• ನಮ್ಮ ಬಗ್ಗೆ
  • Profile
  • Feedback

Karnataka.com

Karnataka is a state in Southern India. Karnataka is best known for its software industry and now biotechnology.

  • Home
  • Education
  • Real-Estate
  • Government
  • Industry
  • Tourism
  • Festivals
  • Restaurants

Home » Government » ಕರ್ನಾಟಕದಲ್ಲಿ ವಿವಾಹ ನೋಂದಣಿ ಪತ್ರ ಪಡೆಯುವುದು ಹೇಗೆ?

ಕರ್ನಾಟಕದಲ್ಲಿ ವಿವಾಹ ನೋಂದಣಿ ಪತ್ರ ಪಡೆಯುವುದು ಹೇಗೆ?

September 10, 2020 by Jolad Rotti

ವಿವಾಹ ನೋಂದಣಿ ಪತ್ರ ದಂಪತಿಯ ವೈವಾಹಿಕ ಸಂಬಂಧವನ್ನು ಶ್ರುತಪಡಿಸುವ ಕಾನೂನು ಬದ್ಧ ದಾಖಲೆ ಪತ್ರವಾಗಿದೆ. ಇಂದು ಅತಿ ಅಗತ್ಯವಾದ ದಾಖಲೆಪತ್ರಗಳಲ್ಲಿ ಒಂದು; ಅದರಲ್ಲೂ ಮುಖ್ಯವಾಗಿ ವಿವಾಹಿತ ಮಹಿಳೆಯರಿಗೆ. ಭಾರತದಲ್ಲಿ ನಾನಾ ಕಾನೂನುಗಳ ಮೂಲಕ ವಿವಾಹವನ್ನು ನೋಂದಣಿ ಮಾಡಿಸಿಕೊಳ್ಳಬಹುದು. ಈ ಪೈಕಿ ಮುಖ್ಯ ಕಾನೂನುಗಳೆಂದರೆ, ಹಿಂದೂ ಮದುವೆ ಕಾನೂನು 1955, ವಿಶೇಷ ಮದುವೆ ಕಾನೂನು 1954, ಪಾರ್ಸಿ ಮದುವೆ ಕಾನೂನು ಹಾಗೂ ವಿಚ್ಛೇದನ ಕಾನೂನು 1936. 

ಹಿಂದೂ ವೈವಾಹಿಕ ಕಾಯ್ದೆ ಹಿಂದೂಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ, ಹಿಂದೂ ಧರ್ಮಿಯರು, ಬೌದ್ಧರು, ಬ್ರಹ್ಮ, ಪ್ರಾರ್ಥನಾ, ಹಾಗೂ ಆರ್ಯ ಸಮಾಜ ಗುಂಪುಗಳಿಗೆ ಇದು ಅನ್ವಯಿಸುತ್ತದೆ. ವಿಶೇಷ ವೈವಾಹಿಕ ಕಾಯ್ದೆ ದೇಶದ ಎಲ್ಲಾ ನಾಗರಿಕರಿಗೆ, ಯಾವುದೇ ಧರ್ಮ, ಜಾತಿ, ಭಾಷೆಯ ಗಣನೆ ಇಲ್ಲದೆ ಅನ್ವಯವಾಗುತ್ತದೆ. ಪಾರ್ಸಿ ವೈವಾಹಿಕ ಹಾಗೂ ವಿಚ್ಛೇದನ ಕಾಯೆ 1936, ಪಾರ್ಸಿ ಹಾಗೂ ಝೋರಾಷಟ್ರೇನ್ ಧರ್ಮಿಯರಿಗೆ ಅನ್ವಯವಾಗುತ್ತದೆ.

Representational Image of a Hindu Wedding. Copyright Karnataka.com

ಕರ್ನಾಟಕದಲ್ಲಿ ವೈವಾಹಿಕ ಪ್ರಮಾಣ ಪತ್ರ ಪಡೆಯಲು ಬೇಕಾದ ಅರ್ಹತೆಗಳು

  • ವರನಿಗೆ 21 ವರ್ಷ ತುಂಬಿರಬೇಕು
  • ವಧುವಿಗೆ 18 ವರ್ಷ ತುಂಬಿರಬೇಕು

ಕರ್ನಾಟಕದಲ್ಲಿ ಮದುವೆ ಪ್ರಮಾಣ ಪತ್ರ ಪಡೆಯಲು ಅಗತ್ಯವಾದ ದಾಖಲೆಗಳು

ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಿ, ಕರ್ನಾಟಕದಲ್ಲಿ ವೈವಾಹಿಕ ಪ್ರಮಾಣ ಪತ್ರ ಪಡೆಯಬೇಕು.

