X

ಕರ್ನಾಟಕ ಸರ್ಕಾರದ ಪ್ರಮುಖ ವಿದ್ಯಾರ್ಥಿ ವೇತನ ಯೋಜನೆಗಳು

    Categories: Education

ನಿಮಗೆ ಕರ್ನಾಟಕ ಸರ್ಕಾರದ ವಿದ್ಯಾರ್ಥಿ ವೇತನ ಯೋಜನೆಗಳ ಬಗ್ಗೆ ಒಂದಷ್ಟು ತಿಳಿದುಕೊಳ್ಳಬೇಕಿದೆಯೇ? ನೀವು ಕರ್ನಾಟಕ ಸರ್ಕಾರ ಕೊಡಮಾಡುವ ವಿದ್ಯಾರ್ಥಿವೇತನ ಯೋಜನೆಗಳಿಗೆ ಅರ್ಹರಾಗಿದ್ದೀರೇ? ನೋಡೋಣ ಬನ್ನಿ

ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಜೀವನಾಡಿಯೆಂದೇ ಪರಿಗಣಿತವಾಗಿದೆ. ಪ್ರತಿವರ್ಷ, ಅನೇಕ ಇಲಾಖೆಗಳು ಮತ್ತು ನಿಗಮಗಳು ವಿದ್ಯಾರ್ಥಿ ವೇತನವನ್ನು ವಿವಿಧ ಸ್ಥರಗಳಲ್ಲಿ ವಿತರಿಸುತ್ತವೆ. ಈ ವಿದ್ಯಾರ್ಥಿ ವೇತನಗಳನ್ನು ಬಳಸಿಕೊಂಡು ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ವರ್ಷ, ಲಕ್ಷಾಂತರ ವಿದ್ಯಾರ್ಥಿಗಳ ಬದುಕನ್ನು ಈ ವಿದ್ಯಾರ್ಥಿ ವೇತನಗಳು ಬದಲಾಯಿಸುತ್ತವೆ. ಜೊತೆಗೆ ವಿದೇಶಗಳಲ್ಲಿ ಉನ್ನತ ಅಧ್ಯಯನ ನಡೆಸಲು ಕೂಡ ಈ ವಿದ್ಯಾರ್ಥಿ ವೇತನಗಳು ಅವಕಾಶ ಒದಗಿಸಿಕೊಡುತ್ತವೆ. ವಿವಿಧ ಸರ್ಕಾರಿ ಸಂಸ್ಥೆಗಳು ನೀಡುವ ಕೆಲವು ಜನಪ್ರಿಯ ವಿದ್ಯಾರ್ಥಿವೇತನ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ.

ಇಲ್ಲಿ ಪಟ್ಟಿ ಮಾಡಲಾದ ವಿದ್ಯಾರ್ಥಿವೇತನಗಳ ಜೊತೆಗೆ, ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಕರ್ನಾಟಕ ಸರ್ಕಾರದ ಅಡಿಯಲ್ಲಿ ವಿವಿಧ ಮಂಡಳಿಗಳು ಮತ್ತು ನಿಗಮಗಳು ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿವೇತನಗಳನ್ನುನೀಡುತ್ತಿವೆ. ಅವುಗಳ ಬಗ್ಗೆ ಕಾಲಕಾಲಕ್ಕೆ ಪ್ರಕಟಣೆ ನೀಡಲಾಗುತ್ತದೆ. 

ಬ್ರಾಹ್ಮಣ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸರ್ಕಾರದ ವಿದ್ಯಾರ್ಥಿ ವೇತನಯೋಜನೆಗಳು- 

ಸಂದೀಪನಿ ಶಿಷ್ಯವೇತನ ಯೋಜನೆ 

ಈ ವಿದ್ಯಾರ್ಥಿವೇತನ ಯೋಜನೆಯನ್ನು ಹೊಸದಾಗಿ ರಚನೆಯಾದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು (KSBDB) ಆರಂಭಿಸಿದೆ. ಈ ಮೊತ್ತವು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ತಗಲುವ ವೆಚ್ಚವನ್ನು ಭರಿಸಲು ನೆರವಾಗುತ್ತದೆ.

