X

ಸುಧಾ ಮೂರ್ತಿ – ಅಸಾಧಾರಣ ಸಾಧಕಿ, ದಾನಿ ಮತ್ತು ಲೇಖಕಿ

ಶ್ರೀಮತಿ ಸುಧಾ ಮೂರ್ತಿ… ಈ ಹೆಸರಿನಲ್ಲಿಯೇ ಅದೇನೋ ಒಂದು ಆಕರ್ಷಣೆ ಇದೆ.  ಕನ್ನಡ ಮಣ್ಣಿನ ಕುವರಿ, ಅಸಾಮಾನ್ಯ ಸಾಧಕಿ  ಇವರು.  ಇದರ ಜೊತೆಗೆ   ಕನ್ನಡ ಮತ್ತು ಇಂಗ್ಲಿಷ್‌ನ ಖ್ಯಾತ ಬರಹಗಾರ್ತಿ, ಸಮಾಜಸೇವಕಿಯೂ ಆಗಿರುವ ಸುಧಾ ಮೂರ್ತಿಯವರು ಜನಿಸಿದ್ದು 19ನೇ ಆಗಸ್ಟ್‌ 1950ರಂದು. ಅವರು ಜನಸಾಮಾನ್ಯನ ಏಳಿಗೆಗಾಗಿ ಹಲವು ಸಂಘ ಸಂಸ್ಥೆಗಳೊಂದಿಗೆ ದುಡಿದವರು. ಇನ್ಫೋಸಿಸ್‌  ಪ್ರತಿಷ್ಠಾನದ  ಮೂಲಕ, ಸಮಾಜ ಸೇವೆಯೊಂದಿಗೆ, ಜನ ಸಾಮಾನ್ಯರ ಸಮಸ್ಯೆಗಳಿಗೆ ಮಿಡಿದವರು ಅವರು. 

ಸುಧಾ ಮೂರ್ತಿ. ಚಿತ್ರ ಕೃಪೆ: ರಾಜಗೋಪಾಲ್‌

ಸುಧಾ ಮೂರ್ತಿ…ಇವರು ಕೈಯಾಡಿಸದ ಕ್ಷೇತ್ರವಿಲ್ಲ.  ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಸುಧಾರಣೆಗಾಗಿ ಇವರು ಸದಾ ಮಿಡಿಯುತ್ತಿದ್ದಾರೆ.  ಸರಕಾರಿ, ಹಾಗು ಸರಕಾರಿ ಅನುದಾನಿತ  ಶಾಲೆಗಳಿಗೆ ಕಂಪ್ಯೂಟರ್‌ ಶಿಕ್ಷಣ ಮತ್ತು ಗ್ರಂಥಾಲಯ ಸೌಲಭ್ಯ ಒದಗಿಸುವುದು ಅವರ ಗುರಿ. ತಮ್ಮ ಬಿಡುವಿಲ್ಲದ ಸಮಾಜಕಾರ್ಯದ ನಡುವೆಯೂ ಅವರು ಕಂಪ್ಯೂಟರ್‌ ವಿಜ್ಞಾನವನ್ನೂ ಕಲಿಸಿದ್ದಾರೆ. ಇವರು  ಅನೇಕ ಜನಪ್ರಿಯ ಕಥೆ, ಕಾದಂಬರಿಗಳನ್ನು ಬರೆದಿರುವ  ಜನಪ್ರಿಯ ಬರಹಗಾರ್ತಿಯೂ ಹೌದು.  ಇವರು ʼಗೇಟ್ಸ್‌ ಫೌಂಡೇಶನ್‌ʼ ನ ಆರೋಗ್ಯ ಸುಧಾರಣಾ ಕ್ರಮಗಳ  ಭಾಗವಾಗಿಯೂ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ. 

