X

ಮೈಸೂರು ದಸರಾ 2026; ಕಾರ್ಯಕ್ರಮಗಳು, ಜಂಬೂ ಸವಾರಿ, ಹಾಗು ಟಿಕೆಟ್

    Categories: Mysore

ದಸರಾ  2026 ಮುಖ್ಯಾಂಶಗಳು 

* ಮೈಸೂರು ದಸರಾ 2026:   ಅಕ್ಟೋಬರ್ 11 ಭಾನುವಾರ ಆರಂಭ- ಅಕ್ಟೋಬರ್ 21 ಬುಧವಾರ ಜಂಬೂ ಸವಾರಿಯೊಂದಿಗೆ ಮುಕ್ತಾಯ  (11 ದಿನಗಳು).

* ಜಂಬೂ ಸವಾರಿ: ಅಕ್ಟೋಬರ್ 21, ಬುಧವಾರ. ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಧ್ಯಾಹ್ನ 4:10 ರಿಂದ 4:35 ರವರೆಗೆ; ಅದರ ನಂತರ ಅರಮನೆ ಆವರಣದಿಂದ  ಮೆರವಣಿಗೆ ಹೊರಡಲಿದೆ.

* ಪಂಜಿನ ಕವಾಯತು (Torchlight Parade): ಅಕ್ಟೋಬರ್ 20 ಮತ್ತು 21 ರಂದು ರಾತ್ರಿ 7:00 ಗಂಟೆಗೆ, ಬನ್ನಿಮಂಟಪ.

* ಟಿಕೆಟ್‌ಗಳು ಟಿಕೆಟ್‌ ಜೀನಿ (TicketGenie) ಯಲ್ಲಿ ಮಾತ್ರ ಲಭ್ಯ: ಗೋಲ್ಡ್‌ ಕಾರ್ಡ್‌ ರೂ. 6,500 ರಿಂದ, ಮೆರವಣಿಗೆ ರೂ. 3,500 ರಿಂದ, ಪಂಜಿನ ಕವಾಯತು ರೂ. 1,500 ರಿಂದ, ಡ್ರೋನ್ ಶೋ ರೂ. 1,000 ರಿಂದ ಪ್ರಾರಂಭ.

* ಮೆರವಣಿಗೆಯ ಮಾರ್ಗ, ಅರಮನೆ ವಿದ್ಯುತ್‌ ದೀಪಾಲಂಕಾರ,   ಮತ್ತು ಸಾಂಸ್ಕೃತಿಕ ವೇದಿಕೆಗಳ ವೀಕ್ಷಣೆ ಉಚಿತವಾಗಿರುತ್ತದೆ.

* ದಸರಾ ಸಹಾಯವಾಣಿ: 1077 (24×7). ತುರ್ತು ಸಹಾಯವಾಣಿ: 112.

Table of Contents

Crowds along the Jamboo Savari route. In 2026 the procession is on 21 October. Photo: Kalyan Kumar, Wikimedia Commons

417ನೇ  ವಿಶ್ವ ವಿಖ್ಯಾತ ದಸರಾ  ಅಕ್ಟೋಬರ್ 11 ಭಾನುವಾರ ಅಪರಾಹ್ನ ಆರಂಭವಾಯಿತು.  ಅಕ್ಟೋಬರ್ 21 ಬುಧವಾರದಂದು ಜಂಬೂ ಸವಾರಿ ಹಾಗು ಟಾರ್ಚ್ ಲೈಟ್ ಪರೇಡ್ ಜೊತೆಗೆ ಹಬ್ಬದ ಸಂಭ್ರಮ ಮುಖ್ಯಗೊಳ್ಳಲಿದೆ.  ವಿಜಯದಶಮಿಯ ದಿನವಾದ ಅಕ್ಟೋಬರ್ 21 ರಂದು ಅಪರಾಹ್ನ ಜಂಬೂಸವಾರಿಯ ಭಾಗವಾಗಿ  ಚಿನ್ನದ ಅಂಬಾರಿಯ ಸೇರಿದಂತೆ   ಆನೆಗಳ ಮೆರವಣಿಗೆ, ರಾಜ್ಯ, ಹೊರ ರಾಜ್ಯಗಳ  ನಾನಾ ಪ್ರತಿಕೃತಿಗಳ್ ಮೆರವಣಿಗೆ  ನಡೆಯಲಿದೆ. ಕರ್ನಾಟಕದ ನಾಡಹಬ್ಬವಾದ ಮೈಸೂರು ದಸರಾಗೆ, ಅಕ್ಟೋಬರ್ 11 ಭಾನುವಾರ  ಬೆಳಿಗ್ಗೆ 11:50 ಕ್ಕೆ ಧನುರ್ ಲಗ್ನದ ಶುಭ ಮುಹೂರ್ತದಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಪೂಜೆಯೊಂದಿಗೆ ಚಾಲನೆ ನೀಡಲಾಯಿತು.

 ಮೈಸೂರು ದಸರಾ  ದಿನಾಂಕಗಳು ಮತ್ತು ಪ್ರಮುಖ ಕಾರ್ಯಕ್ರಮಗಳ ಸಮಯ, ಗೋಲ್ಡ್ ಕಾರ್ಡ್ ಹಾಗೂ  ಇತರ   ಟಿಕೆಟ್‌ಗಳನ್ನು ಖರೀದಿಸುವುದು  ಹೇಗೆ ಮತ್ತು ಯಾವೆಲ್ಲಾ ಕಾರ್ಯಕ್ರಮಗಳನ್ನು  ಉಚಿತವಾಗಿ ನೋಡಬಹುದು  ಎಂಬುದರ ಬಗ್ಗೆ ಇಲ್ಲಿ ವಿವರವಾದ ಮಾಹಿತಿ ನೀಡಲಾಗಿದೆ.  ಈ ಎಲ್ಲಾ ದಿನಾಂಕಗಳ ಮಾಹಿತಿಯನ್ನು  ಕರ್ನಾಟಕ ಸರ್ಕಾರದ ಮೈಸೂರು ದಸರಾ ಸಮಿತಿ ಅಧಿಕೃತ ಮೈಸೂರು ದಸರಾ ಅಂತರ್ಜಾಲ ತಾಣದಿಂದ ನೀಡಲಾಗಿದೆ.  ದಸರಾ ದಿನಾಂಕ ಹಾಗು ಸಮಯವನ್ನು  ಅರಮನೆ ಪಂಚಾಂಗದ ಪ್ರಕಾರ ನಿಗದಿಪಡಿಸಲಾಗುವುದರಿಂದ ಇದು ಇತರ ಪಂಚಾಂಗಗಳಿಗೆ ಹೋಲಿಸಿದರೆ ಸ್ವಲ್ಪ ಬದಲಾಗಿರಬಹುದು. ಮೈಸೂರು ಕುರಿತ ಹೆಚ್ಚಿನ ಮಾಹಿತಿಗಳು ನಿಮಗೆ ಇಲ್ಲಿ  ಸಿಗುತ್ತದೆ 

 ಮೈಸೂರು ದಸರಾ 2026 ಪ್ರಮುಖ ದಿನಾಂಕಗಳು 

೧೧ ದಿನಗಳ ಮೈಸೂರು ದಸರಾ  2026 ರ ಪ್ರಮುಖ  ಕಾರ್ಯಕ್ರಮಗಳು ಹಾಗು ದಿನಾಂಕದ ಅಧಿಕೃತ ಮಾಹಿತಿ ಇಲ್ಲಿದೆ.  ಆಗಸ್ಟ್‌ನಲ್ಲಿ ದಸರಾದ ಅವಿಭಾಜ್ಯ ಅಂಗವಾಗಿರುವ  ಆನೆಗಳ ಆಗಮನದಿಂದ ಹಿಡಿದು  ವಿಜಯದಶಮಿಯ ನಂತರದ ರಥೋತ್ಸವದವರೆಗಿನ ಮಾಹಿತಿ ಇಲ್ಲಿದೆ. 

