X

ಬೆಂಗಳೂರಿನಲ್ಲಿ ಆನ್‍ಲೈನ್ ಎಫ್‍ಐಆರ್ ಹಾಗೂ ಕಳ್ಳತನ ಬಗ್ಗೆ ಇ-ರಿಪೋರ್ಟ್

ನಿಮಗೆ ಬೆಂಗಳೂರಿನಲ್ಲಿ ಆನ್‍ಲೈನ್ ಪ್ರಥಮ ವರ್ತಮಾನ ವರದಿ (ಎಫ್‍ಐಆರ್) ದಾಖಲಿಸಲು ಸಾಧ್ಯವಿದೆಯೆ? ಉತ್ತರ: ನಿಮಗೆ ಸಾಧ್ಯವಿಲ್ಲ. ಆದರೂ, ನೀವೂ ಬೆಂಗಳೂರಿನಲ್ಲಿ ನಿಮ್ಮ ಕಳೆದು ಹೋದ ವಸ್ತುಗಳ ಬಗ್ಗೆ ಆನ್‍ಲೈನ್ ವರದಿ ಸಲ್ಲಿಸಬಹುದು. ಇದನ್ನು ನಗರ ಪೊಲೀಸರ ಅಂತರ್ಜಾಲ ಹಾಗೂ ಇ-ಲಾಸ್ಟ್ ರಿಪೊರ್ಟ್ ಆಪ್ ಮೂಲಕ ದಾಖಲಿಸಲು ಸಾಧ್ಯವಿದೆ.

ಇ-ಲಾಸ್ಟ್ ಆಪ್ ಮೂಲಕ, ನಿಮಗೆ ಕಳೆದು ಹೋದ ವಸ್ತುಗಳ ವರದಿ-ಆನ್‍ಲೈನ್ ಮೂಲಕ ಎಫ್‍ಐಆರ್ ದಾಖಲಿಸುವ ಮಾಹಿತಿ ಬೇಕಿದೆಯೆ? ಈ ಲೇಖನದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗಿದೆ. ಪ್ರಥಮ ವರ್ತಮಾನ ವರದಿ ಎಂದರೆ ಏನು?, ಅದನ್ನು ಏಕೆ ದಾಖಲಿಸಬೇಕು?, ಅದನ್ನು ಆನ್‍ಲೈನ್ ಮೂಲಕ ಸಲ್ಲಿಸುವುದು ಹೇಗೆ ಎಂಬ ವಿಷಯಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಹೌದು; ಯಾರೂ ಕೂಡಾ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವುದನ್ನು ಇಷ್ಟ ಪಡುವುದಿಲ್ಲ. ಆದರೆ ಕೆಲವೊಮ್ಮೆ ನೀವು ಹೋಗಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ನೀವು ಅಪರಾಧ ಪ್ರಕರಣವೊಂದರ ಬಲಿಪಶುವಾಗಿದ್ದರೆ ಅಥವಾ, ನೀವು ಅಪರಾಧ ಘಟನೆಯೊಂದು ನಿಮ್ಮ ಗಮನಕ್ಕೆ ಬಂದರೆ, ಅದನ್ನು ಪೊಲೀಸರ ಗಮನಕ್ಕೆ ತಂದು ಪ್ರಥಮ ವರ್ತಮಾನ ವರದಿಯನ್ನು ದಾಖಲಿಸುವುದು ನಿಮ್ಮ ಹಕ್ಕು ಹಾಗೂ ಕರ್ತವ್ಯವಾಗಿರುತ್ತದೆ. ಇದರ ಆಧಾರದ ಮೇಲೆ ಪೊಲೀಸ್ ತನಿಖೆ ಆರಂಭವಾಗುತ್ತದೆ. ಬೆಂಗಳೂರಿನಲ್ಲಿ ಆನ್‍ಲೈನ್ ಎಫ್‍ಐಆರ್ ಹಾಗೂ ಅದನ್ನು ದಾಖಲಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ.

ಬೆಂಗಳೂರಿನಲ್ಲಿ ಆನ್‍ಲೈನ್ ಮೂಲಕ ಎಫ್‍ಐಆರ್: ಕಳೆದುಹೋದ ವಸ್ತುಗಳ ಬಗ್ಗೆ ವೆಬ್‍ಸೈಟ್-ಆಪ್ ಮೂಲಕ ದೂರು ದಾಖಲಿಸುವುದು.

ಕಳೆದು ಹೋದ ವಸ್ತು/ ದಾಖಲೆ ಬಗ್ಗೆ ಹೇಗೆ ಆನ್‍ಲೈನ್‍ನಲ್ಲಿ ದೂರು ದಾಖಲು?

