ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ, ಜನಪ್ರಿಯ ಯೋಜನೆಯೆಂದರೆ, ಅದು ಪಿಎಂ ಕಿಸಾನ್. ಕರ್ನಾಟಕದಲ್ಲಿ, ಈ ಯೋಜನೆಯನ್ನು ನಾನಾ ಇಲಾಖೆಗಳ ಸಹಯೋಗದಲ್ಲಿ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ, ಜಾರಿಗೊಳಿಸಲಾಗಿದೆ. ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿಯ ರೈತರನ್ನು ಈ ಯೋಜನೆಯಡಿ ತರಲಾಗಿದೆ.
ಈ ಯೋಜನೆಯ ಧ್ಯೇಯವೆಂದರೆ, ರೈತರಿಗೆ ಹಣಕಾಸಿನ ನೆರವು ನೀಡುವುದು. ಈ ಯೋಜನೆಯನ್ನು 2019ರ ಸಾರ್ವತ್ರಿಕ ಚುನಾವಣೆಯ ಕೆಲವೇ ಸಮಯದ ಮೊದಲು ಪ್ರಧಾನ ಮಂತ್ರಿಗಳು ಘೋಷಿಸಿದರು. ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ, ಸಣ್ಣ ಹಾಗೂ ಅತಿ ಸಣ್ಣ ರೈತರ ಆದಾಯ ಹೆಚ್ಚಳ.
ಈ ಯೋಜನೆಯನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಎಂದು ಹೆಸರಿಸಲಾಗಿದೆ. ಇದೊಂದು ಕೇಂದ್ರ ಸರಕಾರದ ಯೋಜನೆಯಾದರೂ, ಇದರ ಜಾರಿಯಲ್ಲಿ ರಾಜ್ಯ ಸರಕಾರ ಮಹತ್ವದ ಪಾತ್ರ ವಹಿಸುತ್ತದೆ.
ಆದರೆ, ನಾವು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ, ಈ ಯೋಜನೆಯಲ್ಲಿ ಹೆಸರನ್ನು ನೋಂದಾಯಿಸಲು ಅಥವಾ ತೆಗೆದು ಹಾಕಲು ರಾಜ್ಯ ಅಥವಾ ಕೇಂದ್ರ ಸರಕಾರ ಯಾವುದೇ ಮಧ್ಯಸ್ಥಿಕೆದಾರರನ್ನು ಬಳಸಿಕೊಳ್ಳುತ್ತಿಲ್ಲ.
ಕೆಲವು, ಸೈಬರ್ ಅಪರಾಧಿಗಳು, ಈ ಯೋಜನೆಯ ಹೆಸರಿನಲ್ಲಿ, ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂಬ ದೂರುಗಳಿವೆ. ಇಂತಹ ಅಪರಾಧಿಗಳು, ಈ ಯೋಜನೆಯ ಹೆಸರಿನಲ್ಲಿ, ರೈತರ ಬ್ಯಾಂಕ್ ಖಾತೆಯ ಮಾಹಿತಿ, ಡೆಬಿಟ್ ಕಾರ್ಡ್ ಮಾಹಿಗಳನ್ನು ಸಂಗ್ರಹಿಸಿ, ಅವರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುತ್ತಿದ್ದಾರೆ ಎಂಬ ದೂರುಗಳಿವೆ.
ವೆಬ್ ಸೈಟ್: https://raitamitra.karnataka.gov.in/ & https://pmkisan.gov.in/
ಪಿಎಂ ಕಿಸಾನ್: ಒಂದು ಅವಲೋಕನ
ಈ ಯೋಜನೆಯ ಜಾರಿ ಸಂಬಂಧದ ನೋಟಿಫಿಕೇಶನ್ ಪ್ರಕಾರ, 2 ಹೆಕ್ಟೇರ್‍ವರೆಗಿನ ಸಾಗುವಳಿ ಭೂ ಹಿಡುವಳಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯಡಿ, ವಾರ್ಷಿಕವಾಗಿ 18,000 ಮೊತ್ತವನ್ನು ಸರಕಾರದಿಂದ ಪಡೆಯುತ್ತಾರೆ.
