X

ಮನೆ ಬಾಗಿಲಿಗೆ ಸೇವೆ ಒದಗಿಸಲಿರುವ “ಜನ ಸೇವಕ”

ಸರಕಾರದ ಯೋಜನೆ ಮನೆ ಬಾಗಿಲಿಗೆ.. ಈ ಘೋಷಣೆಯೊಂದಿಗೆ, ಆರಂಭವಾದ ಕಾರ್ಯಕ್ರಮ ಜನ ಸೇವಕ. ಸರಕಾರ ನಿಜವಾದ ಜನ ಸೇವಕ ಎಂಬ ಪರಿಕಲ್ಪನೆಯಡಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ 4 ವಿಧಾನ ಸಭಾ ಕ್ಷೇತ್ರಗಳಲ್ಲಿ ಯಶಸ್ವಿ ಯಾಗಿ ಜಾರಿಗೊಳಿಸಿದ ಬಳಿಕ, ಇದೀಗ, ರಾಜ್ಯ ಸರಕಾರ ಇದನ್ನು   ಬೆಂಗಳೂರಿನಲ್ಲಿ  ಆರಂಭಿಸಿದೆ.  ರಾಜ್ಯದ 66ನೇ  ರಾಜ್ಯೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಈ  ಜನಸೇವಕ ಕಾರ್ಯಕ್ರಮದಡಿ  ೫೬  ಸರ್ಕಾರಿ ಸೇವೆಗಳನ್ನು  ಫಲಾನುಭವಿಗಳ  ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

 ಯೋಜನೆಯನ್ನು ಬೆಂಗಳೂರಿನ  ಮಲ್ಲೇಶ್ವರಂ ಕ್ಷೇತ್ರದಲ್ಲಿ ಇದೀಗ ಆರಂಭಿಸಲಾಗಿದೆ. ಮುಂದಿನ ಗಣರಾಜ್ಯೋತ್ಸವ ದಿನ (ಜನವರಿ ೨೬,೨೦೨೨ರಿಂದ) ಇದನ್ನು ರಾಜ್ಯಾದ್ಯಂತ ಜಾರಿಗೊಳಿಸಲು ಸರಕಾರ ನಿರ್ಧರಿಸಿದೆ.

ಜನಸೇವಕ ಕಾರ್ಯಕ್ರಮ: ಪ್ರಾಯೋಗಿಕ ಜಾರಿ 

ಜನ ಸೇವಕ ಕಾರ್ಯಕ್ರಮ ರಾಜ್ಯ ಸರಕಾರದ ವಿನೂತನ ಕಾರ್ಯಕ್ರಮ. ಮೊದಲಿಗೆ ಪ್ರಾಯೋಗಿಕ ನೆಲೆಯಲ್ಲಿ ಇದನ್ನು  ಬೆಂಗಳೂರಿನ ನಾಲ್ಕು ವಿಧಾನ ಸಭಾ ಕ್ಷೇತ್ರಗಳಾದ   ದಾಸರಹಳ್ಳಿ, ಬೊಮ್ಮನಹಳ್ಳಿ, ರಾಜಾಜಿನಗರ ಮತ್ತು ಮಹದೇವಪುರಗಳಲ್ಲಿ ಅನುಷ್ಠಾನಗೊಳಿಸಲಾಯಿತು. ಬಳಿಕ ಇದನ್ನು  ಯಶವಂತಪುರಕ್ಕೆ   ವಿಸ್ತರಿಸಲಾಯಿತು.  ಪ್ರಾಯೋಗಿಕ ಅನುಷ್ಠಾನ ಸಂದರ್ಭದಲ್ಲಿ ಸುಮಾರು 93,000 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ನಿಯಮ ಪ್ರಕಾರವೇ ಎಲ್ಲರಿಗು ಮನೆ ಬಾಗಿಲಿಗೆ ಸೇವೆ ಒದಗಿಸಲಾಯಿತು.  ಕೋವಿಡ್ -೧೯   ಸಮಯದಲ್ಲಿ, ಸರಕಾರ ನಾನಾ ಕಾರಣಗಳಿಗೆ ಇದನ್ನು   ತಡೆಹಿಡಿದಿತ್ತು. ಇದೀಗ ಎಲ್ಲ ತೆರನಾದ  ಲಾಕ್‌ಡೌನ್‌ಗಳ ನಿಯಮಾವಳಿಗಳನ್ನು ಸಡಿಲಗೊಳಿಸಲಾಗಿರುವುದರಿಂದ, ಈ ಯೋಜನೆಯನ್ನು ಪುನರಾರಂಭಿಸಲಾಗಿದೆ. 