ನೀವು ಆನ್‍ಲೈನ್‍ನಲ್ಲಿ ಯಾವುದೇ ಎಫ್‍ಐಆರ್ ದಾಖಲಿಸಲು ಸಾಧ್ಯವಿಲ್ಲ. ಆದರೆ, ನೀವು ಕಳೆದುಕೊಂಡಿರುವ ಮುಖ್ಯವಾದ ದಾಖಲೆ/ ವಸ್ತುಗಳ ಬಗ್ಗೆ ಬೆಂಗಳೂರು ನಗರ ಪೊಲೀಸರ ಇ-ಲಾಸ್ಟ್ & ಫೌಂಡ್ ಆಪ್ ಅಥವಾ ವೆಬ್‍ಸೈಟ್‍ನಲ್ಲಿ ದೂರು ದಾಖಲಿಸಲು ಸಾಧ್ಯವಿದೆ. ಅದನ್ನು ಈ ಪ್ರಕಾರ ದಾಖಲಿಸಬೇಕು

  • ವೆಬ್‍ಸೈಟ್‍ಗೆ ಲಾಗಿನ್ ಆಗಿ ಅಥವಾ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
  • ನೀವು ಕಳೆದುಕೊಂಡಿರುವ ವಸ್ತು/ ದಾಖಲೆ ಬಗ್ಗೆಗಿನ ವಿವರ ದಾಖಲಿಸಿ
  • ಬಳಿಕ ಅದಕ್ಕೆ ಸ್ವೀಕೃತಿ ಪತ್ರವನ್ನು ಅಥವಾ ನಮೂನೆ ಸಂಖ್ಯೆ 76ಎ ಪಡೆಯಿರಿ

ಸೂಚನೆ: ನೀವು ವಿಮೆ ಅಥವಾ ಯಾವುದೇ ದಾಖಲೆಯ ನಕಲು ಪಡೆಯಲು, ಈ 76ಎ ನಮೂನೆ ಹಾಜರು ಪಡಿಸಬೇಕು

ಬೆಂಗಳೂರಿನಲ್ಲಿ ಆನ್‍ಲೈನ್ ಎಫ್‍ಐಆರ್: ನಿಜಕ್ಕೂ ಆನ್‍ಲೈನ್‍ನಲ್ಲಿ ಎಫ್‍ಐಆರ್ ದಾಖಲಿಸಲು ಸಾಧ್ಯವಿದೆಯೆ?

ಅನ್‍ಲೈನ್‍ನಲ್ಲಿ ಎಫ್‍ಐಆರ್ ದಾಖಲಿಸಲು ಸಾಧ್ಯವಿಲ್ಲ. ಬದಲಿಗೆ ಪ್ರತಿಯೋರ್ವರೂ ಪೊಲೀಸ್ ಠಾಣೆಗಳಲ್ಲಿಯೇ ಎಫ್‍ಐಆರ್ ದಾಖಲಿಸಬೇಕು. ಆದರೆ ನೀವು ಯಾವುದಾದರೂ ವಸ್ತು/ ದಾಖಲೆಯನ್ನು ಕಳೆದುಕೊಂಡಿದ್ದರೆ, ಅದರ ಬಗ್ಗೆ ಆನ್‍ಲೈನ್‍ನಲ್ಲಿ ದೂರು ದಾಖಲಿಸಲು ಪೊಲೀಸರು ವೆಬ್‍ಸೈಟ್ ಹಾಗೂ ಆಪ್ ಅಭಿವೃದ್ಧಿ ಪಡಿಸಿದ್ದಾರೆ.

ಪಾಸ್‍ಪೋರ್ಟ್, ಪಾನ್‍ಕಾರ್ಡ್, ಇತ್ಯಾದಿ ದಾಖಲೆಗಳು, ಚಿನ್ನಾಭರಣ, ಗಣಕಯಂತ್ರ, ಮೊಬೈಲ್ ಪೋನ್, ಗಣಕಯಂತ್ರದ ಬಿಡಿಭಾಗಗಳು, ಕೈಗಡಿಯಾರ, ವೈಯಕ್ತಿಕ ಸಾಧನಗಳಾದ ಬ್ಯಾಗ್, ಲಗೇಜ್, ನಗದು, ವಾಲೆಟ್ಸ್ ಹೀಗೆ ನಾನಾ ವಸ್ತು, ದಾಖಲೆಗಳು ಕಳೆದು ಹೋದರೆ, ಆ ಬಗ್ಗೆ ಆನ್‍ಲೈನ್/ ಆಪ್‍ನಲ್ಲಿ ದೂರು ದಾಖಲಿಸಲು ಅವಕಾಶವಿದೆ.

