X

ಸಕಲ ಭಾಗ್ಯವಿದಾತೆ ಗೊರವನಹಳ್ಳಿ ಮಹಾಲಕ್ಷ್ಮಿ

    Categories: Tumkur

ನಮ್ಮ ದೇಶದಲ್ಲಿ ನಮ್ಮ ರಾಜ್ಯ ಪ್ರವಾಸಿಗರ ಆಕರ್ಷಣೆಯಲ್ಲಿ ನಾಲ್ಕನೇ   ಅತ್ಯಂತ ಜನಪ್ರಿಯ  ತಾಣ ಎಂದೇ ಪ್ರಸಿದ್ದಿಯಾಗಿದೆ.  ಇದಕ್ಕೆ  ಬಹು ಮುಖ್ಯ  ಕಾರಣವೆಂದರೆ, ನಮ್ಮ  ರಾಜ್ಯದ   ಪ್ರವಾಸಿ ತಾಣಗಳು ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿವೆ.  ಅದರಲ್ಲಿಯೂ ಇಲ್ಲಿನ ಆಧ್ಯಾತ್ಹ್ಮಿಕ ಕ್ಷೇತ್ರಗಳಿಗೆ ಎಲ್ಲೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಒಂದು ಪ್ರಸಿದ್ಧ  ದೇಗುಲವೆಂದರೆ,  ತುಮಕೂರು ಜಿಲ್ಲೆಯ ಕೊರಟಗೆರೆಯ   ಗೊರವನಹಳ್ಳಿಯಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನ. ಈ ದೇಗುಲದ   ಹೆಸರೇ ಸೂಚಿಸುವಂತೆ, ಈ ದೇವಾಲಯವು ಭಗವಾನ್ ಶ್ರೀ  ಮಹಾವಿಷ್ಣುವಿನ ಪತ್ನಿ ಮತ್ತು ಸಮೃದ್ಧಿ ಮತ್ತು ಸಂಪತ್ತಿನ ದೇವತೆಯಾದ ಮಹಾಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಕರಕುಶಲ  ಕೆತ್ತನೆ,  ಪುಷ್ಪಾಲಂಕಾರ,ಹೀಗೆ ಎಲ್ಲ ಬಗೆಯ ಅಧ್ಯಾತ್ಹ್ಮಿಕ ಅನುಸಂಧಾನಗಳಿಗೆ ಈ ದೇಗುಲ ಪ್ರಸಿದ್ಧ 

Goddess Mahalakshmi. Image courtesy Mahalakshmi Gubbi

ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ಬಗ್ಗೆಗಿನ ಸ್ಥೂಲ ಮಾಹಿತಿಗಳು 

ದೇಗುಲ ಪ್ರವೇಶ ಸಮಯ: ಬೆಳಗ್ಗೆ 6 ರಿಂದ  ಮಧ್ಯಾನ್ಹ 12:30

 ಸಂಜೆ 5:30 ರಿಂದ ರಾತ್ರಿ 8 ರವರೆಗೆ

ಪೂಜಾ ಸಮಯ: ಬೆಳಗ್ಗೆ  8 ರಿಂದ 9:30  ಕುಂಕುಮಾರ್ಚನೆ  ಮತ್ತು ಅಭಿಷೇಕ
ಮಹಾ ಮಂಗಳಾರತಿ ಸಮಯ: ಬೆಳಗ್ಗೆ  9:30, ಮಧ್ಯಾನ್ಹ  12:30  ಮತ್ತು  ರಾತ್ರಿ  7:30 .
ವಿಳಾಸ:  ತೀತಾ  ಅಂಚೆ  ಕೊರಟಗೆರೆ ತಾಲೂಕು, ತುಮಕೂರು ಜಿಲ್ಲೆ, ಗೊರವನಹಳ್ಳಿ – 572129 
Google Maps: ನಕ್ಷೆ

