X

ಕರ್ನಾಟಕದಲ್ಲಿ ಉದ್ದಿಮೆ ಪರವಾನಿಗೆಗಳ ಸ್ವಯಂ ನವೀಕರಣ

ದೇಶದ ಉದ್ಯಮ ಸ್ನೇಹಿ ರಾಜ್ಯಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಕರ್ನಾಟಕ ರಾಜ್ಯದ್ದು.  ಇದೀಗ ರಾಜ್ಯದಲ್ಲಿ   ಉದ್ದಿಮೆ ಪರವಾನಿಗೆಯ ಸ್ವಯಂ- ನವೀಕರಣದ ಕನಸು ನನಸಾಗುತ್ತಿದೆ. ಈವರೆಗೆ,   ಕರ್ನಾಟಕದಲ್ಲಿ ಉದ್ಯಮ ಸಂಸ್ಥೆಗಳ  ಸ್ಥಾಪನೆ, ನಿಯಂತ್ರಣ ಕಾನೂನುಗಳು  ಅತಿ ಕಠಿಣವಾಗಿದ್ದರಿಂದ  ಇದು ಪ್ರಾಮುಖ್ಯತೆ ಪಡೆದುಕೊಂಡಿದೆ. 

ಕಳೆದ ಕೆಲವು ಸಮಯದಿಂದ ಕರ್ನಾಟಕ ಸರ್ಕಾರ ಉದ್ಯಮ ಸ್ನೇಹಿ ರಾಜ್ಯವಾಗುವತ್ತ ಹೆಜ್ಜೆ ಇಡುತ್ತಿದೆ.   ರಾಜ್ಯದಲ್ಲಿ ಉದ್ಯಮ ಆರಂಭಿಸುವ   ಹಾಗು  ನಡೆಸುವ ಸಂಬಂಧ ಇರುವ ನೀತಿ ನಿಯಮಗಳನ್ನು ಸಡಿಲಿಕೆ ಮಾಡುವ ಸಂಬಂಧ ಕಾರ್ಯತತ್ಪರವಾಗಿದೆ. ಈ ಹಿನ್ನೆಲೆಯೆಲ್ಲಿ, ಇದೀಗ ಈ ಹೊಸ ಉಪಕ್ರಮಕ್ಕೆ ಸರಕಾರ ಕೈ ಹಾಕಿದೆ. ಈಗ,  ಉದ್ಯಮಾಡಳಿತ ಮತ್ತು ಸಂಬಂಧಿತ ಕಾರ್ಯಚಟುವಟಿಕೆಗಳನ್ನು ದೋಷರಹಿತವನ್ನಾಗಿಸಲು ಸರ್ಕಾರ ಐಟಿ (ಮಾಹಿತಿ ತಂತ್ರಜ್ಞಾನ) ಯ ಜಾರಿಗೆ ಒತ್ತು ನೀಡುತ್ತಿದೆ.  ಈ ಮೂಲಕ, ಇಡೀ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ರಹಿತ ಹಾಗೂ ತ್ವರಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಸರಕಾರ ಶ್ರಮಿಸುತ್ತಿದೆ. 

ಪಾರದರ್ಶಕ ಆನ್‌ಲೈನ್‌ ವ್ಯವಸ್ಥೆಯನ್ನು ಬಳಸಿಕೊಂಡು ವಹಿವಾಟು ನಡೆಸಲು ಉದ್ದಿಮೆ ಪರವಾನಿಗೆಯ ಸ್ವಯಂ- ನವೀಕರಣ ಕುರಿತಾಗಿ ಬಿಬಿಎಂಪಿ ಅಧಿಸೂಚನೆ ಹೊರಡಿಸಿದೆ. ಇದು ಉದ್ದಿಮೆ ಪರವಾನಿಗೆಯ ನವೀಕರಣದಲ್ಲಿ ಸದ್ಯ  ಇರುವ ಜಟಿಲತೆಗಳನ್ನು ನಿವಾರಿಸಲಿದೆ. ಇದು ಉದ್ಯಮಗಳಿಗೆ, ಕಚೇರಿಗಳಿಗೆ ಪದೇ ಪದೇ ಎಡತಾಕುವುದನ್ನು ತಪ್ಪಿಸುತ್ತದೆ. ಜೊತೆಗೆ, ಸರಕಾರದ ಆದಾಯ ವೃದ್ಧಿಗೆ ಸಹಾಯಕವಾಗಲಿದೆ. 

ಈಗ, ಕರ್ನಾಟಕದಲ್ಲಿ ನಡೆಸಲಾಗುವ ವಹಿವಾಟಿಗೆ ಸಂಬಂಧಿಸಿದಂತೆ ಉದ್ದಿಮೆ ಪರವಾನಿಗೆ ನವೀಕರಣ ಪ್ರಕ್ರಿಯೆ ಕೆಎಂಸಿ ಕಾಯ್ದೆಯಡಿ (ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಶನ್‌ ಕಾಯ್ದೆ) ಬರುತ್ತದೆ. ಇದನ್ನು ಈ ಕೆಳಗಿನ ಕಾರಣಗಳಿಂದ ಬಹಳ ಜಟಿಲ ಎಂದು ಪರಿಗಣಿಸಲಾಗುತ್ತದೆ. 