ಹೀಗೆ ದೂರು ದಾಖಲಿಗೆ ಮುನ್ನ ದೂರುದಾರ ತನ್ನ ಪ್ರಾಥಮಿಕ ವಿವರಗಳನ್ನು ಸಲ್ಲಿಸಿ, ಹೆಸರು ನೋಂದಾಯಿಸಿಕೊಳ್ಳಬೇಕು. ಇವುಗಳೆಂದರೆ, ಕಳೆದು ಹೋದ ವಸ್ತುಗಳ ವಿಭಾಗ, ಸಮಯ, ಪ್ರದೇಶ, ಇತ್ಯಾದಿಗಳು. ಕಳೆದು ಹೋದ ವಸ್ತುವಿನ ಬ್ರಾಂಡ್, ಅದರ ಮೌಲ್ಯ, ಅದರ ಚಿತ್ರ, ಹಾಗೂ ದೂರುದಾರನ ಪ್ರಾಥಮಿಕ ಮಾಹಿತಿಗಳು ಇದರಲ್ಲಿ ಸೇರಿವೆ.

ಹೀಗೆ ಒಮ್ಮೆ, ಮಾಹಿತಿ ದಾಖಲಿಸಿ, ಸಲ್ಲಿಸಿದ ಬಳಿಕ, ಒಂದು ಡಿಜಿಟಲ್ ವರದಿಯನ್ನು, ದೂರುದಾರನ ಇ-ಮೇಲ್‍ಗೆ  ಹಾಗೂ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಈ ದತ್ತಾಂಶ, ರಾಜ್ಯದ ಅಪರಾಧ ದಾಖಲೆಗಳಲ್ಲೂ ಸೇರಲ್ಪಡುತ್ತದೆ.

ಈ ಡಿಜಿಟಲ್ ವರದಿಯನ್ನು ಕಳೆದು ಹೋದ ದಾಖಲೆಗಳ ನಕಲು ಪಡೆಯಲು, (ಉದಾಹರಣೆ ಚಾಲನಾ ಪರವಾನಗಿ ಪತ್ರ, ಅಂಕ ಪಟ್ಟಿ), ವಿಮಾ ಹಣ ಪಡೆಯಲು ಬಳಸಬಹುದು. ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಬೇಕಿಲ್ಲ; ಅಥವಾ ಘಟನಾ ಸ್ಥಳಕ್ಕೆ  ಭೇಟಿ ನೀಡಬೇಕಿಲ್ಲ.

ಹಾಗಾಗಿ ನೀವು ಮೊಬೈಲ್ ಕಳೆದುಕೊಂಡರೆ, ಅದು ಅಸಂಜ್ಞಾ ಘಟನೆಯಾಗಿ, ದಾಖಲಾಗಿ ಬಿಡುತ್ತದೆ.

ಪ್ರಥಮ ವರ್ತಮಾನ ವರದಿ ಎಂದರೇನು?

ಹೌದು. ನೀವು ಯಾವುದಾದರೂ ಸಂಜ್ಞಾ (ತೀವ್ರ ತೆರನಾದ)  ಅಪರಾಧ ಮೇಲಿನ ದೂರನ್ನು  ಸಲ್ಲಿಸಬೇಕಾದರೆ, ಆನ್‌ಲೈನ್ ಎಫ್‌ಐಆರ್ ಸೌಲಭ್ಯದ  ಅವಕಾಶ ಸಾಕಾಗುವುದಿಲ್ಲ. ಈ ಕಾರಣಕ್ಕಾಗಿ ಎಫ್‌ಐಆರ್‌ನಲ್ಲಿ ಏನಿದೆ ಹಾಗೂ ಅದನ್ನು ಸಲ್ಲಿಸುವಂಥ ಪರಿಸ್ಥಿತಿ ನಿಮಗೆ ಸೃಷ್ಟಿಯಾದರೆ,  ಅದನ್ನು ಪೊಲೀಸ್ ಠಾಣೆಯಲ್ಲಿ ಹೇಗೆ ದಾಖಲಿಸಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಎಫ್ಐಆರ್  ಎಂದರೆ, ಮೊದಲ ವರ್ತಮಾನ ವರದಿ.   ಇದೊಂದು ನಿರ್ದಿಷ್ಟ ನಮೂನೆಯಲ್ಲಿರುವ  ಲಿಖಿತ ದಾಖಲೆ.   ದೂರುದಾರ ಒಂದು ಅಪರಾಧ ಘಟನೆಯ  ಸಂಪೂರ್ಣ ಮಾಹಿತಿ ನೀಡಲು ವಿನ್ಯಾಸಗೊಳಿಸಿರುವ ಒಂದು ದಾಖಲೆ.  ಆದರೆ, ಎಲ್ಲ ಅಪರಾಧ ಘಟನೆಗಳಲ್ಲೂ ಈ ಪ್ರಥಮ ವರ್ತಮಾನ ವರದಿ ದಾಖಲಿಸಲಾಗುವುದಿಲ್ಲ.

