X

ಹಂಪಿ: ಕಲೆ- ಧರ್ಮ -ಸಂಸ್ಕೃತಿಗಳ ಸಮ್ಮಿಲನ

    Categories: Hampi

ಹಂಪಿ, ಈ ಶಬ್ದ ಕೇಳಿದೊಡನೆ ನಮ್ಮೆಲ್ಲ ಕಣ್ಣರಳುತ್ತದೆ- ಕಿವಿ ಚುರುಕಾಗುತ್ತದೆ. ಇಂತಹ ಇನ್ನೊಂದು ಐತಿಹಾಸಿಕ ತಾಣ ಇನ್ನೊಂದಿಲ್ಲ. ಇದು ಧರ್ಮ -ಕಲೆ- ಸಂಸ್ಕೃತಿಗಳ ಸಮ್ಮಿಲನಗೊಂಡ ನೆಲ. ಈ ಹಂಪಿ ನಮ್ಮ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿದೆ. ತುಂಗಾ ಭದ್ರ ನದಿಯ ತಟದಲ್ಲಿ ಈ ಐತಿಹಾಸಿಕ ನಗರಿ ಅರಳಿ ನಿಂತಿದೆ. ನಮ್ಮ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ಬಳ್ಳಾರಿಯಿಂದ ೭೪  ಕಿಮೀ ದೂರದಲ್ಲಿದೆ. 

ನಮ್ಮ ದೇಶದ ಬಹು ಮುಖ್ಯ ರಾಜಮನೆತನಗಳಲ್ಲಿ ಒಂದಾದ, ವಿಜಯನಗರ ಅರಸರ ಕಾಲ ಘಟ್ಟದಲ್ಲಿ (೧೩೪೩-೧೫೬೫) 

ಹಂಪಿ ವಿಜಯನಗರ ನಗರದ ಒಂದು ಪ್ರಮುಖ ಭಾಗವಾಗಿತ್ತು. ವಿಜಯನಗರ ಸಾಮ್ರಾಜ್ಯದ ಪತನದ ಬಳಿಕ  ಅದು  ವಿನಾಶದ ಅಂಚಿನತ್ತ ಜಾರಿತು.   ಈ ಸುಂದರ  ನಗರವನ್ನು  ನಮ್ಮ ದೇಶದ  ದೇವಸ್ಥಾನಗಳ ನಗರ ಎಂದು ಬಣ್ಣಿಸಲಾಗುತ್ತದೆ.  ಭೌಗೋಳಿಕ ಕಾರಣಗಳಿಗೋಸ್ಕರ ಈ ನಗರವನ್ನು ತಮ್ಮ ರಾಜಧಾನಿಯಾಗಿ ವಿಜಯನಗರ ಅರಸರು ಆಯ್ದುಕೊಂಡಿದ್ದರು. ಇದು ಮೂರು ಕಡೆಗಳಲ್ಲಿ ದುರ್ಗಮ  ಬೆಟ್ಟಗಳಿಂದ ಆವೃತವಾಗಿದೆ ಮತ್ತು ಇನ್ನೊಂದು ಭಾಗದಲ್ಲಿ  ತುಂಗಭದ್ರಾ ನದಿ ಹರಿಯುತ್ತದೆ. ಈ ಕಾರಣದಿಂದಾಗಿ,  ಈ  ಸ್ಥಳವು ಶತ್ರುಗಳ ಧಾಳಿಯಿಂದ  ಸುರಕ್ಷಿತವಾಗಿದೆ. ಇದರ ಜೊತೆಗೆ ಈ ನಗರ   ರಮಣೀಯ ಪ್ರಕೃತಿ ಸೌಂದರ್ಯ ಹೊಂದಿದೆ. 