ಆರಂಭದ ದಿನಗಳು- ಸುಧಾ ಕುಲಕರ್ಣಿ ಮೂರ್ತಿ 

ಸುಧಾ ಕುಲಕರ್ಣಿ ಮೂರ್ತಿಯವರು ಕರ್ನಾಟಕದ ಶಿಗ್ಗಾಂ ನ ಡಾ. ಆರ್‌. ಹೆಚ್‌ ಕುಲಕರ್ಣಿ ಮತ್ತು ವಿಮಲಾ ದಂಪತಿಯ ಪುತ್ರಿಯಾಗಿ ಜನಿಸಿದರು. ಸುಧಾ ಮೂರ್ತಿಯವರು ಬಿ.ವಿ.ಬಿ ವಿಜ್ಞಾನ ಮತ್ತು ತಂತ್ರಜ್ಞಾನ ಕಾಲೇಜ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿದರು. ಅವರು ತರಗತಿಯಲ್ಲಿ ಮೊದಲಿಗರಾಗಿ ಮೂಡಿಬಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ದೇವರಾಜ ಅರಸ್‌ರಿಂದ ಚಿನ್ನದ ಪದಕ ಪಡೆದುಕೊಂಡರು. ಬಳಿಕ ಅವರು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯಿಂದ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂ.ಇ ಪದವಿ ಪಡೆದುಕೊಂಡರು. ಪ್ರಥಮ ಸ್ಥಾನ ಪಡೆದುಕೊಂಡ ಅವರು ಭಾರತೀಯ ಎಂಜಿನಿಯರ್‌ಗಳ ಸಂಸ್ಥೆ (ಐಐಇ) ಯಿಂದ ಬಂಗಾರದ ಪದಕ ಪಡೆದುಕೊಂಡರು. 

ಮೊದಲ  ಮಹಿಳಾ ಎಂಜಿನಿಯರ್‌- ಸುಧಾ ಮೂರ್ತಿಯವರ ವೃತ್ತಿಜೀವನದ  ಚಿತ್ರಣ  

ಈಗಿನ ಟಾಟಾ ಮೋಟರ್ಸ್‌ ಅಥವಾ ಅಂದಿನ ಭಾರತದ ಅತೀ ದೊಡ್ಡ ವಾಹನ ಉತ್ಪಾದಕ ಸಂಸ್ಥೆ ಟೆಲ್ಕೋ (ಟಾಟಾ ಎಂಜಿನಿಯರಿಂಗ್‌ ಆಂಡ್‌ ಲೋಕೋಮೋಟಿವ್‌ ಕಂಪೆನಿ) ನೇಮಿಸಿಕೊಂಡ ಮೊದಲ ಮಹಿಳಾ ಎಂಜಿನಿಯರ್‌ ಶ್ರೀಮತಿ ಮೂರ್ತಿ. ಅವರು ಪುಣೆ, ಮುಂಬೈ, ಮತ್ತು ಜೆಮ್‌ಷೆಡ್‌ಪುರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಡೆವಲಪ್‌ಮೆಂಟ್‌ ಎಂಜಿನಿಯರ್‌ ಆಗಿ ಕೆಲಸ ಮಾಡಿದರು. ಅವರು ಕಂಪೆನಿಯಲ್ಲಿ “ಗಂಡಸರು ಮಾತ್ರ” ಎಂಬ ಲಿಂಗ ಪಕ್ಷಪಾತ ಸಮಸ್ಯೆಯ ಬಗ್ಗೆ ಧ್ವನಿಯೆತ್ತಿದ್ದರು. ಈ ವಿಷಯವನ್ನು ಗಮನಿಸಿದ ಟೆಲ್ಕೋದ ಮುಖ್ಯಸ್ಥರು ಅವರನ್ನು ವಿಶೇಷ ಸಂದರ್ಶನಕ್ಕೆ ಕರೆದರು. 

