ಕರ್ನಾಟಕದ ಪ್ರತಿಯೊಂದು ನಗರ-ಹಳ್ಳಿಗಳಲ್ಲೂ ವಾರ್ಷಿಕ ಆಸ್ತಿ ತೆರಿಗೆ ಪಾವತಿ ಕಡ್ಡಾಯ. ಹೀಗೆ ನಾಗರಿಕರು ಪಾವತಿಸುವ, ಆಸ್ತಿ ತೆರಿಗೆಯನ್ನು ನಾನಾ ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗುತ್ತದೆ. ಆದರೆ, ಬೆಂಗಳೂರು ಹೊರತು ಪಡಿಸಿ, ರಾಜ್ಯದ ಉಳಿದ ಪಟ್ಟಣ ಹಾಗೂ ಗ್ರಾಮಗಳಲ್ಲಿ ಜನರು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯೆಂದರೆ, ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್ ಮೂಲಕ ಅವಕಾಶ ಇಲ್ಲದಿರುವುದು. ಆದರೆ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕ್ಯೂ ಆರ್ ಕೋಡ್ ಬಳಸಿ, ಆಸ್ತಿ ತೆರಿಗೆ ಪಾವತಿಸುವ ಹೊಸ ವ್ಯವಸ್ಥೆಯೊಂದನ್ನು ಮೈಸೂರು ಮಹಾನಗರ ಪಾಲಿಕೆ […]
ಕರ್ನಾಟಕ ಸರ್ಕಾರ
ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಕರ್ನಾಟಕ ಸರ್ಕಾರ, ರಾಜ್ಯದ 30 ಜಿಲ್ಲೆಗಳ ಆಡಳಿತವನ್ನು ನಡೆಸುತ್ತಿದೆ. ಮುಖ್ಯಮಂತ್ರಿ ಮತ್ತು ಅವರ / ಅವಳ ಸಚಿವ ಸಂಪುಟವನ್ನು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ, ರಾಜ್ಯಪಾಲರು ನೇಮಿಸುತ್ತಾರೆ. ಕರ್ನಾಟಕದ ಶಾಸಕಾಂಗ ದ್ವಿ ಸದನ ಮಾದರಿ ಹೊಂದಿದೆ . ಅವುಗಳೆಂದರೆ ವಿಧಾನಸಭೆ ಮತ್ತು ವಿಧಾನ ಪರಿಷತ್ತು.
ಕರ್ನಾಟಕ ಶಾಸಕಾಂಗವು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ವಿಧಾನ ಸೌಧದಿಂದ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಈಗ ಮೂರು ಪ್ರಮುಖ ರಾಜಕೀಯ ಪಕ್ಷಗಳಿವೆ. ಅವುಗಳೆಂದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಭಾರತೀಯ ಜನತಾ ಪಕ್ಷ ಮತ್ತು ಜಾತ್ಯತೀತ ಜನತಾದಳ.
ಪ್ರಸ್ತುತ, ಭಾರತೀಯ ಜನತಾ ಪಕ್ಷ ಕರ್ನಾಟಕದ ಆಡಳಿತ ಪಕ್ಷವಾಗಿದ್ದು, ಬಿ ಎಸ್ ಯಡಿಯೂರಪ್ಪ ಅವರು ರಾಜ್ಯದ ಚುನಾಯಿತ ಮುಖ್ಯಮಂತ್ರಿಯಾಗಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಅನ್ನ ಭಾಗ್ಯ, ಕ್ಷೀರ ಭಾಗ್ಯ, ಋಣಮುಕ್ತ ಭಾಗ್ಯ ಮತ್ತು ವಿದ್ಯಾ ಸಿರಿ ಮುಂತಾದ ಅನೇಕ ಜನ ಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿದೆ. ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆಯನ್ನು ಪ್ರಕಟಿಸಿದ್ದು, ಇದರ ಅಡಿಯಲ್ಲಿ 2017-18ನೇ ಸಾಲಿನಲ್ಲಿ ಸರ್ಕಾರಿ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ದಾಖಲಾಗುವ ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್ ಪಡೆಯುತ್ತಾರೆ.
