X

ನೇತ್ರದಾನ ಮೂಲಕ ಜೀವಸಾರ್ಥಕತೆ: ನೀವು ನೆನಪಿನಲ್ಲಿಟ್ಟುಕೊಳ್ಳಬೇಕು ಅಂಶಗಳು

ನಮ್ಮ ರಾಜ್ಯದಲ್ಲಿ ಲಕ್ಷಾಂತರ ಮಂದಿ, ತಮ್ಮ ಕುರುಡುತನ ನಿವಾರಿಸಿಕೊಳ್ಳಲು, ನೇತ್ರದಾನಿಗಳ ನಿರೀಕ್ಷೆಯಲ್ಲಿದ್ದಾರೆ. ನೇತ್ರ ದಾನ ಮಹಾದಾನವಾಗಿದ್ದು, ನಮ್ಮ ರಾಜ್ಯದಲ್ಲಿ ನೇತ್ರ ದಾನ ಮಾಡುವುದರಿಂದ ಒಂದು ಅಥವಾ ಹೆಚ್ಚಿನ ವ್ಯಕ್ತಿಗಳಲ್ಲಿ ಅಂಧತ್ವ   ಸರಿಪಡಿಸಲು  ಸಹಾಯ ಮಾಡಿದಂತಾಗುತ್ತದೆ.  ಇದರರ್ಥ  ಒಬ್ಬ ವ್ಯಕ್ತಿಯ ನೇತ್ರದಾನದಿಂದ,  ಕನಿಷ್ಠ ಇಬ್ಬರು ವ್ಯಕ್ತಿಗಳ ಜೀವನವನ್ನು ಬೆಳಗಿಸಲು ಸಾಧ್ಯವಿದೆ. 

ಕರ್ನಾಟಕದಲ್ಲಿ ನೇತ್ರ ದಾನ ಎಂದ ಕೂಡಲೇ ನಮಗೆ ನೆನಪಾಗುವುದು ಖ್ಯಾತ ನಟ ಡಾ. ರಾಜ್ ಕುಮಾರ್. ಅವರು ರಾಜ್ಯದಲ್ಲಿ ನೇತ್ರ ದಾನದ ಬಗ್ಗೆ ಸಾಕಷ್ಟು ಜನ ಜಾಗೃತಿ ಮೂಡಿಸಿದರು.

ಕರ್ನಾಟಕದಲ್ಲಿ ಎಲ್ಲರೂ ಹರೀಶ್ ಜೀವ ಸಾರ್ಥಕತೆ ಯೋಜನೆಯಡಿ, ನೇತ್ರದಾನ ಮಾಡಿ, ಇನ್ನೊಬ್ಬರ ಬದುಕನ್ನು ಬೆಳಗಿಸುವ ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಮಾಹಿತಿ ಇಲ್ಲಿದೆ. 

ಹಾಗಾದರೆ, ಕರ್ನಾಟಕದಲ್ಲಿ ನೇತ್ರ   ದಾನಿಯಾಗಲು ಯಾರಿಗೆ ಸಾಧ್ಯವಿದೆ ? ಹೌದು, ನಮ್ಮ ರಾಜ್ಯದಲ್ಲಿ   ಯಾರು ಬೇಕಾದರೂ  ನೇತ್ರ  ದಾನಿಯಾಗಬಹುದು. ಯಾರೊಬ್ಬರ  ಲಿಂಗತ್ವ,  ವಯಸ್ಸು ಅಥವಾ ರಕ್ತದ ಗುಂಪು ಇಲ್ಲಿ ಗಣನೆಗೆ ಬರುವುದಿಲ್ಲ. ವ್ಯಕ್ತಿಯೊಬ್ಬರು  ದೂರದೃಷ್ಟಿ ಅಥವಾ ಸಮೀಪ ದೃಷ್ಟಿ ದೋಷದಿಂದ  ಬಳಲುತ್ತಿರಬಹುದು ಅಥವಾ  ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರಬಹುದು. ಆದರೆ ಇವಾವುದು  ನಮ್ಮನ್ನು  ನೇತ್ರ ದಾನ ಮಾಡುವುದಕ್ಕೆ ಅನರ್ಹ ಗೊಳಿಸುವುದಿಲ್ಲ.  

ನಮ್ಮ ರಾಜ್ಯದಲ್ಲಿ ನೇತ್ರ ದಾನ ಯಾವಾಗ ಮಾಡಬೇಕು? 

