X

ಕೋವಿಡ್ ಸಂತ್ರಸ್ತ ಮಕ್ಕಳಿಗೆ ಬಾಲ ಸ್ವರಾಜ್ – ಬಾಲ ಸೇವಾ ಯೋಜನೆ

ಕೋವಿಡ್ ೧೯ ಸಾಂಕ್ರಾಮಿಕ ರೋಗ ಹಲವಾರು ಚಿಕ್ಕ ಮಕ್ಕಳನ್ನು ಅನಾಥವಾಗಿಸಿದೆ. ಈ ಹಿನ್ನಲೆಯಲ್ಲಿ ನೊಂದ ಮಕ್ಕಳ ರಕ್ಷಣೆ ಹಾಗು ಪೋಷಣೆಗೆ ಕೇಂದ್ರ ಹಾಗು ರಾಜ್ಯ ಸರಕಾರಗಳೆರಡೂ ಮುಂದಾಗಿವೆ.  ರಾಜ್ಯ ಸರಕಾರ ಬಾಲ ಸೇವಾ ಯೋಜನೆ ಹಾಗು ಕೇಂದ್ರ ಸರಕಾರ  ಬಾಲ್ ಸ್ವರಾಜ್ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕೋವಿಡ್ ೧೯ ಮೊದಲ ಹಾಗು ದ್ವಿತೀಯಯ ಅಲೆಗಳಲ್ಲಿ ದೇಶಾದ್ಯಂತ ಸುಮಾರು ೩೦,೦೦೦ ಕ್ಕೂ ಅಧಿಕ ಕುಟುಂಬಗಳಲ್ಲಿ ಮಕ್ಕಳು ತಮ್ಮ ಇಬ್ಬರು ಪೋಷಕರು ಅಥವಾ ಒಬ್ಬ ಪೋಷಕರನ್ನು ಕಳೆದುಕೊಂಡಿದ್ದಾರೆ. ಇದು ಅಪ್ರಾಪ್ತ ವಯಸ್ಸಿನ ಈ ಮಕ್ಕಳನ್ನು ನೋವಿನಲ್ಲಿ ಮುಳುಗಿಸಿದೆ. ಜೊತೆಗೆ, ಈ ಅಪ್ರಾಪ್ತ ಮಕ್ಕಳು  ಮಾನಸಿಕ ಆಘಾತ, ನಿಂದನೆ ಮತ್ತು ಕಳ್ಳಸಾಗಣೆಗೆ ಒಳಗಾಗುವ  ಹೆಚ್ಚಿನ ಸಾಧ್ಯತೆಗಳನ್ನು  ಹೊಂದಿರುತ್ತಾರೆ. ಈ ಹಿನ್ನಲೆಯಲ್ಲಿ, ಮಕ್ಕಳನ್ನು ರಕ್ಷಿಸಲು,  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹತ್ವದ ಯೋಜನೆಯನ್ನು ಆರಂಭಿಸಿವೆ. ಇಂತಹ ಅನಾಥ   ಮಕ್ಕಳಿಗೆ ಆರ್ಥಿಕ ನೆರವು ಮತ್ತು ಬೆಂಬಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿವೆ. ಇದರ ಜೊತೆಗೆ,  ಕೇಂದ್ರ ಮಕ್ಕಳ ರಕ್ಷಣಾ ಆಯೋಗ ಇಂತಹ  ಮಕ್ಕಳಿಗೆ ಸದಾ ಬೆಂಬಲ ನೀಡಲು ಬಾಲ ಸ್ವರಾಜ್ ಎಂಬ ಮಕ್ಕಳ ಟ್ರಾಕಿಂಗ್ ವ್ಯವಸ್ಥೆ ಕೂಡ ಜಾರಿಗೊಳಿಸಿದೆ. 

ಅನಾಥ ಮಕ್ಕಳ ಸಂಖ್ಯೆ 

ಈವರೆಗೆ ಬಾಲ್ ಸ್ವರಾಜ್  ಅಂತರ್ಜಾಲ ತಾಣದಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ, ಸರಕಾರಕ್ಕೆ ಸಲ್ಲಿಕೆಯಾಗಿರುವ  ಅಂಕಿಅಂಶಗಳ ಪ್ರಕಾರ, ೩,೬೨೧  ಮಕ್ಕಳು  ಇಬ್ಬರು ಪೋಷಕರನ್ನು ಕಳೆದುಕೊಂಡಿದ್ದರೆ, ೨೬,೧೭೬  ಮಕ್ಕಳು ಒಬ್ಬ ಪೋಷಕರನ್ನು ಕಳೆದುಕೊಂಡಿದ್ದಾರೆ.  