ಈ ವಿದ್ಯಾರ್ಥಿ ವೇತನವನ್ನು ಈ ಕೆಳಗಿನ ಉದ್ದೇಶಗಳಿಗಾಗಿ ನೀಡಲಾಗುತ್ತದೆ .

  • ಪಠ್ಯಪುಸ್ತಕಗಳವೆಚ್ಚ 
  • ಎಲೆಕ್ಟ್ರಾನಿಕ್ಉಪಕರಣಗಳುಸೇರಿದಂತೆಅಧ್ಯಯನಸಲಕರಣೆಗಳಿಗಾಗಿಪಾವತಿ
  • ಹಾಸ್ಟೆಲ್ ಶುಲ್ಕ 
  • ಸಂಚಾರ ಮತ್ತು ಇತರ   ವೆಚ್ಚಗಳು.

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ವಾರ್ಷಿಕ ಆದಾಯ ರೂ.8 ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರು. ಅರ್ಜಿಯೊಂದಿಗೆ EWS ಪ್ರಮಾಣಪತ್ರ ಮತ್ತು ಬ್ರಾಹ್ಮಣ ಜಾತಿ ಪ್ರಮಾಣಪತ್ರವನ್ನು ಲಗತ್ತಿಸಬೇಕು.

ಎಸ್‌ಎಸ್‌ಎಲ್‌ಸಿ ನಂತರ ಎಲ್ಲಾ ಸರ್ಕಾರಿ ಮತ್ತು ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯಡಿ ಆರ್ಥಿಕ ಸಹಾಯಕ್ಕೆ ಅರ್ಹರಾಗಿರುತ್ತಾರೆ.

ಈ ವಿದ್ಯಾರ್ಥಿ ವೇತನವನ್ನು ಹಲವು ಭಾಗಗಳಾಗಿ ವಿಂಗಡಿಸಲಾಗಿದೆ.  ಶೇ .33 ರಷ್ಟು ಫಲಾನುಭವಿಗಳು ವಿದ್ಯಾರ್ಥಿನಿಯರಾಗಿದ್ದರೆ, ಶೇ .5 ರಷ್ಟು ವಿದ್ಯಾರ್ಥಿ ವೇತನವನ್ನು ದೈಹಿಕ ಅಂಗವಿಕಲರಿಗೆ ಮೀಸಲಿಡಲಾಗುತ್ತದೆ. ಅನಾಥರು ಮತ್ತು ಒಂಟಿ ಪೋಷಕರಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಸಾಂದೀಪಿನಿ  ಶಿಷ್ಯ ವೇತನ ಯೋಜನೆಗೆ ಅಗತ್ಯವಿರುವ ದಾಖಲೆಗಳು

  • EWS ಪ್ರಮಾಣಪತ್ರ
  • ಆಧಾರ್ ಕಾರ್ಡ್ 
  • SSLC/10 ನೇತರಗತಿ ಅಂಕಪಟ್ಟಿ
  • ಮೊದಲ ವರ್ಷದ ಪದವಿ ಕೋರ್ಸ್‌ಗಳಿಗೆ ಪಿಯುಸಿ ನೋಂದಣಿ ಸಂಖ್ಯೆ
  • ಕಳೆದ ವರ್ಷದ ಅಧ್ಯಯನದ ಅಂಕಪಟ್ಟಿ (ಉದಾ: ಮೂರನೇ ವರ್ಷದ ಬಿಎಸ್ಸಿ ವಿದ್ಯಾರ್ಥಿಗೆ, ಅವನ/ಅವಳ ಎರಡನೇ ವರ್ಷದ ಬಿಎಸ್ಸಿ ಅಂಕಪಟ್ಟಿ)
  • ಶುಲ್ಕ ಮರುಪಾವತಿಗೆ ಶುಲ್ಕಪಾವತಿ ರಶೀದಿ
  • ಸಂಸ್ಥೆಯ ಪ್ರಾಂಶುಪಾಲರು ಪ್ರಮಾಣೀಕರಿಸಿದ ಅಧ್ಯಯನ ಪ್ರಮಾಣ ಪತ್ರ
  • ವಿಶೇಷ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ವಿಶಿಷ್ಟ ಅಂಗವೈಕಲ್ಯಕಾರ್ಡ್

