X

ಕರ್ನಾಟಕ ಬಜೆಟ್:  ನವ ಕರ್ನಾಟಕಕ್ಕೆ “ಬಸವರಾಜ ಮಾರ್ಗ”

ಮಾರ್ಚ್ ೪ ರಂದು ರಾಜ್ಯದ ವಿತ್ತ ಸಚಿವರಾಗಿರುವ  ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು. ಕರ್ನಾಟಕ ವಿಧಾನ ಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ಹಿನ್ನಲ್ಲೆಯಲ್ಲಿ ಇದು ಈ ಸರಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿದೆ. ಮುಂದಿನ ವರ್ಷ ಈ ಸರಕಾರ ಲೇಖಾನುದಾನ ಮಂಡಿಸಿ, ಹೊಸ ಸರಕಾರಕ್ಕೆ ಪೂರ್ಣಾವಧಿ ಬಜೆಟ್ ಮಂಡಿಸುವ ಅವಕಾಶ ನೀಡುವ ಸಾಧ್ಯತೆ ಇದೆ. 

ರಾಜ್ಯ ಬಜೆಟ್ ತೆರಿಗೆದಾರರು ನಿಟ್ಟುಸಿರುವಂತೆ ಮಾಡಿದೆ. ಏಕೆಂದರೆ ಈ ಬಜೆಟ್ ನಲ್ಲಿ ಯಾವುದೇ ಹೊಸ ತೆರಿಗೆ ಪ್ರಸ್ತಾಪ ಇಲ್ಲ. ಜೊತೆಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಕೂಡ ಹೆಚ್ಚಳ ಗೊಳಿಸಲಾಗಿಲ್ಲ. ಇನ್ನು ಶಿಕ್ಷಣ, ಸಬಲೀಕರಣ, ಹಿಂದುಳಿದ ವರ್ಗಗಳ ಅಭಿವೃದ್ಧಿ, ಹೊಸ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒಟ್ಟು ನೀಡಿದೆ. 

ಕರ್ನಾಟಕ ಬಜೆಟ್ ನ ಮುಖ್ಯಾಂಶಗಳು

ಈ ಬಾರಿಯ ಬಜೆಟ್ ನ ಮುಖ್ಯ ಅಂಶಗಳು ಇಲ್ಲಿವೆ. 

ಆದಾಯ ಸಂಗ್ರಹಣೆ 

  • ಹೊಸ ತೆರಿಗೆ ಇಲ್ಲ 
  • ವಾಣಿಜ್ಯ ತೆರಿಗೆ : ೭೭,೦೧೦ ಕೋಟಿ
  • ನೋಂದಣಿ ಮತ್ತು ಮುದ್ರಾಂಕ ಇಲಾಖೆ: ೧೫,೦೦೦ ಕೋಟಿ
  • ಅಬಕಾರಿ: ೨೯,೦೦೦ ಕೋಟಿ 
  • ಸಾರಿಗೆ: ೮,೦೦೭ ಕೋಟಿ 

ಆದಾಯ ಮತ್ತು ಖರ್ಚು 

  • ಬಜೆಟ್ ಅಂದಾಜು  ಗಾತ್ರ:  ೨.೬೧  ಲಕ್ಷ ಕೋಟಿ ರೂಪಾಯಿ 
  • ಒಟ್ಟು ಸ್ವೀಕೃತಿ : ೨,೬೧,೯೭೭ ಲಕ್ಷ ಕೋಟಿ ರೂಪಾಯಿ 
  • ಒಟ್ಟು ವೆಚ್ಚ: ೨ ,೬೫ ,೭೨೦ ಲಕ್ಷ ಕೋಟಿ ರೂಪಾಯಿ. 
  • ಕಂದಾಯ ಕೊರತೆ: ೧೪,೬೯೯  ಕೋಟಿ ರೂಪಾಯಿ 
  • ವಿತ್ತೀಯ ಕೊರತೆ: ೬೧,೫೬೪ ಕೋಟಿ ರೂಪಾಯಿ 
  • 2022-23ರ ಅಂತ್ಯಕ್ಕೆ ಅಂದಾಜು ಮಾಡಲಾದ ಒಟ್ಟು ಋಣ ಭಾದ್ಯತೆಗಳು: ೫,೧೮,೩೬೬   ಕೋಟಿ ರೂಪಾಯಿ 