ಸಂಜ್ಞಾ (ತೀವತೆರನಾದ) ಅಪರಾಧ ಪ್ರಕರಣಗಳಲ್ಲಿ ಈ ಪ್ರಥಮ ವರ್ತಮಾನ ವರದಿಗಳನ್ನು ಸಲ್ಲಿಸಲಾಗುತ್ತದೆ. ಈ ವರದಿ ಆಧರಿಸಿ, ಆರೋಪಿಗಳನ್ನು ಯಾವುದೇ ವಾರಂಟ್ ಇಲ್ಲದೆ ಕೂಡ ಬಂಧಿಸುವ ಅಧಿಕಾರ ಪೊಲೀಸ್ ಗೆ ಇದೆ.

ಕಳ್ಳತನ, ಅತ್ಯಾಚಾರ, ಗಲಭೆ, ಹಲ್ಲೆ ಮತ್ತು ಅಪಹರಣ, ಇತ್ಯಾದಿ ಅಪರಾಧಗಳಲ್ಲಿ ಈ ವರದಿ ಆಧರಿಸಿ ಬಂಧಿಸಬಹುದು.

ಆದರೆ ಕೆಲವು ಸಂದರ್ಭಗಳಲ್ಲಿ  ಅಸಂಜ್ಞಾ (ತೀವ್ರ ತೆರನಲ್ಲದ) ಅಪರಾಧ ಪ್ರಕರಣಗಳಲ್ಲಿ ಕೂಡ ಪ್ರಥಮ ವರ್ತಮಾನ ವರದಿ ದಾಖಲಿಸಬಹುದು.  ನ್ಯಾಯಾಲಯ ಆದೇಶ ಮೇರೆಗೆ ಅಥವಾ ಒಬ್ಬ ಪೊಲೀಸ್ ಅಧಿಕಾರಿ, ಇಂತಹ ಅಪರಾಧ ಪ್ರಕರಣಗಳನ್ನು ನೋಡಿದರೆ, ಇಂತಹ ಪ್ರಥಮ ವರ್ತಮಾನ ವರದಿ ದಾಖಲಿಸಬಹುದು. ವ್ಯಭಿಚಾರ, ದ್ವಿಪತ್ನಿತ್ವ, ಇಂತಹ ಪ್ರಕರಣಗಳಲ್ಲಿ ಇದು  ಅನ್ವಯವಾಗುತ್ತದೆ. ಯಾವುದೇ ಪ್ರಕರಣದ ಬಲಿಪಶು, ಸಾಕ್ಷಿ, ಅಥವಾ ಆ ಪ್ರಕರಣದ ಮಾಹಿತಿ ಉಳ್ಳ ವ್ಯ್ತಕ್ತಿ ಇಂತಹ ಪ್ರಕರಣಗಳಲ್ಲಿ ಎಫ್ ಐ ರ್ ದಾಖಲಿಸಬಹುದು.

ಎಫ್ ಐ ರ್ ಹಾಗು ಪೊಲೀಸ್ ದೂರಿನ ನಡುವಣ ವ್ಯತ್ಯಾಸ.

ಪ್ರಥಮ ವರ್ತಮಾನ ವರದಿ ಹಾಗು ಪೊಲೀಸ್ ದೂರು ನಡುವೆ ಹಲವು ವ್ಯತ್ಯಾಸಗಳಿವೆ.  ಪ್ರಥಮ ವರ್ತಮಾನ ವರದಿಯನ್ನು ತೀವ್ರ ತೆರನಾದ, ಸಂಜ್ಞಾ ಅಪರಾಧಗಳಲ್ಲಿ ಮಾತ್ರ ದಾಖಲಿಸಿಕೊಳ್ಳಬಹುದು. ಪೊಲೀಸ್ ದೂರನ್ನು ಸಣ್ಣ ಪುಟ್ಟ ಪ್ರಕರಣಗಳಲ್ಲೂ ದಾಖಲಿಸಿಕೊಳ್ಳಬಹುದು.