ವಿಠಲ ದೇಗುಲದ ಕಲ್ಲಿನ ಮಂಟಪ

ಪ್ರವಾಸಿಗರಿಗೆ ಮೆಚ್ಚಿನ ಸ್ಥಳ

ಹಂಪಿ ನಮ್ಮ ದೇಶದ ಕೆಲವು ಅತ್ಯಂತ ಆಕರ್ಷಕ ದೇಗುಲಗಳ ತೊಟ್ಟಿಲು, ತವರು ಮನೆ ಎಂದರೆ ಅತಿಶಯೋಕ್ತಿಯಾಗಲಾರದು. ಇಂದು ಒಂದು ಧಾರ್ಮಿಕ ಹಾಗು ಪ್ರವಾಸಿ ತಾಣವಾಗಿದೆ. ಇದು ಪ್ರವಾಸಿಗರನ್ನು ಸದಾ ಸೆಳೆಯುವ ಒಂದು ಪ್ರವಾಸಿ ತಾಣ. ಇಲ್ಲಿ  ಪುರಾತತ್ವ ಮತ್ತು ವಾಸ್ತುಶಿಲ್ಪದ  ವೈಭವವನ್ನು ಸಾರಿ ಹೇಳುವ ದೇಗುಲಗಳಿವೆ.  ದೊಡ್ಡ ದೊಡ್ಡ ಪರ್ವತಗಳು, ಜುಳು ಜುಳು ಹರಿಯುವ ತುಂಗಾ ನದಿ, ಈ ಪಟ್ಟಣದ ಆಕರ್ಷಣೆಯನ್ನು ಹೆಚ್ಚಿಸಿದೆ.  ಅಂಕಿ ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಸ್ಥಳ ಇದು. ಈ ನಗರವನ್ನು ಹುಡುಕಾಡದ ಜನರಿಲ್ಲ. 

ಹಂಪಿಯ ಆಕರ್ಷಕ ಸ್ಥಳಗಳು

ಹಂಪಿಯಲ್ಲಿ ಪ್ರವಾಸಿಗರ ಕಣ್ಮನ ತಣಿಸುವ ಹತ್ತಾರು ಪ್ರವಾಸಿ ತಾಣಗಳಿವೆ. ಈ ತಾಣಗಳು ನೂರಾರು ವರ್ಷಗಳಿಂದ ಜನರನ್ನು ಜಗತ್ತಿನೆಲ್ಲೆಡೆಯಿಂದ ಆಕರ್ಷಿಸುತ್ತಿವೆ. ಈ ಅಪರೂಪದ ತಾಣಗಳ ಕಿರು ಪರಿಚಯ ಇಲ್ಲಿದೆ. 

ವಿರೂಪಾಕ್ಷ ದೇಗುಲ ಎಂಬ ವಿಸ್ಮಯ

ಹಂಪಿ ಎಂದ ಕೂಡಲೇ ನಮ್ಮ ಕಣ್ಮುಂದೆ ಬರುವ ದೇಗುಲ ಅಲ್ಲಿನ ವಿರೂಪಾಕ್ಷ ದೇವಾಲಯ. ಈ  ದೇವಸ್ಥಾನವನ್ನು ೭ ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಆರಂಭದಲ್ಲಿ ಇದು  ಒಂದು ಸಣ್ಣ ದೇಗುಲವಾಗಿತ್ತು.  ಆದರೆ ನಂತರ ಇದನ್ನು ವಿಜಯನಗರದ ಅರಸರು  ದೊಡ್ಡದಾಗಿ ಜೀರ್ಣೋದ್ಧಾರಗೊಳಿಸಿದರು. ಈ ದೇಗುಲವು ಸ್ಥಳೀಯರಿಗೆ ಹಾಗು ಪ್ರವಾಸಿಗರ ಪಾಲಿಗೆ ಆಧ್ಯಾತ್ಹ್ಮಿಕ ತಾಣ. 

ವಿಜಯ ವಿಠ್ಠಲ ದೇವಾಲಯ

ವಿಜಯ ವಿಠ್ಠಲ  ದೇವಸ್ಥಾನವು  ಹಂಪಿಯ ಇನ್ನೊಂದು ದೇಗುಲ.  ಇದು  ಭಗವಾನ್ ವಿಷ್ಣುವಿನ ಅವತಾರವೆಂದು  ಬಣ್ಣಿಸಲಾಗುವ  ವಿಠಲ ದೇವರಿಗೆ ನಿರ್ಮಿಸಲಾಗಿರುವ ದೇವಾಲಯ. ಇದು ೧೫ ನೇ ಶತಮಾನದಲ್ಲಿ  ನಿರ್ಮಾಣಗೊಂಡ ದೇವಾಲಯ.  ಇದು ಹಂಪಿಯ ಪ್ರವಾಸಿಗರಿಗೆ ಇರುವ ಇನ್ನೊಂದು ಪ್ರಮುಖ   ಆಕರ್ಷಣೆ. ಆಗಿನ ವಾಸ್ತುಶಿಲ್ಪ ಕೌಶಲ್ಯಗಳನ್ನು ಪ್ರತಿಬಿಂಬಿಸುವ ದೊಡ್ಡ ಕಲ್ಲಿನ ರಥ ಇಲ್ಲಿದೆ. ಇದು ಎಲ್ಲೆಡೆಯಿಂದ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ.

