಿಳಾ ಪೂಜಾ ಕುಣಿತ, ವಿದ್ವಾನ್ ಡಾ.ದುಂಡಯ್ಯ ಪೂಜೆರಾ ರವರಿಂದ ತಾಳ ಗಾನ ಯಾನ (ಶಾಸ್ತ್ರೀಯ ವಾದ್ಯ ವೃಂದ), ಅಂತರಾಷ್ಟ್ರೀಯ ಖ್ಯಾತಿಯ ಕಥಕ್ ಕಲಾವಿದರಾದ ಹರಿ ಮತ್ತು ಚೇತನ್ ರವರಿಂದ ಕಥಕ್ ಸಂಭ್ರಮ, ಆಯನಾ ಡ್ಯಾನ್ಸ್ ಕಂಪನಿ ವತಿಯಿಂದ ಭಾರತೀಯ ನೃತ್ಯ ವೈವಿಧ್ಯ ಕಾರ್ಯಕ್ರಮಗಳು

ಅಕ್ಟೋಬರ್ 17 :  ಸುನಿತಾ ಮತ್ತು ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ ಕೊಡಗುರವರಿಂದ ಗಿರಿಜನ ಬುಡಕಟ್ಟು ನೃತ್ಯ, ಉಸ್ತಾದ್ ರಫೀಕ್ ಖಾನ್ ಮತ್ತು ವಿದ್ವಾನ್ ಅಂಕುಶ್ ಎನ್ ನಾಯಕ್ ರವರಿಂದ ವಾದ್ಯ ಸಂಗೀತ ಜುಗಲ್ ಬಂದಿ, ಚಿಂತನ್ ವಿಕಾಸ್ ಫಿಟ್ ಪ್ರಾಜೆಕ್ಟ್ ಎಕ್ಸಡಸ್ ರವರಿಂದ ನಾನಾರೆಂಬುದು ನಾನಲ್ಲ (ಕನ್ನಡ ಮತ್ತು ಕಡಲಚೆ ಸಂಗೀತ), ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯಂ ಮತ್ತು ರಾಕೇಶ್ ಚೌರಾಸಿಯಾ ರವರಿಂದ ಕರ್ನಾಟಕ ಹಿಂದುಸ್ತಾನಿ ಜುಗಲ್ ಬಂದಿ

ಅಕ್ಟೋಬರ್ 18:  ಅಪರ್ಣ ವಿನೋದ್ ಮೆನನ್ ರವರ ತಂಡದಿoದ ಭರತನಾಟ್ಯ, ಡಾ. ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ಡಾ. ಅಪ್ಪಗೆರೆ ತಿಮ್ಮರಾಜು ರವರ ತಂಡದಿoದ ಕನ್ನಡವೇ ಸತ್ಯ ಭಾವಗೀತೆ ಹಾಗು ಜನಪದ ಗೀತೆಗಳು ಸಂಭ್ರಮ, ಮಾಸ್ ಬೆಂಡ್ ರವರಿಂದ ಪೊಲೀಸ್ ಬ್ಯಾಂಡ್, ಪದ್ಮಶ್ರೀ ಶುಭ ಮುದ್ಗಲ್ ರವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ

ಅಕ್ಟೋಬರ್ 19: ವಿಶೇಷ ಚೇತನ ಕಲಾವಿದರಿಂದ ಸಂಗೀತ ನೃತ್ಯ ಸಮ್ಮಿಲನ, ಕರ್ನಾಟಕ ಕಲಾ ಶ್ರೀ ವಿದ್ಯಾ ರವಿಶಂಕರ್ ತಂಡದವರಿoದ ನೃತ್ಯ ರೂಪಕ, ವಿದ್ವಾನ್ ಮೈಸೂರು ಹರೀಶ್ ಪಾಂಡವ್ ರವರ ತಂಡದಿoದ ಸೈಕ್ಸೋ ಫೋನ್ ಫ್ಯಾಷನ್, ವಿದ್ವಾನ್ ಟಿ ಎಂ ಕೃಷ್ಣ ಚೆನ್ನೈ ರವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ 

ಅಕ್ಟೋಬರ್ 20: ಮುಡಿಗುಂಡ ಮೂರ್ತಿ ತಂಡದವರಿoದ ಕಾವ್ಯ ಕುಂಚ ಗಾಯನ, ವಿದುಷಿ ರೇಖಾ ಸುಬ್ರಹ್ಮಣ್ಯ ಬೆಂಗಳೂರು ತಂಡದವರಿoದ ತ್ರಿವೇಣಿ( ಒಡಿಸ್ಸಿ ಕೂಚುಪುಡಿ,ಭರತನಾಟ್ಯಂ), ಪಂಡಿತ್ ಕೂತ್ಲೇ ಖಾನ್ ಮತ್ತು ವಿದೇಶಿ ರಸಿಕಾ ಶೇಖರ್ ತಂಡದವರಿAದ ಜುಗಲ್ಬಂದಿ ಕಾರ್ಯಕ್ರಮ.