ಪ್ರಥಮ ವರ್ತಮಾನ ವರದಿಯನ್ನು ಒಂದು ನಿಗದಿತ ನಮೂನೆಯಲ್ಲಿ ಪೊಲೀಸ್ ಠಾಣೆಯಲ್ಲೇ ದಾಖಲಿಸಿಕೊಳ್ಳಬೇಕು.   ಆದರೆ  ಸಾಮಾನ್ಯ ದೂರುಗಳಿಗೆ ಯಾವುದೇ ಸ್ವರೂಪ ವಿರುವುದಿಲ್ಲ ಹಾಗು ಅದನ್ನು ಸ್ಥಳೀಯ ನ್ಯಾಯಾಲಯಗಳಲ್ಲೂ ಸಲ್ಲಿಸಬಹುದು.  ಎಲ್ಲಕ್ಕಿಂತ ಮುಖ್ಯವಾಗಿ, ಒಮ್ಮೆ ಪ್ರಥಮ ವರ್ತಮಾನ ವರದಿ ದಾಖಲಾದ ಕೂಡಲೇ, ಪೊಲೀಸ್ ತನಿಖೆ ಆರಂಭಿಸಲೇಬೇಕು ಹಾಗು ನ್ಯಾಯಾಲಯಕ್ಕೆ ಅದನ್ನು ಸಲ್ಲಿಸಬೇಕು. ಆದರೆ, ಸಾಮಾನ್ಯ ದೂರಿಗೆ ಇಂತಹ ಕಟ್ಟುಪಾಡು ಇರುವುದಿಲ್ಲ. ನ್ಯಾಯಾಲಯ ನಿರ್ದೇಶನ ನೀಡಿದ ಬಳಿಕವಷ್ಟೇ ದೂರಿನ ತನಿಖೆ ಆರಂಭಿಸಬಹುದು.

ಎಫ್ಐಆರ್ ದಾಖಲಿಸುವ ಉದ್ದೇಶವೇನು?

ನಾನಾ ಕಾರಣಗಳಿಗೆ ಎಫ್ ಐ ರ್ ದಾಖಲಿಸಬೇಕಾಗುತ್ತದೆ.

  • ಒಂದು ನಿರ್ಧಿಷ್ಟ ಸ್ಥಳದಲ್ಲಿ ನಡೆದ ಅಪರಾಧದ ಬಗ್ಗೆ ಅದು  ಪೊಲೀಸರಿಗೆ ಸಂಪೂರ್ಣ ಮಾಹಿತಿ  ಒದಗಿಸುತ್ತದೆ.
  • ಇದು ಅಪರಾಧ ಚಟುವಟಿಕೆಗೆ ಸಂಬಂಧಿಸಿ ತನಿಖೆ ಮಾಡಲೇಬೇಕಾದ ಅನಿವಾರ್ಯತೆಯನ್ನು ಪೊಲೀಸರಿಗೆ ಸೃಷ್ಟಿಸುತ್ತದೆ ಹಾಗು ಕಾನೂನು ಕ್ರಮ ಜಾರಿಯ ಪ್ರಕ್ರಿಯೆಯ ಮೊದಲ ಹೆಜ್ಜೆ.
  • ಒಂದೊಮ್ಮೆ ವಿಮೆ ಒಳಗೊಂಡಿರುವ ಪ್ರಕರಣಗಳಲ್ಲಿ ಇದು ಪುರಾವೆಯಾಗಿ ಉಪಯೋಗಕ್ಕೆ ಬರುತ್ತದೆ.
  • ಒಂದೊಮ್ಮೆ ಕಳ್ಳತನವಾದರೆ,  ಇದು ಕಳ್ಳತನವಾದ ಆಸ್ತಿಯನ್ನು ಅಪರಾಧಿಗಳು ದುರುಪಯೋಗಪಡಿಸಿಕೊಳ್ಳುವುದರಿಂದ ಉಂಟಾಗುವ ಸಮಸ್ಯೆ, ಜವಾಬ್ದಾರಿಯಿಂದ ದೂರುದಾರನಿಗೆ ರಕ್ಷಣೆ ಒದಗಿಸುತ್ತದೆ.

ಪೊಲೀಸ್ ಠಾಣೆಯಲ್ಲಿ  ಎಫ್‌ಐಆರ್ ದಾಖಲಿಸುವುದು ಹೇಗೆ?