  1. ಸಂಪೂರ್ಣವಾಗಿ ತುಂಬಿದ ಈ ಅರ್ಜಿ ನಮೂನೆ. ಈ ಭರ್ತಿ ಮಾಡಿದ ಅರ್ಜಿ ನಮೂನೆಗೆ ವರ-ವಧೂ ಇಬ್ಬರೂ ಸಹಿ ಹಾಕಿರಬೇಕು.
  2. ಮದುವೆಯ ಆಮಂತ್ರಣ ಪತ್ರದ ಮೂಲ ಪ್ರತಿ.
  3. ಅರ್ಜಿದಾರ ವರ-ವಧುರರ ವಿಳಾಸದ ದಾಖಲೆ. ಇಬ್ಬರ ಪೈಕಿ ಒಬ್ಬರು, ಅವರದೇ ಹೆಸರಿನಲ್ಲಿರುವ ತಮ್ಮ ಪಾಸ್‍ಪೋರ್ಟ್, ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಗಿ ಪತ್ರ, ಬಾಡಿಗೆ ಮನೆ ಕರಾರು ಪತ್ರವನ್ನು ಸಲ್ಲಿಸಬೇಕು.
  4. ವರ-ವಧು ವಯಸ್ಸಿನ ದೃಢೀಕರಣ ದಾಖಲೆ. ಎಸ್‍ಎಸ್‍ಎಲ್‍ಸಿ/ ಹತ್ತನೆ ತರಗತಿ ಅಂಕಪಟ್ಟಿ ಅಥವಾ ಪಾಸ್‍ಪೋರ್ಟ್‍ನ್ನು ದಾಖಲೆಯಾಗಿ ಬಳಸಬಹುದು.
  5. ವರ-ವಧು ಗುರುತಿನ ದೃಢೀಕರಣ ದಾಖಲೆ: ಪಾಸ್‍ಪೋರ್ಟ್/ ಪಾನ್ ಕಾರ್ಡ್/ ಮತದಾರರ ಗುರುತಿನ ಚೀಟಿ/ ವಾಹನ ಚಾಲನಾ ಪರವಾನಗಿ ಪತ್ರವನ್ನು ಇದಕ್ಕಾಗಿ ಬಳಸಬಹುದು.
  6. ಎರಡು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ (ವರ-ವಧು ಇಬ್ಬರದ್ದೂ).
  7. ವರ-ವಧು ಜೊತೆಗಿರುವ ಛಾಯಾಚಿತ್ರದ 6 ಪ್ರತಿಗಳು (2ಬಿ ಅಳತೆಯದ್ದು)
  8. ವರ-ವಧು ಮದುವೆಯ ವಸ್ತ್ರದಲ್ಲಿ ತೆಗೆಸಿಕೊಂಡಿರುವ ಛಾಯಾ ಚಿತ್ರಗಳು (ತಮ್ಮ ಕುಟುಂಬದ ಸದಸ್ಯರ ಜೊತೆಗೆ ತೆಗೆದ ಛಾಯಾ ಚಿತ್ರಗಳು ಅಪೇಕ್ಷಣೀಯ)
  9. ನಿಗದಿತ ನಮೂನೆಯಲ್ಲಿ ವರ-ವಧು ಮದುವೆ ಸಂಬಂಧ ಒಂದು ಅಫಿಡಾವಿಟ್ ಸಲ್ಲಿಸಬೇಕು.
  10. ಆಧಾರ್ ಕಾರ್ಡ್
  11. ಮದುವೆಯ ಬಳಿಕ ಹೆಸರು ಬದಲಾವಣೆ ಮಾಡಿಕೊಂಡಿದ್ದರೆ, ಈ ಸಂಬಂಧ ಒಂದು ಅಫಿಡವಿಟ್.
  12. ಹೆಸರು ಬದಲಾವಣೆ ಸಂಬಂಧ ನೀಡಲಾಗಿದ್ದ ಪತ್ರಿಕಾ ಪ್ರಕಟಣೆಯ ದಾಖಲೆ.