ಶಿಲ್ಪಕಲಾ ಸಂಗ್ರಹಾಲಯ

ಇನ್ನು ಹಂಪಿ ಭೇಟಿಯಲ್ಲಿ ನೀವು ಮಿಸ್ ಮಾಡದೇ ನೋಡಲೇ ಬೇಕಾದ ತಾಣವೆಂದರೆ ಅದು  ಅಲ್ಲಿನ 

ವಸ್ತು ಸಂಗ್ರಹಾಲಯ. ಇದನ್ನು  ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸ್ಥಾಪಿಸಿದೆ. ಹಂಪಿಯ  ಐತಿಹಾಸಿಕ  ಮಹತ್ವವನ್ನು ಸಾರುವ  ವಸ್ತುಸಂಗ್ರಹಾಲಯ ಇದಾಗಿದೆ. ಇಲ್ಲಿ ಹಂಪಿಯ ಇತಿಹಾಸವನ್ನು ನೋಡಬಂಧು.  ಇದು  ಪುರಾತನ ಮತ್ತು ಮಹಾನ್ ಶಿಲ್ಪಕಲೆಗಳಿಗೆ ನೆಲೆಯಾಗಿದೆ. ಇಲ್ಲಿ ಹೆಚ್ಚ್ಚಿನ ಸಂಶೋಧನೆ ನಡೆಸಿದ್ದು  ಬ್ರಿಟಿಷ್ ಅಧಿಕಾರಿಗಳು.  ಈ ವಸ್ತು ಸಂಗ್ರಹಾಲಯಕ್ಕೆ ೧೯೭೨ ರಲ್ಲಿ, ಪುರಾತನ ವಸ್ತುಗಳನ್ನು ವರ್ಗಾಯಿಸಲಾಯಿತು.

ಭೂಗತ ದೇವಾಲಯ

ಇದೊಂದು ಶಿವನ ದೇವಾಲಯ. ಈ ದೇವಾಲಯದ ಬಹುಪಾಲು ಭಾಗ  ವರ್ಷದ ಬಹುಪಾಲು ಅವಧಿಯಲ್ಲಿ  ನೀರಿನಲ್ಲಿ ಮುಳುಗಿರುತ್ತದೆ. ಆ ಕಾರಣಕ್ಕಾಗಿ, ಅದನ್ನು ಭೂಗತ ದೇವಾಲಯ ಎಂದು ಕರೆಯಲಾಗುತ್ತದೆ.  ಈ ದೇಗುಲ ಭೂ ಮಟ್ಟದಿಂದ ಕೆಳಗಿದೆ. ಹೀಗಾಗಿ ಇದು ನೀರಿನಲ್ಲಿ ಸದಾ ಮುಳುಗಿರುತ್ತದೆ. 

ಬಳ್ಳಾರಿ

ಬಳ್ಳಾರಿ ಕರ್ನಾಟಕದ ಮಹತ್ವ ಜಿಲ್ಲೆ. ಇದು ಹಂಪಿಯಿಂದ ಸುಮಾರು ೬೦ ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿಯ ಕೋಟೆ ಪ್ರವಾಸಿಗರ ಪಾಲಿಗೆ ಅತಿ ದೊಡ್ಡ ಆಕರ್ಷಣೆ. ಇದು ಕರ್ನಾಟಕದ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ ಗಳಲ್ಲಿ ಒಂದು. 

ಆನೆಗೊಂದಿ

ಹಂಪಿ ಅಭಿವೃದ್ಧಿಯಾಗುವ ಮೊದಲು  ಮೊದಲು ಆನೆಗೊಂದಿಯು   ಈ ಪ್ರದೇಶದ ರಾಜಧಾನಿಯಾಗಿತ್ತು. ಇದು ತುಂಗಭದ್ರಾ  ನದಿಯ ಇನ್ನೊಂದು  ದಡದಲ್ಲಿದೆ. ಇದು ಈಗ ಕೃಷಿ ಪ್ರಧಾನ ಗ್ರಾಮವಾಗಿದೆ. ಇಲ್ಲಿನ ಪ್ರವಾಸಿ ಆಕರ್ಷಣೆಯ ತಾಣಗಳೆಂದರೆ  ಆನೆಗೊಂದಿ  ಕೋಟೆ, ಚಂದ್ರಮೌಳೀಶ್ವರ ದೇವಸ್ಥಾನ,  ಪಂಪ ಸರೋವರ ಇತ್ಯಾದಿಗಳು

ಆಂಜನೇಯ ಪರ್ವತ

ಇದು ಹಂಪಿಯಿಂದ ಸುಮಾರು  ೪  ಕಿಮೀ ದೂರದಲ್ಲಿದೆ. ಇದನ್ನು ಭಕ್ತಾಧಿಗಳು ಶ್ರೀ ರಾಮನ ಪರಮ ಭಕ್ತ  ಹನುಮಂತನ ಜನ್ಮಸ್ಥಳವೆಂದು ಪರಿಗಣಿಸುತ್ತಾರೆ.  ಇಲ್ಲಿ ಹನುಮಂತ ದೇವರಿಗೆ  ಮೀಸಲಾಗಿರುವ ದೇವಸ್ಥಾನವಿದೇ. ಇದು  ಭಕ್ತರ ಪಾಲಿನ ದೊಡ್ಡ ಆಕರ್ಷಣೆ. 