ಒಂದು ಅಪರಾಧ ಘಟನೆ  ಬಳಿಕ  ಅತ್ಯಂತ  ತ್ವರಿತವಾಗಿ, ಘಟನಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ  ಎಫ್‌ಐಆರ್ ದಾಖಲಿಸಬೇಕು.  ಸಾಮಾನ್ಯವಾಗಿ  ಎಫ್ ಐ ರ್ ಅನ್ನು  ಉಪ ಪೊಲೀಸ್ ನಿರೀಕ್ಷಕ  ಅಥವಾ  ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ನೋಂದಾಯಿಸಿಕೊಳ್ಳುತ್ತಾರೆ. ಮೊದಲಿಗೆ ದೂರುದಾರ ಘಟನೆಯ ಬಗ್ಗೆ ಮೌಖಿಕವಾಗಿ ಅಥವಾ ಬರವಣಿಗೆಯ ರೂಪದಲ್ಲಿ ದೂರು ನೀಡಬೇಕು.  ಬಾಯಿ ಮಾತಿನ ದೂರಿನ  ಸಂದರ್ಭದಲ್ಲಿ, ಪೋಲಿಸ್ ಅಧಿಕಾರಿಗಳು  ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ನಿಗದಿತ ನಮೂನೆಯಲ್ಲಿ ಬರೆದುಕೊಂಡು  ಅದನ್ನು ದೂರುದಾರರಿಗೆ ಓದಿ ಹೇಳಬೇಕು. ಅವರ ಭಾಷೆಯಲ್ಲೇ ಬರೆದುಕೊಂಡು ಅವರಿಂದ ಸಹಿ ಪಡೆದುಕೊಳ್ಳಬೇಕು.  

ಒಂದು ಘಟನೆಯ ದೂರುದಾರ, ಲಿಖಿತವಾಗಿ ದೂರು ಬರೆದುಕೊಟ್ಟರೆ, ಅದನ್ನು ಎಫ್‌ ಐ ರ್ ಪ್ರತಿ ಜೊತೆಗೆ ಲಗತ್ತಿಸಬೇಕು.  ಎಫ್ ಐ ರ್ ದಾಖಲಿಸುವಾಗ, ಘಟನೆಯ ಸಂಪೂರ್ಣ ಮಾಹಿತಿ ನೀಡಬೇಕು.   ಏಕೆಂದರೆ, ಇದು ತನಿಖೆಗೆ ಅತಿ ಅವಶ್ಯ. ಒಂದು ಘಟನೆ ಮೇಲೆ ಒಂದೇ ಪ್ರಥಮ ವರ್ತಮಾನ ವರದಿ ಸಲ್ಲಿಕೆಗೆ ಸಾಧ್ಯವಿದೆ. ಹೀಗಾಗಿ, ಎಲ್ಲ ಮಾಹಿತಿಗಳನ್ನು ಸ್ಪಷ್ಟವಾಗಿ ನೀಡಬೇಕು.

ಕರ್ನಾಟಕ ಪೊಲೀಸ್ ಕೈಪಿಡಿಯ ಪ್ರಕಾರ, ನೀಡಲಾಗುವ  ದೂರಿನ ಸತ್ಯಾಸತ್ಯತೆ ಪರಿಶೀಲನೆ ಮುನ್ನವೇ ಹಾಗು ವೈದ್ಯಕೀಯ ವರದಿ ಕೈಸೇರುವ ಮುನ್ನವೇ  ಎಫ್‌ಐಆರ್ ದಾಖಲಿಸಬಹುದು. ಒಮ್ಮೆ  ಎಫ್‌ಐಆರ್ ದಾಖಲಾದ ನಂತರ, ಅದನ್ನು ಯಾವುದೇ ಕಾರಣಕ್ಕೂ  ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಮಟ್ಟದಲ್ಲಿ  ರದ್ದುಗೊಳಿಸಲು ಅಥವಾ  ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ.

ಎಫ್ಐಆರ್ ನಲ್ಲಿ ಇರಬೇಕಾದ ಅಂಶಗಳು

ಒಳ್ಳೆಯದಾಗಲಿ ಎಂಬ ನಿರೀಕ್ಷೆ ಇಟ್ಟುಕೊಳ್ಳಿ .. ಆದರೆ ನೀವು ನಿರೀಕ್ಷಿಸದ ಘಟನೆಗಳಿಗೆ ತಯಾರಾಗಿರಿ ಎಂಬುದು ನಮ್ಮಲ್ಲಿನ ಸಾಮಾನ್ಯ ಕಿವಿ ಮಾತು.  ಯಾವುದೇ ಅಪರಾಧ ಪ್ರಕರಣಕ್ಕೆ ಸಿಕ್ಕು ಬಲಿಪಶು ಆದರೆ, ಓರ್ವ ವ್ಯಕ್ತಿ ಮಾನಸಿಕವಾಗಿ ಮತ್ತು ದೈಹಿಕವಾಗಿ  ಅತ್ಯಂತ ಜರ್ಜರಿತನಾಗುತ್ತಾನೆ.  ಇಂತಹ ಸಂದರ್ಭದಲ್ಲಿ ಓರ್ವ ವ್ಯಕ್ತಿ ಮಾಡಬೇಕಾದ ಮೊದಲ ಕೆಲಸವೆಂದರೆ, ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸುವುದು. 