ಗಮನಿಸಿರಿ

  • ಎಲ್ಲಾ ದಾಖಲೆಗಳನ್ನು ಸ್ವಯಂ ದೃಢೀಕರಿಸಿದ ಬಳಿಕವೇ ಸಲ್ಲಿಸಬೇಕು.
  • ವರ-ವಧು ಪೈಕಿ ಒಬ್ಬರಾದರೂ, ಸರಕಾರಿ ಇಲಾಖೆಗಳು ನೀಡಿದ ವಿಳಾಸ ದೃಢೀಕರಣ ದಾಖಲೆ ಹಾಜರು ಪಡಿಸಬೇಕು.
  • ಎಲ್ಲಾ ಅಗತ್ಯ ದಾಖಲೆಗಳನ್ನು ಪರಿಶೀಲನೆಗಾಗಿ ನೋಂದಣಾಧಿಕಾರಿ ಕಚೇರಿಗೆ ಕೊಂಡೊಯ್ಯಬೇಕಾಗುತ್ತದೆ.

ಕರ್ನಾಟಕದಲ್ಲಿ ಆಫ್‍ಲೈನ್ ಮೂಲಕ ವಿವಾಹ ನೋಂದಣಿ

  • ವರ ಅಥವಾ ವಧುವಿನ ವಿಳಾಸ ವ್ಯಾಪ್ತಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಬೇಕು, ಮದುವೆ ನಡೆದ ಸ್ಥಳದ ವ್ಯಾಪ್ತಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅಲ್ಲ.
  • ನಿಮ್ಮ ಮನೆ ಸಮೀಪದ ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ. ಅಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಕೇಳಿ ಪಡೆಯಿರಿ
  • ಅಥವಾ ಈ ಅರ್ಜಿ ನಮೂನೆಯನ್ನು   ಇಲ್ಲಿ ಪಡೆಯಿರಿ.
  • ಅತ್ಯಂತ ಜಾಗರೂಕತೆಯಿಂದ ಈ ಅರ್ಜಿ ನಮೂನೆಯನ್ನು ತುಂಬಿರಿ. ಒಂದೊಮ್ಮೆ ಮದುವೆ ಬಳಿಕ, ವರ-ವಧು ಹೆಸರು ಬದಲಾವಣೆ ಆಗಿದ್ದರೆ, ಹೊಸ ಹೆಸರನ್ನೇ ಅರ್ಜಿ ನಮೂನೆಯಲ್ಲಿ ಉಲ್ಲೇಖಿಸಿ.
  • ಈ ಅರ್ಜಿಗೆ ಮದುವೆಯಲ್ಲಿ ಪಾಲ್ಗೊಂಡಿದ್ದ ಸಾಕ್ಷಿದಾರರ ಸಹಿ ಅಗತ್ಯ. ನಿಮ್ಮ ಸ್ನೇಹಿತರು ಅಥವಾ ಕುಟುಂಬಿಕರು, ಸಾಕ್ಷಾಧಾರರಾಗಬಹುದು.
  • ಹೀಗೆ ಸಂಪೂರ್ಣವಾಗಿ ತುಂಬಿದ ಅರ್ಜಿಯನ್ನು  ಎಲ್ಲಾ ಅಗತ್ಯ ದಾಖಲೆಗಳೊಂದಿಗೆ, ಉಪ ನೋಂದಣಿ ಕಚೇರಿಗೆ ಸಲ್ಲಿಸಿ. ಈ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಬಳಿಕ, ದಾಖಲೆಗಳನ್ನು ಹಿಂತಿರುಗಿಸುತ್ತಾರೆ.
  • ಉಪ ನೋಂದಣಿ ಕಚೇರಿಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ, ವರ-ವಧು ಇಬ್ಬರೂ ನಿಗದಿತ ದಾಖಲೆಗಳಲ್ಲಿ ಸಹಿ ಮಾಡಬೇಕಾಗುತ್ತದೆ.
  • ಆ ಬಳಿಕ, ಇಡೀ ಪ್ರಕ್ರಿಯೆ ಸಂಪೂರ್ಣಗೊಳ್ಳುತ್ತದೆ. ವಿವಾಹ ನೋಂದಣಿ ಪತ್ರದ ಪ್ರತಿಯನ್ನು ವರ, ವಧು ಇಬ್ಬರಿಗೂ ನೀಡಲಾಗುತ್ತದೆ. ಒಂದು ಪ್ರತಿಯನ್ನು ಕಚೇರಿ ಉಪಯೋಗಕ್ಕೆ ಇಟ್ಟುಕೊಳ್ಳಲಾಗುತ್ತದೆ.