ಮೈಸೂರು ಅರಮನೆ ಪಂಚಾಗ ಆಧರಿಸಿ, ಈ ಮಾಹಿತಿ ನೀಡಲಾಗಿದೆ. 

Table 1 – Mysore Dasara Dates 2026

DateEventTimeVenue
Wed, 26 Aug 2026Gaja Payana: Dasara elephants flagged off10:01 AM – 10:28 AMVeeranahosahalli, Nagarhole
Fri, 28 Aug 2026Elephants enter the Palace; Gaja Puja9:52 AM – 10:19 AMAmba Vilas Palace
Sun, 11 Oct 2026Inauguration: Chamundeshwari puja11:50 AM – 12:13 PMChamundeshwari Temple, Chamundi Hill
11 – 21 Oct 2026Palace illumination, every eveningFrom 7:00 PMAmba Vilas Palace
Tue, 20 Oct 2026Mahanavami: Ayudha puja and Palace pujasAs per the PalaceAmba Vilas Palace
Tue, 20 Oct 2026Torchlight Parade, first evening7:00 PMBannimantap
Wed, 21 Oct 2026Vijayadashami: Nandi Dhwaja puja1:36 PM – 1:56 PMAmba Vilas Palace
Wed, 21 Oct 2026Floral tribute to the golden howdah, then the Jamboo Savari4:10 PM – 4:35 PMPalace to Bannimantap
Wed, 21 Oct 2026Torchlight Parade (Panjina Kavayathu)7:00 PMBannimantap
Thu, 22 Oct 2026Elephants’ return journey10:45 AMPalace to Veeranahosahalli
Sat, 24 Oct 2026Chamundeshwari Rathotsava (chariot festival)Not announcedChamundi Hill
Source for these Mysore Dasara dates: mysoredasara.gov.in and the Mysuru Palace panchanga, as of October 2026. Times are IST and subject to official change.

ಈ ವಿವರಗಳನ್ನು   mysoredasara.gov.in ಮತ್ತು ಮೈಸೂರು ಅರಮನೆ ಪಂಚಾಂಗ ಪ್ರಕಾರ ನೀಡಲಾಗಿದೆ. ಇವೆಲ್ಲವೂ  ಭಾರತೀಯ ಪ್ರಮಾಣಿತ ಸಮಯ (IST) ಕ್ಕೆ ಅನುಗುಣವಾಗಿ ಇದೆ  ಮತ್ತು ಅಧಿಕೃತ ಬದಲಾವಣೆಗಳಿಗೆ ಒಳಪಟ್ಟಿರುತ್ತವೆ.

ಮೈಸೂರು ದಸರಾ ದಿನಾಂಕ ರಾಷ್ಟ್ರೀಯ ದಸರಾ ಪಂಚಾಂಗಕ್ಕಿಂತ ಏಕೆ ಭಿನ್ನವಾಗಿರುತ್ತದೆ? 

ಅನೇಕ ರಾಷ್ಟ್ರೀಯ ಕ್ಯಾಲೆಂಡರ್‌ಗಳು 2026ರ ಅಕ್ಟೋಬರ್ 20ರ ಮಂಗಳವಾರದಂದು ವಿಜಯದಶಮಿ ಎಂದು ಪಟ್ಟಿಮಾಡಿವೆ. ಆದರೆ  ಮೈಸೂರು ದಸರಾ, ಮೈಸೂರು ಅರಮನೆ ಪಂಚಾಂಗವನ್ನು ಅನುಸರಿಸುವುದರಿಂದ, ವಿಜಯದಶಮಿ ಮತ್ತು ಜಂಬೂಸವಾರಿಯನ್ನು ಅಕ್ಟೋಬರ್ 21 ರ ಬುಧವಾರದಂದು ನಿಗದಿಪಡಿಸಲಾಗಿದೆ. ನೀವು ಮೈಸೂರು ದಸರಾ ದಿನಾಂಕಗಳನ್ನು ಆಧರಿಸಿ, ನಿಮ್ಮ ಮೈಸೂರು ಪ್ರಯಾಣ ರೂಪಿಸುವಾಗ  ಸಾಮಾನ್ಯ ರಜಾ ದಿನಗಳ ಕ್ಯಾಲೆಂಡರ್‌ ಬದಲಿಗೆ ಮೈಸೂರು ವೇಳಾಪಟ್ಟಿಯನ್ನೇ ಅನುಸರಿಸುವುದು ಒಳ್ಳೆಯದು. .

ಮೈಸೂರು ದಸರಾ 2026: ದಿನ ನಿತ್ಯದ ಕಾರ್ಯಕ್ರಮಗಳು 

ಈ ಬಾರಿಯ ದಸರಾದಲ್ಲಿ 90ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯಲಿವೆ.  ಈ ಕುರಿತ ಮಾಹಿತಿಗಳು ದಸರಾ ಅಧಿಕೃತ ವೆಬ್ಸೈಟ್ ನಲ್ಲಿ 

ಇದೆ. ಈ ಕೋಷ್ಟಕದಲ್ಲಿ ನೀವು ನೋಡಲೇ ಬೇಕಾದ ಕಾರ್ಯಕ್ರಮಗಳನ್ನು ಪಟ್ಟಿ ಮಾಡಲಾಗಿದೆ. 

Table 2: ಮೈಸೂರು ದಸರಾ: ಪ್ರಮುಖ ಕಾರ್ಯಕ್ರಮಗಳ ಪಟ್ಟಿ 

DayDateMain programmesVenue
1Sun, 11 OctInauguration; Flower Show and Aahara Mela open; CM Cup sports; illumination switched onChamundi Hill; Kuppanna Park; Maharaja’s College Ground
2Mon, 12 OctCM Cup sports; film show and cultural programmesChamundi Vihar; CAVA
3Tue, 13 OctRangoli contest; Mahila and Makkala Dasara; Kavigoshti opensPalace; J.K. Grounds; Manasagangotri
4Wed, 14 OctYoga Dasara; Makkala Dasara; Yuva KavigoshtiJ.K. Grounds; Kala Mandira
5Thu, 15 OctHeritage walk (7:00 AM); women’s walkathonTown Hall; J.K. Grounds
6Fri, 16 OctHeritage cycle ride (7:00 AM); Raitha Dasara; yogasana competitionTown Hall; J.K. Grounds
7Sat, 17 OctHeritage tonga ride (7:00 AM); drone show (8:00 PM)Town Hall; Bannimantap
8Sun, 18 OctRural Yoga Dasara; Kambala day 1; pet show; drone show (8:00 PM)Nanjangud; near VTU College; Bannimantap
9Mon, 19 OctYoga Charana (6:00 AM); Kambala day 2Chamundi Hill; near VTU College
10Tue, 20 OctMahanavami pujas; Torchlight Parade (7:00 PM); drone showPalace; Bannimantap
11Wed, 21 OctNandi Dhwaja puja; Jamboo Savari; Torchlight Parade (7:00 PM); drone showPalace to Bannimantap
Source: official programme on mysoredasara.gov.in, as of October 2026. Main public programmes only.