ಸರಕಾರ ಈ ಮೊತ್ತವನ್ನು ಮೂರು ಸಮಾನ ಕಂತುಗಳಲ್ಲಿ ನಾಲ್ಕು ತಿಂಗಳ ಅಂತರದಲ್ಲಿ ಪಾವತಿಸುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ, ಈ ಮೊತ್ತವನ್ನು ಮೂರು ಸಮಾನ ಕಂತುಗಳಲ್ಲಿ ರೈತರಿಗೆ ಬಿಡುಗಡೆ ಮಾಡಲಾಗುತ್ತದೆ.
ಈ ಯೋಜನೆಯ ಪ್ರಕಾರ ಒಂದು ಕುಟುಂಬವೆಂದರೆ, ಒಬ್ಬ ರೈತ, ಆತನ ಪತ್ನಿ ಇಬ್ಬರು ಮಕ್ಕಳು (ಅಪ್ರಾಪ್ತರು) ಸೇರುತ್ತಾರೆ. 2 ಹೆಕ್ಟೇರ್‍ಗಿಂತ ಹೆಚ್ಚಿನ ಭೂ ಹಿಡುವಳಿ ಹೊಂದಿರುವ ರೈತರು ಈ ಯೋಜನೆಗೆ ಅರ್ಹರಲ್ಲ.
ಕರ್ನಾಟಕದಲ್ಲಿ ಎಲ್ಲಾ ಭೂ ದಾಖಲೆಗಳು ಗಣಕೀಕರಣಗೊಂಡಿವೆ. ಸರಕಾರ, ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಫಲಾನುಭವಿಗಳ ಮಾಹಿತಿ ದತ್ತಾಂಶ ರೂಪದಲ್ಲಿ ಲಭ್ಯವಿದೆ. ಆದರೂ, ಈ ದಾಖಲೆಗಳ ಕಾರಣಕ್ಕಾಗಿ ಈ ಯೋಜನೆಯ ಲಾಭವನ್ನು ಪಡೆಯಲು ರೈತರಿಗೆ ಸಾಧ್ಯವಿಲ್ಲ.
ಈ ಯೋಜನೆಯ ಪ್ರಕಾರ, ಲಭ್ಯವಿರುವ ದಾಖಲೆಗಳನ್ನು ಪರಿಗಣನೆಗೆ ತೆಗೆದುಕೊಂಡು, ರಾಜ್ಯ ಸರಕಾರ, ಅರ್ಹ ರೈತರ ಪಟ್ಟಿಯನ್ನು, ಅವರ ಹೆಸರು, ಹಳ್ಳಿ, ಜಾತಿ (ಪರಿಶಿಷ್ಟ ಜಾತಿ/ ಜನಾಂಗ), ಲಿಂಗ, ವಯಸ್ಸು, ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ತಯಾರಿಸುತ್ತದೆ.
ಆಧಾರ್ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ, ಅರ್ಜಿದಾರ ರೈತ, ತನ್ನ ಆಧಾರ್ ನೋಂದಣಿ ಸಂಖ್ಯೆ ಹಾಗೂ ಇತರ ದಾಖಲೆಗಳನನ್ನು ಸಲ್ಲಿಸಿ ಈ ಯೋಜನೆ ಸೇರಬಹುದಾಗಿದೆ. ಈ ದಾಖಲೆಗಳೆಂದರೆ, ಮತದಾರ ಗುರುತಿನ ಚೀಟಿ, ಚಾಲನಾ ಪರವಾನಗಿ ಪತ್ರ, ಎನ್‍ಆರ್‍ಇಜಿಎ ಉದ್ಯೋಗ ಕಾರ್ಡ್, ಬ್ಯಾಂಕ್ ದಾಖಲೆ, ಮೊಬೈಲ್ ಸಂಖ್ಯೆಗಳನ್ನು ಸಲ್ಲಿಸಬೇಕಿದೆ.