ಕರ್ನಾಟಕ ಸರಕಾರದ ಬಗ್ಗೆ ಹೆಚ್ಚಿನ ಮಾಹಿತಿ - ಓದು ಇಲ್ಲಿದೆ
ಕರ್ನಾಟಕದಲ್ಲಿ ಉದ್ದಿಮೆ ಪರವಾನಿಗೆಗಳ ಸ್ವಯಂ ನವೀಕರಣ
ದೇಶದ ಉದ್ಯಮ ಸ್ನೇಹಿ ರಾಜ್ಯಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಕರ್ನಾಟಕ ರಾಜ್ಯದ್ದು. ಇದೀಗ ರಾಜ್ಯದಲ್ಲಿ ಉದ್ದಿಮೆ ಪರವಾನಿಗೆಯ ಸ್ವಯಂ- ನವೀಕರಣದ ಕನಸು ನನಸಾಗುತ್ತಿದೆ. ಈವರೆಗೆ, ಕರ್ನಾಟಕದಲ್ಲಿ ಉದ್ಯಮ ಸಂಸ್ಥೆಗಳ ಸ್ಥಾಪನೆ, ನಿಯಂತ್ರಣ ಕಾನೂನುಗಳು ಅತಿ ಕಠಿಣವಾಗಿದ್ದರಿಂದ ಇದು ಪ್ರಾಮುಖ್ಯತೆ ಪಡೆದುಕೊಂಡಿದೆ. ಕಳೆದ ಕೆಲವು ಸಮಯದಿಂದ ಕರ್ನಾಟಕ ಸರ್ಕಾರ ಉದ್ಯಮ ಸ್ನೇಹಿ ರಾಜ್ಯವಾಗುವತ್ತ ಹೆಜ್ಜೆ ಇಡುತ್ತಿದೆ. ರಾಜ್ಯದಲ್ಲಿ ಉದ್ಯಮ ಆರಂಭಿಸುವ ಹಾಗು ನಡೆಸುವ ಸಂಬಂಧ ಇರುವ ನೀತಿ ನಿಯಮಗಳನ್ನು ಸಡಿಲಿಕೆ ಮಾಡುವ ಸಂಬಂಧ […]
ನೇತ್ರದಾನ ಮೂಲಕ ಜೀವಸಾರ್ಥಕತೆ: ನೀವು ನೆನಪಿನಲ್ಲಿಟ್ಟುಕೊಳ್ಳಬೇಕು ಅಂಶಗಳು
ನಮ್ಮ ರಾಜ್ಯದಲ್ಲಿ ಲಕ್ಷಾಂತರ ಮಂದಿ, ತಮ್ಮ ಕುರುಡುತನ ನಿವಾರಿಸಿಕೊಳ್ಳಲು, ನೇತ್ರದಾನಿಗಳ ನಿರೀಕ್ಷೆಯಲ್ಲಿದ್ದಾರೆ. ನೇತ್ರ ದಾನ ಮಹಾದಾನವಾಗಿದ್ದು, ನಮ್ಮ ರಾಜ್ಯದಲ್ಲಿ ನೇತ್ರ ದಾನ ಮಾಡುವುದರಿಂದ ಒಂದು ಅಥವಾ ಹೆಚ್ಚಿನ ವ್ಯಕ್ತಿಗಳಲ್ಲಿ ಅಂಧತ್ವ ಸರಿಪಡಿಸಲು ಸಹಾಯ ಮಾಡಿದಂತಾಗುತ್ತದೆ. ಇದರರ್ಥ ಒಬ್ಬ ವ್ಯಕ್ತಿಯ ನೇತ್ರದಾನದಿಂದ, ಕನಿಷ್ಠ ಇಬ್ಬರು ವ್ಯಕ್ತಿಗಳ ಜೀವನವನ್ನು ಬೆಳಗಿಸಲು ಸಾಧ್ಯವಿದೆ. ಕರ್ನಾಟಕದಲ್ಲಿ ನೇತ್ರ ದಾನ ಎಂದ ಕೂಡಲೇ ನಮಗೆ ನೆನಪಾಗುವುದು ಖ್ಯಾತ ನಟ ಡಾ. ರಾಜ್ ಕುಮಾರ್. ಅವರು ರಾಜ್ಯದಲ್ಲಿ ನೇತ್ರ ದಾನದ ಬಗ್ಗೆ ಸಾಕಷ್ಟು ಜನ […]
ಕರ್ನಾಟಕದಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಹೇಗೆ?
