X

ಇ ಖಾತಾ: ಇದು ಭೌತಿಕ ದಾಖಲೆಯಷ್ಟೇ ಸ್ವೀಕಾರಾರ್ಹ

ಬೆಂಗಳೂರು: ಸ್ವಂತ ಮನೆ/ ಅಪಾರ್ಟ್ಮೆಂಟ್ ಎಲ್ಲರ ಕನಸು. ಅದರಲ್ಲೂ ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಸ್ವಂತ ಸೈಟ್ ಹೊಂದಬೇಕು ಎಂಬ ಕನಸು ಸದಾ ಇರುತ್ತದೆ. ಬೆಂಗಳೂರು ನಗರದಲ್ಲಿ ಸ್ವಂತ ಸೈಟ್ ಖರೀದಿಸಲು ಇಚ್ಛಿಸುವವರು ಈ ಲೇಖನ ಓದಲೇಬೇಕು.   ಆಸ್ತಿಗೆ ಸಂಬಂಧಿಸಿದ  ವಹಿವಾಟುಗಳಿಗೆ ಅತ್ಯಗತ್ಯ  ದಾಖಲಾತಿ ಈ  ಆಗಿರುವ  ಖಾತಾ ಬಗ್ಗೆ ನೀವು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕು.   ಈ ದಾಖಲಾತಿ ಪಾತ್ರವನ್ನು ಸುಭದ್ರಗೊಳಿಸಲು  ಹಾಗು ಯಾರು ಮೋಸ ಮಾಡದಂತೆ ಮಾಡಲು ರಾಜ್ಯ ಸರಕಾರ ಅನೇಕ ಹೊಸ ಯೋಜನೆಗಳು, ಕಾನೂನುಗಳು ಮತ್ತು ನೀತಿಗಳನ್ನು  ಪರಿಚಯಿಸಿದೆ.  ಆಸ್ತಿ ಖರೀದಿದಾರ ಅಥವಾ ಮಾರಾಟಗಾರರಾಗಿ, ನೀವು ಎಲ್ಲಾ ಆಸ್ತಿ-ಸಂಬಂಧಿತ ದಾಖಲಾತಿಗಳ ಬಗ್ಗೆ  ತಿಳಿದುಕೊಂಡಿರಬೇಕು. ಈ ದಾಖಲಾತಿಗಳ ಪೈಕಿ ಈಗ ಅತಿ ಪ್ರಾಮುಖ್ಯವಾಗಿರುವುದು ಇ – ಖಾತಾ.  ಈ  ಇ- ಖಾತಾ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

ಖಾತಾ ದಾಖಲೆ ಹಾಗು ಅದರ ಪ್ರಾಮುಖ್ಯತೆ 

ಖಾತಾ ಪತ್ರ ಎಂಬುದು ನಮ್ಮ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಮ್ ಪಿ )  ಸೇರಿದಂತೆ ಕರ್ನಾಟಕ ರಾಜ್ಯದೆಲ್ಲೆಡೆ  ಒಂದು ಆಸ್ತಿಯ ಮಾಲೀಕತ್ವ ನಿರ್ಣಯಿಸುವ ಕಾನೂನು ದಾಖಲೆಯಾಗಿದೆ. ಇದು ಆಸ್ತಿಯ ಮಾಲೀಕರನ್ನು ಗುರುತಿಸುತ್ತದೆ ಮತ್ತು ಕಟ್ಟಡ ಅಥವಾ ಪ್ಲಾಟ್‌ನ ಗಾತ್ರ, ಅದು ಎಲ್ಲಿದೆ, ಪ್ಲಾಟ್‌ಗೆ ಅಂದಾಜು ಆಸ್ತಿ ತೆರಿಗೆ ಇತ್ಯಾದಿ ಸೇರಿದಂತೆ ಇತರ ಸಂಬಂಧಿತ ಮಾಹಿತಿಯನ್ನು ಒಳಗೊಂಡಿದೆ. ಈ ಪತ್ರ, ಸರಕಾರಿ ದಾಖಲೆಯಾಗಿದೆ. ಆಸ್ತಿ ಮಾರಾಟ, ವಿಭಜನೆ, ಹೀಗೆ ಎಲ್ಲ ರೀತಿಯ ಪ್ರಕ್ರಿಯೆಗಳಿಗೂ ಈ ಪತ್ರ ಅತ್ಯಂತ ಅಗತ್ಯ. 