ಜನ ಸೇವಕ ಕಾರ್ಯಕ್ರಮ ಎಂದರೇನು? 

ಕರ್ನಾಟಕ ರಾಜ್ಯ ಸರಕು ಮಹತ್ವಾಕಾಂಕ್ಷೆಯ ಯೋಜನೆ ಇದು. ಈ ಯೋಆನೆಯಡಿ, ರಾಜ್ಯ ಸರಕಾರದ ವಿವಿಧ ಇಲಾಖೆಗಳು  ಫಲಾನುಭವಿಗಳ  ಮನೆ ಬಾಗಿಲಿಗೆ ಸರ್ಕಾರಿ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅರ್ಜಿಗಳನ್ನು ಸಲ್ಲಿಸಲು, ದಾಖಲೆಗಳನ್ನು ಪರಿಶೀಲಿಸಲು, ಇತ್ಯಾದಿಗಳನ್ನು ಪಡೆಯಲು ವಿವಿಧ ಸರ್ಕಾರಿ ಇಲಾಖೆಗಳಿಗೆ ಭೇಟಿ ನೀಡಲು ಸಾಧ್ಯವಾಗದ ಜನರಿಗೆ ಈ ಕಾರ್ಯಕ್ರಮವು ಬಹು  ಪ್ರಯೋಜನಕಾರಿಯಾಗಿದೆ.  ಇಲ್ಲಿ, ಅರ್ಜಿಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಿ, ಆಪ್ ಮೂಲಕ ಅವುಗಳ ವಿವರ ಪಡೆಯಲು ಸಾಧ್ಯವಿದೆ.  

ಈ ಕಾರ್ಯಕ್ರಮದಡಿ ಲಭ್ಯವಿರುವ ಸೇವೆಗಳು 

ಈ ಯೋಜನೆ ಅಡಿ ಪ್ರಸ್ತುತ ೮ ಇಲಾಖೆಗಳ ೫೮ ಯೋಜನೆಗಳು ಲಭ್ಯವಿವೆ 

ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

  •  ಅರೋಗ್ಯ ಕಾರ್ಡ್ 

ಕಂದಾಯ ಇಲಾಖೆ 

  •  ವಿಧವಾ ಪ್ರಮಾಣಪತ್ರ
  •   ಜಾತಿ ಪ್ರಮಾಣ ಪತ್ರಗಳು
  •  ಆದಾಯ ಪ್ರಮಾಣಪತ್ರ
  •  ಭೂಮಿ ಹಿಡುವಳಿ ಪ್ರಮಾಣಪತ್ರ
  •  ಹಿಂದುಳಿದ ಜಾತಿ ಪ್ರಮಾಣ ಪಾತ್ರ 
  •   ಆದಾಯ ಮತ್ತು ಜಾತಿ ಪ್ರಮಾಣಪತ್ರಗಳು
  •  ಕುಟುಂಬ ವೃಕ್ಷದ ದೃಢೀಕರಣ
  •  ಬೋನಾಫೈಡ್ ಪ್ರಮಾಣಪತ್ರ
  •  ನಿವಾಸಿ  ಪ್ರಮಾಣಪತ್ರ
  •  ಆರ್ಥಿಕ ಸ್ಥಿತಿಗತಿ ಪ್ರಮಾಣ ಪಾತ್ರ
  •  ನಾನ್-ಕ್ರೀಮಿ ಲೇಯರ್ ಪ್ರಮಾಣಪತ್ರ
  •  ಅನುಕಂಪದ   ನೇಮಕಾತಿಗಾಗಿ ಆದಾಯ ಪ್ರಮಾಣಪತ್ರ
  • ನಿರುದ್ಯೋಗ ಪ್ರಮಾಣಪತ್ರ
  •  ಜೀವನ ಪ್ರಮಾಣ ಪತ್ರ
  •  ನಿವಾಸ ಪ್ರಮಾಣಪತ್ರ
  •  ಸಂಧ್ಯಾ ಸುರಕ್ಷಾ ಯೋಜನೆ 
  •   ಅಂಗವಿಕಲರ  ಪಿಂಚಣಿ
  •  ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ
  •    ಕುಟುಂಬ ಸದಸ್ಯರ ಜೀವನ  ಪ್ರಮಾಣಪತ್ರ
  •  ಸರಕಾರಿ ಉದ್ಯೋಗ ಇಲ್ಲದಿರುವಿಕೆಯ ಪ್ರಮಾಣ ಪತ್ರ 

ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗು ಇತರ ನಿರ್ಮಾಣ ಕಾರ್ಮಿಕರ ಮಂಡಳಿ 

  • ಶೈಕ್ಷಣಿಕ ಸಹಾಯಕ್ಕಾಗಿ ಅರ್ಜಿ
  • ಮುಂದಿನ ಒಂದು ವರ್ಷ/ಮೂರು ವರ್ಷಗಳವರೆಗೆ ಅಸ್ತಿತ್ವದಲ್ಲಿರುವ ನೋಂದಣಿಯ ಮುಂದುವರಿಕೆಗಾಗಿ ಅರ್ಜಿ
  • ಅಂತ್ಯಕ್ರಿಯೆ ಮತ್ತು ಪರಿಹಾರದ ಸಹಾಯಕ್ಕಾಗಿ ಅರ್ಜಿ
  • ಮದುವೆ ಸಹಾಯಕ್ಕಾಗಿ ಅರ್ಜಿ
  • ಹೆರಿಗೆ  ಸಹಾಯಕ್ಕಾಗಿ ಅರ್ಜಿ
  • ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಗಾಗಿ ಅರ್ಜಿ
  •  ಗುರುತಿನ ಚೀಟಿಯ ನಕಲು ಪ್ರತಿ  ವಿತರಣೆಗಾಗಿ ಅರ್ಜಿ
  • ಪಿಂಚಣಿಗಾಗಿ ಅರ್ಜಿ
  • ವೈದ್ಯಕೀಯ ಸಹಾಯಕ್ಕಾಗಿ ಅರ್ಜಿ (ಕಾರ್ಮಿಕ ಅರೋಗ್ಯ ಭಾಗ್ಯ)

ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ

  • ಹೊಸ ಎಪಿಲ್ ರೇಷನ್ ಕಾರ್ಡ್ ಗೆ ಅರ್ಜಿ 

ಅಂಗವಿಕಲರು ಹಾಗು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ 

  • ಹಿರಿಯ ನಾಗರಿಕರ ಗುರುತಿನ ಚೀಟಿಗಾಗಿ ಅರ್ಜಿ 

ಬಿಬಿಎಂಪಿ 

  • ಸೇಲ್ ಡೀಡ್ ಆಧಾರದ ಮೇಲೆ ಖಾತಾ ವರ್ಗಾವಣೆ
  • ನ್ಯಾಯಾಲಯದ ತೀರ್ಪಿನ ಮೂಲಕ ಖಾತಾ ವರ್ಗಾವಣೆ
  • ಉಡುಗೊರೆ  ಮೂಲಕ ಖಾತಾ ವರ್ಗಾವಣೆ
  • ವಿಭಜನೆ/ಬಿಡುಗಡೆ ಪತ್ರದ ಮೂಲಕ ಖಾತೆ ವಿಭಜನೆ 
  • ವಿಭಜನಾ ಪತ್ರದ ಮೂಲಕ ಖಾತಾ ವರ್ಗಾವಣೆ
  • ಉತ್ತರಾಧಿಕಾರದ ಮೂಲಕ ಖಾತಾ ವರ್ಗಾವಣೆ
  • ಬಿಡುಗಡೆ ಪತ್ರದ ಮೂಲಕ ಖಾತಾ ವರ್ಗಾವಣೆ
  • ಉಡುಗೊರೆಯ ಮೂಲಕ ಖಾತಾ ವಿಭಜನೆ
  • ನೋಂದಣಿಗಾಗಿ ಖಾತಾ ನೋಂದಣಿ 
  • ಮಾರಾಟ ಪತ್ರದ ಆಧಾರದ ಮೇಲೆ ಖಾತಾ ವಿಭಜನೆ
  • ನ್ಯಾಯಾಲಯದ ತೀರ್ಪಿನ ಮೂಲಕ ಖಾತಾ ವಿಭಜನೆ
  • ಉತ್ತರಾಧಿಕಾರದ ಮೂಲಕ ಖಾತಾ ವಿಭಜನೆ
  • ನ್ಯಾಯಾಲಯದ ತೀರ್ಪಿನ ಮೂಲಕ ಖಾತಾ ನೋಂದಣಿ
  • ಉಡುಗೊರೆ  ಮೂಲಕ ಖಾತಾ ನೋಂದಣಿ
  • ಉತ್ತರಾಧಿಕಾರದ ಮೂಲಕ ಖಾತಾ ನೋಂದಣಿ
  • ವಿಭಜನಾ ಪತ್ರದ ಮೂಲಕ ಖಾತಾ ನೋಂದಣಿ
  • ಮಾರಾಟ ಪತ್ರದ ಆಧಾರದ ಮೇಲೆ ಖಾತಾ ಸಂಯೋಜನೆ
  • ಬಿಡುಗಡೆ ಪತ್ರದ ಮೂಲಕ ಖಾತಾ ನೋಂದಣಿ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 