ಕರ್ನಾಟಕ ಬಜೆಟ್ ನ ಮುಖ್ಯಾಂಶಗಳು 

ನಮ್ಮ ಬೆಂಗಳೂರು 

  • ನಗರದ ಅಭಿವೃದ್ಧಿಗೆ  ರೂಪಾಯಿ  8,409 ಕೋಟಿ ಹಂಚಿಕೆ 
  • ಬೆಂಗಳೂರು ಮೆಟ್ರೊ ಹಂತ-೩ ಯೋಜನೆಯನ್ನು ಅಂದಾಜು ೧೧,೨೫೦ ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲು ವಿಸ್ತೃತ ಯೋಜನಾ ವರದಿಯನ್ನು (ಡಿ.ಪಿ.ಆರ್) ಕೇಂದ್ರ ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗುವುದು. ಇದು ಹೆಬ್ಬಾಳದಿಂದ ಜೆ.ಪಿ. ನಗರದವರೆಗೆ ೩೨ ಕಿ.ಮೀ.ಗಳ ಹೊರವರ್ತುಲ ರಸ್ತೆ ಮಾರ್ಗ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೆ ೧೩ ಕಿ.ಮೀ.ಗಳ ಮಾರ್ಗವನ್ನು ಒಳಗೊಂಡಿ
  • ೨೦೨೨-೨೩ನೇ ಸಾಲಿನಲ್ಲಿ ೩೭ ಕಿ.ಮೀ. ಉದ್ದದ ಸರ್ಜಾಪುರದಿಂದ ಅಗರ, ಕೋರಮಂಗಲ ಮತ್ತು ಡೈರಿ ವೃತ್ತದ ಮೂಲಕ ಹೆಬ್ಬಾಳದವರೆಗೆ ೧೫,೦೦೦ ಕೋಟಿ ರೂ. ಅಂದಾಜು ವೆಚ ್ಚದಲ್ಲಿ ೩೬ ಕಿ.ಮೀ. ಉದ್ದದ ಹೊಸ ಮಾರ್ಗಕ್ಕೆ ವಿಸ್ತೃತ ಯೋಜನಾ ವರದಿ
  • ಬನಶಂಕರಿ ಜಂಕ್ಷನ್‌ನಲ್ಲಿ ೪೫ ಕೋಟಿ ರೂ. ವೆಚ್ಚದಲ್ಲಿ ಸ್ಕೈ ವಾಕ್ ನಿರ್ಮಾಣ 
  • ೨೧,೦೯೧ ಕೋಟಿ ವೆಚ್ಛದ ಫೆರಿಪೇರಿಲ್ ರಿಂಗ್ ರಸ್ತೆ ನಿರ್ಮಾಣ 
  • ಸುಸ್ಥಿರ ಜೀವನ ಕ್ರಮದ ಬಗ್ಗೆ ಮಾಹಿತಿ ನೀಡಲು   ೧೦೫ ಎಕರೆ ಪ್ರದೇಶದಲ್ಲಿ ಸಿಂಗಾಪುರ್ ಮಾದರಿಯಲ್ಲಿ ಗ್ರೀನ್ ಎಕ್ಸ್ಪೋ ನಿರ್ಮಾಣ 
  • ೬ ಲಕ್ಷಕ್ಕೂ ಅಧಿಕ  ಬಿ ಖಾತಾ ಆಸ್ತಿಗಳನ್ನು ಎ ಖಾತೆಗೆ ಮೇಲ್ದರ್ಜೆಗೆ ಏರಿಸುವುದು 
  • ಜಲ ಮಾಲಿನ್ಯ ತಡೆಗಟ್ಟಲು ೨೦ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಮೇಲ್ದರ್ಜೆಗೆ ಏರಿಸುವುದು 
  • ಬೆಂಗಳೂರಿನ ಜನಸಂಖ್ಯೆಗೆ ಅನುಗುಣವಾಗಿ ನಗರದÀ ನಾಲ್ಕು ಭಾಗಗಳಲ್ಲಿ ೫೦೦ ಹಾಸಿಗೆ ಸಾಮರ್ಥ್ಯವುಳ್ಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸಾರ್ವಜನಿಕಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುವುದು
  • ಬೆಂಗಳೂರಿನ ಆಯ್ದ ೨೦ ಶಾಲೆಗಳನ್ನು “ಬೆಂಗಳೂರು ಪಬ್ಲಿಕ್ ಶಾಲೆ” ಗಳಾಗಿ  ಅಭಿವೃದ್ಧಿ 
  • ಬೆಂಗಳೂರು ನಗರದಲ್ಲಿ  Meeting, Incentives, conferences & Exhibitions (MICE)  ಹಬ್ ಸ್ಥಾಪನೆ 