  • ಉದ್ಯಮ ಸಂಸ್ಥೆಗಳ ಮೇಲೆ ಹೆಚ್ಚುವರಿ ನಿಯಂತ್ರಣ ಕ್ರಮಗಳು.
  • ಸಂಸ್ಥೆಗಳ ಮೇಲೂ ಹೆಚ್ಚುವರಿ ಆರ್ಥಿಕ ಹೊರೆ 

ಉದ್ದಿಮ ಪರವಾನಿಗೆಗಳ ಸ್ವಯಂ  ನವೀಕರಣ : ಹಣಕಾಸು ಸಚಿವಾಲಯದ ಶಿಫಾರಸ್ಸುಗಳು 

ಭಾರತದ ಹಲವು ರಾಜ್ಯಗಳಲ್ಲಿ ಉದ್ದಿಮೆ ಪರವಾನಿಗೆ ನವೀಕರಣ ಕುರಿತಂತೆ ಹಣಕಾಸು ಸಚಿವಾಲಯ ಈ ಕೆಳಗಿನ ಶಿಫಾರಸ್ಸುಗಳನ್ನು ಮುಂದಿಟ್ಟಿದೆ. 

  • ಈಗಿರುವ ಉದ್ದಿಮೆ ಪರವಾನಿಗೆ ವ್ಯವಸ್ಥೆಯನ್ನು ಸರಳವಾಗಿಸುವುದು. 
  • ತೆಗೆದುಹಾಕಬೇಕಾದ ನವೀಕರಣ ಪ್ರಕ್ರಿಯೆಗಳು
  • ಸ್ವಯಂ-ನವೀಕರಣಕ್ಕಾಗಿ ಪಾರದರ್ಶಕ ಆನ್‌ಲೈನ್‌ ವ್ಯವಸ್ಥೆ 
  • ಇದಕ್ಕಾಗಿ ನ್ಯಾಯಸಮ್ಮತ ಶುಲ್ಕವನ್ನು ಸಂಗ್ರಹಿಸಬೇಕು 

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಶಿಫಾರಸ್ಸುಗಳು 

ಈ  ಶಿಫಾರಸ್ಸುಗಳ ಅನ್ವಯ, ಈಗಿರುವ ವ್ಯವಸ್ಥೆ ಪರಿಶೀಲಿಸಿ, ಹೊಸ ವ್ಯವಸ್ಥೆ ಜಾರಿಗೆ ಸಂಬಂಧ, ರಾಜ್ಯ ಸರಕಾರ, ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಇದೀಗ ತನ್ನ ವರದಿ ಸಲ್ಲಿಸಿದೆ. 

ಈ ಸಮಿತಿ ಈ ಕೆಳಗಿನ ಶಿಫಾರಸ್ಸುಗಳನ್ನು ಸರಕಾರಕ್ಕೆ ಮಾಡಿದೆ.

  • ಉದ್ದಿಮೆ ಪರವಾನಗಿ, ಸ್ವಯಂ ನವೀಕರಣ್ಕೆ ಸಂಬಂಧಿಸಿ, ಒಂದು ಪಾರದರ್ಶಕ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ಬರಲೇಬೇಕು
  • ಇದು ಉದ್ದಿಮೆಗಳಿಗೆ ನೀಡಿರುವ ಪರವಾನಿಗೆಗಳ ಸ್ವಯಂ-ನವೀಕರಣಕ್ಕೆ ಸಂಬಂಧಿಸಿದಂತೆ ಈಗಿರುವ ಎಲ್ಲಾ ಅಡೆತಡೆಗಳನ್ನು ಬಗೆಹರಿಸಬೇಕು.
  • ನಿಗದಿ ಪಡಿಸಿದ ಶುಲ್ಕ ಪಾವತಿಯ ಬೆನ್ನಲ್ಲೇ ಇದು ಆಗಬೇಕು  

ಉದ್ದಿಮೆ ಪರವಾನಿಗೆಗಳ ಸ್ವಯಂ  ನವೀಕರಣ- ಕರ್ನಾಟಕ ಸರ್ಕಾರ ತೆಗೆದುಕೊಂಡ ನಿರ್ಣಯ 

ಈ ಮೇಲಿನ ಶಿಫಾರಸ್ಸುಗಳ ಆಧಾರದ ಮೇಲೆ ಕರ್ನಾಟಕ ಸರ್ಕಾರ ಕೆಳಗಿನ ನಿರ್ಣಯಗಳನ್ನು ತೆಗೆದುಕೊಂಡಿದೆ: 