ದೇವಾಲಯ ಮತ್ತು ಅದರ ಇತಿಹಾಸ

ದೇಶದ ಎಲ್ಲ ದೇಗುಲಗಳಂತೆ ಈ ದೇಗುಲಕ್ಕೂ ತನ್ನದೇ ಆದಂತಹ ಒಂದು ಸುಂದರ ಇತಿಹಾಸವಿದೆ.  ಈ ದೇಗುಲದಲ್ಲಿ ಪೂಜಿಸಲ್ಪಡುತ್ತಿರುವ  ಮಹಾಲಕ್ಷ್ಮಿ ದೇವಿಯ ಮುಖ್ಯ ವಿಗ್ರಹವು  ಸ್ವಯಂ ಆವಿರ್ಭವಿಸಿದೆ ಎಂದು ನಂಬಲಾಗಿದೆ.  ಸ್ಥಳೀಯ ಇತಿಹಾಸಕಾರರ ಪ್ರಕಾರ, ಈ ದೇಗುಲ ಸುಮಾರು ೨೦೦ ವರ್ಷಗಳ ಇತಿಹಾಸ ಹೊಂದಿದೆ.  1900 ರ ದಶಕದ ಆರಂಭದಲ್ಲಿ, ಈ ಹಳ್ಳಿಯಲ್ಲಿ  ಅಬ್ಬಯ್ಯ ಎಂಬ  ರೈತನು ವಾಸಿಸುತ್ತಿದ್ದನು. ಅವನಿಗೆ ಈ   ಈ ವಿಗ್ರಹ ಒಂದು ದಿನ ಸಿಕ್ಕಿತು. . ಆತ ತನ್ನ  ಮನೆಯಲ್ಲಿ  ಈ ವಿಗ್ರಹವನ್ನು ಪೂಜಿಸಲು ಆರಂಭಿಸಿದನು.  ಆ ಸಂದರ್ಭದಲ್ಲಿ  ದೇವಿ ಆತನಿಗೆ  ಸಂಪತ್ತು ಮತ್ತು ಸಮೃದ್ಧಿಯನ್ನು ಆಶೀರ್ವದಿಸಿದರು. ತನಗೆ ಅನಾಯಾಸವಾಗಿ ದೊರೆತ ಸಂಪತ್ತನ್ನು ಆತ ದಾನಕ್ಕೆ ವಿನಿಯೋಗಿಸಿದನು. ಈತನ ಸಮಾಜ ಸೇವೆಯ ಗೌರವಾರ್ಥವಾಗಿ ಆತನ  ಮನೆಗೆ  ಲಕ್ಷ್ಮಿ ನಿವಾಸ ಎಂದು ಜನ ಹೆಸರಿಟ್ಟರು. 

 ಅಬ್ಬಯ್ಯ ಸಹೋದರ  ತೋಟದಪ್ಪ ಕೂಡ ಅಬ್ಬಯ್ಯನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದರು.  ಆತ ಕೂಡ  ಮಹಾಲಕ್ಷ್ಮಿ ದೇವಿಯನ್ನು ಪೂಜಿಸಲಾರಂಭಿಸಿದನು. . ಒಂದು ರಾತ್ರಿ ದೇವಿಯು ಅವನ ಕನಸಿನಲ್ಲಿ  ಪ್ರತ್ಯಕ್ಷಳಾಗಿ   ತನಗೆ ದೇವಾಲಯವನ್ನು ನಿರ್ಮಿಸುವಂತೆ ಆದೇಶ ನೀಡಿದಳು. ಈ ಆದೇಶದ ಪ್ರಕಾರ ಆತ  ದೇವಿಗೆ ದೇವಾಲಯವನ್ನು ನಿರ್ಮಿಸಿದನು ಮತ್ತು ಈ ಗುಡಿಯಲ್ಲಿ ವಿಗ್ರಹವನ್ನು ಪೂಜಿಸಲು ಪ್ರಾರಂಭಿಸಿದನು.

 ತೋಟದಪ್ಪನ ಮರಣದ ನಂತರ,  ಚೌಡಯ್ಯ ಎನ್ನುವಾತ  ಮಹಾಲಕ್ಷ್ಮಿ ದೇವಿಗೆ ಪೂಜೆಗಳನ್ನು ಮಾಡಲು ಪ್ರಾರಂಭಿಸಿದನು.