ನೀವು ಆಧಾರ್ ಕಾರ್ಡ್ ಹೊಂದಿದ್ದರೆ, ಕರ್ನಾಟಕದಲ್ಲಿ ಅದನ್ನು ಹೇಗೆ ಅಪ್‌ಡೇಟ್ ಮಾಡುವುದು ಎಂದು ಯೋಚಿಸುತ್ತಿದ್ದರೆ ಈ ಲೇಖನವನ್ನು ಓದುವುದು ಅವಶ್ಯಕ. ಏಕೆಂದರೆ, ಈ ಲೇಖನದಲ್ಲಿ ನಾವು, ಇಡೀ ಪ್ರಕ್ರಿಯೆಯ ವಿವರಗಳನ್ನು ಹಂತಗಳಲ್ಲಿ ದಾಖಲಿಸಿದ್ದೇವೆ. . ಪರಿಷ್ಕರಿಸಲಾದ ನಿಯಮಗಳ ಪ್ರಕಾರ, ಆಧಾರ್ ಕಾರ್ಡ್‌ನಲ್ಲಿ ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿ ನಮೂದಿಸುವುದು ಕಡ್ಡಾಯ. ಸರಕಾರದ ನಿರ್ದೆಶನದ ಪ್ರಕಾರ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವಿವರಗಳನ್ನು ಅಪ್‌ಡೇಟ್ ಮಾಡುವ ಅಗತ್ಯವಿಲ್ಲ. ಆದರೆ, ಅವನು/ಅವಳು 15 ವರ್ಷ […]
ಕರ್ನಾಟಕದಲ್ಲಿ ಕೋವಿಡ್ ೧೯ ಲಸಿಕೆ ಹಂಚಲು ತಯಾರಿ ಹೇಗಿದೆ ಗೊತ್ತಾ?
ಕೋವಿಡ್ ೧೯ ನಿಂದ ಬಾಧಿತವಾಗಿರುವ ಕರ್ನಾಟಕದಲ್ಲಿ ಕೋವಿಡ್ ೧೯ ಲಸಿಕೆ ಹಂಚಿಕೆ ಸಂಬಂಧ ಸರಕಾರ ನಡೆಸಿರುವ ಸಿದ್ಧತೆಗಳೇನು? ಕೇಂದ್ರ ಸರಕಾರದಿಂದ ಅನುಮೋದನೆಗೊಂಡ ಲಸಿಕೆಗಳನ್ನು ಆ ಬಳಿಕ ಕರ್ನಾಟಕದಲ್ಲಿ ಹಂಚುವಿಕೆ ಸಂಬಂಧ ಮೇಲ್ವಿಚಾರಣೆಗೆ ಒಂದು ಹೈ ಪವರ್ ಸಮಿತಿಯನ್ನು ರಚಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕೋವಿಡ್ ೧೯ ಲಸಿಕೆ ಕಾರ್ಯಕ್ರಮದ ಸಿದ್ಧತೆಗಳು: ಕರ್ನಾಟಕದಲ್ಲಿ ಮೇಲ್ವಿಚಾರಣಾ ಸಮಿತಿ ರಚನೆ ರಾಜ್ಯದ ಕೋವಿಡ್ ೧೯ ಲಸಿಕೆ ಮೇಲ್ವಿಚಾರಣೆ ಸಮಿತಿಯ ಅಧ್ಯಕ್ಷರಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಅವರು ಕೋವಿಡ್ ೧೯ ವಿರುದ್ಧದ ಹೋರಾಟದ […]
ರಾಷ್ಟ್ರೀಯ ನೇಮಕಾತಿ ಸಂಸ್ಥೆ – ಸರಕಾರಿ ಉದ್ಯೋಗಕ್ಕಾಗಿ ಒಂದೇ ಸಿಇಟಿ
ಸರಕಾರದ ನಾನಾ ಇಲಾಖೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು, ಬಹು ಪರೀಕ್ಷೆಗಳನ್ನು ಬರೆಯಬೇಕಾದ ಅನಿವಾರ್ಯತೆ ಈಗ ಇದೆ. ಈ ಬಹು ಪರೀಕ್ಷೆ ವ್ಯವಸ್ಥೆಯ ಬದಲಾಗೇ, ಸರಕಾರಿ ಉದ್ಯೋಗಾಕಾಂಕ್ಷಿಗಳು ಒಂದೇ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯುವ ಹೊಸ ವ್ಯವಸ್ಥೆ ಸದ್ಯದಲ್ಲೇ ಜಾರಿಗೆ ಬರಲಿದೆ. ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ವ್ಯವಸ್ಥೆಯನ್ನು ರಾಷ್ಟ್ರೀಯ ನೇಮಕಾತಿ ಸಂಸ್ಥೆಯ ಮೂಲಕ ಜಾರಿಗೆ ತರಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದು, ಸುಮಾರು ೨.೫ ಕೋಟಿ ಯುವ ಸರಕಾರಿ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲಿದೆ. ಕೇಂದ್ರದ ಈ ಹೊಸ ನಿರ್ಧಾರದ ಪ್ರಕಾರ, […]
ಡಿಜಿಟಲ್ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಲಭ್ಯವಿರುವ ಆನ್ ಲೈನ್ ಸೇವೆಗಳು
ನವೆಂಬರ್ 2, 2020ರಿಂದ ರಾಜ್ಯದ ಮೂರು ಉಪ ನೋಂದಣಾಧಿಕಾರಿ ಕಚೇರಿಗಳು ಸಂಪೂರ್ಣ ಡಿಜಿಟಲ್ ಮಾಯವಾಗಿಲಿವೆ. ಈ ಕಚೇರಿಗಳಲ್ಲಿ ಎಲ್ಲ ಸೇವೆಗಳು ಆನ್‌ಲೈನ್‌ನಲ್ಲಿ ಸಂಪೂರ್ಣವಾಗಿ ದೊರೆಯಲಿವೆ. ಈ ಮೂರು ಕಚೇರಿಗಳೆಂದರೆ ಉಪ ನೋಂದಣಾಧಿಕಾರಿ ಕಚೇರಿ, ಜಯನಗರ, ಬೆಂಗಳೂರು ಉಪ ನೋಂದಣಾಧಿಕಾರಿ ಕಚೇರಿ, ಬೈಲಹೊಂಗಲ, ಬೆಳಗಾವಿ ಜಿಲ್ಲೆ ಉಪ ನೋಂದಣಾಧಿಕಾರಿ ಕಚೇರಿ ಕಚೇರಿ, ತುಮಕೂರು ಈ ಮೂರು ಕಚೇರಿಗಳಲ್ಲಿ ಯಾವ ಸೇವೆಗಳು ಆಫ್ ಲೈನ್ ನಲ್ಲಿ ಅಂದರೆ ಕಾಗದ ಪಾತ್ರದ ಮೂಲಕ ನಡೆಯುವುದಿಲ್ಲ ಕರ್ನಾಟಕದ ಡಿಜಿಟಲ್ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ […]
ಆನ್ಲೈನ್ ಮೂಲಕ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಪಾವತಿ
ಬೆಂಗಳೂರು ಆಸ್ತಿ ತೆರಿಗೆ, ಬಿಬಿಎಂಪಿ ಅಧಿಕಾರಿಗಳು, ಸ್ಥಳೀಯ ಆಸ್ತಿ ಮಾಲೀಕರಿಂದ ಸಂಗ್ರಹಿಸುವ ಒಂದು ಸ್ಥಳೀಯ ತೆರಿಗೆಯಾಗಿದೆ. ಈ ತೆರಿಗೆ ಹಣವನ್ನು ನಗರದಲ್ಲಿ ನಾನಾ ಸೇವೆಗಳನ್ನು ಒದಗಿಸಲು ಬಳಸಲಾಗುತ್ತದೆ. ಈ ಸ್ಥಳೀಯ ತೆರಿಗೆಗಳೆಂದರೆ, ರಸ್ತೆ ನಿರ್ವಹಣೆ, ಉದ್ಯಾನವನಗಳ ನಿರ್ವಹಣೆ, ಒಳಚರಂಡಿಗಳು, ಬೀದಿ ದೀಪ ನಿರ್ವಹಣೆ, ಇತ್ಯಾದಿಗಳು. ಬೆಂಗಳೂರಿನ ನಿವಾಸಿಗಳು ಈ ಆಸ್ತಿ ತೆರಿಗೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಪಾವತಿಸಬೇಕಾಗುತ್ತದೆ. ಈ ಲೇಖನದಲ್ಲಿ ನಾವು, ಆನ್‍ಲೈನ್‍ನಲ್ಲಿ ನಿಮ್ಮ ಆಸ್ತಿ ತೆರಿಗೆ ಪಾವತಿಸುವ ಮಾಹಿತಿಯನ್ನು ನೀಡುತ್ತೇವೆ. ಆಸ್ತಿತೆರಿಗೆಯನ್ನುಪಾವತಿಸುವಎರಡುವಿಧಾನಗಳು ನಮ್ಮ […]
ಕರ್ನಾಟಕದಲ್ಲಿ ವಿವಾಹ ನೋಂದಣಿ ಪತ್ರ ಪಡೆಯುವುದು ಹೇಗೆ?