ನಂತರ ಅವರು ಪುಣೆಯ ವಾಲ್ಚಂದ್‌ ಗ್ರೂಪ್‌ ಆಫ್‌ ಇಂಡಸ್ಟ್ರೀಸ್‌ ನಲ್ಲಿ ಹಿರಿಯ ಸಿಸ್ಟಂ ಅನಾಲಿಸ್ಟ್‌ ಆಗಿ ಕೆಲಸ ನಿರ್ವಹಿಸಿದರು. 1974-1981 ರವರೆಗೆ ಪುಣೆಯಲ್ಲಿದ್ದ ಸುಧಾ ಮೂರ್ತಿಯವರು ನಂತರ ಮುಂಬೈನಲ್ಲಿ ನೆಲೆಸಿದರು. ಇನ್ಫೋಸಿಸ್‌ನ ಸ್ಥಾಪನೆಯ ಸಮಯದಲ್ಲಿ ಅವರು ತಮ್ಮ ಉಳಿತಾಯದ ರೂ. 10,000 ವನ್ನು ದೇಣಿಗೆಯಾಗಿ ನೀಡಿದರು. ಇನ್ಫೋಸಿಸ್‌ ಫೌಂಡೇಶನ್‌ನ್ನು 1996 ರಲ್ಲಿ ಹುಟ್ಟುಹಾಕಿದ ಅವರು ಈಗಲೂ ಅದರ ಟ್ರಸ್ಟಿಯಾಗಿ ಮುಂದುವರಿದಿದ್ದಾರೆ. ಬೋಧನಾ ವೃತ್ತಿಯನ್ನು ಬಹುವಾಗಿ ಇಷ್ಟಪಡುವ ಅವರು ವಿದ್ಯಾರ್ಥಿಗಳಿಗೆ ಜ್ಞಾನ  ದಾಸೋಹ  ಮತ್ತು ತರಬೇತಿಯನ್ನು ಒದಗಿಸುವ ಆಸಕ್ತಿಯಿಂದ ಬೆಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸಂದರ್ಶಕ ಪ್ರಾಧ್ಯಾಪಿಕೆಯಾಗಿದ್ದಾರೆ, ಜೊತೆಗೆ ಕ್ರೈಸ್ಟ್‌ ಕಾಲೇಜಿನಲ್ಲಿಯೂ   ಸೇವೆ ಸಲ್ಲಿಸಿದ್ದಾರೆ. 

ವೈಯಕ್ತಿಕ  ಜೀವನ 

ಪುಣೆಯಲ್ಲಿ ಟೆಲ್ಕೋದಲ್ಲಿ ಕೆಲಸ ಮಾಡುತ್ತಿದ್ದಾಗಲೇ ಅವರು ತಮ್ಮ ಬಾಳ ಸಂಗಾತಿ ನಾರಾಯಣ ಮೂರ್ತಿಯವರನ್ನು ಭೇಟಿಯಾದರು ಮತ್ತು ಅವರಿಬ್ಬರು ಮದುವೆಯಾದರು. ಅವರಿಗೆ ಅಕ್ಷತಾ ಮತ್ತು ರೋಹನ್‌ ಎಂಬ ಇಬ್ಬರು ಮಕ್ಕಳಿದ್ದಾರೆ. ಇನ್ಫೋಸಿಸ್‌ ಫೌಂಡೇಶನ್‌ಗೆ ಯಶಸ್ಸಿನ ಆಧಾರಸ್ತಂಭ ಸುಧಾಮೂರ್ತಿ. ಅವರು ಈಗಲೂ ಕಂಪೆನಿಯನ್ನು ಬೆಳೆಸಲು ತಮ್ಮ ಪತಿಗೆ ನೆರವಾಗುತ್ತಿದ್ದಾರೆ. 

ಸುಧಾ ಮೂರ್ತಿ ರಾಜ ಲಕ್ಷ್ಮಿ ಪ್ರಶಸ್ತಿ ಸ್ವೀಕರಿಸುತ್ತಿರುವುದು. ಚಿತ್ರ ಕೃಪೆ: ಯುಗೇಶ್‌ ಪಿ.