ನೀವು ನಿಮಗೆ ಸೇರಿದ ಜಾಗದಲ್ಲಿ  ಕಟ್ಟಡ ಪರವಾನಗಿಗಾಗಿ ಅರ್ಜಿ ಸಲ್ಲಿಸಲು, ಅಥವಾ  ಅದನ್ನು ಮಾರಾಟ ಮಾಡಲು ಯೋಜಿಸುತ್ತಿದ್ದರೆ, ನಿಮಗೆ ಈ ದಾಖಲೆ ಅತಿ ಮುಖ್ಯವಾದುದು.  ಇದರ ಜೊತೆಗೆ, ನಲ್ಲಿ ನೀರು ಮತ್ತು ವಿದ್ಯುತ್ ಸಂಪರ್ಕ,  ಬ್ಯಾಂಕ್ ಸಾಲ ಪಡೆಯಲು ಇದು ಅಗತ್ಯ. 

ಖಾತೆಗಳಲ್ಲಿನ ವಿಧಗಳು 

ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ   ಆಸ್ತಿ ಗೆ ಸಂಬಂಧಿಸಿದಂತೆ  ಎರಡು ವಿಧದ ಖಾತೆಗಳನ್ನು ನೋಡ ಬಹುದಾಗಿದೆ.  ಒಂದು  ‘ಎ’ ಖಾತಾ ಮತ್ತು ‘ಬಿ’ ಖಾತಾ.  ಈ ಎರಡು ಖಾತೆಗಳು ಸಕ್ರಮ ಖಾತೆಗಳೇ. ಆದರೆ ಅದರಲ್ಲಿ ಸ್ವಲ್ಪ ವಿಭಿನ್ನತೆಗಳಿವೆ. 

ಎ ಖಾತೆ ಎಂದರೆ, ಒಂದು ಆಸ್ತಿಗೆ ಸಂಬಂಧಿಸಿದಂತೆ  ಅಗತ್ಯವಿರುವ ಎಲ್ಲಾ ಸರ್ಕಾರಿ ತೆರಿಗೆ ನಿಯಮಗಳು ಮತ್ತು ಕಟ್ಟಡದ ಉಪ-ಕಾನೂನುಗಳನ್ನು  ಪಾಲನೆ ಮಾಡಿರಬೇಕು. ಅವುಗಳಿಗೆ   ‘ಎ’ ಖಾತಾ ನೀಡಲಾಗುತ್ತದೆ. ಮತ್ತೊಂದೆಡೆ ‘ಬಿ’ ಖಾತಾ ಎಂಬುದು ಬಾಕಿ ಇರುವ ತೆರಿಗೆಗಳನ್ನು ಹೊಂದಿರುವ ಆಸ್ತಿಗಳಿಗೆ ನೀಡಲಾದ ಪ್ರಮಾಣಪತ್ರವಾಗಿದೆ. ಇದರಥ ಈ ಆಸ್ತಿಗೆ ಸಂಬಂಧಿಸಿದಂತೆ ತೆರಿಗೆ ಹಾಗು ಕಟ್ಟಡ ನಿಯಮಗಳನ್ನು ಪಾಲಿಸಲಾಗಿಲ್ಲ ಎಂದರ್ಥ. 

ಮೇಲಿನ ವಿವರಣೆಯಿಂದ ನಮಗೆ ತಿಳಿದು ಬರುವ ಅಂಶವೆಂದರೆ,   ಆಸ್ತಿ ಒಡೆಯರು ಅಥವಾ ನಾಗರಿಕರು,  ‘ಬಿ’ ಖಾತಾ ಒಂದನ್ನು ಹೊಂದುವುದಕ್ಕೆ ಹೋಲಿಸಿದರೆ ‘ಎ’ ಖಾತಾ ಆಸ್ತಿಯನ್ನು ಹೊಂದುವುದು ಹೆಚ್ಚು ಅನುಕೂಲಕರವಾಗಿದೆ. ಎ ಖಾತಾ ಆಸ್ತಿಗಳು ದುಬಾರಿ ಕೂಡ. ಏಕೆಂದರೆ, ಅದರಲ್ಲಿ ಹೆಚ್ಚಿನ ತಲೆನೋವಿರುವುದಿಲ್ಲ . ಆದಾಗ್ಯೂ, ನೀವು ‘ಬಿ ‘ ಖಾತಾ ಆಸ್ತಿಯನ್ನು ಹೊಂದಿದ್ದರೆ, ಚಿಂತಿಸುವ ಅಗತ್ಯವೇನಿಲ್ಲ.  ಏಕೆಂದರೆ ನೀವು ಅಗತ್ಯ  ಶುಲ್ಕವನ್ನು ಪಾವತಿಸುವ ಮೂಲಕ ಮತ್ತು ಎಲ್ಲಾ ಸಂಬಂಧಿತ ದಾಖಲೆಗಳನ್ನು ಸಲ್ಲಿಸುವ ಮೂಲಕ “ಎ’ ಖಾತಾಗೆ ನಿಮ್ಮ ಆಸ್ತಿಯನ್ನು ಮೇಲ್ದರ್ಜೆಗೇರಿಸಬಹುದು 