ವಿವಾಹ ನೋಂದಣಿ ಪತ್ರ ದಂಪತಿಯ ವೈವಾಹಿಕ ಸಂಬಂಧವನ್ನು ಶ್ರುತಪಡಿಸುವ ಕಾನೂನು ಬದ್ಧ ದಾಖಲೆ ಪತ್ರವಾಗಿದೆ. ಇಂದು ಅತಿ ಅಗತ್ಯವಾದ ದಾಖಲೆಪತ್ರಗಳಲ್ಲಿ ಒಂದು; ಅದರಲ್ಲೂ ಮುಖ್ಯವಾಗಿ ವಿವಾಹಿತ ಮಹಿಳೆಯರಿಗೆ. ಭಾರತದಲ್ಲಿ ನಾನಾ ಕಾನೂನುಗಳ ಮೂಲಕ ವಿವಾಹವನ್ನು ನೋಂದಣಿ ಮಾಡಿಸಿಕೊಳ್ಳಬಹುದು. ಈ ಪೈಕಿ ಮುಖ್ಯ ಕಾನೂನುಗಳೆಂದರೆ, ಹಿಂದೂ ಮದುವೆ ಕಾನೂನು 1955, ವಿಶೇಷ ಮದುವೆ ಕಾನೂನು 1954, ಪಾರ್ಸಿ ಮದುವೆ ಕಾನೂನು ಹಾಗೂ ವಿಚ್ಛೇದನ ಕಾನೂನು 1936. ಹಿಂದೂ ವೈವಾಹಿಕ ಕಾಯ್ದೆ ಹಿಂದೂಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂದರೆ, ಹಿಂದೂ ಧರ್ಮಿಯರು, […]
ಬೆಂಗಳೂರಿನಲ್ಲಿ ಆನ್‍ಲೈನ್ ಎಫ್‍ಐಆರ್ ಹಾಗೂ ಕಳ್ಳತನ ಬಗ್ಗೆ ಇ-ರಿಪೋರ್ಟ್
ನಿಮಗೆ ಬೆಂಗಳೂರಿನಲ್ಲಿ ಆನ್‍ಲೈನ್ ಪ್ರಥಮ ವರ್ತಮಾನ ವರದಿ (ಎಫ್‍ಐಆರ್) ದಾಖಲಿಸಲು ಸಾಧ್ಯವಿದೆಯೆ? ಉತ್ತರ: ನಿಮಗೆ ಸಾಧ್ಯವಿಲ್ಲ. ಆದರೂ, ನೀವೂ ಬೆಂಗಳೂರಿನಲ್ಲಿ ನಿಮ್ಮ ಕಳೆದು ಹೋದ ವಸ್ತುಗಳ ಬಗ್ಗೆ ಆನ್‍ಲೈನ್ ವರದಿ ಸಲ್ಲಿಸಬಹುದು. ಇದನ್ನು ನಗರ ಪೊಲೀಸರ ಅಂತರ್ಜಾಲ ಹಾಗೂ ಇ-ಲಾಸ್ಟ್ ರಿಪೊರ್ಟ್ ಆಪ್ ಮೂಲಕ ದಾಖಲಿಸಲು ಸಾಧ್ಯವಿದೆ. ಇ-ಲಾಸ್ಟ್ ಆಪ್ ಮೂಲಕ, ನಿಮಗೆ ಕಳೆದು ಹೋದ ವಸ್ತುಗಳ ವರದಿ-ಆನ್‍ಲೈನ್ ಮೂಲಕ ಎಫ್‍ಐಆರ್ ದಾಖಲಿಸುವ ಮಾಹಿತಿ ಬೇಕಿದೆಯೆ? ಈ ಲೇಖನದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗಿದೆ. ಪ್ರಥಮ ವರ್ತಮಾನ […]