ಆದರೆ  1910 ಮತ್ತು 1925 ರ ನಡುವಣ  ಹದಿನೈದು ವರ್ಷಗಳ ಕಾಲ   ಎನ್ನುವ ಬಗ್ಗೆ   ಹೆಚ್ಚಿನ ಮಾಹಿತಿ ಇಲ್ಲ. ಆದರೆ   1925 ರಲ್ಲಿ, ದೇವಿಯ ಪರಮ ಭಕ್ತೆ  ಕಮಲಮ್ಮ ಗೊರವನಹಳ್ಳಿಗೆ ಆಗಮಿಸಿದರು.  ಈ ಸಂದರ್ಭದಲ್ಲಿ ದೇಗುಲ ಸುಸ್ಥಿತಿಯಲ್ಲಿ ಇಲ್ಲದಿರುವುದನ್ನು ಕಂಡು ಮಮ್ಮಲ ಮರುಗಿದರು. ಬಳಿಕ, ಅವರು, ದೇವಾಲಯವನ್ನು ಪುನರುಜ್ಜೀವನಗೊಳಿಸಿದರು. ಆ ಬಳಿಕ  ದೇವಿಗೆ ಪೂಜೆ ಮರು ಆರಂಭವಾಯಿತು.   ಆದರೆ ಕೆಲವು ಕಾರಣಗಳಿಂದ ಒಂದು ವರ್ಷದ ನಂತರ ಅವರು  ಗೊರವನಹಳ್ಳಿ ಬಿಟ್ಟು ತೆರಳಿದರು.   ಬಳಿಕ ಸುಮಾರು 26 ವರ್ಷಗಳ  ನಂತರ  ಅವರು  ದೇವಾಲಯಕ್ಕೆ ಮರಳಿ ಬಂದು 1952 ರಲ್ಲಿ ಪುನರ್ ಪೂಜೆ ಆರಂಭಿಸದರು.   ಅಂದಿನಿಂದ ಈ ದೇವಾಲಯವು ಮಹಾಲಕ್ಷ್ಮಿ ದೇವಿಯ ಭಕ್ತರಿಗೆ ತೀರ್ಥಕ್ಷೇತ್ರವಾಯಿತು. ದೇಶದ ಎಲ್ಲ ಕಡೆಗಳಿಂದ,  ಅದರಲ್ಲೂ ದಕ್ಷಿಣ  ಭಾರತದ ಎಲ್ಲೆಡೆಯಿಂದ ಇಲ್ಲಿಗೆ ದೇವಿ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.  

ದೇಗುಲದ  ವಾಸ್ತುಶಿಲ್ಪ 

 ಗೊರವನಹಳ್ಳಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನವು 1900 ರ ದಶಕದ ವಿಶಿಷ್ಟವಾದ ದಕ್ಷಿಣ ಭಾರತದ ವಾಸ್ತುಶಿಲ್ಪಕ್ಕೆ ಒಂದು ಸುಂದರ ಉದಾಹರಣೆಯಾಗಿದೆ. ದೇವಾಲಯವು ದೊಡ್ಡದಾದ, ಬಹುವರ್ಣದ ಗೋಪುರವನ್ನು ಹೊಂದಿದೆ ಮತ್ತು ಎರಡೂ ಬದಿಗಳಲ್ಲಿ ಸಣ್ಣ ಕಮಾನುಗಳನ್ನು ಹೊಂದಿದೆ. ದೇವಾಲಯದ ಎರಡೂ ಬದಿಯಲ್ಲಿ  ದೊಡ್ಡ ವರಾಂಡ ಇದೆ. . ದೇಗುಲದ ಅಧಿದೇವತೆ  ಶ್ರೀ ಮಹಾಲಕ್ಷ್ಮಿ ವಿಗ್ರಹವು    ಗರ್ಭಗೃಹದಲ್ಲಿ ಪ್ರತಿಷ್ಠಾಪಿತವಾಗಿದೆ.  ಶ್ರೀ ನಾಗದೇವತೆ, ಶ್ರೀ ಮಾರಿಕಾಂಬಾ ದೇವತೆ ದೇಗುಲ ಕೂಡ ಇಲ್ಲಿದೆ. 