ಮಾಹಿತಿ ಮೂಲ: ದಸರಾ ವೆಬ್ಸೈಟ್ ನಲ್ಲಿ ಪ್ರಕಟಿಸಲಾದ  ಮಾಹಿತಿಗಳು 

ಜಂಬೂ ಸವಾರಿ 2026: ದಿನಾಂಕ, ಸಮಯ ಮತ್ತು ಮಾರ್ಗ

ಮೈಸೂರು ದಸರಾದ ಪ್ರಮುಖ  ಆಕರ್ಷಣೆ ಎಂದರೆ ವಿಜಯದಶಮಿ ದಿನದ ಜಂಬೂ ಸವಾರಿ.  ಈ ವರ್ಷ  ಜಂಬೂ ಸವಾರಿಯು ಮೈಸೂರು ದಸರೆಯ ಕೊನೆಯ ದಿನವಾದ 2026ರ ಅಕ್ಟೋಬರ್ 21 ರ ಬುಧವಾರದಂದು ನಡೆಯಲಿದೆ.  ಮುಖ್ಯಮಂತ್ರಿ ಶ್ರೀ ಡಿ ಕೆ ಶಿವಕುಮಾರ್ ಅವರು   ಮಧ್ಯಾಹ್ನ 1:36 ರಿಂದ 1:56 ರ ನಡುವೆ ಅರಮನೆಯಲ್ಲಿ ನಂದಿ ಧ್ವಜ ಪೂಜೆಯನ್ನು ನೆರವೇರಿಸುತ್ತಾರೆ. ಮಧ್ಯಾಹ್ನ 4:10 ರಿಂದ 4:35 ರ ನಡುವೆ, ಮುಖ್ಯಮಂತ್ರಿಗಳು ಮತ್ತು ಇತರ ಗಣ್ಯರು ಚಿನ್ನದ ಅಂಬಾರಿಯಲ್ಲಿ ಆಸೀನರಾಗಿರುವ ಚಾಮುಂಡೇಶ್ವರಿ ದೇವಿಯ ಮೂರ್ತಿಗೆ ಪುಷ್ಪಾರ್ಚನೆಯನ್ನು ಅರ್ಪಿಸುತ್ತಾರೆ, ಮತ್ತು ತದನಂತರ ಮೆರವಣಿಗೆಯು ಅರಮನೆಯಿಂದ ಹೊರಡುತ್ತದೆ.

ಅರಮನೆ ಎದುರು ಆರಂಭವಾಗುವ ದಸರಾ ಜಂಬೂ ಸವಾರಿ ಈ ಮೆರವಣಿಗೆ ಸುಮಾರು 5 ಕಿ.ಮೀ ಕ್ರಮಿಸುತ್ತದೆ.  ಇದು ಅರಮನೆಯ ಬಲರಾಮ ದ್ವಾರದ ಮೂಲಕ ಹೊರಟು, ಸಯ್ಯಾಜಿ ರಾವ್ ರಸ್ತೆಯ ಮೂಲಕ ಕೆ.ಆರ್. ವೃತ್ತ ಹಾಗೂ ದೇವರಾಜ ಮಾರುಕಟ್ಟೆಯನ್ನು ದಾಟಿ, ಬನ್ನಿಮಂಟಪ ಮೈದಾನವನ್ನು ತಲುಪುತ್ತದೆ. ಅಂಬಾರಿ ಹೊರುವ ಆನೆಯ ಮುಂದೆ ಸ್ತಬ್ಧಚಿತ್ರಗಳು, ಜಾನಪದ ಕಲಾತಂಡಗಳು, ವಾದ್ಯಗೋಷ್ಠಿಗಳು ಮತ್ತು ಅಲಂಕೃತ ಆನೆಗಳು ಸಾಗುತ್ತವೆ. ಸುಮಾರು 750 ಕೆ.ಜಿ ತೂಕವಿರುವ

 ಮೈಸೂರು ಅಂಬಾರಿಯ (ಚಿನ್ನದ ಅಂಬಾರಿ)  ಚಾಮುಂಡೇಶ್ವರಿ ದೇವಿಯ 

 ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಸಾಗುತ್ತದೆ.

Illustrative map of the Jamboo Savari route, about 5 km from the Palace to Bannimantap. Not to scale.

ಜಂಬೂ ಸವಾರಿಯನ್ನು ಉಚಿತವಾಗಿ ಎಲ್ಲಿ ವೀಕ್ಷಿಸಬಹುದು?

ಜಂಬೂ ಸವಾರಿಯನ್ನು ಅರಮನೆ ಆವರಣದಲ್ಲಿ ವೀಕ್ಷಿಸಲು ಗೋಲ್ಡ್ ಕಾರ್ಡ್ ಬೇಕು. ಆದರೆ ಐದು ಕಿಲೋಮೀಟರ್ ಮೆರವಣಿಗೆಯ ಮಾರ್ಗದಲ್ಲಿ ನಿಂತು ವೀಕ್ಷಿಸುವುದು ಸಂಪೂರ್ಣವಾಗಿ ಉಚಿತವಾಗಿದೆ. ರಸ್ತೆಯ ಎರಡು ಕಡೆಗಳಲ್ಲಿ ನಿಂತು ವೀಕ್ಷಿಸಬಹುದು.   ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಕೆ.ಆರ್. ವೃತ್ತ ಹಾಗೂ ಬನ್ನಿಮಂಟಪದ ನಡುವಿನ ಸಯ್ಯಾಜಿ ರಾವ್ ರಸ್ತೆಯು ಮಧ್ಯಾಹ್ನದ ಆರಂಭದ ವೇಳೆಗೆ ಜನರಿಂದ ತುಂಬಿಕೊಳ್ಳುತ್ತದೆ, ಹಾಗಾಗಿ ಮಧ್ಯಾಹ್ನ 1:00 ಗಂಟೆಯಷ್ಟೊತ್ತಿಗೆ ಅಲ್ಲಿಗೆ ತಲುಪುವುದು ಒಳ್ಳೆಯದು. ಅರಮನೆ ಆವರಣ ಮತ್ತು ಬನ್ನಿಮಂಟಪದ ಗ್ಯಾಲರಿಯಲ್ಲಿರುವ ಆಸನಗಳಿಗೆ ಟಿಕೆಟ್ ಕಡ್ಡಾಯವಾಗಿದೆ 

2026ರಲ್ಲಿ ಚಿನ್ನದ ಅಂಬಾರಿ ಗೌರವ ಯಾವ ಆನೆಗೆ ?

ಸತತ ಆರು ದಸರಾ ಮಹೋತ್ಸವಗಳಲ್ಲಿ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ವಯಸ್ಸಿನ ಕಾರಣಕ್ಕೆ   2026ರ ಆಗಸ್ಟ್ 26 ರಂದು ಸಾಂಪ್ರದಾಯಿಕ ವಿದಾಯ ನೀಡಲಾಯಿತು. ಈ ಬಾರಿ ಅದು ಅರಮನೆಯ ನಿಶಾನೆ ಆನೆ ಗೌರವ ನೀಡಲಾಗಿದೆ. ಸಂಪೂರ್ಣ ತರಬೇತಿ  ನಂತರ ತಜ್ಞರ ಸಲಹೆ ಪಡೆದು,  ಅರಣ್ಯ ಇಲಾಖೆಯು ಅಂಬಾರಿ ಆನೆಯ ಹೆಸರನ್ನು ಅಧಿಕೃತವಾಗಿ ಘೋಷಿಸುತ್ತದೆ. ಅಂತಿಮ ಪಟ್ಟಿಯಲ್ಲಿರುವ ಆನೆಗಳಲ್ಲಿ ಧನಂಜಯ ಮುಂಚೂನಿಯಲ್ಲಿದ್ದಾನೆ.  2026ರ ಆನೆಗಳ ತಂಡದಲ್ಲಿ ದುಬಾರೆ, ಬಳ್ಳೆ, ಮಾಟಿಗೋಡು, ಭೀಮನಕಟ್ಟೆ, ದೊಡ್ಡಹರವೆ ಮತ್ತು ರಾಮಪುರ ಶಿಬಿರಗಳ ಒಟ್ಟು   12 ಆನೆಗಳಿವೆ. ಮೈಸೂರು ದಸರಾ ಆನೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಓದಿರಿ . 