ಈ ಮಕ್ಕಳಲ್ಲಿ ಹೆಚ್ಚಿನವರು ಉಳಿದ ಪೋಷಕರು ಅಥವಾ ಪಾಲಕರೊಂದಿಗೆ ಮನೆಯಲ್ಲಿದ್ದಾರೆ. ಕೆಲವು ಮಕ್ಕಳು ಸರಕಾರದ  ವೀಕ್ಷಣಾ ಮನೆಗಳು, ಆಶ್ರಯಗಳು ಮತ್ತು ಅನಾಥಾಶ್ರಮಗಳಲ್ಲಿ ಆಶ್ರಯ ಪಡೆದಿದ್ದಾರೆ.  ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರು ಸಮಾನ ಸಂಖ್ಯೆಯಲ್ಲಿ ಈ ಸಮಸ್ಯೆಯಿಂದ ಬಾಧಿತರಾಗಿದ್ದರೆ. 

ಬಾಲ ಸ್ವರಾಜ್ ಅಂತರ್ಜಾಲ ತಾಣದ ಬಗ್ಗೆ ಮಾಹಿತಿ 

ಅಂತರ್ಜಾಲ ತಾಣದ ವಿಳಾಸ 

ಕೋವಿಡ್ ೧೯ ನಿಂದಾಗಿ   ಒಂದು ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಬಗ್ಗೆ ನಿಗಾ ಇಡಲು ಮತ್ತು ಅವರ ಅಗತ್ಯ ಆರೈಕೆ ಮತ್ತು ರಕ್ಷಣೆಗಾಗಿ ಈ ಅಂತರ್ಜಾಲ ತಾಣ ರೂಪಿಸಲಾಗಿದೆ. ಈ ವೆಬ್ ಸೈಟ್ ಮೂಲಕ, ಈ ಮಕ್ಕಳಿಗೆ ಅಗತ್ಯವಾದ ರಕ್ಷಣೆ, ಆಶ್ರಯ, ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುವುದು.  ಈಗ ಎಲ್ಲೆಡೆ ಸಾಮಾಜಿಕ ಮಾಧ್ಯಮಗಳಲ್ಲಿ ಅನಾಥ ಮಕ್ಕಳ ದತ್ತು ತೆಗೆದುಕೊಳ್ಳುವ ಬಗ್ಗೆ ಮಾಹಿತಿಗಳನ್ನು ಕಾನೂನಿಗೆ ವಿರುದ್ಧವಾಗಿ ಹಂಚಿಕೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ, ಮಕ್ಕಳ ರಕ್ಷಣೆಗೆ ಈ ಅಂತರ್ಜಾಲ ತಾಣ ಶ್ರಮಿಸುತ್ತಿದೆ. 

ಹೀಗೆ ಅನಾಥಗೊಂಡ ಮಕ್ಕಳ ಮಾಹಿತಿಯನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸಲು,  ಸಂಬಂಧಪಟ್ಟ ಇಲಾಖೆಗಳು ಮತ್ತು ಅಧಿಕಾರಿಗಳಿಗೆ ‘ಕೋವಿಡ್-ಕೇರ್’ ಲಿಂಕ್ ಒದಗಿಸಲಾಗಿದೆ. ಈ ಮೂಲಕ,  ಈ ಮಕ್ಕಳಿಗೆ ಒದಗಿಸಲಾಗುವ  ಆರ್ಥಿಕ ನೆರವು,  ಹಾಗು ಇನ್ನಿತರ  ನೆರವಿನ ಪ್ರಮಾಣ  ಪತ್ತೆಹಚ್ಚಲು ಅಥವಾ ಅವರು ಸದ್ಯ ಆಶ್ರಯ ಪಡೆದಿರುವ  ಮನೆಗಳನ್ನು ಹುಡುಕಲು ಈ ಅಂತರ್ಜಾಲ ತಾಣ ನೆರವಾಗುತ್ತದೆ. 