ನಾನಾ ಯೋಜನೆಗಳ ಫಲಾನುಭವಿಗಳ ಪಟ್ಟಿಯೊಂದಿಗೆ ತುಲನೆ ಮಾಡಿ, ಅಂತಿಮವಾಗಿ, 2 ಹೆಕ್ಟೇರ್ (ಐದು ಎಕರೆ)ಗಿಂತ ಕಡಿಮೆ ಉಳ್ಳ ರೈತರ ಪಟ್ಟಿ ತಯಾರಿಸಲಾಗುತ್ತದೆ. ಈ ಪಟ್ಟಿಯನ್ನು ರೈತರ ನೋಂದಣಿ ಹಾಗೂ ಫಲಾನುಭವಿಗಳ ಮಾಹಿತಿ ಪಟ್ಟಿ (ಎಫ್‍ಆರ್‍ಯುಐಟಿಎಸ್)ನಲ್ಲಿ ಪ್ರಕಟಿಸಲಾಗುತ್ತದೆ. ಪ್ರತಿ ರೈತರಿಗೆ ಒಂದು ಅನನ್ಯ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ.
ಸ್ವಯಂ ಘೋಷಣೆ ಎಂದರೇನು? ಅದರ ಅಗತ್ಯತೆ ಏನು?
ಈ ಯೋಜನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರತಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪ್ರಕಟಿಸಲಾಗುತ್ತದೆ. ಹೀಗೆ ಈ ಯೋಜನೆಗೆ ಅರ್ಹರಾದ ರೈತರು ಒಂದು ಸ್ವಯಂ ಘೋಷಣೆಯನ್ನು ನಿಗದಿತ ಅರ್ಜಿ ನಮೂನೆಯಲ್ಲಿ ಸಲ್ಲಿಸಬೇಕು. ಈ ಸ್ವಯಂ ಘೋಷಣೆಯನ್ನು ಡಿಜಿಟಲ್ ಮಾಧ್ಯಮದ ಮೂಲಕ ಸಲ್ಲಿಸಬಹುದು ಇಲ್ಲವೆ ಸಂಬಂಧಿತ ಅಧಿಕಾರಿಗೆ ಸಲ್ಲಿಸಬಹುದು.
ಈ ಸ್ವಯಂ ಘೋಷಣೆ ಮೂಲಕ, ರೈತನೊಬ್ಬ ತನ್ನ ಆಧಾರ್ ಸಂಖ್ಯೆಯನ್ನು ಬಳಸಲು ಅವಕಾಶ ನೀಡಬೇಕು ಹಾಗೂ ಅದು ನೋಟಿಫಿಕೇಶನ್ ಸಿ ಪ್ರಕಾರ ಸಲ್ಲಿಸಲ್ಪಡಬೇಕು.
ಈ ಪ್ರಕ್ರಿಯೆ ಬಳಿಕ ಮತ್ತೊಮ್ಮೆ, ಅರ್ಹ ರೈತರ ಪಟ್ಟಿಯನ್ನು ಪರಿಷ್ಕರಿಸಲಾಗುತ್ತದೆ. ಹಾಗೂ ಅಂತಿಮ ಪಟ್ಟಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುತ್ತದೆ. ಈ ಯೋಜನೆಗೆ ಹೊಸದಾಗಿ ನೋಂದಾಯಿಸಲ್ಟಟ್ಟ ರೈತರು ನೋಟಿಫೀಕೇಶನ್ ಡಿ ಪ್ರಕಾರ ತಮ್ಮ ಸ್ವಯಂ ಘೋಷಣಾ ಪತ್ರ ಸಲ್ಲಿಸಬೇಕಾಗುತ್ತದೆ.
ಒಂದೊಮ್ಮೆ ಈ ಯೋಜನೆಗೆ ಆಯ್ಕೆಯಾದ ರೈತರು, ತಾವು ಈ ಯೋಜನೆಗೆ ಅನರ್ಹರು ಎಂದು ತಿಳಿಯಲ್ಪಟ್ಟರೆ, ನೋಟಿಫಿಕೇಶನ್ ಇ ಮೂಲಕ, ಇನ್ನೊಂದು ಸ್ವಯಂ ದೃಢೀಕರಣ ಪತ್ರ ಸಲ್ಲಿಸಿ, ತಮ್ಮ ಹೆಸರನ್ನು ಕೈಬಿಡುವಂತೆ ಕೋರಬಹುದು.