ಮೂಲ ಸೌಕರ್ಯ 

  • ರಾಜ್ಯದಲ್ಲಿ ವಾಯುಮಾರ್ಗ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲು ಮಡಿಕೇರಿ, ಚಿಕ್ಕಮಗಳೂರು ಮತ್ತು ಹಂಪಿಯಲ್ಲಿ ಪಿ.ಪಿ.ಪಿ ಮಾದರಿಯಡಿ ಹೆಲಿಪೋರ್ಟ್ ನಿರ್ಮಾಣ 
  • ಬೆಂಗಳೂರು ನಗರದಲ್ಲಿ  “ಮೆಗಾ ಜ್ಯುವೆಲ್ಲರಿ ಪಾರ್ಕ್
  • ಬೆಳಗಾವಿಯಲ್ಲಿ  Global Emerging Technology Design ಸೆಂಟರ್ ಸ್ಥಾಪನೆ 
  • ರಾಜ್ಯದ ೧೫ ಪ್ರವಾಸಿ ತಾಣಗಳ  ar / vr    ತುಣುಕುಗಳನ್ನು ೧೫ ಕೋಟಿ ರೂ. ವೆಚ್ಚದಲ್ಲಿ ಸೃಜಿಸಲು ಉದ್ದೇಶಿಸಿದ್ದು, ಮೊದಲಿಗೆ ಪ್ರಾಯೋಗಿಕವಾಗಿ ಮೈಸೂರು ಅರಮನೆಯ ತುಣುಕುಗಳನ್ನು ಸೃಜಿಸಲಾಗುವುದು.

ಇಂಧನ 

  • ೨೨೭ ಕೋಟಿ ರೂ.ಗಳ ವೆಚ್ಚದಲ್ಲಿ ೧೦,೦೦೦ ಸೌರಶಕ್ತಿ ಆಧಾರಿತ ನೀರಾವರಿ ಪಂಪ್‌ಸೆಟ್‌ಗಳನ್ನು ಕ್ರೆಡಲ್ ಸಂಸ್ಥೆ ವತಿಯಿಂದ ಅನುಷ್ಠಾನ
  • ೮ ಜಿಲ್ಲೆಗಳಲ್ಲಿ  ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸುಮಾರು ೫,೦೦೦ ಮೆಗಾ ವ್ಯಾಟ್ ಸಾಮರ್ಥ್ಯದ ಹೈಬ್ರಿಡ್ ಪಾರ್ಕ್

ಅರೋಗ್ಯ ಮತ್ತು ಸರ್ವೋದಯ  

  • ಏಳು ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು   

Karnataka Institute of Technology  ಯ ಮಟ್ಟಕ್ಕೆ ಏರಿಸಿ, ವಿಶ್ವದ ಪ್ರಸಿದ್ಧ ವಿಶ್ವ ವಿದ್ಯಾನಿಲಯ ಗಳೊಂದಿಗೆ ಜೋಡಣೆ.