ಸಮಾಜ ಸೇವೆ ಸಾಗಿದ ದಾರಿ 

ಸುಧಾ ಮೂರ್ತಿಯವರು ಮೊದಲಿನಿಂದಲೂ ತಮ್ಮ ಅನೇಕ ಸಮಾಜ ಸುಧಾರಣಾ  ಸೇವೆಗೆ  ಹೆಸರಾದವರು. ಅವರಿಗೆ ಮಹಿಳಾ ಸಬಲೀಕರಣದ ಗುರಿಯಿದೆ. ಗ್ರಾಮೀಣ ಜನರಲ್ಲಿ     ಶಿಕ್ಷಣ, ಸಾಮಾಜಿಕ ನೈರ್ಮಲ್ಯ, ಬಡತನ ನಿರ್ಮೂಲನೆ ಮತ್ತು ಇನ್ನೂ ಅನೇಕ ವಿಷಯಗಳ ಕುರಿತು ಅವರು ಜಾಗೃತಿ ಮೂಡಿಸುತ್ತಿದ್ದಾರೆ. ಸ್ವಚ್ಛ ಭಾರತದ ಅಗತ್ಯತೆಯನ್ನು ಅರ್ಥಮಾಡಿಕೊಂಡಿರುವ ಅವರು, ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಿಸುತ್ತಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳ ಜನರಿಗೆ ಸಹಾಯ ಮಾಡುವುದರಲ್ಲೂ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ.  ವಿದ್ಯಾದಾನ ಅವರು ತೊಡಗಿಸಿಕೊಂಡಿರುವ ಇನ್ನೊಂದು ಅತಿ ದೊಡ್ಡ ಕ್ಷೇತ್ರ.

ಸುಧಾ ಮೂರ್ತಿ ಮತ್ತು ಅವರ ಬರಹಗಳು 

ಶ್ರೀಮತಿ ಸುಧಾ ಮೂರ್ತಿಯವರು ಲೇಖಕಿಯಾಗಿ ಅನೇಕ ಕಥೆಗಳನ್ನು, ಕಥಾ ಸಂಕಲನಗಳನ್ನು  ಪ್ರಕಟಿಸಿದ್ದಾರೆ. ಅವರ ಬರವಣಿಗೆಗಳು ಜನಸಾಮಾನ್ಯನ ಜೀವನದ ಕಂಪನ್ನು ಸೂಸುತ್ತವೆ. ಅವರು ಆತಿಥ್ಯ, ತಮ್ಮ ಬಾಲ್ಯ, ದೇಣಿಗೆ ಮತ್ತು ದಾನದ ಬಗೆಗಿನ ಅಭಿಪ್ರಾಯಗಳನ್ನು ಅರಿತುಕೊಳ್ಳುವುದು ಮೊದಲಾದವುಗಳ ಬಗ್ಗೆ ಬರೆಯುತ್ತಾರೆ. ಅವರ ಅನೇಕ ಪುಸ್ತಕಗಳು ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ ಮತ್ತು ಕೆಲವು ಟಿವಿ ಸರಣಿಗಳಾಗಿ ರೂಪಾಂತರಗೊಂಡಿವೆ. ಅವರ ಅನೇಕ ಕೃತಿಗಳು ಮಕ್ಕಳ ಸರಣಿಗಳಾಗಿವೆ. ಸುಧಾ ಮೂರ್ತಿಯವರು ಕನ್ನಡ ಮತ್ತು ಇಂಗ್ಲಿಷ್‌ನ ಅನನ್ಯ ಕಾದಂಬರಿ ಬರಹಗಾರ್ತಿ. ಪೆಂಗ್ವಿನ್‌ ಪ್ರಕಾಶನ ಅವರ ಹೆಚ್ಚಿನ ಬರಹಗಳನ್ನು ಪ್ರಕಟಿಸಿವೆ. ಈವರೆಗೆ ಅವರು ೨೧ ಪುಸ್ತಕಗಳನ್ನು ಬರೆದಿದ್ದಾರೆ. ಈ ಪೈಕಿ   ಕನ್ನಡದ ಕೆಲವು ಜನಪ್ರಿಯ ಕೃತಿಗಳೆಂದರೆ: 