ದೇಗುಲ ಭೇಟಿ 

ಈ ದೇವಸ್ಥಾನವು ವರ್ಷದ ಎಲ್ಲ ದಿನಗಳಲ್ಲೂ ತೆರೆದಿರುತ್ತದೆ. ಆದರೆ ಸೂರ್ಯ ಗ್ರಹಣ- ಚಂದ್ರ ಗ್ರಹಣ ಸಂದರ್ಭದಲ್ಲಿ ಮಾತ್ರ ಇಲ್ಲಿ ಬಾಗಿಲು ಹಾಕಲಾಗುತ್ತದೆ. ಉಳಿದಂತೆ, ಎಲ್ಲ     ದಿನಗಲ್ಲು ಸಾರ್ವಜನಿಕರಿಗೆ ದೇಗುಲದ ಬಾಗಿಲು  ತೆರೆದಿರುತ್ತದೆ. ಮಂಗಳವಾರ ಮತ್ತು ಶುಕ್ರವಾರ  ಶ್ರೀ ಮಹಾಲಕ್ಷ್ಮಿಗೆ  ವಿಶೇಷ ದಿನ ಎಂದು ಪರಿಗಣಿಸಲಾಗಿದೆ. 

ದೇಗುಲದಲ್ಲಿ   ಅಭಿಷೇಕ ಮತ್ತು ಕುಂಕುಮಾರ್ಚನೆಯನ್ನು ಬೆಳಿಗ್ಗೆ 8 ರಿಂದ 9.30 ರವರೆಗೆ ಮತ್ತು ಮಹಾ ಮಂಗಳಾರತಿಯನ್ನು ಬೆಳಿಗ್ಗೆ 9:30, ಮಧ್ಯಾಹ್ನ 12:30 ಮತ್ತು ಸಂಜೆ 7:30 ಕ್ಕೆ ಮಾಡಲಾಗುತ್ತದೆ. ದೇವಸ್ಥಾನವನ್ನು ಮಧ್ಯಾಹ್ನ 12.30 ರಿಂದ ಸಂಜೆ 5.30 ರವರೆಗೆ ಸಾರ್ವಜನಿಕರ ಭೇಟಿಗೆ  ಮುಚ್ಚಲಾಗುತ್ತದೆ. ಈ ದೇವಾಲಯದಲ್ಲಿ ಲಕ್ಷದೀಪೋತ್ಸವವು ಪ್ರಮುಖ ಹಬ್ಬವಾಗಿದೆ. 

ಕಾರ್ತಿಕ ಮಾಸ (ನವಂಬರ್  ಕೊನೆ – ಡಿಸೆಂಬರ್ ತಿಂಗಳ ಮೊದಲ ವಾರ) ದಲ್ಲಿ ದೇಗುಲದಲ್ಲಿ ಲಕ್ಷ ದೀಪೋತ್ಸವ ಜರಗುತ್ತದೆ. 

ಗೊರವನಹಳ್ಳಿ ಸುತ್ತಲಿನ  ಇತರ ಪ್ರವಾಸಿತಾಣಗಳು 

ತೀತ ಜಲಾಶಯ: ಈ ಜಲಾಶಯ  ಸುವರ್ಣಮುಖಿ ನದಿಗೆ ನಿರ್ಮಿಸಲಾಗಿದೆ. ಇದು ದೇಗುಲದ ಸಮೀಪದಲ್ಲಿದೆ.  ಈ ಜಲಾಶಯ ಸುತ್ತ ಕಣ್ಮನ ತಣಿಸುವ ಪ್ರಕೃತಿ ಸೌಂದರ್ಯವಿದೆ  

ದೇವಾಲಯಗಳು: ಓಣಿ ನಾಗಪ್ಪ ದೇವಾಲಯ ಮತ್ತು ರೇಣುಕಾಂಬ ದೇವಾಲಯದಂತಹ ಹಲವಾರು ದೇವಾಲಯಗಳು ಶ್ರೀ ಮಹಾಲಕ್ಷ್ಮಿ ದೇವಾಲಯದ  ಸುತ್ತ ನಿರ್ಮಾಣಗೊಂಡಿವೆ. 