ಕಮಲಾಪುರ

ಇದು ಹಂಪಿ ನಗರದ  ದಕ್ಷಿಣ ಭಾಗದಲ್ಲಿದೆ. ಇದು ಒಂದು ಸಣ್ಣ ಹಳ್ಳಿ. ಆದರೆ ಇಲ್ಲಿ ಕೂಡ ಹಲವು ಐತಿಹಾಸಿಕ ಮಹತ್ವದ ದೇಗುಲ, ಸ್ಮಾರಕಗಳಿವೆ. ಈ ಪೈಕಿ ಮುಖ್ಯವಾದುವುಗಳೆಂದರೆ   ಗಾಣಿಗಿತ್ತಿ ದೇವಸ್ಥಾನ, ಭೀಮನ ಗೇಟ್   ಮತ್ತು ವಸ್ತು ಸಂಗ್ರಹಾಲಯ.  ಈ ಗ್ರಾಮಕ್ಕೆ ಇತಿಹಾಸದಲ್ಲಿ ಮಹತ್ವ ಇದೆ.

Vittala temple, Anegondi, Hampi. Image source Flickr

ಹಂಪಿ ತಲುಪುವುದು ಹೇಗೆ?

ವಿಮಾನ ಸಂಪರ್ಕ: ಹಂಪಿಯಲ್ಲಿ ವಿಮಾನ ನಿಲ್ದಾಣವಿಲ್ಲ. ಹಾಗಾಗಿ  ಹಂಪಿಯನ್ನು ನೇರವಾಗಿ ವಿಮಾನದ ಮೂಲಕ ತಲುಪಲು ಸಾಧ್ಯವಿಲ್ಲ.  ಬಳ್ಳಾರಿ  ವಿಮಾನ ನಿಲ್ದಾಣವನ್ನು ಹೊಂದಿರುವ ಹತ್ತಿರದ ಪಟ್ಟಣವಾಗಿದೆ.  ಇಲ್ಲಿಂದ ಹಂಪಿಗೆ ಸುಮಾರು 64 ಕಿಲೋ ಮೀಟರ್‌ ದೂರವಿದೆ. ಪ್ರವಾಸಿಗರು ವಿಮಾನ ಮೂಲಕ ಬಳ್ಳಾರಿ ತಲುಪಿ, ಅಲ್ಲಿಂದ ರಸ್ತೆ ಮಾರ್ಗ ಮೂಲಕ ಹಂಪಿ ತಲುಪಬಹುದು.

ರೈಲು ಸಂಪರ್ಕ: ಹಂಪಿಗೆ ನೇರ   ರೈಲ್ವೆ  ಸಂಪರ್ಕವಿಲ್ಲ. ಇಲ್ಲಿಗೆ ಅತಿ .  ಹತ್ತಿರದ ರೈಲ್ವೆ  ನಿಲ್ದಾಣವೆಂದರೆ  ಹೊಸಪೇಟೆ.  ಹೊಸಪೇಟೆ, ಹಂಪಿಯಿಂದ ೧೩ ಕಿಲೋ ಮೀಟರ್‌ ದೂರದಲ್ಲಿದೆ. ಈ ನಗರಕ್ಕೆ ಕರ್ನಾಟಕದ ಪ್ರಮುಖ ನಗರಗಳಿಂದ ನೇರ ರೈಲು ಸಂಪರ್ಕವಿದೆ.  ಹೊಸಪೇಟೆಯಿಂದ ಹಂಪಿಗೆ ಸಾಕಷ್ಟು ವಾಹನ ಸಂಪರ್ಕವಿದೆ.

ರಸ್ತೆ ಮಾರ್ಗ: ಹಂಪಿ ಉತ್ತಮ ರಸ್ತೆ ಸಂಪರ್ಕ ಜಾಲವನ್ನು ಹೊಂದಿದೆ.   ಇಲ್ಲಿಂದ ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಜೊತೆಗೆ, ಮೈಸೂರು, ಬೆಂಗಳೂರಿನಿಂದ ಸಾಕಷ್ಟು ಕ್ಯಾಬ್‌ಗಳ ಸೇವೆ ಕೂಡಾ ಲಭ್ಯವಿದೆ. 

Related Readings

Jolad Rotti:
Related Post