ಕರ್ನಾಟಕದಲ್ಲಿ ವಿವಾಹ ನೋಂದಣೆ ಮಾಡಿಕೊಳ್ಳುವ, ಉಪ ನೋಂದಾವಣೆ ಅಧಿಕಾರಿಗಳ ಕಚೇರಿ ವಿವರ ಇಲ್ಲಿ ಲಭ್ಯವಿದೆ. ನಿಮ್ಮ ವಾಸಸ್ಥಳದ ವ್ಯಾಪ್ತಿಯ ಕಚೇರಿಯನ್ನು   ಇಲ್ಲಿ ತಿಳಿದುಕೊಳ್ಳಬಹುದು.

ವಿವಾಹ ನೋಂದಣಿಗೆ ಸಾಕ್ಷಿಗಳು

  1. ಮದುವೆಗೆ ಹಾಜರಾದ ಯಾವುದೇ ವ್ಯಕ್ತಿ ಮದುವೆ ನೋಂದಣಿಗೆ ಸಾಕ್ಷಿಯಾಗಬಹುದು.
  2. ವರ-ವಧುವಿನ ಹತ್ತಿರ ರಕ್ತ ಸಂಬಂಧಿ ಸಾಕ್ಷಿಯಾಗುವುದನ್ನು ಆದ್ಯತೆಯ ಮೇರೆಗೆ ಪರಿಗಣಿಸಲಾಗುತ್ತದೆ.
  3. ಸಾಮಾನ್ಯವಾಗಿ ಮದುವೆ ನೋಂದಣಿ ಸಂದರ್ಭದಲ್ಲಿ ವರ-ವಧುಗಳ ಹೆತ್ತವರನ್ನೇ ಸಾಕ್ಷಿಯಾಗಿ ಕರೆತರಲು ಅಧಿಕಾರಿಗಳು ತಿಳಿಸುತ್ತಾರೆ.

ವಿವಾಹ ನೋಂದಣಿ ದರ

  • ಹಿಂದೂ ವೈವಾಹಿಕ ಕಾಯ್ದೆ ಪ್ರಕಾರ ವಿವಾಹ ನೋಂದಾವಣೆಗೆ ೧೫ ರೂಪಾಯಿ ತಗಲುತ್ತದೆ. ಈ ಪೈಕಿ ಅರ್ಜಿ ಶುಲ್ಕ ೫ ರೂಪಾಯಿಗಳಾದರೆ, ದೃಢೀಕೃತ ನೋಂದಾವಣೆ ಪಾತ್ರಕ್ಕೆ ೧೦ ರೂಪಾಯಿ.
  • ವಿಶೇಷ ವೈವಾಹಿಕ ಕಾಯ್ದೆಯಡಿ, ಮದುವೆಯನ್ನು ದೃಢೀಕರಿಸಲು, ಉಪ ನೋಂದಾವಣೆ ಅಧಿಕಾರಿ ಕಚೇರಿಯಲ್ಲಿ ರೂಪಾಯಿ ೧೦ ದರ ನಿಗದಿ ಪಡಿಸಲಾಗಿದೆ.  ಉಪ ನೋಂದಾವಣೆ ಕಚೇರಿಯ ಹೊರಗಡೆ, ಈ ಮೊತ್ತ ರೂಪಾಯಿ ೧೫ ಆಗಿದೆ.  ಈ ಮದುವೆ ಸಂಬಂಧದ ನೋಟೀಸ್ ನೀಡುವ ಅರ್ಜಿ ಬೆಲೆ ೩ ರೂಪಾಯಿ. ಈ ವಿವಾಹ ನೋಂದಾವಣೆಯ ದೃಢೀಕೃತ ನಕಲು ಪಡೆಯಲು ೨ ರೂಪಾಯಿ ಪಾವತಿಸಬೇಕು.
  • ಪಾರ್ಸಿ ವಿವಾಹ ಕಾಯ್ದೆಯಡಿ, ವಿವಾಹ ನೋಂದಾವಣೆಯ ದೃಢೀಕೃತ ಪ್ರತಿ ಪಡೆಯಲು ೨ ರೂಪಾಯಿ ದರ ನಿಗದಿ ಪಡಿಸಲಾಗಿದೆ.