“ಈ” ಖಾತೆ ಹಾಗು ಅದರ ಪ್ರಯೋಜನಗಳು 

ಈ ಖಾತೆಗೂ, ಎ, ಬಿ, ಖಾತೆಗಳ ನಡುವಣ ಏನು ಸಂಬಂಧ ಇಲ್ಲ. ಬದಲಿಗೆ, ಇದಕ್ಕೆ ಹೆಚ್ಚುವರಿ ಖರ್ಚುಗಳು ಇಲ್ಲ. ಇದರ ಅಗತ್ಯತೆ ಇಲ್ಲವಾದರೂ, ತಮ್ಮ ಆಸ್ತಿ ರಕ್ಷಣೆ ದೃಷ್ಟಿಯಿಂದ, ಈ ಖಾತೆ ಪಡೆದುಕೊಳ್ಳುವುದು ಉತ್ತಮ. ಹಾಗಾದರೆ ಈ “ಈ”   ಖಾತೆ ಎಂದರೇನು?  ನಿಮಗೆ ಇಲ್ಲಿ ಈ ಬಗ್ಗೆ ಸಂಪೂರ್ಣ ವಿವರ ಒದಗಿಸುತ್ತೇವೆ.

ಈ ಖಾತೆ ಎಂದರೆ, ಇಲೆಕ್ಟ್ರಾನಿಕ್ ಖಾತಾ ಎಂದರ್ಥ.  ಅಂದರೆ ನಿಮ್ಮ ಆಸ್ತಿ ದಾಖಲಾತಿಯನ್ನು  ಆನ್‌ಲೈನ್‌ನಲ್ಲಿ ಸಲ್ಲಿಸುವುದು. 

ಇದು ಡಿಜಿಟಲ್ ಯುಗ. ಈಗ ತಂತ್ರಜ್ಞಾನದ ಪ್ರಗತಿಯೊಂದಿಗೆ, ನಿಮ್ಮ ಆಸ್ತಿಯನ್ನು ಇನ್ನಷ್ಟು ಸುಭದ್ರಗೊಳಿಸಲು ಈ ಮೂಲಕ ಸಾಧ್ಯವಿದೆ.   ನೀವು ಈಗ ಬಿಬಿಎಂಪಿ ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡುವ ಮೂಲಕ ಫೈಲ್ ಮಾಡಬಹುದು.

ಇದನ್ನು ಸಲ್ಲಿಸಲು ಒಂದು ಪ್ರಕ್ರಿಯೆಯನ್ನು ಬಿಬಿಎಂಪಿ  ನಿಗದಿ ಪಡಿಸಿದೆ. ಮೊದಲಿಗೆ, ಆಸ್ತಿ ಮಾಲೀಕರು 

ಆಸ್ತಿ ಗುರುತಿನ ಸಂಖ್ಯೆ (PID) ಸಂಖ್ಯೆಯನ್ನು  ಪಡೆಯಬೇಕು.  ಇದು ಬೆಂಗಳೂರು ಮಹಾನಗರ ಪಾಲಿಕೆ (BMP) ಅಡಿಯಲ್ಲಿ ನೋಂದಾಯಿಸಲ್ಪಟ್ಟ ಆಸ್ತಿಗಳನ್ನು ಒಳಗೊಂಡಿರುತ್ತದೆ. ಅದನ್ನು ಬಳಸಿಕೊಂಡು ಈಗ ಪ್ರತಿಯೋರ್ವರೂ ತಮ್ಮ ಈ ಖಾತೆಯನ್ನು ನೋಂದಾಯಿಸಿಕೊಳ್ಳ ಬಹುದು. 