ಅನಾಥ ಮಕ್ಕಳಿಗೆ ಕೇಂದ್ರದಿಂದ ಆರ್ಥಿಕ ನೆರವು 

ಇನ್ನು ಕೇಂದ್ರ ಸರಕಾರ, ಕೋವಿಡ್ ೧೯ ರೋಗದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ  ೧೮  ವರ್ಷ ತುಂಬುವವರೆಗೆ ಮಾಸಿಕ ಸಹಾಯಧನ ಘೋಷಿಸಿದೆ. ಇದರ ಜೊತೆಗೆ, ಈ ಮಕ್ಕಳು  ೨೩  ವರ್ಷ ತಲುಪಿದಾಗ ಅವರಿಗೆ ೧೦ ಲಕ್ಷ ರೂಪಾಯಿ ನೀಡಲಾಗುವುದು  ಎಂದು ತಿಳಿಸಿದೆ. 

ಹೀಗೆ ಮಕ್ಕಳಿಗೆ ಸಹಾಯ ಮಾಡಲು ಬೇಕಾಗುವ ಹಣವನ್ನು   ಪಿಮ್ ಕೇರ್ಸ್  ನಿಧಿಯಿಂದ ಪಡೆಯಲಾಗುತ್ತದೆ.  ಹೆತ್ತವರ ಸಾವಿನಿಂದ ಅನಾಥವಾಗುವ ಮಕ್ಕಳು ತಮ್ಮ ಹೆತ್ತವರ ಸಂಬಂಧಿಕರೊಂದಿಗೆ ಇದ್ದಾರೆ, ಅವರನ್ನು ಸಮೀಪದ   ಕೇಂದ್ರೀಯ ವಿದ್ಯಾಲಯ ಅಥವಾ ಖಾಸಗಿ ಶಾಲೆಗೆ ಸೇರಿಸಲಾಗುತ್ತದೆ ಮತ್ತು ಅವರ ಶುಲ್ಕವನ್ನು   ಪಿಮ್ ಕೇರ್ಸ್  ನಿಧಿಯಿಂದ ಪಾವತಿಸಲಾಗುತ್ತದೆ. ಈ ನಿಧಿಯ ಮೂಲಕ  ಪಠ್ಯಪುಸ್ತಕಗಳು, ಸಮವಸ್ತ್ರ ಇತ್ಯಾದಿಗಳ ಖರ್ಚುಗಳನ್ನು ಸಹ ನೋಡಿಕೊಳ್ಳಾಗುತ್ತದೆ. 

ಆದರೆ, ತಮ್ಮನ್ನು ನೋಡಿಕೊಳ್ಳಲು ಯಾರು ಇಲ್ಲದ ಮಕ್ಕಳನ್ನು  ಕೇಂದ್ರ ಸರಕಾರದ 

 ನವೋದಯ ವಿದ್ಯಾಲಯ ಅಥವಾ ಸೈನಿಕ್ ಶಾಲೆಗಳಂತಹ ವಸತಿ ಶಾಲೆಗಳಿಗೆ ಸೇರಿಸಲಾಗುತ್ತದೆ. ಅಲ್ಲಿ ಅವರಿಗೆ ಪೋಷಣೆ ಹಾಗು ಶಿಕ್ಷಣ ನೀಡಲಾಗುತ್ತದೆ. 

ಇನ್ನು ಉನ್ನತ ಶಿಕ್ಷಣವಾಗಿ  ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ  ಬಯಸುವ ಮಕ್ಕಳಿಗೆ ಪ್ರಸ್ತುತ ಶೈಕ್ಷಣಿಕ ಸಾಲದ ಮಾನದಂಡಗಳ ಪ್ರಕಾರ ಸಾಲಕ್ಕೆ ಅರ್ಜಿ ಸಲ್ಲಿಸಲು ಸಹಾಯ ಮಾಡಲಾಗುವುದು. ಈ ಸಾಲಗಳ ಮೇಲಿನ ಬಡ್ಡಿಯನ್ನು ಪಿಎಂ ಕೇರ್ಸ್  ನಿಧಿಯಿಂದ ಭರಿಸಲಾಗುವುದು. 

ಇದರ ಜೊತೆಗೆ  ಈ ಮಕ್ಕಳ  ಬೋಧನಾ ಶುಲ್ಕಕ್ಕೆ ಸಮಾನವಾದ ವಿದ್ಯಾರ್ಥಿವೇತನವನ್ನು ಈ ಅನಾಥ ಮಕ್ಕಳಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಮೂಲಕ ನೀಡಲು ಕ್ರಮವಹಿಸಲಾಗುತ್ತಿದೆ. 