  • ಪೊಲೀಸ್ ಪರಿಶೀಲನೆ ಪ್ರಮಾಣಪತ್ರ (PVC/PCC) – ಉದ್ಯೋಗದ ಉದ್ದೇಶ – ಪೂರ್ವಾಪರ ಪರಿಶೀಲನೆ ಮಾತ್ರ (ಪೊಲೀಸ್ ಠಾಣೆ ದಾಖಲೆಗಳ ಪ್ರಕಾರ)
  • ಪೊಲೀಸ್ ಪರಿಶೀಲನಾ ಪ್ರಮಾಣಪತ್ರ (PVC) – ಮನೆ ಕೆಲಸದವರು / ಮನೆ  ನಿರ್ವಹಣೆ ಪೂರ್ವಾಪರಗಳು ಮತ್ತು ವಿಳಾಸ ಪರಿಶೀಲನೆ
  • ಪೊಲೀಸ್ ಪರಿಶೀಲನೆ ಪ್ರಮಾಣಪತ್ರ (PVC/PCC) – ಉದ್ಯೋಗದ ಉದ್ದೇಶ – ಪೂರ್ವಾಪರಗಳು ಮತ್ತು ವಿಳಾಸ ಪರಿಶೀಲನೆ

ಆಧಾರ್ ಸೇವೆಗಳು 

  • ಆಧಾರ್ ಮಾಹಿತಿ   ನವೀಕರಣ / ತಿದ್ದುಪಡಿ / ಆಧಾರ್‌ನಲ್ಲಿ ಬದಲಾವಣೆಗಳು
  • ಆಧಾರ್ ಹೊಸ ದಾಖಲಾತಿ
  • ಕಡ್ಡಾಯ ಬಯೋಮೆಟ್ರಿಕ್ ನವೀಕರಣ (5 ರಿಂದ 15 ನೇ ವರ್ಷಗಳ ನಡುವೆ)
  • ಬಯೋಮೆಟ್ರಿಕ್ ನವೀಕರಣ

ಜನ ಸೇವಕ ಕಾರ್ಯಕ್ರಮ ಒಂದು ವಿಶಿಷ್ಟ ಕಾರ್ಯಕ್ರಮ. ಇದರ ಮೂಲಕ ಸೇವೆ ಪಡೆಯಲು  ಅದಕ್ಕಾಗಿ ಮೊದಲಿಗೆ ಅಗತ್ಯ ಸಮಯವನ್ನು ಮೊದಲೇ ಗೊತ್ತುಪಡಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಅವರು   ಜನಸೇವಕ ವೆಬ್‌ಸೈಟ್, ಜನಸೇವಕ ಅಪ್ಲಿಕೇಶನ್ ಅಥವಾ ಜನಸೇವಕ ಟೋಲ್-ಫ್ರೀ ಸಂಖ್ಯೆ, 080-4455-4455 ಗೆ ಕರೆ ಮಾಡುವ ಮೂಲಕ ಸ್ಲಾಟ್  ಬುಕ್ ಮಾಡಲು ಸಾಧ್ಯವಿದೆ. 