Related Reading

  • In English: How to Obtain A Marriage Certificate in Karnataka

Filed Under: Government Tagged With: how to, marriage certificate, ಕರ್ನಾಟಕದಲ್ಲಿ ವಿವಾಹ ನೋಂದಣೆ

Social

Top Posts

  • ಕರ್ನಾಟಕದಲ್ಲಿ ವಿವಾಹ ನೋಂದಣಿ ಪತ್ರ ಪಡೆಯುವುದು ಹೇಗೆ?
    ಕರ್ನಾಟಕದಲ್ಲಿ ವಿವಾಹ ನೋಂದಣಿ ಪತ್ರ ಪಡೆಯುವುದು ಹೇಗೆ?
  • ಬೆಂಗಳೂರಿನಲ್ಲಿ ಆನ್‍ಲೈನ್ ಎಫ್‍ಐಆರ್ ಹಾಗೂ  ಕಳ್ಳತನ   ಬಗ್ಗೆ ಇ-ರಿಪೋರ್ಟ್
    ಬೆಂಗಳೂರಿನಲ್ಲಿ ಆನ್‍ಲೈನ್ ಎಫ್‍ಐಆರ್ ಹಾಗೂ ಕಳ್ಳತನ ಬಗ್ಗೆ ಇ-ರಿಪೋರ್ಟ್
  • ಕರ್ನಾಟಕ ಕೋವಿಡ್ ಪ್ರಕರಣಗಳ ಜಿಲ್ಲಾವಾರು ವಿವರ
    ಕರ್ನಾಟಕ ಕೋವಿಡ್ ಪ್ರಕರಣಗಳ ಜಿಲ್ಲಾವಾರು ವಿವರ
  • ಕರ್ನಾಟಕದಲ್ಲಿ ಮರಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
    ಕರ್ನಾಟಕದಲ್ಲಿ ಮರಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
  • ಕರ್ನಾಟಕದಲ್ಲಿ ಚುನಾವಣಾ ಗುರುತಿನ ಚೀಟಿಗೆ ಅರ್ಜಿ  ಸಲ್ಲಿಕೆ  ಹೇಗೆ?
    ಕರ್ನಾಟಕದಲ್ಲಿ ಚುನಾವಣಾ ಗುರುತಿನ ಚೀಟಿಗೆ ಅರ್ಜಿ ಸಲ್ಲಿಕೆ ಹೇಗೆ?
  • ಕ್ಯೂಆರ್‌ ಕೋಡ್‌ ಮೂಲಕ ಮೈಸೂರು ನಗರದಲ್ಲಿ  ಆಸ್ತಿ ತೆರಿಗೆ ಪಾವತಿ
    ಕ್ಯೂಆರ್‌ ಕೋಡ್‌ ಮೂಲಕ ಮೈಸೂರು ನಗರದಲ್ಲಿ ಆಸ್ತಿ ತೆರಿಗೆ ಪಾವತಿ
  • ಆನ್‍ಲೈನ್ ಮೂಲಕ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಪಾವತಿ
    ಆನ್‍ಲೈನ್ ಮೂಲಕ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಪಾವತಿ
  • ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಅಥವಾ ಪಿಎಂ ಕಿಸಾನ್
    ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಅಥವಾ ಪಿಎಂ ಕಿಸಾನ್
  • ಅತ್ಯುತ್ತಮ ಮುತ್ಸದ್ದಿ - ಅಪ್ರತಿಮ ಅಭಿಯಂತರ ಸರ್ ಎಂ ವಿಶ್ವೇಶ್ವರಯ್ಯ
    ಅತ್ಯುತ್ತಮ ಮುತ್ಸದ್ದಿ - ಅಪ್ರತಿಮ ಅಭಿಯಂತರ ಸರ್ ಎಂ ವಿಶ್ವೇಶ್ವರಯ್ಯ
  • ಡಿಜಿಟಲ್ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಲಭ್ಯವಿರುವ ಆನ್ ಲೈನ್  ಸೇವೆಗಳು
    ಡಿಜಿಟಲ್ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಲಭ್ಯವಿರುವ ಆನ್ ಲೈನ್ ಸೇವೆಗಳು