  • ೧೦೦ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ೨೫ ಹಾಸಿಗೆಯ ಮಾದರಿ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಪರಿವರ್ತನೆ. ಇದಕ್ಕಾಗಿ ೧,೦೦೦ ಕೋಟಿ ರೂಪಾಯಿ ವಿನಿಯೋಜನೆ. 
  • ೧,೦೦೦ ಅಂಗನವಾಡಿ ಕಟ್ಟಡಗಳ ನಿರ್ಮಾಣ 
  • ಶಾಲೆಗಳ ಅಭಿವೃದ್ಧಿಗೆ ೫೦೦ ಕೋಟಿ ರೂಪಾಯಿ ವಿನಿಯೋಜನೆ. 
  • ಏಳು ಹೊಸ ವಿಶ್ವ ವಿದ್ಯಾನಿಲಯಗಳ ಸ್ಥಾಪನೆ 
  • ೪೩೮ “ನಮ್ಮ ಕ್ಲಿನಿಕ್” ಗಳ ಸ್ಥಾಪನೆ 
  • ಅಪಘಾತಕ್ಕೊಳಗಾದ ರೋಗಿಗಳಿಗೆ ಆಸ್ಪತ್ರೆಗೆ ದಾಖಲಾದ ೪೮ ಗಂಟೆಗಳೊಳಗಾಗಿ ೭೬ ಅವಶ್ಯ ಜೀವ ರಕ್ಷಕ ಆರೋಗ್ಯ ಸೇವೆಗಳನ್ನು ಒದಗಿಸುವ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಪ್ರಾರಂಭಿಸುವುದು 
  • ಕಟ್ಟಡ ಕಾರ್ಮಿಕರ ಸಾಂದ್ರತೆ ಹೆಚ್ಚಿರುವ ಪ್ರಮುಖ ಸ್ಥಳಗಳಲ್ಲಿ ಕಾರ್ಮಿಕರ ಆರೋಗ್ಯ ಕಾಪಾಡುವ ಉದ್ದೇಶದಿಂದ ೧೦೦ ಹೈಟೆಕ್ ಸಂಚಾರಿ ಕ್ಲಿನಿಕ್‌ ಸ್ಥಾಪನೆ. 
  • ರಾಜ್ಯದ ೩೩,೦೦೦ ಗ್ರಾಮ ಪಂಚಾಯಿತಿ ಕೆರೆಗಳನ್ನು ಸರ್ವೆ ಮಾಡಿಸಿ, ಪ್ರಸ್ತುತ ಪ್ರಾರಂಭಿಕ ಹಂತವಾಗಿ ೧,೦೦೦ ಕೆರೆ ಗಳನ್ನು ಗುರುತಿಸಿ ಪ್ರತಿ ಕೆರೆಗೆ ೧೦ ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ೧೦೦ ಕೋಟಿ ರೂ.ಗಳ ಹಂಚಿಕೆ