ಯೋಜನೆ ಕುರಿತ ಹೆಚ್ಚಿನ ಮಾಹಿತಿಗೆ  ವಿದ್ಯಾರ್ಥಿಗಳು ಮತ್ತು ಕುಟುಂಬ ಸದಸ್ಯರು postmatrichelp@karnataka.gov.inಗೆ ಬರೆಯಬಹುದು. 

ಈ ವಿದ್ಯಾರ್ಥಿ ವೇತನ ಕುರಿತ ಹೆಚ್ಚಿನ ಮಾಹಿತಿಗೆ ಇಲ್ಲಿ  ಕ್ಲಿಕ್ ಮಾಡಿರಿ 

ರೈತರ ಮಕ್ಕಳಿಗೆ ಕರ್ನಾಟಕ ಸರ್ಕಾರದ ವಿದ್ಯಾರ್ಥಿ ವೇತನ ಕಾರ್ಯಕ್ರಮ

ಆಗಸ್ಟ್‌ನಲ್ಲಿ ಕರ್ನಾಟಕ ಸರ್ಕಾರವು ರೈತರ ಕುಟುಂಬಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಪರಿಚಯಿಸಿತು. ಈ ವಿದ್ಯಾರ್ಥಿ ವೇತನದ ಮುಖ್ಯ ಉದ್ದೇಶವೆಂದರೆ ಮಣ್ಣಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ನೆರವು ನೀಡುವುದು. 

ಈ ಯೋಜನೆಯನ್ನು  2021-22 ರ ರಾಜ್ಯ   ಬಜೆಟ್   ಆಗಿನ ಸಿಎಂ   ಬಿ ಎಸ್ ಯಡಿಯೂರಪ್ಪ  ಘೋಷಿಸಿದ್ದರು. ಈ  ಯೋಜನೆಯಡಿ, ಎಸ್‌ಎಸ್‌ಎಲ್‌ಸಿ/  ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿವಿಧ ಕೋರ್ಸ್‌ಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಈ ವಿದ್ಯಾರ್ಥಿವೇತನದ ವಿಶಿಷ್ಟ ಲಕ್ಷಣವೆಂದರೆ ಎಲ್ಲಾ ಹಂತಗಳಲ್ಲಿ, ವಿದ್ಯಾರ್ಥಿನಿಯರು ಮತ್ತು ಇತರ ವರ್ಗದ ವಿದ್ಯಾರ್ಥಿಗಳು, ಪುರುಷ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ವಿದ್ಯಾರ್ಥಿವೇತನಕ್ಕೆ ಹೋಲಿಸಿದರೆ ರೂ.500 ನ್ನು ಹೆಚ್ಚುವರಿಯಾಗಿ ಪಡೆಯುತ್ತಾರೆ. 

ವಿದ್ಯಾರ್ಥಿ ವೇತನದ ಮೊತ್ತ

ವಿದ್ಯಾರ್ಥಿ ವೇತನದ ಮೊತ್ತ ಪಿಯುಸಿ, ಐಟಿಐ, ಡಿಪ್ಲೊಮಾಗಳಿಗೆ ರೂ .2,500ರಿಂದ ಆರಂಭವಾಗುತ್ತದೆ ಮತ್ತು ಬಿ.ಇ, ಬಿ ಟೆಕ್, ಹಾಗು ವೈದ್ಯಕೀಯ  ವಿದ್ಯಾರ್ಥಿಗಳಿಗೆ ರೂ.10,000 ಗರಿಷ್ಠ ವಿದ್ಯಾರ್ಥಿ ವೇತನವನ್ನು ನಿಗದಿಪಡಿಸಲಾಗಿದೆ. ವಿದ್ಯಾರ್ಥಿ ವೇತನದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯವಿದೆ.