Recent Posts

  • Rear view of shrines in Hazara Rama temple, Hampi. Photographer Dinesh Kannambadiಕಲ್ಲಿನಲ್ಲಿ ಮೂಡಿದೆ ಹಜಾರ ರಾಮ ದೇಗುಲದ ಕಥೆ
    February 18, 2021
    ಹಂಪಿಯ  ಇನ್ನೊಂದು ಪ್ರಮುಖ ದೇಗುಲವೆಂದರೆ ಅದು ಹಜಾರ ರಾಮ […]
  • Stone Chariot, Vittala Temple, Hampi, facts about Hampiಹಂಪಿಯ ಮುಕುಟಮಣಿ: ಸೌಂದರ್ಯದ ಖನಿ ಈ ಕಲ್ಲಿನ ಕಥ
    February 7, 2021
    ಕೇಳಿಸದೆ ಕಲ್ಲು ಕಲ್ಲಿನಲಿ….ಈ ಗೀತೆಯನ್ನು […]
  • vittala temple, anegondi, hampiಶಿಲ್ಪಕಲೆಯ ಮಹಾ ಅನುಭೂತಿ: ಹಂಪಿ ವಿಜಯ ವಿಠಲ ದೇವಸ್ಥಾನ
    January 25, 2021
    ಹಂಪಿ ಎಂದರೆ ನಮ್ಮ ಕಣ್ಮುಂದೆ ಸುಳಿಯುವುದು ಪುರಾತನ ದೇಗುಲಗಳ […]
  • Pay Mysore Property Tax Online with MCCಕ್ಯೂಆರ್‌ ಕೋಡ್‌ ಮೂಲಕ ಮೈಸೂರು ನಗರದಲ್ಲಿ ಆಸ್ತಿ ತೆರಿಗೆ ಪಾವತಿ
    January 6, 2021
    ಕರ್ನಾಟಕದ ಪ್ರತಿಯೊಂದು ನಗರ-ಹಳ್ಳಿಗಳಲ್ಲೂ ವಾರ್ಷಿಕ ಆಸ್ತಿ […]
  • ಕರ್ನಾಟಕದಲ್ಲಿ ಉದ್ದಿಮೆ ಪರವಾನಿಗೆಗಳ ಸ್ವಯಂ ನವೀಕರಣ
    December 18, 2020
    ದೇಶದ ಉದ್ಯಮ ಸ್ನೇಹಿ ರಾಜ್ಯಗಳಲ್ಲಿ ಒಂದು ಎಂಬ ಹೆಗ್ಗಳಿಕೆ […]

Tags

coronavirus death certificate government policies Hampi sightseeing hampi temple how to Manikyandhara sub registrar bangalore sudha murty temples Vijayanagara Empire ಅರ್ಜಿ ಸಲ್ಲಿಸುವುದು ಕೊರೊನ ವೈರಸ್ ವಿಜಯ ನಗರ ಸಾಮ್ರಾಜ್ಯ ಹಂಪಿ
Airport Commute
Home | About Us | Feedback | Disclaimer | Sitemap
Copyright © 2021 karnataka.com.
This website uses cookies to improve your experience. We'll assume you're ok with this, but you can opt-out if you wish.Accept Read More
Privacy & Cookies Policy

Privacy Overview

This website uses cookies to improve your experience while you navigate through the website. Out of these cookies, the cookies that are categorized as necessary are stored on your browser as they are essential for the working of basic functionalities of the website. We also use third-party cookies that help us analyze and understand how you use this website. These cookies will be stored in your browser only with your consent. You also have the option to opt-out of these cookies. But opting out of some of these cookies may have an effect on your browsing experience.
Necessary
Always Enabled

Necessary cookies are absolutely essential for the website to function properly. This category only includes cookies that ensures basic functionalities and security features of the website. These cookies do not store any personal information.

Non-necessary

Any cookies that may not be particularly necessary for the website to function and is used specifically to collect user personal data via analytics, ads, other embedded contents are termed as non-necessary cookies. It is mandatory to procure user consent prior to running these cookies on your website.

SAVE & ACCEPT