ಬಂಕಾಪುರ ನವಿಲು ಅಭಯಾರಣ್ಯ:  ಗೊರವನಹಳ್ಳಿ ಯಿಂದ ಸುಮಾರು  300 ಕಿಲೋಮೀಟರ್‌ ದೂರದಲ್ಲಿ  ಸುಂದರವಾದ ಬಂಕಾಪುರ ನವಿಲು ಅಭಯಾರಣ್ಯವಿದೆ. ಈ ಅಭಯಾರಣ್ಯವು 139 ಎಕರೆಗಳಲ್ಲಿ ಹರಡಿ ನಿಂತಿದೆ.   ಬಂಕಾಪುರ ಕೋಟೆಯ ಅವಶೇಷಗಳು, ಸಾವಿರಾರು  ನವಿಲುಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. 

Goddess Mahalakshmi. Image courtesy Mahalakshmi Gubbi

ಗೊರವನಹಳ್ಳಿಯ  ಶ್ರೀ ಮಹಾಲಕ್ಷ್ಮಿ ದೇವಸ್ಥಾನವನ್ನು ತಲುಪುವುದು ಹೇಗೆ

ಗೊರವನಹಳ್ಳಿ ಈಗ ಉತ್ತಮ  ರಸ್ತೆ ಸಂಪರ್ಕ ಹೊಂದಿದೆ. ಜೊತೆಗೆ,  ರೈಲು ಅಥವಾ ವಿಮಾನದ ಮೂಲಕ  ಕೂಡ ಈ ಕ್ಷೇತ್ರವನ್ನು  ಸುಲಭವಾಗಿ ತಲುಪಬಹುದು. ಕರ್ನಾಟಕದ ರಾಜಧಾನಿ ಬೆಂಗಳೂರು ಗೊರವನಹಳ್ಳಿಗೆ ಹತ್ತಿರದ ದೊಡ್ಡ ನಗರವಾಗಿದೆ.  

ವಿಮಾನ ಸಂಪರ್ಕ : ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶೀಯ ಮತ್ತು ಅಂತರಾಷ್ಟ್ರೀಯ  ಹೊಂದಿದೆ. ಇಲ್ಲಿಂದ   ದೇವಾಲಯಕ್ಕೆ ಕೇವಲ 80 ಕಿ.ಮೀ ದೂರ. 

ರೈಲು ಸಂಪರ್ಕ:  ಗೊರವನಹಳ್ಳಿಗೆ  ಹತ್ತಿರದ ರೈಲು ನಿಲ್ದಾಣ ತುಮಕೂರು ನಗರ  ರೈಲ್ವೆ   ನಿಲ್ದಾಣ. ಇಲ್ಲಿಂದ,  ದೇವಸ್ಥಾನಕ್ಕೆ ಕೇವಲ  36 ಕಿಮೀ ದೂರ.  ಬೆಂಗಳೂರು- ತುಮಕೂರು, ಹುಬ್ಬಳ್ಳಿ- ತುಮಕೂರು ನಡುವೆ, ದಿನ ಹತ್ತಾರು ರೈಲುಗಳು ಸಂಚರಿಸುತ್ತವೆ. 

ರಸ್ತೆ  ಸಂಪರ್ಕ: ಬೆಂಗಳೂರು ಮತ್ತು  ಗೊರವನಹಳ್ಳಿ   ನಡುವೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ನಿಯಮಿತವಾಗಿ ಸಂಚರಿಸುತ್ತವೆ. ಪರ್ಯಾಯವಾಗಿ, ನೀವು ಬೆಂಗಳೂರಿನಿಂದ ಕ್ಯಾಬ್ ಬಾಡಿಗೆಗೆ ಆಯ್ಕೆ ಮಾಡಬಹುದು ಅಥವಾ ನೀವೇ ಚಾಲನೆ ಮಾಡಬಹುದು. ಏಕೆಂದರೆ, ಈ ರಸ್ತೆ ಉತ್ತಮವಾಗಿದ್ದು, ಯಾವುದೇ ಸಮಸ್ಯೆ ಇಲ್ಲ. 

Related Readings

Jolad Rotti:
Related Post