ಸ್ಲಾಟ್ ಬುಕ್ ಮಾಡುವ ವಿಧಾನ 

* ಮೊದಲಿಗೆ  ನಿಶುಲ್ಕ  ಕೇಂದ್ರಕ್ಕೆ ಕರೆ ಮಾಡಬೇಕು 080-4455-4455

* ಕರೆ ಕೇಂದ್ರದ ಸಿಬ್ಬಂದಿಯು ನಾಗರೀಕರಿಗೆ ಅವರು ಅಪೇಕ್ಷಿಸುವ  ಸೇವೆಗೆ  ಸಂಬಂಧಿಸಿದಂತೆ ಅಗತ್ಯವಾದ ದಾಖಲೆಗಳು, ಸೇವಾ ಶುಲ್ಕ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುತ್ತಾರೆ. 

* ಬಳಿಕ ನಾಗರೀಕರಿಂದ ಸಮ್ಮತಿ ದೊರೆತರೆ, ಅವರ  ಲಭ್ಯತೆ ಅನುಸಾರ ಸಮಯ ನಿಗದಿಪಡಿಸಿ, OTP ಯನ್ನು ನಾಗರಿಕರ ನೋಂದಾಯಿತ  ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ .  ಅದನ್ನು ಸೇವಾ ವಿತರಣೆಯ ಸಮಯದಲ್ಲಿ ಜನ ಸೇವಕರೊಂದಿಗೆ 

ನಾಗರಿಕರು  ಹಂಚಿಕೊಳ್ಳಬೇಕು

* ಸಮಯ ನಿಗದಿಯಾದ ನಂತರ ಜನಸೇವಕ ಸಿಬ್ಬಂದಿಯನ್ನು ನಾಗರಿಕರ ಮನೆಗೆ ಕಳುಹಿಸಲಾಗುವುದು. ಜನ ಸೇವಕ ಸಿಬ್ಬಂದಿಯು ನಾಗರೀಕರಿಂದ ಒಪ್ಪಲ್ಪಟ್ಟ   ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ಗೂಗಲ್ ಮ್ಯಾಪ್ ಸಹಾಯದೊಂದಿಗೆ ನಾಗರೀಕರ ಮನೆಗೆ ಭೇಟಿ ನೀಡುತ್ತಾರೆ. ಜನಸೇವಕ ಸಿಬ್ಬಂದಿಯು ನಾಗರೀಕರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾಗರೀಕರು ತಮ್ಮ ಮೊಬೈಲ್ ಗೆ ಈಗಾಗಲೇ ಕಳುಹಿಸಲಾದ ಓ.ಟಿ.ಪಿ ಸಂಖ್ಯೆಯನ್ನು ಜನಸೇವಕ ಸಿಬ್ಬಂದಿಗೆ ನೀಡುತ್ತಾರೆ. ನಾಗರೀಕರು ಅರ್ಜಿ ಸಲ್ಲಿಸಲು ಅಗತ್ಯ ಸಹಾಯವನ್ನು ಜನಸೇವಕ ಸಿಬ್ಬಂದಿ ನೀಡುತ್ತಾರೆ. ತದನಂತರ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಜನ ಸೇವಕ ಸಿಬ್ಬಂದಿಯು ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡುತ್ತಾರೆ.

ಜನ ಸೇವಕ ಸಿಬ್ಬಂದಿಯು ಸೇವೆಗೆ ತಗಲುವ ಇಲಾಖಾ ಶುಲ್ಕದ ಜೊತೆಗೆ ಸೇವಾ ಶುಲ್ಕವನ್ನು ನಾಗರೀಕರಿಂದ ಸಂಗ್ರಹಿಸುತ್ತಾರೆ. ನಾಗರೀಕರು ಕೋರಿದ ಸೇವೆಗೆ ಅರ್ಜಿ ಸ್ವೀಕರಿಸಿದ ನಂತರ ನಾಗರೀಕರ ಮೊಬೈಲ್ ಗೆ ಎಸ್.ಎಂ.ಎಸ್ ಮೂಲಕ ಸ್ವೀಕೃತಿ (Acknowledgement) ಕಳುಹಿಸಲಾಗುವುದು.