ಕರ್ನಾಟಕ ಸರ್ಕಾರದ ವಿದ್ಯಾರ್ಥಿ ವೇತನ ಕಾರ್ಯಕ್ರಮ – ಇಲಾಖೆವಾರು ವಿದ್ಯಾರ್ಥಿ ವೇತನಗಳು

ಕರ್ನಾಟಕ ಸರ್ಕಾರ ವಿವಿಧ ವಿದ್ಯಾರ್ಥಿ ವೇತನ ಯೋಜನೆಗಳನ್ನು ನಿರ್ವಹಿಸಲು ಮೀಸಲಾದ ವೆಬ್‌ಸೈಟ್ಅನ್ನು ಅಭಿವೃದ್ಧಿಪಡಿಸಿದೆ. ಎಲ್ಲಾ ವಿದ್ಯಾರ್ಥಿ ವೇತನ ಯೋಜನೆಗಳು, ಅರ್ಹತೆ, ಅರ್ಜಿಸಲ್ಲಿಸುವ ವಿಧಾನ ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ. ವಿವರಗಳನ್ನು ಪಡೆಯಲು ವಿದ್ಯಾರ್ಥಿಗಳು ಇಲ್ಲಿ ಕ್ಲಿಕ್    ಮಾಡಬಹುದು.

ಪ್ರಸ್ತುತ ಅನೇಕ ಇಲಾಖೆಗಳು ವಿಭಿನ್ನ ವಿದ್ಯಾರ್ಥಿ ವೇತನಗಳನ್ನು ನೀಡುತ್ತಿವೆ.  ಈ ವಿದ್ಯಾರ್ಥಿ ವೇತನಗಳ   ವಿವರಗಳು ಈ ಕೆಳಗಿನಂತಿವೆ:

ಸಮಾಜ ಕಲ್ಯಾಣ ಇಲಾಖೆಯಿಂದ ದೊರೆಯುವ ವಿದ್ಯಾರ್ಥಿವೇತನ

  • ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ  
  • ಪರಿಶಿಷ್ಟ ಜಾತಿಗೆ ಸೇರಿದ  ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ರೂ. 8 ಲಕ್ಷ ಶುಲ್ಕದವರೆಗಿನ ಉನ್ನತ ಶಿಕ್ಷಣವನ್ನು ಪಡೆಯಲು ಹಣಕಾಸಿನ ನೆರವು (ಕೋರ್ಸ್ ಶು ಲ್ಕರೂ. 8 ಲಕ್ಷದಿಂದ 15 ಲಕ್ಷದವರೆಗೆ ಇದ್ದರೆ ಶುಲ್ಕದ  50%).

ಎಸ್‌ಟಿ ಕಲ್ಯಾಣ ಇಲಾಖೆ

  •  ಪರಿಶಿಷ್ಟ ಪಂಗಡ/ವರ್ಗದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ  

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿವೇತನಗಳು

ವಿದ್ಯಾಸಿರಿ- ಆಹಾರ ಮತ್ತು ವಸತಿ ವಿದ್ಯಾರ್ಥಿವೇತನ ಯೋಜನೆ

  • ಮಾಸಿಕರೂ.1,500 ಸ್ಟೈಫಂಡ್ ಅನ್ನು ನೇರವಾಗಿ ಉಳಿಯಲು ಹಾಸ್ಟೆಲ್‌ಗಳನ್ನು ಪಡೆಯಲಾಗದ ವಿದ್ಯಾರ್ಥಿಗಳ ಖಾತೆಗೆ ವರ್ಗಾಯಿಸಲಾಗುತ್ತದೆ
  •  8 ನೇ ತರಗತಿಯ ನಂತರದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು
  •   ಒಬಿಸಿ ವರ್ಗದ ವಿದ್ಯಾರ್ಥಿಗಳಿಗೆ  ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ  

·        ಉನ್ನತ ಶಿಕ್ಷಣ ಕೋರ್ಸ್‌ಗಳ ಶುಲ್ಕ ಮರುಪಾವತಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