ಪಂಜಿನ ಕವಾಯತು 2026 

ಅಕ್ಟೋಬರ್ 21 ರಂದು ಸಂಜೆ 7  ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತು ಕಾರ್ಯಕ್ರಮದೊಂದಿಗೆ ಮೈಸೂರು ದಸರಾ ಸಂಭ್ರಮ ಮುಕ್ತಾಯಗೊಳ್ಳುತ್ತದೆ. ಅಕ್ಟೋಬರ್ 20 ರಂದು ಸಂಜೆ  7  ಗಂಟೆಗೆ  ನಡೆಯುವ  ಈ ಕವಾಯತಿನಲ್ಲಿ ಅಶ್ವಸೈನ್ಯ (ಮೌಂಟೆಡ್ ಕ್ಯಾವಲ್ರಿ), ಪೊಲೀಸ್ ಮತ್ತು ಅರೆಸೇನಾ ವಾದ್ಯಗೋಷ್ಠಿಗಳು, ಮೋಟಾರ್‌ಸೈಕಲ್ ಸಾಹಸಗಳು, ಲೇಸರ್ ಪ್ರದರ್ಶನ ಮತ್ತು ಸಿಡಿಮದ್ದು ಪ್ರದರ್ಶನ ಇರಲಿದೆ. ಅಕ್ಟೋಬರ್ 21 ರಂದು ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಗೌರವ ರಕ್ಷೆಯನ್ನು ಸ್ವೀಕರಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಮೈಸೂರು ದಸರಾ ಪೆರೇಡ್ ಹಿಂದಿನ ಪರಂಪರೆಯ ಬಗ್ಗೆ   ಇಲ್ಲಿ  ಹೆಚ್ಚಿನ ಮಾಹಿತಿ ಇದೆ.

ಮೈಸೂರು ದಸರೆಯ ನಾಲ್ಕು ದಿನಗಳಂದು (ಅಕ್ಟೋಬರ್ 17, 18, 20 ಮತ್ತು 21) ರಾತ್ರಿ 8 ಗಂಟೆಗೆ ಬನ್ನಿಮಂಟಪ  ಮೈದಾನದಲ್ಲಿ ಡ್ರೋನ್ ಪ್ರದರ್ಶನವು ಬೆಳಕಿನ ಚಿತ್ತಾರ ಮೂಡಿಸಲಿದೆ. ಈ ಬಾರಿ ವಿಶ್ವದಾಖಲೆಯ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 

ಮೈಸೂರು ದಸರಾ:   ಇತರ ಕಾರ್ಯಕ್ರಮಗಳು

ಜಂಬೂ ಸವರಿ  ಹೊರತಾಗಿ, ಮೈಸೂರು ದಸರಾ ಅಂಗವಾಗಿ  ನಗರದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗಿದೆ. ಈ ಪೈಕಿ ಬಹುತೇಕ ಉಚಿತ ಪ್ರವೇಶ ಹೊಂದಿವೆ. 

ಅರಮನೆ ವಿದ್ಯುತ್‌ ದೀಪಾಲಂಕಾರ 

ದಸರಾ ಅವಧಿಯಲ್ಲಿ ಪ್ರತಿದಿನ ಸಂಜೆ 7 ಗಂಟೆಯಿಂದ ಐತಿಹಾಸಿಕ  ಮೈಸೂರು ಅರಮನೆಯನ್ನು  ವಿದ್ಯುತ್‌ ದೀಪಗಳಿಂದ  ಮಿನುಗುವಂತೆ ಮಾಡಲಾಗುತ್ತದೆ  ಮತ್ತು ವಿಜಯದಶಮಿಯಂದು ಮಧ್ಯರಾತ್ರಿಯವರೆಗೆ ಈ ಆಲಂಕಾರಿಕ ವಿದ್ಯುತ್  ದೀಪಗಳು ಬೆಳಗುತ್ತಿರುತ್ತವೆ. ನಗರದಲ್ಲಿ  ೧೪೦ಕಿಲೋ ಮೀಟರ್ ಕ್ಕೂ  ಹೆಚ್ಚು  ಉದ್ದದ  ದೀಪಾಲಂಕಾರ ಮಾಡಲಾಗಿದೆ.  ಅರಮನೆಯ ಹೊರಗಿನಿಂದ ಇದನ್ನು ವೀಕ್ಷಿಸುವುದು ಸಂಪೂರ್ಣವಾಗಿ ಉಚಿತವಾಗಿದೆ. ಇವೆಲ್ಲವೂ ದಸರಾದ ಪ್ರಮುಖ ಆಕರ್ಷಣೆಗಳು. 

ಫಲಪುಷ್ಪ ಪ್ರದರ್ಶನ ಮತ್ತು ಆಹಾರ ಮೇಳ

ಅಕ್ಟೋಬರ್ 11 ರಿಂದ 21 ರವರೆಗೆ ಕುಪ್ಪಣ್ಣ ಉದ್ಯಾನವನದಲ್ಲಿ (ನಿಷಾದ್ ಬಾಗ್) ನಡೆಯುವ ದಸರಾ ಫಲಪುಷ್ಪ ಪ್ರದರ್ಶನವು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ತೆರೆದಿರುತ್ತದೆ. ಇದರ 2026 ರ ಥೀಮ್ ಅಥವಾ ಪ್ರಮುಖ ವಿಷಯ ‘ಪ್ರಜಾಪ್ರಭುತ್ವದ ಹಬ್ಬ’ ಆಗಿದೆ. ಮಹಾರಾಜ ಕಾಲೇಜು ಮೈದಾನದಲ್ಲಿ ಅಕ್ಟೋಬರ್ 11 ರಿಂದ 25 ರವರೆಗೆ ನಡೆಯುವ ಆಹಾರ ಮೇಳವು  ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ  ತೆರೆದಿರುತ್ತದೆ.

ಕಂಬಳ, ಕ್ರೀಡೆ ಮತ್ತು ಯೋಗ ದಸರಾ

ಕರಾವಳಿಯ ಪ್ರಸಿದ್ಧ  ಕೋಣಗಳ ಓಟದ ಸ್ಪರ್ಧೆ “ಕಂಬಳ” ಸ್ಪರ್ಧೆಯು ಇದೆ ಮೊದಲ ಬಾರಿಗೆ ದಸರಾ ಸಂದರ್ಭದಲ್ಲಿ ನಡೆಯಲಿದೆ. ಅಕ್ಟೋಬರ್ 18 ಮತ್ತು 19 ರಂದು ಸಾಟಗಳ್ಳಿಯ  ವಿಟಿಯು (VTU) ಕಾಲೇಜು ಹತ್ತಿರದ ಕ್ರೀಡಾಂಗಣದಲ್ಲಿ ಕಂಬಳ ನಡೆಯಲಿದೆ.  ದಸರಾ ಸಿಎಂ ಕಪ್ (CM Cup) ಕ್ರೀಡಾಕೂಟವು ಅಕ್ಟೋಬರ್ 11 ರಿಂದ 14 ರವರೆಗೆ ನಡೆಯಲಿದೆ. ಯೋಗ ದಸರಾ ದಸರಾದ ಇನ್ನೊಂದು ಆಕರ್ಷಣೆ.  ಯೋಗ ದಸರಾ ಭಾಗವಾಗಿ  ಅಕ್ಟೋಬರ್ 14 ರಂದು ವಿಚಾರಸಂಕಿರಣ, ಅಕ್ಟೋಬರ್ 16 ರಂದು ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆ, ಅಕ್ಟೋಬರ್ 18 ರಂದು ನಂಜನಗೂಡಿನಲ್ಲಿ ಗ್ರಾಮೀಣ ಯೋಗ ದಸರಾ ಮತ್ತು ಅಕ್ಟೋಬರ್ 19 ರ ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ‘ಯೋಗ ಚಾರಣ’ ನಡೆಯಲಿದೆ.