ಸಂಬಂಧಪಟ್ಟ ಇಲಾಖೆಯಿಂದ ಸೇವಾ ವಿಲೇವಾರಿಯಾದ ನಂತರ ಜನಸೇವಕ ಸಿಬ್ಬಂದಿಯು ನಾಗರೀಕರು ಕೋರಿದ ಸೇವೆಯನ್ನು (ಪ್ರಮಾಣಪತ್ರ / ನಿರಾಕ್ಷೇಪಣಾ ಪತ್ರ / ಅನುಮತಿ ಪತ್ರ / ಪರವಾನಗಿ ಪತ್ರ ಇತ್ಯಾದಿ) ನಾಗರೀಕರ ಮನೆಗೆ ತಲುಪಿಸುತ್ತಾರೆ. ಈ ಸೇವೆ ಒದಗಿಸಿದ ಬಳಿಕ, ಸೇವೆಗಳನ್ನು ಇನ್ನಷ್ಟು ಉತ್ತಮ ಪಡಿಸಲು ನಾಗರೀಕರಿಂದ ಪ್ರತಿಕ್ರಿಯೆ ಸಂಗ್ರಹಿಸಲಾಗುವುದು.

  • ಆನ್ಲೈನ್ ನಲ್ಲಿ ಇಲಾಖೆಯ ವೆಬ್ಸೈಟ್  ಇಲ್ಲಿಗೆ   ಹೋಗಿ ಸ್ಲಾಟ್ ಬೊಕ್ಕ್ ಮಾಡಬಹುದು 

ಆಪ್ ಮೂಲಕ ಸ್ಲಾಟ್ ಬುಕಿಂಗ್ 

  •  ಆಂಡ್ರಾಯ್ಡ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್ ಗೆ ಭೇಟಿ ನೀಡಿ ಮೊಬೈಲ್ ಒನ್ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. 
  •  ಮೊಬೈಲ್ ಆಪ್ ಗೆ ಲಾಗಿನ್ ಆಗಿ ಜನ ಸೇವಕ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಬೇಕು.
  • ಲಭ್ಯವಿರುವ ಸೇವೆಗಳನ್ನು ನಾಗರೀಕರು ಆಪ್ ನಲ್ಲಿ ವೀಕ್ಷಿಸಬಹುದಾಗಿದೆ. ಅಗತ್ಯವಿರುವ ಸೇವೆಯ ಮೇಲೆ ಕ್ಲಿಕ್ ಮಾಡಿದಲ್ಲಿ ಸೇವೆಯ ವಿವರಗಳನ್ನು ಕಾಣಬಹುದಾಗಿದೆ (ಅಗತ್ಯ ದಾಖಲಾತಿಗಳು, ಸೇವಾ ಶುಲ್ಕ ಇತ್ಯಾದಿ).
  • ನಾಗರಿಕರು ಅಗತ್ಯ ಸೇವೆಯನ್ನು ದೃಢೀಕರಿಸಿದಲ್ಲಿ, ಲಭ್ಯವಿರುವ ದಿನಾಂಕ / ಸಮಯವನ್ನು ವೀಕ್ಷಿಸಬಹುದು. ನಾಗರಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಲಭ್ಯವಿರುವ ಸಮಯದಲ್ಲಿ ಯಾವುದೇ ಸಮಯವನ್ನು ನಿಗದಿಪಡಿಸಬಹುದಾಗಿದೆ. ನಾಗರೀಕರು ಸಮಯ ನಿಗದಿ ಪಡಿಸಿದ ತಕ್ಷಣ ಅವರ ಮೊಬೈಲ್ ಗೆ ಒಂದು ಒಟಿಪಿ ಸಂಖ್ಯೆಯನ್ನು ಕಳುಹಿಸಲಾಗುವುದು. ಈ ಸಂಖ್ಯೆಯನ್ನು ನಾಗರಿಕರು ಸೇವೆ ಪಡೆಯುವ ಸಂದರ್ಭದಲ್ಲಿ ಜನ ಸೇವಕ ಸಿಬ್ಬಂದಿಗೆ ತಿಳಿಸತಕ್ಕದ್ದು.

ಉಳಿದಂತೆ, ಸೇವೆ ಒದಗಿಸುವ ವಿಧಾನದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ 

ನೀವು ಸಲ್ಲಿಸಿದ ಅರ್ಜಿಯ ವಿವರವನ್ನು ಇಲ್ಲಿ ಪಡೆಯಬಹುದಾಗಿದೆ 

Related Readings

Jolad Rotti:
Related Post