  •  ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ  ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ  
  • ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ  ಮೆರಿಟ್ ಕಮ್ ಮೀನ್ಸ್   ವಿದ್ಯಾರ್ಥಿವೇತನ

ತಾಂತ್ರಿಕ ಶಿಕ್ಷಣ ಇಲಾಖೆ

  •         ಎಸ್‌ಸಿ/ ಎಸ್‌ಟಿ ವಿದ್ಯಾರ್ಥಿಗಳು ಪಾವತಿಸಿದ ಶುಲ್ಕವನ್ನು ಇಲಾಖೆ ಮರುಪಾವತಿಸುತ್ತಿದೆ

ವೈದ್ಯಕೀಯಶಿಕ್ಷಣಇಲಾಖೆ

  •         ಎಸ್‌ಸಿ/ಎಸ್‌ ಟಿವಿದ್ಯಾರ್ಥಿಗಳು ಪಾವತಿಸಿದ ಶುಲ್ಕವನ್ನು ಇಲಾಖೆಯು ಮರುಪಾವತಿಸುತ್ತಿದೆ.

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಯನ್ನು ಕಾರ್ಮಿಕರ ಅಭಿವೃದ್ದಿಗಾಗಿ ಸ್ಥಾಪಿಸಲಾಗಿದೆ. ಈ ಮಂಡಳಿ ನಾನಾ ಕಾರ್ಯಕ್ರಮಗಳನ್ನು ಜಾರಿಗೆಗೊಳಿಸಿದೆ. ಅದರಲ್ಲಿ ಮುಖ್ಯವಾದುದು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಯೋಜನೆ. ಈ ಯೋಜನೆ  ಅಸಂಘಟಿತ  ಕಾರ್ಮಿಕರ ಕುಟುಂಬಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ವಿವಿಧ ತರಗತಿಗಳಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಸೌಲಭ್ಯ ದೊರೆಯುತ್ತದೆ.

ವಿದ್ಯಾರ್ಥಿ ವೇತನ ಮೊತ್ತ- ವರ್ಷಕ್ಕೆ

  • ಪ್ರೌಢಶಾಲೆ (8 ರಿಂದ10 ನೇತರಗತಿಯವರೆಗೆ): ರೂ .3,000
  • ಪಿಯುಸಿ/ ಐಟಿಐ/ ಡಿಪ್ಲೊಮಾ/ ಟಿಸಿಹೆಚ್‌: ರೂ. 4,000
  • ಪದವಿಕೋರ್ಸ್‌ಗಳು: ರೂ. 5,000
  • ಸ್ನಾತಕೋತ್ತರ ಕೋರ್ಸ್‌ಗಳು: ರೂ. 6,000
  • ಎಂಜಿನಿಯರಿಂಗ್/ ವೈದ್ಯಕೀಯ: ರೂ. 10,000

ಅರ್ಹತೆ: ಹಿಂದಿನ ವರ್ಷದ ಅಂತಿಮ ಪರೀಕ್ಷೆಯಲ್ಲಿ ಸಾಮಾನ್ಯ ಅರ್ಹತೆಯ ವಿದ್ಯಾರ್ಥಿಗಳು 50% ಮತ್ತು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು 45% ಅಂಕ ಗಳಿಸಿರಬೇಕು. ಎಲ್ಲಾ ವಿದ್ಯಾರ್ಥಿ ವೇತನ ಯೋಜನೆಗಳ ಲಾಭ ಪಡೆಯಲು, ವಿದ್ಯಾರ್ಥಿಗಳು  ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ವಿದ್ಯಾರ್ಥಿಗಳು ತುಂಬಿದ ಅರ್ಜಿಗಳನ್ನು  ಆಧಾರ್ ಸಂಖ್ಯೆಯೊಂದಿಗೆ  ತಮ್ಮ ಸಲ್ಲಿಸಬೇಕು. ಅರ್ಜಿ ನಮೂನೆಗಳು ಇಲ್ಲಿ ಲಭ್ಯವಿವೆ.

Jolad Rotti:
Related Post