  • ಡಾಲರ್‌ ಸೊಸೆ 
  • ಕಾವೇರಿಯಿಂದ ಮೆಕಾಂಗಿಗೆ 
  • ಋಣ
  • ಹಕ್ಕಿಯ ತೆರದಲಿ
  • ಗುಟ್ಟೊಂದ ಹೇಳುವೆ 

ಅವರ ಜನಪ್ರಿಯ ಕೃತಿಗಳಲ್ಲಿ ಒಂದು  “ನನ್ನ ಅಜ್ಜಿಗೆ ನಾ ಹೇಗೆ ಓದಲು ಕಲಿಸಿದೆ ಮತ್ತು ಇತರ ಕಥೆಗಳು”. ಈ ಪುಸ್ತಕ 15 ಭಾಷೆಗಳಿಗೆ ಭಾಷಾಂತರಗೊಂಡಿದೆ. ಇದು ಅವರು ತಮ್ಮ ಬಾಲ್ಯದಲ್ಲಿ ತಮ್ಮ ಅಜ್ಜ- ಅಜ್ಜಿಯೊಂದಿಗೆ ಹೊಂದಿದ್ದ ನಂಟನ್ನು ಪ್ರತಿಫಲಿಸುತ್ತದೆ. ಅವರ ಮೊದಲ ಕಾದಂಬರಿ ʼಹೌಸ್‌ ಆಫ್‌ ಕಾರ್ಡ್ಸ್‌ʼ ಶ್ರೀಮಂತ ವೈದ್ಯರ ಪತ್ನಿಯೊಬ್ಬರು ಎದುರಿಸಿದ ಪ್ರಕ್ಷುಬ್ದ ಪರಿಸ್ಥಿತಿಯನ್ನು ವಿವರಿಸುತ್ತದೆ. 

ಪ್ರಶಸ್ತಿ ಮತ್ತು ಮನ್ನಣೆಗಳು 

ಸುಧಾ ಮೂರ್ತಿ ತಮ್ಮ ಶಿಕ್ಷಣದ ಆರಂಭದಿಂದಲೂ, ಅವರು ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಚೆನ್ನೈನಲ್ಲಿ 2004 ರಲ್ಲಿ ಶ್ರೀ ರಾಜಲಕ್ಷ್ಮಿ ಫೌಂಡೇಶನ್ ನಿಂದ ರಾಜಲಕ್ಷ್ಮಿ ಪ್ರಶಸ್ತಿಯ ಮನ್ನಣೆ ಪಡೆದರು. ಸಮಾಜ ಸೇವೆಯಲ್ಲಿ ತಮ್ಮ ಅಸಾಮಾನ್ಯ ಸಾಧನೆಗಾಗಿ ಅವರು ಆ ಪ್ರಶಸ್ತಿಯನ್ನು ಪಡೆದಿದ್ದರು. ಅವರು ಭಾರತದ ಸರ್ಕಾರದ ನಾಲ್ಕನೇ ಅತ್ಯುನ್ನತ ಪುರಸ್ಕಾರವಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ

ಕರ್ನಾಟಕ ಸರಕಾರದ ಅತ್ಯುನ್ನತ ಗೌರವವಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕೂಡ ಅವರು ಭಾಜನರಾಗಿದ್ದಾರೆ.  ಮೈಸೂರು ವಿಶ್ವವಿದ್ಯಾನಿಲಯ ತನ್ನ ನೂರನೇ ಘಟಿಕೋತ್ಸವದಲ್ಲಿ, ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. 

Jolad Rotti:
Related Post