ಅಕ್ಟೋಬರ್ 21: ಬೆಳಗ್ಗೆ 6 ರಿಂದ ಸಂಜೆ 6:00 ಗಂಟೆಯವರೆಗೆ ವಿದ್ವಾನ್ ಡಾ. ಸಿ ಎ ಶ್ರೀಧರ್ ರವರಿಂದ ಕರ್ನಾಟಕ ಶಾಸ್ತ್ರೀಯ ವೇಣುವಾದನ, ಚೌಡಿಕೆ ಪದಗಳು ಖ್ಯಾತ ಶಿಲ್ಪಾ ಮುಡಬಿ ಮರೆತ ಮಣ್ಣಿನ ಹಾಡುಗಳು(ಉತ್ತರ ಕರ್ನಾಟಕದ ಹಾಡುಗಳು), ವಿದ್ವಾನ್ ರಾಜೇಶ್ ಮತ್ತು ಯು ರಾಜೇಶ್ ರವರಿಂದ ವೀಣಾ ಮ್ಯಾಂಡೋಲಿನ್ ಜುಗಲ್ಬಂದಿ ಕಾರ್ಯಕ್ರಮ

ಅಕ್ಟೋಬರ್ 22:  ಬೆಳಗ್ಗೆ 6 ರಿಂದ ಸಂಜೆ 6:00 ಗಂಟೆಯವರೆಗೆ ನಿಸರ್ಗ ಮತ್ತು ವಿಸ್ಮಯ ರವರ ತಂಡದಿoದ ರಂಗ ಗೀತೆಗಳು, ನಾದಬ್ರಹ್ಮ ಡಾ.ಹಂಸಲೇಖ ರವರ ತಂಡದಿoದ ಜಯಹೇ ನಾಲ್ವಡಿ ಹಾಡು-ಹಬ್ಬ ಕಾರ್ಯಕ್ರಮ

ವಿದ್ಯುದಾಲಂಕಾರ 

ಕಳೆದ ಕೆಲವು ವರ್ಷಗಳಿಂದ ಮೈಸೂರು ದಸರಾದ ವಿಶೇಷತೆ ಎಂದರೆ ವಿದ್ಯುತ್ ಅಲಂಕಾರ. ಈ ಬಾರಿ ಸುಮಾರು ೧೫೦ ಕಿಲೋ ಮೀಟರ್ ನಷ್ಟು ವಿದ್ಯುತ್ ಅಲಂಕಾರ  ಮಾಡಲಾಗಿದೆ.  ಪ್ರವಾಸೋದ್ಯಮ ಇಲಾಕೆಯ ಡಬಲ್ ಡೆಕ್ಕರ್  ಬಸ್ ನಲ್ಲಿ ಈ ವಿದ್ಯುತ್ ಅಲಂಕಾರ ಕಣ್ತುಂಬಿಕೊಳ್ಳಬಹುದು. 

ಮೇಲ್ಭಾಗದ ಸೀಟುಗಳಿಗೆ  500 ರೂ., ಹಾಗು  ಕೆಳಗಿನ ಸೀಟುಗಳಿಗೆ  250 ರೂ ದರ ನಿಗದಿಗೊಳಿಸಲಾಗಿದೆ.  ಈ ಬಸ್‌ಗಳು ಸಂಜೆ ಮಾತ್ರ ನಗರ ಪ್ರದಕ್ಷಿಣೆ ಸೇವೆ ನೀಡುತ್ತವೆ. 

ಈ ಬಸ್‌ಗಳು ನಗರದ  ಜೆಎಲ್‌ಬಿ ರಸ್ತೆಯಲ್ಲಿರುವ ಮಯೂರ ಹೋಟೆಲ್‌ನಿಂದ ಆರಂಭಗೊಂಡು,  ಹಳೆಯ ಜಿಲ್ಲಾಧಿಕಾರಿ  ಕಚೇರಿ,  ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್, ಓರಿಯಂಟಲ್ ಕೇಂದ್ರ ಗ್ರಂಥಾಲಯ,  ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲೆ, ಅರಮನೆ ದಕ್ಷಿಣ ದ್ವಾರ,  ಜಯಮಾರ್ತಾಂಡ ವೃತ್ತದ ದ್ವಾರ, ಹಾರ್ಡಿಂಜ್ ವೃತ್ತ, ಕೆಆರ್ ವೃತ್ತ, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದಿಕ್ ವೈದ್ಯಕೀಯ  ಕಾಲೇಜು ಮತ್ತು ನಗರ  ರೈಲ್ವೇ ನಿಲ್ದಾಣ ಸುತ್ತಮುತ್ತ ಸಂಚರಿಸಲಿವೆ. 