  • ಸ್ವಯಂ ಚಾಲಿತ, ಪಾರದರ್ಶಕ, ಆನ್‌ಲೈನ್‌ ವ್ಯವಸ್ಥೆಯನ್ನು ಜಾರಿಗೆ ತರುವುದು. ಇದು ಅಧಿಕಾರಿಗಳ ಹಸ್ತಕ್ಷೇಪದಿಂದ ಮುಕ್ತವಾಗಿರುತ್ತೆ.  
  • ಇದು ಉದ್ದಿಮೆ ಪರವಾನಿಗೆಗಳ ಸ್ವಯಂ-ನವೀಕರಣಕ್ಕೆ ಅವಕಾಶ ಒದಗಿಸುತ್ತದೆ.
  • ನಗರ ಸ್ಥಳೀಯ ಸಂಸ್ಥೆಗಳು ಇದನ್ನು ಜಾರಿಗೆ ತರಬಹುದು.
  • ಪರವಾನಿಗೆಯ ನವೀಕರಣಕ್ಕೆ ಯಾವುದೇ ಭೌತಿಕ ಹಸ್ತಕ್ಷೇಪದ ಅಗತ್ಯವಿಲ್ಲ 

ಉದ್ದಿಮೆಯ ಸ್ವಯಂ- ನವೀಕರಣಕ್ಕಾಗಿ ಬಿಬಿಎಂಪಿ ಜಾರಿಗೊಳಿಸಿದ ಪಾರದರ್ಶಕ ಆನ್‌ಲೈನ್‌ ವ್ಯವಸ್ಥೆ 

ಮೇಲೆ ತಿಳಿಸಲಾಗಿರುವ ಶಿಫಾರಸ್ಸುಗಳ ಆಧಾರದ ಮೇಲೆ ಉದ್ದಿಮೆ ಪರವಾನಿಗೆಗಳ ಸ್ವಯಂ-ನವೀಕರಣಕ್ಕಾಗಿ ಬಿಬಿಎಂಪಿ ಒಂದು ಪಾರದರ್ಶಕ ಆನ್‌ಲೈನ್‌ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಸಂಬಂಧ ಬಿಬಿಎಂಪಿ ಆಯುಕ್ತರು ಇದೇ ಅಕ್ಟೋಬರ್‌ 12, 2020 ರಂದು ಒಂದು ಅಧಿಸೂಚನೆ ಹೊರಡಿಸಿದ್ದಾರೆ. 

  • ಉದ್ಯಮಗಳು ತಮ್ಮ ಉದ್ದಿಮೆ ಪರವಾನಿಗೆಗಳನ್ನು ಸ್ವಯಂ- ನವೀಕರಣಗೊಳಿಸಿಕೊಳ್ಳಬಹುದು 
  • ನಿಗದಿ ಪಡಿಸಿದ ಶುಲ್ಕ ಪಾವತಿಯ ಬೆನ್ನಲ್ಲೇ ಈ ಪ್ರಕ್ರಿಯೆ ನಡೆಯುತ್ತದೆ.
  • ಇ-ಪೇಮೆಂಟ್‌ ವಿಧಾನಗಳನ್ನು ಉದ್ಯಮಗಳು  ಬಳಸಿಕೊಳ್ಳಬೇಕು 
  • ಪಾವತಿಯನ್ನು ಸಚಿವಾಲಯದ ಆನ್‌ಲೈನ್‌ ಪೋರ್ಟಲ್‌ ಮೂಲಕ ಮಾಡಬಹುದು 
  • ಉದ್ಯಮ/ವ್ಯಕ್ತಿ ನವೀಕರಣಕ್ಕಾಗಿ ಯಾವುದೇ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ 
  • ಒಂದು ಡಿಜಿಟಲ್‌ ಸಹಿ ಇರುವ ಒಪ್ಪಿಗೆ ಪ್ರಮಾಣಪತ್ರದ ಮೂಲಕ ಈ ವ್ಯವಸ್ಥೆಯ ಲಾಭ ಪಡೆಯಬಹುದು.
  • ಅರ್ಜಿದಾರ ಈ ಪ್ರಮಾಣಪತ್ರವನ್ನು ಆನ್‌ಲೈನ್‌ ಪೋರ್ಟಲ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು 
  • ಯಾವುದೇ ಭೌತಿಕ ಹಸ್ತಕ್ಷೇಪದ ಅಗತ್ಯವಿಲ್ಲ 

ಪಾರದರ್ಶಕ ಆನ್‌ಲೈನ್‌ ವ್ಯವಸ್ಥೆಯ ಮೂಲಕ ಉದ್ದಿಮೆ ಪರವಾನಿಗೆಗಳ ಸ್ವಯಂ-ನವೀಕರಣ ಈಗ ಉದ್ದಿಮೆಗಳು ಹೆಚ್ಚಾಗಿ ಅನುಭವಿಸುವ ಅನಗತ್ಯ ಸಮಸ್ಯೆಗಳನ್ನು ನಿವಾರಿಸಲಿದೆ. 

ಬಿಬಿಎಂಪಿ ನಿಯಮಗಳನ್ನು ಸರಳೀಕರಣಗೊಳಿಸಿದೆ, ಈ ಮೂಲಕ ಪರವಾನಿಗೆಗಳ ನವೀಕರಣಕ್ಕೆ ಸಂಬಂಧಿಸಿದ ಅಧಿಕಾರಿ ಸಮಸ್ಯೆ ನಿವಾರಿಸಿದೆ.

Jolad Rotti:
Related Post