ಈ ವರದಿ ದಾಖಲಿಸುವುದು ಅತಿ ಕ್ಲಿಷ್ಟಕರ ಕೆಲಸ ಎಂದು  ಮೇಲ್ನೋಟಕ್ಕೆ ಅನಿಸಬಹುದು. ಆದರೆ, ವಾಸ್ತವದಲ್ಲಿ ಇದು ಅತಿ ಸರಳ ವಿಧಾನ. ಒಂದು ಪ್ರಥಮ ವರ್ತಮಾನ ವರದಿ ಸಲ್ಲಿಸಬೇಕಾದ ದುರದೃಷ್ಟಕರ ಸನ್ನಿವೇಶದಲ್ಲಿ ನಾವು ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

  • ದುರ್ಘಟನೆ ನಡೆದ   ಸಮಯ ಮತ್ತು ದಿನ
  • ಅಪರಾಧವನ್ನು ಪೋಲಿಸಿಗೆ  ವರದಿ ಮಾಡಿದ  ಸಮಯ ಮತ್ತು ದಿನಾಂಕ
  • ಈ ದುರ್ಘಟನೆ ನಡೆದ  ಸ್ಥಳ
  • ದೂರುದಾರರ ವೈಯಕ್ತಿಕ ವಿವರಗಳು
  • ಆರೋಪಿಗಳ (ತಿಳಿದಿದ್ದರೆ) ವಿವರಗಳು
  • ದುರ್ಘಟನೆಯ ನೈಜ  ವಿವರಣೆ
  • ಕಳ್ಳತನವಾಗಿದ್ದರೆ, ಕಳ್ಳತನವಾದ ಆಸ್ತಿಯ ವಿವರ
  • ಈ ದುರ್ಘಟನೆಗೆ ಸಂಬಂದಿಸಿದ ಕಾನೂನು ಸೆಕ್ಷನ್ ಗಳು (ತಿಳಿದಿದ್ದರೆ)
  • ದೂರುದಾರರ ಸಹಿ

ಪೊಲೀಸ್ ಠಾಣೆಗಳಲ್ಲಿ ಎಫ್ ಐ ರ್ ಉಚಿತವಾಗಿ ದಾಖಲಿಸಲ್ಪಡುತ್ತದೆ. ಇದಕ್ಕೆ ಯಾವುದೇ ತೆರನಾದ ಶುಲ್ಕವಿಲ್ಲ.  ಇದರ ಪ್ರತಿಯನ್ನು ಉಚಿತವಾಗಿ ದೂರುದಾರರಿಗೆ ನೀಡಬೇಕು.

ಎಫ್ ಐ ರ್ ದಾಖಲಿಸಲು ಪೊಲೀಸರು ನಿರಾಕರಿಸಿದರೆ ಏನು ಮಾಡಬೇಕು?

ಅಸಂಜ್ಞಾ ಪ್ರಕರಣ/ ಗುರುತರವಲ್ಲದ ಪ್ರಕರಣಗಳಲ್ಲಿ ಪೋಲೀಸರು ಎಫ್ ಐ ರ್ ದಾಖಲಿಸಲು ನಿರಾಕರಿಸಬಹುದು. ಇಂಥ ಸನ್ನಿವೇಶದಲ್ಲಿ ಪೊಲೀಸ್ ದೂರು ದಾಖಲಿಸಬಹುದು. ಇದಕ್ಕೆ ಪ್ರತಿಯಾಗಿ ಪೊಲೀಸರು ಸ್ವೀಕೃತಿ ಪತ್ರ ನೀಡುತ್ತಾರೆ.

ಆದರೆ, ಘೋರ ಅಪರಾಧ ಪ್ರಕರಣಗಲ್ಲಿ, ಎಫ್ ಐ ರ್ ದಾಖಲಿಸಿಕೊಳ್ಳದಿರುವುದು ಅಪರಾಧ.  ಒಂದೊಮ್ಮೆ ಇಂಥ ಸನ್ನಿವೇಶದಲ್ಲಿ ಪೊಲೀಸರು ಎಫ್ ಐ ರ್ ದಾಖಲಿಸಿಕೊಳ್ಳಲು ನಿರಾಕರಿಸಿದರೆ, ನಿಮಗಿರುವ ಆಯ್ಕೆಗಳು ಹೀಗಿವೆ.

  • ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ ಪಿ) ಸಂಪರ್ಕಿಸಿ, ಪೊಲೀಸರು ಎಫ್ ಐ ರ್ ದಾಖಲಿಸಿಕೊಳ್ಳಲು ಸೂಚನೆ ನೀಡುವಂತೆ ಮಾಡುವುದು.
  • ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಿಸುವುದು
  • ಕರ್ನಾಟಕ ಲೋಕಾಯುಕ್ತದಲ್ಲಿ ದೂರು ದಾಖಲಿಸುವುದು.

ಎಫ್‌ಐಆರ್‌ಗೆ ನೋಂದಣೆ ಬಳಿಕ  ಏನಾಗುತ್ತದೆ?

ನೋಂದಾಯಿಸಲಾದ ಎಫ್‌ಐಆರ್‌ನ ನಾಲ್ಕು  ಪ್ರತಿಗಳನ್ನು ತಯಾರಿಸಲಾಗುತ್ತದೆ. ಒಂದನ್ನು ಪೊಲೀಸ್ ಠಾಣೆಯ ದಾಖಲೆಯಾಗಿ ಇಡಲಾಗುತ್ತದೆ. ಉಳಿದ ಪ್ರತಿಗಲ್ಲು, ದೂರುದಾರ,  ಸರ್ಕಲ್ ಇನ್ಸ್‌ಪೆಕ್ಟರ್, ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.

 ಎಫ್‌ಐಆರ್ ನೋಂದಾಯಿಸಿದ ಕೂಡಲೇ,  ಪೊಲೀಸರು ಅಪರಾಧದ ಬಗ್ಗೆ  ತನಿಖೆ ಆರಂಭಿಸುತ್ತಾರೆ.

ಘಟನಾ ಸ್ಥಳಕ್ಕೆ ಒಂದು ಪೊಲೀಸ್ ತಂಡ ಕಳುಹಿಸಲಾಗುತ್ತದೆ.  ಘಟನಾ ಸ್ಥಳದ ಛಾಯಾ ಚಿತ್ರಗಳು, ಘಟನೆಗೆ ಸಂಬಂಧಿಸಿದ  ಸಾಕ್ಷ್ಯಗಳು ಮತ್ತು ಸಾಕ್ಷಿ ಹೇಳಿಕೆಗಳನ್ನು ಈ ತಂಡ ಸಂಗ್ರಹಿಸುತ್ತದೆ.

ಈ ಘಟನೆ, ಏಳು ವರ್ಷಗಳ ಒಳಗೆ ಸಂಭವಿಸಿದ್ದರೆ,  60 ದಿನಗಳ ಒಳಗೆ ಅಥವಾ 7 ವರ್ಷಗಳ ಹಿಂದೆ ಸಂಭವಿಸಿದ್ದರೆ  90 ದಿನಗಳಲ್ಲಿ ಎಫ್‌ಐಆರ್ ಮೇಲಣ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.  ಒಂದೊಮ್ಮೆ ಸುಳ್ಳು ದೂರು ಅಥವಾ ಸುಳ್ಳು ವರದಿ ಸಲ್ಲಿಸಿದರೆ, ಅದು ಕಾನೂನು ಪ್ರಕಾರ ಅಪರಾಧವಾಗುತ್ತದೆ.

ನಿಮಗೆ ಸಾಧ್ಯವಾದರೆ,  ಆನ್‌ಲೈನ್ ಎಫ್‌ಐಆರ್ ಬೆಂಗಳೂರು ಸೌಲಭ್ಯವನ್ನು ದೂರು ದಾಖಲಿಸಿಕೊಳ್ಳು ಆಯ್ದುಕೊಳ್ಳಿರಿ. ಏಕೆಂದರೆ,  ತಂತ್ರಜ್ಞಾನದ ಹೆಚ್ಚಿನ ಬಳಕೆ, ನಮ್ಮ ಬದುಕಿನಲ್ಲಿ ಹೊಸ ಮಾಹಿತಿ ತಂತ್ರಜ್ಞಾನದ ಕ್ರಾಂತಿಯ ಉಪಯೋಗವನ್ನು ಉಂಟುಮಾಡಲಿ

Related Readings

Jolad Rotti:
Related Post