ನಗರ ಪ್ರದಕ್ಷಿಣೆ  ಅವಧಿ: 1 ಗಂಟೆ

ನಿರ್ಗಮನ ಸಮಯ: ಸಂಜೆ 6.30, ರಾತ್ರಿ 8 ಮತ್ತು ರಾತ್ರಿ 9.30.

ಬುಕಿಂಗ್‌ಗಾಗಿ: 0821-2423652

ಅರಮನೆ ದಸರಾ 

ಪ್ರತಿ ವರ್ಷ ಮೈಸೂರು ದಸರಾದ ಪ್ರಮುಖ  ಸಂಭ್ರಮಗಳಲ್ಲೊಂದು  ಅರಮನೆ ದಸರಾ. ಈ ದಸರಾ ಆಚರಣೆಯನ್ನು ಮೈಸೂರು ಅರಮನೆಯಲ್ಲಿ  ರಾಜಮನೆತನದವರು ಆಚರಿಸುತ್ತಾರೆ. ಮೈಸೂರು ರಾಜಮನೆತನದ ವಂಶಸ್ಥ ಶ್ರೀ  ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು  ದಸರಾ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. 

ಈ ವರ್ಷ ಮೈಸೂರು ಅರಮನೆ ದಸರಾ ಮಹೋತ್ಸವ ಅಕ್ಟೋಬರ್ 15, ಭಾನುವಾರ  ಶ್ರೀ  ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್  ಅವರ ಸಿಂಹಾಸನಾರೋಹಣದೊಂದಿಗೆ ಆರಂಭವಾಗಲಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಪೂಜಾ ವಿಧಿವಿಧಾನಗಳು ನಡೆಯಲಿವೆ.

ಅಕ್ಟೋಬರ್ 23, ಸೋಮವಾರದಂದು ಅರಮನೆಯಲ್ಲಿ  ಮಹಾನವಮಿ ಮತ್ತು ಆಯುಧ ಪೂಜೆ ವಿಧಿವಿಧಾನಗಳನ್ನು ಆಚರಿಸಲಾಗುವುದು. ಅರಮನೆಯ ಕಲ್ಯಾಣ ಮಂಟಪದಲ್ಲಿ ಈ ವಿಧಿವಿಧಾನಗಳು ನೆರವೇರಲಿವೆ.

ಅಕ್ಟೋಬರ್ 24, ಮಂಗಳವಾರ, ವಿಜಯದಶಮಿ ಆಚರಿಸಲಾಗುತ್ತದೆ.

ವಿಜಯ ದಶಮಿ ಆಚರಣೆಯ ಪ್ರಮುಖ ಅಂಶವೆಂದರೆ ವಜ್ರ ಮುಷ್ಟಿ ಕಾಳಗ. ಅರಮನೆಯ ಕಲ್ಯಾಣ ಮಂಟಪದ ಮುಂಭಾಗದ ಕರಿಕಲ್ಲು ತೊಟ್ಟಿಯಲ್ಲಿ ಈ ಕಾಳಗ  ನಡೆಯಲಿದೆ. ಈ ಕುಸ್ತಿಯಲ್ಲಿ ಜಟ್ಟಿಗಳು ವಜ್ರ ಮುಷ್ಟಿ ಆಯುಧ    ಧರಿಸುತ್ತಾರೆ. ಕುಸ್ತಿಪಟುಗಳಲ್ಲಿ ಒಬ್ಬನ ತಲೆಯಿಂದ   ರಕ್ತ ಹನಿ ಬಿದ್ದ ಕೂಡಾಲೇ  ಅದು ಕೊನೆಗೊಳ್ಳುತ್ತದೆ.

ಶ್ರೀ ರಂಗಪಟ್ಟಣ ದಸರಾ 

ಈ ಬಾರಿ ಮಂಡ್ಯ ಜಿಲ್ಲಾಡಳಿತ ಶ್ರೀ ರಂಗಪಟ್ಟಣ  ದಸರಾವನ್ನು ವೈಭವದಿಂದ ಆಚರಿಸುತ್ತಿದೆ. 

ಇಲ್ಲಿ ದನಗಳ ಹಾಲು ಕರೆಯುವ ಸ್ಪರ್ಧೆ ಸೇರಿದಂತೆ ನಾನಾ ಗ್ರಾಮೀಣ ವೈಭವದ ಆಚರಣೆಗಳ ಸ್ಪರ್ಧೆ ಆಯೋಜಿಸಲಾಗಿದೆ 

ಮಡಿಕೇರಿ ದಸರಾ 

ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆ ಎಂದರೆ ದಶ ಮಂಟಪಗಳು. ಇದರ ಜೊತೆಗೆ ವಿರಾಜಪೇಟೆ, ಗೋಣಿಕೊಪ್ಪಲ್ ನಲ್ಲಿ ಕೂಡಾ ದಸರಾವನ್ನು ವೈಭವದಿಂದ ಆಚರಿಸಲಾಗುತ್ತದೆ.  

Related Articles

Jolad Rotti:
Related Post