ಯುವ ಸಬಲೀಕರಣ ಹಾಗು ಕ್ರೀಡೆ 

  • ೧೦೦ ಯುವ ಜನರಿಗೆ ಪೈಲೆಟ್ ತರಬೇತಿ
  • ಗ್ರಾಮೀಣ ಹಾಗೂ ದೇಸಿ ಕ್ರೀಡೆಗಳನ್ನು ಉತ್ತೇಜಿಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಭಾಗಿತ್ವದೊಂದಿಗೆ ನರೇಗಾ ಯೋಜನೆಯಡಿ ‘ಕ್ರೀಡಾ ಅಂಕಣ’ ಗಳ ನಿರ್ಮಾಣ 
  • ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಂಪಿ-ಬಾದಾಮಿಐಹೊಳೆ-ಪಟ್ಟದಕಲ್ಲು-ವಿಜಯಪುರ ಪ್ರವಾಸಿ ವೃತ್ತವನ್ನು ಮತ್ತು ಮೈಸೂರು-ಶ್ರೀರಂಗಪಟ್ಟಣ-ಹಾಸನ-ಬೇಲೂರುಹಳೇಬೀಡು ಪ್ರವಾಸಿ ವೃತ್ತವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ
  • ರಾಜ್ಯದ ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ADOPT A MEMORIAL ಯೋಜನೆ ಮೂಲಕ ದತ್ತು ಪಡೆಯಲು ಅವಕಾಶ
  • `ಬ್ಲೂ-ಪ್ಲಾಸ್ಟಿಕ್ ನಿರ್ವಹಣೆ ಯೋಜನೆ
  •  ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಪಿಂಚಣಿ ಮೊತ್ತವನ್ನು 3,000 ರೂ.ಗಳಿಂದ 10,000 ರೂ.ಗಳಿಗೆ ಹೆಚ್ಚಿಸುವುದಲ್ಲದೇ, ಆಸಿಡ್ ದಾಳಿಗೊಳಗಾದ ಮಹಿಳೆಯರಿಗಾಗಿ ಹೊಸ ಕಾರ್ಯಕ್ರಮ ರೂಪಣೆ 

ಕೃಷಿ ಕ್ಷೇತ್ರ 

  • ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ೨೦೨೨-೨೩ನೇ ಸಾಲಿನಲ್ಲಿ ಒಟ್ಟಾರೆಯಾಗಿ ೩೩,೭೦೦ ಕೋಟಿ ರೂ. ಅನುದಾನ
  • “ಪುಣ್ಯಕೋಟಿ ದತ್ತು ಯೋಜನೆ”ಯನ್ನು ಪ್ರಾರಂಭ . ಈ ಮೂಲಕ ಗೋ ಸಂರಕ್ಷಣೆ .
  • ಗೋವು ಉತ್ಪನ್ನಗಳನ್ನು ಮಾರಾಟ ಮಾಡಲು  ಮಾತಾ ಸಹಕಾರ ಸಂಘ ಆರಂಭ 
  •  ಯಂತ್ರೋಪಕರಣಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು  ಪ್ರತಿ ಎಕರೆಗೆ ೨೫೦/- ರೂ.ಗಳಂತೆ ಗರಿಷ್ಠ ಐದು ಎಕರೆಗೆ ಡಿ.ಬಿ.ಟಿ ಮೂಲಕ ಡೀಸಲ್‌  ಸಹಾಯಧನ  “ರೈತ ಶಕ್ತಿ” ಎಂಬ ಹೊಸ ಯೋಜನೆ:  ೫೦೦ ಕೋಟಿ ರೂಪಾಯಿ.
  • ಪ್ರಧಾನ ಮಂತ್ರಿ ಕೃಷಿ ಸಂಚಯಿ ಯೋಜನೆಗೆ ೬೪೨ ಕೋಟಿ  
  • ಕಲಬುರುಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಬೆಳೆಯುವ ವಿಶಿಷ್ಟವಾದ 
  •  ಭೌಗೋಳಿಕ ಸೂಚ್ಯಂಕ ಹೊಂದಿದ ತೊಗರಿಬೇಳೆಯನ್ನು “ಭೀಮಾ ಪಲ್ಸ್” ಬ್ರಾಂಡ್‌ನಡಿ ಮಾರಾಟ
  • ಬೆಂಗಳೂರು ನಗರದಲ್ಲಿ ಪ್ರಪ್ರಥಮ ಬಾರಿಗೆ ಲಾಲ್‌ಬಾಗ್-ಕಬ್ಬನ್ ಪಾರ್ಕ್ಗಳ ಮಾದರಿಯಲ್ಲಿ ವಿವಿಧೋದ್ದೇಶ “ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ”ವನ್ನು ಯಲಹಂಕ ಬಳಿಯ ಜಾರಕಬಂಡೆ ಕಾವಲ್ ಪ್ರದೇಶದ ೩೫೦ ಎಕರೆ ಸರ್ಕಾರಿ ಜಮೀನಿನಲ್ಲಿ ಅಭಿವೃದ್ಧಿ.
  • ಕೊಡಗು ಮತ್ತು ಜಾಂಬೋಟಿ ಜೇನು ತುಪ್ಪ ಅಭಿವೃದ್ಧಿ 
  • ೧೦೦ ಪಶು ಚಿಕಿತ್ಸಾಲಯ ಸ್ಥಾಪನೆ 
  • ಹೈನುಗಾರರಿಗೆ ನೆರವಾಗುವ ಹಿನ್ನಲೆಯಲ್ಲಿ  ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್