ಪಾರಂಪರಿಕ, ರೈತ, ಮಹಿಳಾ ಮತ್ತು ಮಕ್ಕಳ ದಸರಾ

ಅಕ್ಟೋಬರ್ ೧೫ರಂದು ಟೌನ್ ಹಾಲ್‌ ನಲ್ಲಿ  ಬೆಳಿಗ್ಗೆ 7 ಗಂಟೆಗೆ ಪಾರಂಪರಿಕ ದಸರಾ ಪ್ರಾರಂಭವಾಗುತ್ತದೆ: ಅಕ್ಟೋಬರ್ 15 ರಂದು ಹೆರಿಟೇಜ್ ವಾಕ್ (ಪಾರಂಪರಿಕ ನಡಿಗೆ), ಅಕ್ಟೋಬರ್ 16 ರಂದು ಸೈಕಲ್ ಸವಾರಿ ಮತ್ತು ಅಕ್ಟೋಬರ್ 17 ರಂದು ಟಾಂಗಾ (ಕುದುರೆ ಗಾಡಿ) ಸವಾರಿ ಆಯೋಜಿಸಲಾಗಿದೆ.  ಅಕ್ಟೋಬರ್ 16 ರಿಂದ 18 ರವರೆಗೆ ಜೆ.ಕೆ. ಮೈದಾನದಲ್ಲಿ ನಡೆಯುವ ರೈತ ದಸರಾದಲ್ಲಿ ಎತ್ತಿನಗಾಡಿ ಮೆರವಣಿಗೆ, ಕೃಷಿ ಪ್ರದರ್ಶನ ಮತ್ತು ಹಾಲು ಕರೆಯುವ  ಸ್ಪರ್ಧೆಗಳು ನಡೆಯಲಿವೆ.  ಮಹಿಳಾ ಮತ್ತು ಮಕ್ಕಳ ದಸರಾ ಅಕ್ಟೋಬರ್ 13 ರಿಂದ 16 ರವರೆಗೆ ನಡೆಯಲಿದೆ, ಹಾಗೂ ಮಾನಸಗಂಗೋತ್ರಿಯಲ್ಲಿ ಕವಿಗೋಷ್ಠಿಯು ಅಕ್ಟೋಬರ್ 13 ರಿಂದ 17 ರವರೆಗೆ ನಡೆಯಲಿದೆ.

ದಸರಾ ವಸ್ತು ಪ್ರದರ್ಶನ 

೧೯೮೦ರಲ್ಲಿ ಪ್ರಾರಂಭವಾದ ದಸರಾ ವಸ್ತು  ಪ್ರದರ್ಶನ ದಸರಾದ ಮತ್ತೊಂದು ಪ್ರಮುಖ ಆಕರ್ಷಣೆ.  ಅರಮನೆಯ ಬಳಿಯಿರುವ ವಸ್ತು ಪ್ರದರ್ಶನ ಮೈದಾನದಲ್ಲಿ ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ಇದನ್ನು ಆಯೋಜಿಸುತ್ತದೆ.  ಈ ವಸ್ತು ಪ್ರದರ್ಶನ ಈಗಾಗಲೇ ಆರಂಭವಾಗಿದ್ದು, ಡಿಸೆಂಬರ್ ಕೊನೆಯ ವಾರದವರೆಗೆ ಇದು ನಡೆಯಲಿದೆ. 

ಮೈಸೂರು ದಸರಾ ಟಿಕೆಟ್‌ಗಳು ಮತ್ತು ಗೋಲ್ಡ್ ಕಾರ್ಡ್ 2026

ದಸರಾ ಮಹೋತ್ಸವದ ಹೆಚ್ಚಿನ ಕಾರ್ಯಕ್ರಮಗಳು ಉಚಿತವಾಗಿರುತ್ತವೆ.  ಆದರೆ ಬಲು ಜನಪ್ರಿಯವಾದ  ಐದು ಪ್ರಮುಖ ಕಾರ್ಯಕ್ರಮಗಳಿಗೆ ಮಾತ್ರ ಟಿಕೆಟ್ ಕಡ್ಡಾಯವಾಗಿದ್ದು, ಅಧಿಕೃತ ಟಿಕೆಟಿಂಗ್ ಪಾಲುದಾರರಾದ ‘ಟಿಕೆಟ್‌ ಜೀನಿ’ (TicketGenie) ಮೂಲಕ ಮಾತ್ರವೇ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತದೆ. ಯಾವುದೇ ಭೌತಿಕ ಕೌಂಟರ್‌ಗಳು ಅಥವಾ ಏಜೆಂಟ್‌ಗಳು ಇರುವುದಿಲ್ಲ. ಅಕ್ಟೋಬರ್ 2026 ರಂತೆ ಪ್ರತಿ ವ್ಯಕ್ತಿಗೆ ಅನ್ವಯವಾಗುವ ಆರಂಭಿಕ ಬೆಲೆಗಳು ಕೆಳಗಿನಂತಿವೆ.

Table 3 – Mysore Dasara tickets and Gold Card 2026

TicketDate and gatesWhat it coversPrice (from)
Gold CardValid 11 – 21 OctOne entry each to the Palace, Chamundi Hill and Mysuru Zoo; numbered seat for the Jamboo Savari; Gold Card enclosure at the Torchlight Parade on 21 Oct; Drone Show on the date printed on the cardRs. 6,500
Procession21 Oct; gates 9:30 AM – 12:00 noonNumbered seat in Enclosure I, Palace forecourtRs. 3,500
Torchlight Parade21 Oct; gates 4:00 PM – 6:00 PMTicketed enclosure at Bannimantap, free seatingRs. 1,500
Torchlight Parade, first evening20 Oct; gates 4:00 PM – 6:00 PMEnclosure E at Bannimantap, free seatingRs. 1,500
Drone Show17 or 18 Oct (separate ticket per day); gates 4:00 PM – 6:00 PMFree seating at BannimantapRs. 1,000
Source: mysoredasara.gov.in/tickets, as of October 2026. Prices are per person and are starting prices.

ಮಾಹಿತಿ : ಈ ಕುರಿತ ಹೆಚ್ಚಿನ ಮಾಹಿತಿಗಳು  ಈ ವೆಬ್ ಸೈಟ್ ನಲ್ಲಿ ಲಭ್ಯವಿವೆ

ಮೈಸೂರು ದಸರಾ ಟಿಕೆಟ್‌ಗಳ ಖರೀದಿ ಹೇಗೆ? 

1. ‘ಟಿಕೆಟ್‌ ಜೀನಿ’ (TicketGenie) ಅಧಿಕೃತ ಟಿಕೆಟ್‌ಗಳ ಪುಟ ಅಥವಾ 

ಮೈಸೂರು ದಸರಾ 2026 ರ ಪುಟವನ್ನು ತೆರೆದು ನಿಮಗೆ ಬೇಕಾದ ಕಾರ್ಯಕ್ರಮವನ್ನು ಆಯ್ಕೆಮಾಡಿ.

2. ಸೈನ್ ಇನ್ ಮಾಡಿ, ನಿಗದಿತ ಆಸನಗಳನ್ನು (numbered seats) ಆಯ್ಕೆಮಾಡಿ ಮತ್ತು ಆನ್‌ಲೈನ್ ಮೂಲಕ ಪಾವತಿ ಮಾಡಿ.