ಇದೀಗ   ಕರ್ನಾಟಕ ರಾಜ್ಯ ಸರ್ಕಾರವು ಸಾಧ್ಯವಿರುವ ಎಲ್ಲ ಭೂಮಿ ಸಂಬಂಧಿತ ಖಾತೆಗಳನ್ನು ಆನ್‌ಲೈನ್‌ನಲ್ಲಿ  ನೋಂದಾಯಿಸಿಕೊಳ್ಳಬಹುದು.  ಈ ಪ್ರಕ್ರಿಯೆ ಪೂರ್ಣಗೊಳ್ಳಲು ಹಲವು ಸಮಯ ಬೇಕಾಗಬಹುದು.  ಆದರೆ ಈ ಡಿಜಿಟಲೀಕರಣ ಪ್ರಕ್ರಿಯೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.  ಈಗ ಬೆಂಗಳೂರು, ಮೈಸೂರು ಸೇರಿದಂತೆ ಹಲವಾರು ನಗರಗಳಲ್ಲಿ  ಈ  PID ಸಂಖ್ಯೆಯನ್ನು  ಸಮಸ್ಯೆ ಇಲ್ಲದ ಆಸ್ತಿಗಳಿಗೆ ನೀಡಲಾಗಿದೆ. ಈ ಸಂಖ್ಯೆ ಬಳಸಿಕೊಂಡು, ಆಸ್ತಿ ಒಡೆಯರು  ತಮ್ಮ  ತೆರಿಗೆಗಳನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದು ಮತ್ತು ಅವರಿಗೆ  ಬೇಕಾದಾಗ ರಸೀದಿಗಳನ್ನು ಪಡೆಯಬಹುದು. ನಿಮ್ಮ ಬಳಿ ಪಿಐಡಿ ಸಂಖ್ಯೆ ಇಲ್ಲದಿದ್ದರೆ, ನೀವು ಹತ್ತಿರದ ಬಿಬಿಎಂಪಿ ವಾರ್ಡ್ ಕಚೇರಿಯನ್ನು ಸಂಪರ್ಕಿಸಬಹುದು. ಉಳಿದ ನಗರಗಳಲ್ಲಿ ಸಂಬಂಧಿಸಿದ ಕಂದಾಯ ಇಲಾಖೆಯನ್ನು ಸಂಪರ್ಕಿಸಬಹುದು. 

ಬೆಂಗಳೂರು ಒನ್ ಮೂಲಕ  “ಈ” ಖಾತೆ ಪಡೆಯುವುದು ಹೇಗೆ?

ಬೆಂಗಳೂರಿನಲ್ಲಿ 

ಬಿಬಿಎಂಪಿ ಮತ್ತು ರಾಜ್ಯ ಇ-ಆಡಳಿತ ಇಲಾಖೆ ಗಳು  ಖಾತಾ ವರ್ಗಾವಣೆ  ಪ್ರಕ್ರಿಯೆ  ವಿಧಾನವನ್ನು ಸರಳಗೊಳಿಸಿವೆ. ಆಸ್ತಿ ಮಾಲೀಕರಿಗೆ ಮಧ್ಯವರ್ತಿಗಳಿಂದ ಕಿರುಕುಳವಾಗದಂತೆ ನೋಡಿಕೊಳ್ಳಲು ಇದು ಸಹಕಾರಿಯಾಗಿದೆ. ಮಾತ್ರವಲ್ಲದೆ ಭ್ರಷ್ಟಾಚಾರವನ್ನು ನಿಗ್ರಹಿಸಲು ಮತ್ತು ಸುಗಮ ಮತ್ತು ತೊಂದರೆ-ಮುಕ್ತ ಸೇವೆಯನ್ನು ಖಚಿತಪಡಿಸಿಕೊಳ್ಳಲು ಕೂಡ ಇದು ನೆರವಾಗಿದೆ. 