ಇತರೆ ಪ್ರಮುಖ ಘೋಷಣೆಗಳು 

  • ಪ್ರಸ್ತುತ  ವಾರ್ಷಿಕವಾಗಿ 125 ಕನ್ನಡ  ಚಲನಚಿತ್ರಗಳಿಗೆ  ನೀಡುತ್ತಿರುವ ಸಹಾಯಧನವನ್ನು 200  ಚಲನಚಿತ್ರಗಳಿಗೆ ಹೆಚ್ಚಿಸಲಾಗುವುದು
  • ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ  ಪ್ರಸ್ತುತ ತಸ್ತೀಕ್ ಮೊತ್ತವನ್ನು 48,000 ರೂ.ಗಳಿಂದ 60,000 ರೂ.ಗಳಿಗೆ ಹೆಚ್ಚಳ 
  • ಕಾಶಿ ಯಾತ್ರೆಯನ್ನು ಕೈಗೊಳ್ಳುವ 30,000 ಯಾತ್ರಾರ್ಥಿಗಳಿಗೆ ಸರ್ಕಾರದಿಂದ ತಲಾ 5,000 ರೂ.ಗಳ ಸಹಾಯಧನ
  • ಇಕೋ ಬಜೆಟ್ ಗೆ ೧೦೦ ಕೋಟಿ ರೂಪಾಯಿ 
  • ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹಾಗೂ ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ ದತ್ತಪೀಠ ಬೆಟ್ಟದಲ್ಲಿ  ಪ್ರವಾಸೋದ್ಯಮ   ಉತ್ತೇಜಿಸಲು ರೋಪ್‌ವೇ ನಿರ್ಮಾಣ 
  • ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ  ಜೋಗಜಲಪಾತದಲಿ  ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಹೋಟೆಲ್ ಹಾಗೂ ರೋಪ್‌ವೇ ಅಭಿವೃದ್ಧಿ ಕಾಮಗಾರಿ
  • ಶ್ರೀ ಆಂಜನೇಯ ಸ್ವಾಮಿಯ ಜನ್ಮಸ್ಥಳವೆಂದು ಪ್ರಸಿದ್ಧವಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಪ್ರವಾಸಿಗಳಿಗೆ ಮೂಲಭೂತ ಸೌಕರ್ಯ, ರೋಪ್‌ವೇ ಒಳಗೊಂಡAತೆ ಕಾಮಗಾರಿಗಳನ್ನು 100 ಕೋಟಿ ರೂ.ಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುz
  • ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ  “ಸ್ವಾಮಿ ವಿವೇಕಾನಂದ ಯುವಕರ ಸ್ವಸಹಾಯ ಗುಂಪು”ಗಳನ್ನು ರಚಿಸಿ, ಸ್ವ-ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಬೆಂಬಲ 

Related Readings

Jolad Rotti:
Related Post