3. ನಿಮಗೆ ನೇರವಾಗಿ ಟಿಕೆಟ್ ಸಿಗುವುದಿಲ್ಲ, ಬದಲಿಗೆ ‘ರಿಡೆಂಪ್ಷನ್ ವೌಚರ್’ (redemption voucher) ದೊರೆಯುತ್ತದೆ. ವೌಚರ್‌ನಲ್ಲಿ ಸೂಚಿಸಿರುವಂತೆ ಕಾರ್ಯಕ್ರಮಕ್ಕೂ ಮುಂಚಿತವಾಗಿ ಅದನ್ನು ಭೌತಿಕ ಟಿಕೆಟ್ ಅಥವಾ ಗೋಲ್ಡ್ ಕಾರ್ಡ್‌ನೊಂದಿಗೆ ಬದಲಾಯಿಸಿಕೊಳ್ಳಿ.

4. ಗೇಟ್ ಪ್ರವೇಶಿಸುವಾಗ ಭೌತಿಕ ಟಿಕೆಟ್ ಅಥವಾ ಗೋಲ್ಡ್ ಕಾರ್ಡ್ ಜೊತೆಗೆ ಫೋಟೋ ಐಡಿ (ಗುರುತಿನ ಚೀಟಿ) ಕಡ್ಡಾಯವಾಗಿ ತರಬೇಕು.

ಟಿಕೆಟ್ ಬುಕ್ಕಿಂಗ್ ಮುನ್ನ ನೀವು ತಿಳಿದುಕೊಳ್ಳಲೇ ಬೇಕಾದ ಕೆಲವು ಅಂಶಗಳು 

* ಈ ಟಿಕೆಟ್‌ಗಳು ವೈಯಕ್ತಿಕ ಬಳಕೆಗೆ ಮಾತ್ರವಾಗಿದ್ದು, ಇವುಗಳನ್ನು ಮರುಮಾರಾಟ ಮಾಡಲು ಅಥವಾ ಬೇರೆಯವರಿಗೆ ವರ್ಗಾಯಿಸಲು ಅವಕಾಶವಿರುವುದಿಲ್ಲ. 

* ಪ್ರವೇಶವು ಭದ್ರತಾ ತಪಾಸಣೆಗೆ ಒಳಪಟ್ಟಿರುತ್ತದೆ. ಮಾನ್ಯವಾದ ಟಿಕೆಟ್ ಹೊಂದಿದ್ದರೂ ಸಹ ಪೊಲೀಸರು ಪ್ರವೇಶವನ್ನು ನಿರಾಕರಿಸಬಹುದು.  ಅಂತಹ ಸಂದರ್ಭಗಳಲ್ಲಿ ಯಾವುದೇ ಹಣ ಮರುಪಾವತಿ (refund) ಮಾಡಲಾಗುವುದಿಲ್ಲ.

* ಗೋಲ್ಡ್ ಕಾರ್ಡ್ ಬಳಸಿ ಅರಮನೆ, ಚಾಮುಂಡಿ ಬೆಟ್ಟ ಹಾಗೂ ಮೃಗಾಲಯಕ್ಕೆ ತಲಾ ಒಮ್ಮೆ ಮಾತ್ರ ಪ್ರವೇಶಿಸಬಹುದು.

* ಗೇಟ್‌ಗಳು ನಿಗದಿತ ಸಮಯಕ್ಕೆ ಮುಚ್ಚಲ್ಪಡುತ್ತವೆ: ಮೆರವಣಿಗೆಗೆ ಮಧ್ಯಾಹ್ನ 12 ಗಂಟೆಗೆ ಮತ್ತು ಬನ್ನಿಮಂಟಪದ ಕಾರ್ಯಕ್ರಮಗಳಿಗೆ ಸಂಜೆ 6 ಗಂಟೆಗೆ ಗೇಟ್ ಬಂದ್ ಆಗುತ್ತದೆ.

* ಟಿಕೆಟ್ ಬದಲಾವಣೆ ಮತ್ತು ಮರುಪಾವತಿಯು ‘ಟಿಕೆಟ್‌ ಜೀನಿ’ (TicketGenie) ಕಂಪನಿಯ ನಿಯಮಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.

ಅರಮನೆಯಲ್ಲಿ ಖಾಸಗಿ ದಸರಾ

ಮೈಸೂರು ದಸರಾ ಮಹೋತ್ಸವದ ದಿನಗಳಲ್ಲಿ,  ಮೈಸೂರಿನ  ರಾಜಮನೆತನವು ಅರಮನೆಯ ಒಳಗೆ ಖಾಸಗಿ ದಸರಾವನ್ನು ಆಚರಿಸುತ್ತದೆ. 

ಈ ಆಚರಣೆಗಳು ಭಾನುವಾರ ಆರಂಭವಾದವು. ಇದರಲ್ಲಿ ದೈನಂದಿನ ಪೂಜೆಗಳು, ಸಾಂಪ್ರದಾಯಿಕ ದರ್ಬಾರ್ ಮತ್ತು ಅಕ್ಟೋಬರ್ 20 ರಂದು  ಆಯುಧ ಪೂಜೆ  

ಸೇರಿದಂತೆ ಮಹಾನವಮಿ ಪೂಜೆಗಳು ನಡೆಯುತ್ತವೆ. ಈ ಧಾರ್ಮಿಕ ಆಚರಣೆಗಳಿಗೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಇತ್ತ ಕರ್ನಾಟಕದಾದ್ಯಂತ ಮನೆಗಳಲ್ಲಿಯೂ ಕುಟುಂಬಗಳು ಈ ದಿನಗಳಲ್ಲಿ

 ಬೊಂಬೆ ಹಬ್ಬವನ್ನು  (ದಸರಾ ಗೊಂಬೆ ಪ್ರದರ್ಶನ) ಆಚರಿಸುತ್ತವೆ. 

ಮೈಸೂರು ದಸರಾ ಸಂದರ್ಭಲ್ಲಿ ನಿಮ್ಮ ಭೇಟಿಯನ್ನು ನಿಗದಿಪಡಿಸಿ. 

ಮೈಸೂರನ್ನು ತಲುಪುವುದು ಹೇಗೆ?

ಬೆಂಗಳೂರಿನಿಂದ ಮೈಸೂರು ಸುಮಾರು 140 ಕಿ.ಮೀ ದೂರದಲ್ಲಿದೆ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (ಎನ್‌ಎಚ್‌-275) ಮೂಲಕ ರಸ್ತೆ ಮಾರ್ಗವಾಗಿ  ಸಾಗಿದರೆ ಸರಿಸುಮಾರು ಒಂದೂವರೆ  ಗಂಟೆಗಳಲ್ಲಿ ತಲುಪಬಹುದು. ಮೈಸೂರು ರೈಲು ನಿಲ್ದಾಣಕ್ಕೆ ಎಕ್ಸ್ಪ್ರೆಸ್ ರೈಲುಗಳು  ಸುಮಾರು 2 ಗಂಟೆಗಳಲ್ಲಿ ತಲುಪುತ್ತವೆ. ಮೈಸೂರು-ಬೆಂಗಳೂರು ನಡುವೆ ವಂದೇ ಭಾರತ್ ಹಾಗು ಶತಾಬ್ದಿ ರೈಲು  ಸೇವೆಗಳಿವೆ.  . ಬೆಂಗಳೂರಿನಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ (KSRTC) ನಿಗದಿತವಾಗಿ ಬಸ್  ಸೇವೆ ಒದಗಿಸುತ್ತಿದೆ.  ಮೈಸೂರು ವಿಮಾನ ನಿಲ್ದಾಣವು ನಗರದಿಂದ ಸುಮಾರು 12 ಕಿ.ಮೀ ದೂರದಲ್ಲಿದ್ದು, ಇಲ್ಲಿನಿಂದ ಹೈದರಾಬಾದ್ ಹಾಗು ಚೆನ್ನೈಗಳಿಗೆ  ಸೀಮಿತ ವಿಮಾನ ಸಂಚಾರವಿದೆ.  ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 170 ಕಿ.ಮೀ ದೂರದಲ್ಲಿದ್ದು, ಇದು ಕೆಎಸ್‌ಆರ್‌ಟಿಸಿ ಫ್ಲೈಬಸ್ (Flybus) ಸೌಲಭ್ಯ ಹೊಂದಿದೆ.  ಮೈಸೂರು ದಸರಾ ದಿನಾಂಕಗಳಂದು, ವಿಶೇಷವಾಗಿ ಅಕ್ಟೋಬರ್ 20 ಮತ್ತು 21 ರಂದು ಹೆಚ್ಚಿನ ಜನ ಸಂದಣಿ ಇರುವ ಕಾರಣಕ್ಕೆ ಮುಂಚಿತವಾಗಿಯೇ  ರೈಲು ಟಿಕೆಟ್‌ಗಳನ್ನು ಮತ್ತು ವಸತಿ ಕೊಠಡಿಗಳನ್ನು ಬುಕ್ ಮಾಡುವುದು ಅತ್ಯಗತ್ಯ. 