ಡಿಜಿಟಲ್ ಮಾಧ್ಯಮದ ಮೂಲಕ, ಈ ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಸಬಹುದು. ಅದಕ್ಕೆ ಅವರು ಇಲೆಕ್ಟ್ರಾನಿಕ್ಸ್ ಸಹಿಯನ್ನು ಬಳಸಬೇಕಾಗುತ್ತದೆ. ಸ್ವಯಂ ಘೋಷಣೆಯ ಬಳಿಕ, ಒಂದು ವಿಶಿಷ್ಟ ಸಂಖ್ಯೆಯನ್ನು ರೈತರಿಗೆ ಕಳುಹಿಸಲಾಗುತ್ತದೆ.
ಅರ್ಜಿದಾರ ರೈತರು, ಈ ಕೆಳಗಿನ ಮಾಹಿತಿಗಳನನ್ನು ತಮ್ಮ ಸ್ವಯಂ ಘೋಷಣಾ ಪತ್ರದೊಂದಿಗೆ ಸಲ್ಲಿಸಬೇಕು.
- ಅರ್ಜಿದಾರ ರೈತನ ಹೆಸರು
- ವಯಸ್ಸು
- ಆಧಾರ್ ಸಂಖ್ಯೆ
- ಮೊಬೈಲ್ ಸಂಖ್ಯೆ
- ವಿಳಾಸ
- ವರ್ಗ
- ಭೂ ದಾಖಲೆಯ ವಿವರ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಅರ್ಜಿ ಸಲ್ಲಿಕೆ ಹೇಗೆ?
ರೈತರು, ಸರಕಾರದ ಬಾಪೂಜಿ ಸೇವಾ ಕೇಂದ್ರ, ರೈತ ಸಂಪರ್ಕ ಕೇಂದ್ರಗಳು, ಅಟಲ್ ಜಿ ಜನಸ್ನೇಹಿ ಕೇಂದ್ರಗಳು ಹಾಗೂ ಇನ್ನಿತರ ಸರಕಾರದ ಸೇವಾದಾತ ಕೇಂದ್ರಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಅರ್ಜಿ ಸಲ್ಲಿಸಬಹುದು.
ಪಿಎಂ ಕಿಸಾನ್‍ಗೆ ಅರ್ಜಿ ಸಲ್ಲಿಸಲು ಅಗತ್ಯವಾದ ಅರ್ಹತೆಗಳು
- ಅರ್ಜಿದಾರ ಸಣ್ಣ ಅಥವಾ ಅತಿ ಸಣ್ಣ ರೈತನಾಗಿರಬೇಕು.
- ಅರ್ಜಿದಾರ 2 ಹೆಕ್ಟೇರ್‍ಗಿಂತ ಕಡಿಮೆ ಸಾಗುವಳಿ ಭೂ ಹಿಡುವಳಿ ಹೊಂದಿರಬೇಕು.
- ಬ್ಯಾಂಕ್ ಖಾತೆ ಹೊಂದಿರಬೇಕು
- ಅರಣ್ಯ ಪ್ರದೇಶದಲ್ಲಿ ಸಾಗುವಳಿ ಪತ್ರ ಹೊಂದಿರುವ ಬುಡಕಟ್ಟು ಜನರು
ಪಿಎಂ ಕಿಸಾನ್‍ಗೆ ಅರ್ಜಿ ಸಲ್ಲಿಸಲು ರಾಜ್ಯದಲ್ಲಿ ಅಗತ್ಯವಿರುವ ದಾಖಲೆಗಳು
- ಭೂ ಹಿಡುವಳಿ ದಾಖಲೆಗಳು
- ಬ್ಯಾಂಕ್ ಖಾತೆ ದಾಖಲೆಗಳು
- ಮೊದಲ ಕಂತಿನ ಬಳಿಕ, ಆಧಾರ್ ಸಂಖ್ಯೆ ಸಲ್ಲಿಕೆ ಕಡ್ಡಾಯ
ಪಿಎಂ ಕಿಸಾನ್‍ಗೆ ಯಾರೆಲ್ಲಾ ಅರ್ಹರಲ್ಲ?