ಇದರ ಜೊತೆಗೆ  ಈ ಎಲ್ಲಾ ಮಕ್ಕಳಿಗೆ  ಉಚಿತವಾಗಿ    ಆಯುಷ್ಮಾನ್ ಭಾರತ್ ಯೋಜನೆ  ಅಡಿ ೫  ಲಕ್ಷ ರೂಪಾಯಿಗಳ ವೈದ್ಯಕೀಯ ವಿಮೆ ಕಲ್ಪಿಸಲಾಗುತ್ತದೆ. ಈ ಮಕ್ಕಳಿಗೆ  ೧೮  ವರ್ಷ ತುಂಬುವವರೆಗೆ,  ಈ ವಿಮೆಯ  ಪ್ರೀಮಿಯಂ ಅನ್ನು ಪಿಎಂ  ಕೇರ್ಸ್   ನಿಧಿಯ ಮೂಲಕ ಪಾವತಿಸಲಾಗುತ್ತದೆ.

ಕರ್ನಾಟಕ ಸರಕಾರದ ಬಾಲ ಸೇವಾ ಯೋಜನೆ 

ಇದರ ಜೊತೆಗೆ, ಕರ್ನಾಟಕ ರಾಜ್ಯ ಸರಕಾರ ಕೂಡ,  ಅನಾಥ  ಮಕ್ಕಳಿಗೆ  ತನ್ನದೇ ಆದ ನೆರವಿನ ಯೋಜನೆ ಆರಂಭಿಸಿದೆ. ಈ ಯೋಜನೆಗೆ ರಾಜ್ಯ ಸರಕಾರ  ಬಾಲ  ಸೇವಾ ಯೋಜನೆ ಎಂದು ಹೆಸರಿಸಿದೆ. ಈ ಯೋಜನೆ  ಅಡಿಯಲ್ಲಿ ಮಕ್ಕಳಿಗೆ ತಿಂಗಳಿಗೆ 3,500 ರೂಪಾಯಿ ಮತ್ತು ೧೦  ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ವಸತಿ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುವುದು. 

ಕೋವಿಡ್ -೧೯  ಕಾರಣದಿಂದಾಗಿ ಅನಾಥ ಅಥವಾ ತ್ಯಜಿಸಲ್ಪಟ್ಟ ಹೆಣ್ಣು ಮಗುವಿಗೆ ಆರ್ಥಿಕ ಸಹಾಯದ ರೂಪದಲ್ಲಿ ಸರಕಾರ ಒಂದು ಲಕ್ಷ ರೂಪಾಯಿ ನೀಡಲಿದೆ. 

ಈ ಪ್ರಯೋಜನ ಪಡೆಯಲು ಬೇಕಾದ ಅರ್ಹತೆಗಳು 

  • ಕರ್ನಾಟಕ ನಿವಾಸಿಯಾಗಿರಬೇಕು
  • ಹೆತ್ತವರು ಸರಕಾರಿ ಉದ್ಯೋಗಿಗಳಾಗಿರ ಬಾರದು 

ಅಗತ್ಯ ದಾಖಲೆ- ಪ್ರಮಾಣ ಪಾತ್ರಗಳು 

ಈ ಯೋಜನೆ ಅಡಿಯಲ್ಲಿ ಸರಕಾರದ ನೆರವು ಪಡೆಯಲು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕು. 

  • ಆಧಾರ್ ಕಾರ್ಡ್
  • ವಿಳಾಸ  ಪುರಾವೆ
  • ಪೋಷಕರ ಮರಣ ಪ್ರಮಾಣಪತ್ರ
  • ಶಿಕ್ಷಣಕ್ಕೆ ಸಂಬಂಧಿಸಿದ ದಾಖಲೆಗಳು
  • ವಯಸ್ಸಿನ ಪ್ರಮಾಣಪತ್ರ
  • ಸಂಬಂಧಿಕರ ಸಂಪರ್ಕ ಸಂಖ್ಯೆ 

ಕೋವಿಡ್ ೧೯ ನಿಂದ ಅನಾಥರದ ಮಕ್ಕಳ ದತ್ತು ತೆಗೆದುಕೊಳ್ಳುವಿಕೆ

ಭಾರತದಲ್ಲಿ ಯಾವುದೇ ಮಗು ಹೆತ್ತವರು- ಕುಟುಂಬದ ಆಶ್ರಯವಿಲ್ಲದೆ ಅನಾಥಗೊಂಡಾಗ  ಸರಕಾರ ಮಧ್ಯ ಪ್ರವೇಶಿಸುತ್ತದೆ. ಈ ಮಕ್ಕಳನ್ನು ಕುಟುಂಬದಲ್ಲೇ ದತ್ತು ನೀಡಲು ಮೊದಲ ಆದ್ಯತೆ ನೀಡಲಾಗುತ್ತದೆ. ಬಳಿಕ, ಇತರರಿಗೆ ಮಗುವನ್ನು ದತ್ತು ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ. 