ವಾಹನ ನಿಲುಗಡೆ, ಶಟಲ್ ಬಸ್‌ಗಳು ಮತ್ತು ಮಾರ್ಗ ಬದಲಾವಣೆ 

ದಸರಾ  ಸಂದರ್ಭದಲ್ಲಿ ಮೈಸೂರು ನಗರದ ಕೇಂದ್ರ ಭಾಗದಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಅಧಿಕೃತ ವಾಹನ ನಿಲುಗಡೆ ಕೇಂದ್ರಗಳಲ್ಲಿ (ಪಾರ್ಕಿಂಗ್ ಹಬ್‌ಗಳು) ನಿಮ್ಮ ವಾಹನಗಳನ್ನು ನಿಲ್ಲಿಸಿ (ಅಕ್ಟೋಬರ್ 2026 ರಂತೆ ಹೆಚ್ಚಿನ ಹಬ್‌ಗಳಲ್ಲಿ ಕಾರಿಗೆ ರೂ. 50 ಮತ್ತು ದ್ವಿಚಕ್ರ ವಾಹನಕ್ಕೆ ರೂ. 20 ಶುಲ್ಕವಿರುತ್ತದೆ) ಅಲ್ಲಿಂದ ಹಬ್ಬದ ಶಟಲ್ ಬಸ್‌ಗಳನ್ನು ಬಳಸಿ. ಈ ಬಸ್‌ಗಳು ಬೆಳಿಗ್ಗೆ 9 ರಿಂದ ರಾತ್ರಿ 11 ರವರೆಗೆ ಪ್ರತಿ 10 ನಿಮಿಷಕ್ಕೊಮ್ಮೆ ಅರಮನೆ, ಬನ್ನಿಮಂಟಪ, ಪ್ರದರ್ಶನ ಮೈದಾನ ಮತ್ತು ಕುಪ್ಪಣ್ಣ ಉದ್ಯಾನವನಕ್ಕೆ ಸಂಚರಿಸುತ್ತವೆ. ಯಾವುದೇ ಟಿಕೆಟ್ ಹೊಂದಿರುವವರಿಗೆ ಶಟಲ್ ಬಸ್‌ಗಳು ಉಚಿತವಾಗಿರುತ್ತವೆ, ಇಲ್ಲದಿದ್ದರೆ ರೂ. 20 ಶುಲ್ಕವಿರುತ್ತದೆ. ಅಕ್ಟೋಬರ್ 21 ರಂದು ಬೆಳಿಗ್ಗೆ 11 ಗಂಟೆಯಿಂದ ಸಯ್ಯಾಜಿ ರಾವ್ ರಸ್ತೆ ಮತ್ತು ಅರಮನೆಯ ಸುತ್ತಮುತ್ತಲಿನ ರಸ್ತೆಗಳನ್ನು ಖಾಸಗಿ ವಾಹನಗಳ ಸಂಚಾರಕ್ಕೆ ಮುಚ್ಚಲಾಗುತ್ತದೆ.

ಸಹಾಯವಾಣಿಗಳು 

 ದಸರಾ ಸಂದರ್ಭದಲ್ಲಿ  ದಿನದ 24 ಗಂಟೆಯೂ ದಸರಾ ಸಹಾಯವಾಣಿ ಸಂಖ್ಯೆ 1077 ಲಭ್ಯವಿರುತ್ತದೆ. ಯಾವುದೇ ತುರ್ತು ಸಂದರ್ಭದಲ್ಲಿ 112 ಗೆ ಡಯಲ್ ಮಾಡಿ.

ಮೈಸೂರು ಸುತ್ತಲಿನ ಪ್ರೇಕ್ಷಣೀಯ ಸ್ಥಳಗಳು 

ದಸರಾ ಭೇಟಿ ಸಂದರ್ಭದಲ್ಲಿ ಸುತ್ತಮುತ್ತಲಿನ  ದೇವಸ್ಥಾನದ ದರ್ಶನಕ್ಕಾಗಿ ಮತ್ತು ನಗರದ ವಿಹಂಗಮ ನೋಟವನ್ನು ಸವಿಯಲು ಚಾಮುಂಡಿ ಬೆಟ್ಟಕ್ಕೆ 

ಭೇಟಿ ನೀಡಬಹುದು.  ಮೈಸೂರಿನ ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳನ್ನು   ಮಾರ್ಗದರ್ಶಿಯೊಂದಿಗೆ 

 ನಗರದಲ್ಲಿ ಸುತ್ತಾಡಬಹುದು.  ಸ್ಥಳೀಯ ಖಾದ್ಯಗಳನ್ನು ಸವಿಯಲು  ಅರಮನೆಯ ಸುತ್ತಮುತ್ತಲಿನ 

ಉಪಾಹಾರ ಗೃಹಗಳಿಗೆ 

ಭೇಟಿ ನೀಡಬಹುದು.  ಹಾಗೂ ಒಟ್ಟಾರೆ ನಗರದ ಪರಿಚಯಕ್ಕಾಗಿ  ಮೈಸೂರು  

ಕುರಿತು ಓದಿ ತಿಳಿದುಕೊಳ್ಳಬಹುದು.

ಪುನರಾವರ್ತಿತ ಪ್ರಶ್ನೆಗಳು: ಮೈಸೂರು ದಸರಾ ದಿನಾಂಕಗಳು, ಟಿಕೆಟ್‌ಗಳು ಮತ್ತು ಜಂಬೂ ಸವಾರಿ 

2026ರ ಮೈಸೂರು ದಸರಾ ದಿನಾಂಕಗಳು ಯಾವುವು?   

2026ರ ಮೈಸೂರು ದಸರಾ  ಅಕ್ಟೋಬರ್ 11, ಭಾನುವಾರದಿಂದ ಅಕ್ಟೋಬರ್ 21, ಬುಧವಾರದವರೆಗೆ ನಡೆಯಲಿದೆ.  ಅಕ್ಟೋಬರ್ 11 ರಂದು ಬೆಳಿಗ್ಗೆ 11:50 ಕ್ಕೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಪೂಜೆಯೊಂದಿಗೆ ಹಬ್ಬವು ಉದ್ಘಾಟನೆಗೊಂಡಿತು, ಮತ್ತು ಅಕ್ಟೋಬರ್ 21 ರಂದು ಜಂಬೂ ಸವಾರಿ ಹಾಗೂ ಪಂಜಿನ ಕವಾಯತಿನೊಂದಿಗೆ ಮುಕ್ತಾಯಗೊಳ್ಳುತ್ತದೆ.

2026ರ ಜಂಬೂ ಸವಾರಿ ಯಾವಾಗ ಮತ್ತು ಯಾವ ಸಮಯದಲ್ಲಿ  ನಡೆಯಲಿದೆ?