- ಎರಡು ಹೆಕ್ಟೇರ್‍ಗಿಂತ ಹೆಚ್ಚಿನ ಭೂ ಹಿಡುವಳಿ ಹೊಂದಿರುವ ರೈತರು
- ಸಾಂವಿಧಾನಿಕ ಹುದ್ದೆ ಈ ಹಿಂದೆ ಹೊಂದಿದ್ದ/ ಈಗ ಹೊಂದಿರುವ ವ್ಯಕ್ತಿಗಳ ರೈತ ಕುಟುಂಬ
- ಅರ್ಜಿದಾರ ರೈತನ ಕುಟುಂಬಸ್ಥರು ಹಾಲಿ ಅಥವಾ ಮಾಜಿ ಕೇಂದ್ರ/ ರಾಜ್ಯ ಸಚಿವರಾಗಿರಬಾರದು, ಹಾಲಿ/ ಮಾಜಿ ಲೋಕಸಭಾ, ರಾಜ್ಯಸಭಾ, ವಿಧಾನಸಭಾ, ವಿಧಾನ ಪರಿಷತ್ ಸದಸ್ಯರಾಗಿರಬಾರದು, ಸ್ಥಳೀಯ ಮಹಾನಗರ ಪಾಲಿಕೆಯ ಹಾಲಿ/ ಮಾಜಿ ಮೇಯರ್ ಆಗಿರಬಾರದು ಅಥವಾ ಹಾಲಿ/ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿರಬಾರದು.
- ಸೇವೆಯಲ್ಲಿರುವ/ ಸೇವೆಯಿಂದ ನಿವೃತ್ತರಾದ ರಾಜ್ಯ/ ಕೇಂದ್ರ ಸರಕಾರದ ಅಧಿಕಾರಿಗಳ ಕುಟುಂಬಗಳು, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು. ಆದರೆ, ಗ್ರೂಪ್ ಡಿ/ ನಾಲ್ಕನೆ ಗ್ರೂಪ್ ಉದ್ಯೋಗಿಗಳು, ಹೊರ ಗುತ್ತಿಗೆ ಸೇವೆಯ ಉದ್ಯೋಗಿಗಳಿಗೆ ವಿನಾಯಿತಿ ಇದೆ.
- ವೃತ್ತಿಪರ ಸೇವೆಯಲ್ಲಿರುವ ವೈದ್ಯರು, ಇಂಜಿನಿಯರ್‍ಗಳು, ವಕೀಲರು, ಲೆಕ್ಕಪತ್ರ ಶೋಧಕರು, ವಿನ್ಯಾಸಗಾರರು, ಹಾಗೂ ಈ ಸೇವೆಗಳಲ್ಲಿ ನಿರತರಾಗಿರುವವರು.
- ಹಿಂದಿನ ಆರ್ಥಿಕ ವರ್ಷದಲ್ಲಿ ಆದಾಯ ಕರ ಪಾವತಿದಾರರು.
ರಾಜ್ಯ ಸರಕಾರ, ಹಳ್ಳಿಗಳಲ್ಲಿನ ರೈತರ ಕುಟುಂಬದ ದತ್ತಾಂಶ ತಯಾರಿಸಿ, ಆ ಮೂಲಕ, ಅರ್ಹ ರೈತರನ್ನು ಈ ಯೋಜನೆಗೆ ಆಯ್ಕೆ ಮಾಡುತ್ತದೆ. ಒಂದೊಮ್ಮೆ ರೈತರು ಸುಳ್ಳು ಸ್ವಯಂ ಘೋಷಣೆ ನೀಡಿದ್ದರೆ, ಅಂತಹ ಫಲಾನುಭವಿಗಳು, ತಾವು ಪಡೆದ ಮೊತ್ತವನ್ನು ಸರಕಾರಕ್ಕೆ ಹಿಂತಿರುಗಿಸಬೇಕಾಗುತ್ತದೆ. ಇಲ್ಲವಾದರೆ, ಸರಕಾರ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ.
ಕೃಷಿ ಇಲಾಖೆಯ ಆಯುಕ್ತರು, ಜಂಟಿ ನಿದೇಶಕರು, ಸಹಾಯಕ ನಿರ್ದೇಶಕರು, ಈ ಯೋಜನೆಯನ್ನು ಜಿಲ್ಲಾ/ ತಾಲೂಕು ಮಟ್ಟದಲ್ಲಿ ಜಾರಿಗೊಳಿಸುತ್ತಾರೆ. ಈ ಎಲ್ಲಾ ಅಧಿಕಾರಿಗಳು, ಕೇಂದ್ರ ಸರಕಾರದ ಮಾರ್ಗಸೂಚಿಗನುಗುಣವಾಗಿ ಅವರು ಈ ಅಧಿಕಾರಿಗಳು ಕೆಲಸ ಮಾಡಬೇಕಾಗುತ್ತದೆ.
ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ
ಕರ್ನಾಟಕದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ಎಲ್ಲಾ ರೈತರಿಂದ ಈ ಯೋಜನೆ ಅನುಷ್ಠಾನಕ್ಕೆ ಸ್ವಯಂ ಘೋಷಣಾ ಪತ್ರ ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿದೆ. ಒಂದೊಮ್ಮೆ ಯಾರಾದರೂ ರೈತರು, ಈ ಯೋಜನೆಗೆ ಅರ್ಜಿ ಸಲ್ಲಿಸಲು ವಿಫಲವಾದರೆ, ಅಥವಾ ಸ್ವಯಂ ಘೋಷಣಾ ಪತ್ರ ಸಲ್ಲಿಸಲು ಸಮಸ್ಯೆ ಎದುರಿಸಿದರೆ, ಅವರು, ಗ್ರಾಮ ಲೆಕ್ಕಾಧಿಕಾರಿ ಕಚೇರಿಯನ್ನು ಸಂಪರ್ಕಿಸಬಹುದು. ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಕೂಡಾ ಈ ಬಗ್ಗೆಗಿನ ಮಾಹಿತಿ ದೊರಕುತ್ತದೆ.
ಆದರೆ, ಈ ಯೋಜನೆಗೆ ಅರ್ಜಿ ಸಲ್ಲಿಸುವ ರೈತರು ಹೆಚ್ಚು ಜಾಗರೂಕತೆ ಇಂದ ಇರಬೇಕಿದೆ. ಏಕೆಂದರೆ, ರಾಜ್ಯದ ಪೊಲೀಸರು, ಈ ಯೋಜನೆಯಡಿ, ಸೈಬರ್ ಅಪರಾಧ ನಡೆಯುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ಅಧಿಕಾರಿಗಳ ಪ್ರಕಾರ, ದೊಡ್ಡ ಮಟ್ಟದಲ್ಲಿ ಸೈಬರ್ ಕ್ರಿಮಿನಲ್‍ಗಳು ರೈತರನ್ನು ಸಂಪರ್ಕಿಸಿ, ಮೋಸ ಮಾಡಲು ಯತ್ನಿಸುತ್ತಿದ್ದಾರೆ.
ರೈತರು ಯಾವುದೇ ಕಾರಣಕ್ಕೆ, ತಮ್ಮ ಬ್ಯಾಂಕ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಗಳನ್ನು ಹಂಚ ಬಾರದು ಎಂದು ಅಧಿಕಾರಿಗಳು ಕೋರಿದ್ದಾರೆ. ಯಾವುದಾದರೂ ಸೈಬರ್ ಅಪರಾಧಿಗಳು ಮೋಸ ಮಾಡಲು ಯತ್ನಿಸಿದರೆ, ರೈತರು ಪೊಲೀಸರಿಗೆ 100 ನಂಬರ್ ಮೂಲಕ ದೂರು ನೀಡಲು ಕೋರಲಾಗಿದೆ.
ಕರ್ನಾಟಕ ಸರಕಾರ ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಮಾಹಿತಿಯನ್ನು ಇಲ್ಲಿ ಪಡೆಯಬಹುದು.
ಈ ವೆಬ್‍ಸೈಟ್‍ನಲ್ಲಿ ತಮ್ಮ ಮಾಹಿತಿಗಳನ್ನು ನೋಂದಾಯಿಸಿಕೊಂಡು, ರೈತರು, ಈ ಎಲ್ಲಾ ಕಲ್ಯಾಣ ಯೋಜನೆಗಳ ಮಾಹಿತಿ ಪಡೆದು, ಅದರ ಸದುಪಯೋಗ ಪಡೆಯಬಹುದು. ಇದಕ್ಕಾಗಿ ಒಂದು ಲಾಗಿನ್ ಹೆಸರು ಮತ್ತು ಪಾಸ್‍ವರ್ಡ್ ಬೇಕಿದೆ.
Related Readings