ಹೀಗೆ ನಡೆಯುವ ಎಲ್ಲ ದತ್ತು ಪ್ರಕ್ರಿಯೆಗಳನ್ನು  ಕೇಂದ್ರ ದತ್ತು ಸಂಪನ್ಮೂಲ ಸಂಸ್ಥೆ ನಿಯಂತ್ರಿಸುತ್ತದೆ. ಈ ಸಮಸ್ಥೆಯಲ್ಲಿ  ನೋಂದಾಯಿತ ಪೋಷಕರು ಮಾತ್ರ ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದು. ಜುವೆನೈಲ್ ಜಸ್ಟೀಸ್ ಆಕ್ಟ್, 2015 ರ ಮಾರ್ಗಸೂಚಿಗಳನ್ನು ಕಾರ್ಯವಿಧಾನಗಳು ಅನುಸರಿಸಿದರೆ ಮಾತ್ರ ದತ್ತು ಸ್ವೀಕಾರವನ್ನು ಕಾನೂನುಬದ್ಧವೆಂದು ಪರಿಗಣಿಸಲಾಗುತ್ತದೆ.

ನಮ್ಮ ದೇಶದ  ಪ್ರತಿಯೊಂದು ರಾಜ್ಯದಲ್ಲೂ  ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಘಟಕಗಳಿವೆ. ಜೊತೆಗೆ  ಎಲ್ಲ ರಾಜ್ಯಗಳಲ್ಲೂ ಸ್ವತಂತ್ರವಾದ ದತ್ತು ನಿರ್ವಹಣಾ ಸಂಸ್ಥೆಗಳಿವೆ.  ಅನಾಥ  ಮಗು ಕಂಡುಬಂದಾಗ ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳ ಆರೈಕೆಯಲ್ಲಿ ಇರಿಸಲಾಗುತ್ತದೆ.  ಬಳಿಕ ಅವುಗಳನ್ನು ದತ್ತು ಸ್ವೀಕರಣಾ ಕೇಂದ್ರ ಅಥವಾ ದತ್ತು ಮನೆಗಳಿಗೆ ಕಳುಹಿಸಲಾಗುತ್ತದೆ. 

ಸಾಮಾನ್ಯವಾಗಿ ಇಂತಹ ಅನಾಥ ಮಕ್ಕಳು ಕಂಡು ಬಂದಾಗ ಅವರನ್ನು ಅವರ ಹೆತ್ತವರ ಜೊತೆಗೆ ಸೇರಿಸಲು ಪ್ರಯತ್ನಪಡಲಾಗುತ್ತದೆ. ಯಾರಾದರೂ ಹೆತ್ತವರು ಮುಂದೆ ಬಂದರೆ, ಆ ಮಕ್ಕಳ ಡಿ ಎನ್ ಎ ಪರೀಕ್ಷೆ ನಡೆಸಿ, ಪೋಷಕತ್ವ ನಿರ್ಧರಿಸಲಾಗುತ್ತದೆ.  ೨  ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವಿಷಯದಲ್ಲಿ   ೨ ತಿಂಗಳು, ಮತ್ತು ೨  ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ವಿಷಯದಲ್ಲಿ ೪ ತಿಂಗಳು ಯಾರು ಪೋಷಕರು ಮಗುವನ್ನು ತೆಗೆದುಕೊಂಡಳು ಮುಂದೆ ಬರದಿದ್ದಲ್ಲಿ, ಆ ಮಕ್ಕಳನ್ನು ದತ್ತು ನೀಡಲು ಪರಿಗಣಿಸಲಾಗುತ್ತದೆ. 