ನೀವು ಇದಕ್ಕಾಗಿ ಮಾಡಬೇಕಿರುವುದು ಇಷ್ಟೇ.  ಕರ್ನಾಟಕ ಸರಕಾರದ ಸಕಾಲ  ಸೇವೆಯನ್ನು ಬಳಸಿಕೊಂಡು ಈ ಖಾತಾ ವರ್ಗಾವಣಗೆ  ವರ್ಗಾವಣೆಗಳಿಗೆ ಅರ್ಜಿ ಸಲ್ಲಿಸಬಹುದು. ಇದಕ್ಕೆ ಸರಕಾರ ೩೦ ದಿನಗಳ  ಅವಧಿ ನಿಗದಿ ಪಡಿಸಿದೆ. ಈ ಅರ್ಜಿ   ಸಲ್ಲಿಕೆ ಮಾಡಲು ನೀವು ನಿಮ್ಮ ಹತ್ತಿರದ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಬಹುದು ಅಥವಾ ಸಕಾಲ ವೆಬ್ ಸೈಟ್  ಗೆ ಲಾಗ್ ಇನ್ ಮಾಡಬಹುದು. ಭರ್ತಿ ಮಾಡಿದ ಅರ್ಜಿ ನಮೂನೆಯ ಜೊತೆಗೆ, ನೀವು ಕೆಲವು ದಾಖಲೆಗಳನ್ನು ಕೂಡ ಸಲ್ಲಿಸಬೇಕಾಗುತ್ತದೆ. 

ಸುರಕ್ಷಿತ ಪ್ರಕ್ರಿಯೆ 

ಇನ್ನು ಈ ಖಾತೆ ವರ್ಗಾವಣೆ ಪ್ರಕ್ರಿಯೆಯನ್ನು ಸರಕಾರ ಹಲವು ಸುರಕ್ಷಾ ಪ್ರಕ್ರಿಯೆ ಮೂಲಕ ಜಾರಿಗೆ ತಂದಿದೆ. ಈ ವರ್ಗಾವಣೆಯಲ್ಲಿ ಯಾವುದೇ ಅಪಾಯಗಳಿಲ್ಲ ಹಾಗು ಸಂಚು ನಡೆಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸಕ್ಕೆ ಒಂದು-ಬಾರಿಯ ಪಾಸ್‌ವರ್ಡ್ (OTP) ಅನ್ನು ಸಹ ಕಳುಹಿಸಿ, ದೃಢೀಕರಣ ಪ್ರಕ್ರಿಯೆ ನಡೆಸಲಾಗುತ್ತದೆ. ಅರ್ಜಿ ಮತ್ತು ದಾಖಲೆಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿದ ನಂತರ, ಸಕಾಲ ಸ್ವೀಕೃತಿ ಸಂಖ್ಯೆಯನ್ನು ನೀಡಲಾಗುತ್ತದೆ.  ಇತರ ಸರ್ಕಾರಿ ಅರ್ಜಿಗಳಂತೆ  ನಿಯಮಿತ ಪಠ್ಯ ಸಂದೇಶಗಳನ್ನು ನಿಮಗೆ ಕಳುಹಿಸುವ ಮೂಲಕ, ನಿಮ್ಮ  ಇ ಖಾತಾ ಅರ್ಜಿಯ  ಚಲನೆಯನ್ನು ನಿಮಗೆ ತಿಳಿಸಲಾಗುತ್ತದೆ.

ಈ ಖಾತೆ ದಾಖಲೆ ಪತ್ರ ಎಲ್ಲ ರೀತಿಗಳಲ್ಲೂ ಅಸ್ತಿ ಮಾಲೀಕರಿಗೆ ನೆರವಾಗುತ್ತದೆ. ಈ ಹಿನ್ನೆಯೆಲ್ಲಿ ಎಲ್ಲರು ಇದನ್ನು ಪಡೆದುಕೊಳ್ಳುವುದು ಒಳ್ಳೆಯದು. 

ನಿಗದಿತ ಸಮಯದೊಳಗೆ ನೀವು ಖಾತಾ ವರ್ಗಾವಣೆ ಪ್ರಮಾಣಪತ್ರವನ್ನು ಸ್ವೀಕರಿಸುತ್ತೀರಿ ಎಂದು ನೀವು ಭರವಸೆ ನೀಡಬಹುದು. ನಿಮ್ಮ ಖಾತಾ ಸಿದ್ಧವಾದ ನಂತರ ಡಿಜಿಟಲ್ ಸಹಿ ಮಾಡಲಾಗುವುದು. ಒಂದು ವೇಳೆ ನಿಮ್ಮ ಫಾರ್ಮ್ ಅನ್ನು ತಿರಸ್ಕರಿಸಿದರೆ, ಆದಷ್ಟು ಬೇಗ ಅಧಿಕಾರಿಯೊಬ್ಬರು ನಿಮ್ಮನ್ನು ಸಂಪರ್ಕಿಸುತ್ತಾರೆ. ಇ-ಖಾತಾ ಸೇವೆಯು ಕಾಗದದ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನವಾಗಿದೆ.

Related Readings

Jolad Rotti:
Related Post