ಜಂಬೂ ಸವಾರಿಯು 2026ರ ಅಕ್ಟೋಬರ್ 21, ಬುಧವಾರದಂದು ನಡೆಯಲಿದೆ. ಚಿನ್ನದ ಅಂಬಾರಿಯಲ್ಲಿರುವ ದೇವಿಯ ಮೂರ್ತಿಗೆ ಮಧ್ಯಾಹ್ನ 4:10 ರಿಂದ 4:35 ರವರೆಗೆ ಪುಷ್ಪಾರ್ಚನೆ ನಡೆಯಲಿದ್ದು, ಆ ನಂತರ ಮೆರವಣಿಗೆಯು ಅರಮನೆಯಿಂದ ಬನ್ನಿಮಂಟಪದತ್ತ ಹೊರಡಲಿದೆ. 

ಇತರೆಡೆ ದಸರಾ ಅಕ್ಟೋಬರ್ 20 ರಂದು ಇದ್ದರೂ, ಮೈಸೂರಿನಲ್ಲಿ ವಿಜಯದಶಮಿ ಅಕ್ಟೋಬರ್ 21 ರಂದು ಇರಲು ಕಾರಣವೇನು?

ಮೈಸೂರು ದಸರಾ ದಿನಾಂಕಗಳನ್ನು  ಮೈಸೂರು ಅರಮನೆಯ ಪಂಚಾಂಗದ  ನಿರ್ಧರಿಸಲಾಗುತ್ತದೆ. ಇದರ ಪ್ರಕಾರ 2026ರ ಅಕ್ಟೋಬರ್ 21 ರಂದು ವಿಜಯದಶಮಿ ಬರುತ್ತದೆ. ಆದರೆ ಅನೇಕ ರಾಷ್ಟ್ರೀಯ ಕ್ಯಾಲೆಂಡರ್‌ಗಳು ದಸರಾವನ್ನು ಒಂದು ದಿನ ಮುಂಚಿತವಾಗಿ ಪಟ್ಟಿ ಮಾಡುತ್ತವೆ.

ಮೈಸೂರು ದಸರಾ ದಿನಾಂಕಗಳು ಪ್ರತಿವರ್ಷ ಬದಲಾಗುತ್ತವೆಯೇ?

ಹೌದು. ಮೈಸೂರು ದಸರಾ ದಿನಾಂಕಗಳು ಚಂದ್ರಮಾನ ಪಂಚಾಂಗವನ್ನು  ಅನುಸರಿಸುತ್ತವೆ, ಆದ್ದರಿಂದ ಅವು ಪ್ರತಿವರ್ಷ ಬದಲಾಗುತ್ತವೆ ಮತ್ತು ಸಾಮಾನ್ಯವಾಗಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಬರುತ್ತವೆ. ಮೈಸೂರು ಪಂಚಾಂಗದ ಸಲಹೆ ಪಡೆದ ನಂತರ ಕರ್ನಾಟಕ ಸರ್ಕಾರವು ಇವುಗಳನ್ನು ಘೋಷಿಸುತ್ತದೆ; 2026 ರ ದಿನಾಂಕಗಳನ್ನು ಜುಲೈ ತಿಂಗಳಲ್ಲಿ ಘೋಷಿಸಲಾಗಿತ್ತು.

2026ರಲ್ಲಿ ಮೈಸೂರು ದಸರಾ ಗೋಲ್ಡ್ ಕಾರ್ಡ್ ಬೆಲೆ ಎಷ್ಟು?

ಅಕ್ಟೋಬರ್ 2026ರಲ್ಲಿ  ಗೋಲ್ಡ್ ಕಾರ್ಡ್‌ನ ಬೆಲೆಯು ಪ್ರತಿ ವ್ಯಕ್ತಿಗೆ ರೂ. 6,500 ರಿಂದ ಪ್ರಾರಂಭವಾಗುತ್ತದೆ. ಇದು ಅರಮನೆ, ಚಾಮುಂಡಿ ಬೆಟ್ಟ ಮತ್ತು ಮೃಗಾಲಯಕ್ಕೆ ತಲಾ ಒಂದು ಬಾರಿಯ ಪ್ರವೇಶ, ಜಂಬೂ ಸವಾರಿಗೆ ಕಾಯ್ದಿರಿಸಿದ ಆಸನ, ಪಂಜಿನ ಕವಾಯತು ಮತ್ತು ಒಂದು ಸಂಜೆಯ ಡ್ರೋನ್ ಪ್ರದರ್ಶನಕ್ಕೆ ಪ್ರವೇಶವನ್ನು ಒಳಗೊಂಡಿರುತ್ತದೆ. ಇದನ್ನು ‘ಟಿಕೆಟ್‌ ಜೀನಿ’ (TicketGenie) ಮೂಲಕ ಮಾತ್ರ ಮಾರಾಟ ಮಾಡಲಾಗುತ್ತದೆ.

ಟಿಕೆಟ್ ಇಲ್ಲದೆ ಜಂಬೂ ಸವಾರಿಯನ್ನು ವೀಕ್ಷಿಸಬಹುದೇ?

ಹೌದು. ಕೆ.ಆರ್. ವೃತ್ತದಿಂದ (K.R. Circle) ಬನ್ನಿಮಂಟಪದವರೆಗಿನ ಸಯ್ಯಾಜಿ ರಾವ್ ರಸ್ತೆಯ ಮೆರವಣಿಗೆಯ ಮಾರ್ಗದಲ್ಲಿ ನಿಂತು ವೀಕ್ಷಿಸುವುದು ಸಂಪೂರ್ಣ ಉಚಿತವಾಗಿದೆ. ಉತ್ತಮ ಸ್ಥಳದಲ್ಲಿ ನಿಂತು ವೀಕ್ಷಿಸಲು ಮಧ್ಯಾಹ್ನ 1 ಗಂಟೆಯೊಳಗೆ ಸ್ಥಳಕ್ಕೆ ತಲುಪಿ.

ಮೈಸೂರು ದಸರಾ ಪಂಜಿನ ಕವಾಯತು ಯಾವಾಗ ನಡೆಯಲಿದೆ?

ಪಂಜಿನ ಕವಾಯತು ಮೈಸೂರು ದಸರೆಯ ಕೊನೆಯ ಎರಡು ದಿನಗಳಂದು ನಡೆಯಲಿದೆ.  2026ರ ಅಕ್ಟೋಬರ್ 20 ಮತ್ತು 21 ರಂದು ರಾತ್ರಿ ೭  ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಜರುಗಲಿದೆ. ಈ ಎರಡೂ ಸಂಜೆಗಳ ಯಾವುದೇ ಒಂದು ದಿನದ ಕಾರ್ಯಕ್ರಮದ ಟಿಕೆಟ್ ಬೆಲೆಯು ರೂ. 1,500 ರಿಂದ ಪ್ರಾರಂಭವಾಗುತ್ತದೆ.

2026ರಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತುಕೊಂಡು ಸಾಗುವ ಆನೆ ಯಾವುದು?

ಅಕ್ಟೋಬರ್ 11, 2026 ರಂತೆ, ಅಧಿಕೃತ ವೆಬ್‌ಸೈಟ್‌ನಲ್ಲಿ ಅಂಬಾರಿ ಹೊರುವ ಆನೆಯ ಹೆಸರನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಕಳೆದ ಆರು ವರ್ಷಗಳಿಂದ ಅಂಬಾರಿ ಹೊತ್ತಿದ್ದ ಅಭಿಮನ್ಯು ಅವರು ಅಂಬಾರಿ ಜವಾಬ್ದಾರಿಯಿಂದ ನಿವೃತ್ತರಾಗಿದ್ದು, ವರದಿಗಳ ಪ್ರಕಾರ ಧನಂಜಯ ಅವರು ಮುಂಚೂಣಿಯಲ್ಲಿದ್ದಾರೆ ಎಂದು ಹೆಸರಿಸಲಾಗಿದೆ.

Jolad Rotti:
Related Post