ಇನ್ನು ನೇರವಾಗಿ  ಮಕ್ಕಳನ್ನು ನ್ಯಾಯಾಲಯದ ಒಪ್ಪಿಗೆ ಪಡೆದು ದತ್ತು ಸ್ವೀಕರಿಸಬಹುದು.  ಇದು ಸಾಮಾನ್ಯ ದತ್ತು ಪ್ರಕ್ರಿಯೆಯಿಂದ ವಿಭಿನ್ನವಾಗಿರುತ್ತದೆ. ಇಲ್ಲಿ ನ್ಯಾಯಾಧೀಶರ ಒಪ್ಪಿಗೆ ಪಡೆದು, ಹೆತ್ತವರು ತಮ್ಮ ಮಗುವನ್ನು ದತ್ತು ನೀಡಬಹುದು. ಇದಕ್ಕೆ ತಜ್ಞ ವಕೀಲರ ನೆರವು ಪಡೆದು, ಕಾನೂನು ಮೂಲಕ ಮುಂದುವರಿಯಬೇಕು. 

ಈ ಎರಡು ಮಾರ್ಗಗಳ ಹೊರತಾಗಿ ನಡೆಯುವ ಯಾವುದೇ ದತ್ತು ಪ್ರಕ್ರಿಯೆ ಅಕ್ರಮ. ಇದು ಭವಿಷ್ಯದಲ್ಲಿ ಮಕ್ಕಳಿಗೆ, ಪೋಷಕರಿಗೆ ಕಾನೂನು ಸಮಸ್ಯೆ ತಂದೊಡ್ಡ ಬಹುದು. ಈ ನಿಟ್ಟಿನಲ್ಲಿ ಜನರು ಅತಿ ಜಾಗರೂಕವಾಗಿರಬೇಕು. 

ಅನಾಥ ಮಕ್ಕಳ ನೆರವು: ಯಾರನ್ನು ಸಂಪರ್ಕಿಸಬೇಕು?

ನೀವು ಎಲ್ಲಾದರು ಅನಾಥ ಮಗುವನ್ನು ಕಂಡರೆ, ಮಕ್ಕಳು ಕಷ್ಟದಲ್ಲಿದ್ದಾರೆ ದಯವಿಟ್ಟು  ಮಕ್ಕಳ ಸಹಾಯವಾಣಿ   ೧೦೯೮   ಕರೆ ಮಾಡಿ. ಈ ಮೂಲಕ  ಚಿಲ್ಡ್‌ಲೈನ್ ಇಂಡಿಯಾ ಫೌಂಡೇಶನ್‌ಗೆ ಮಕ್ಕಳ ಸವಾಲನ್ನು ತಲುಪಿದಂತಾಗುತ್ತದೆ. 

ಕೋವಿಡ್ ನಿಂದ ಅಂತರದ ಮಕ್ಕಳ ತಕ್ಷಣದ ಮತ್ತು ದೀರ್ಘಕಾಲೀನ ಅಗತ್ಯತೆಗಳನ್ನು ಪೂರೈಸಲು  ಕರ್ನಾಟಕ ರಾಜ್ಯ ಸರ್ಕಾರ  ಹಿರಿಯ ಅಧಿಕಾರಿ ಕೆಪಿ ಮೋಹನ್ ರಾಜ್ ಅವರನ್ನು  ನೋಡಲ್ ಅಧಿಕಾರಿಯನ್ನು ನೇಮಿಸಿದೆ. ಜೊತೆಗೆ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಅವರನ್ನು ಸರ್ಕಾರದ ಪ್ರಯತ್ನಗಳು ಮತ್ತು ಖಾಸಗಿ ವಲಯದ ಸ್ವಯಂ ಸೇವಾ ಸಂಸ್ಥೆಗಳ  ನಡುವೆ ಸಮನ್ವಯಗೊಳಿಸಲು ನೇಮಿಸಲಾಗಿದೆ.

ದತ್ತು ಮತ್ತು ಆರೈಕೆ  ಕೇಂದ್ರಗಳು 

ಕರ್ನಾಟಕದಲ್ಲಿ ಸರಕಾರದ ಅನುಮತಿಯೊಂದಿಗೆ ಅನಾಥ ಮಕ್ಕಳ ಆರೈಕೆ ಹಾಗು ದತ್ತು ನಿರ್ವಹಣಾ ಪ್ರಕ್ರಿಯೆಯಲ್ಲಿ ತೊಡಗಿರುವ ಸಂಸ್ಥೆಗಳ ವಿವರ ಇಲ್ಲಿದೆ.  

Jolad Rotti:
Related Post