ನಮ್ಮ ರಾಜ್ಯದಲ್ಲಿ, ಕಾನೂನು ಪ್ರಕಾರ, ಓರ್ವ ವ್ಯಕ್ತಿಯ ಸಾವಿನ ನಂತರ ಆತನ/ ಆಕೆಯ  ಕಣ್ಣುಗಳನ್ನು ದಾನ ಪಡೆಯಲಾಗುತ್ತದೆ. ಕಾರ್ನಿಯಲ್ ಕುರುಡುತನ ಹೊಂದಿರುವ ಜನರು ಮಾತ್ರ ದಾನ ಮಾಡಿದ ಕಣ್ಣುಗಳಿಂದ ತಮ್ಮ ದೃಷ್ಟಿಯನ್ನು ಮರಳಿ ಪಡೆಯಬಹುದು.  ಕಾರ್ನಿಯಲ್ ಕುರುಡುತನದಿಂದ ಬಳಲುತ್ತಿರುವ ವ್ಯಕ್ತಿಗಳು  ದಾನಿಗಳ ನೇತ್ರದಾನದಿಂದ   ಕಾರ್ನಿಯಲ್ ಕಸಿ ಶಸ್ತ್ರಚಿಕಿತ್ಸೆಗೆ  ಒಳಗಾಗಿ , ತಮ್ಮ ಕಳೆದು ಹೋದ ದೃಷ್ಟಿಯನ್ನು ಮರಳಿ ಪಡೆಯಬಹುದು. 

ಈ ಶಸ್ತ್ರಚಿಕಿತ್ಸೆಯಲ್ಲಿ, ಅಂಧತ್ವ ಹೊಂದಿರುವ  ವ್ಯಕ್ತಿಯ ಹಾನಿಗೊಳಗಾದ ಕಾರ್ನಿಯಾವನ್ನು (ಕಣ್ಣಾಲಿಗಳು) ದಾನಿಯ ಕಣ್ಣಿನ  ಆರೋಗ್ಯಕರ ಕಾರ್ನಿಯಾ ಬಳಸಿ ಸರಿಪಡಿಸಲಾಗುತ್ತದೆ. ಆ ಮೂಲಕ, ಅವರು ತಮ್ಮ ದೃಷ್ಟಿಯನ್ನು ವಾಪಾಸ್ ಪಡೆಯುತ್ತಾರೆ. 

ಹೆಚ್ಚಿನ ಮಾಹಿತಿಗಾಗಿ  ಇಲ್ಲಿಗೆ   ಭೇಟಿ ನೀಡಿ

ನೇತ್ರದಾನದ ಮೂಲಕ ಕರ್ನಾಟಕದಲ್ಲಿ “ಜೀವ ಸಾರ್ಥಕತೆ” 

ಕರ್ನಾಟಕದಲ್ಲಿ ನೇತ್ರದಾನವನ್ನು  ಜೀವ ಸಾರ್ಥಕತೆ ಹೆಸರಿನಲ್ಲಿ ಈಗ ಅನುಷ್ಠಾನಗೊಳಿಸಲಾಗಿದೆ. ಇದಕ್ಕೆ ಹರೀಶ್ ಜೀವ ಸಾರ್ಥಕತೆ ಎಂದು ಆರಂಭದಲ್ಲಿ ಹೆಸರಿಡಲಾಗಿತ್ತು.  ಬದುಕಿರುವಾಗಲೇ, ವ್ಯಕ್ತಿಗಳು, ಈ ಅಂತರ್ಜಾಲ ತಾಣದಲ್ಲಿ, ತಮ್ಮ ನೇತ್ರದಾನದ ಪ್ರತಿಜ್ಞೆ ಮಾಡಬಹುದು. ಅದಕ್ಕೆ ನೀವು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ, ಸಾವಿನ ಬಳಿಕವೂ ಸಾರ್ಥಕತೆ ಮೆರೆಯಬಹುದು. 

  • ಈ ಕೆಳಗಿನ    ಅಂರ್ತರ್ಜಾಲ ತಾಣ ಕ್ಕೆ ಭೇಟಿ ನೀಡಿ. 
  • ನೀವು  ನೇತ್ರದಾನಕ್ಕೆ ಸಂಬಂದಿಸಿದ  ಪ್ರತಿಜ್ಞಾ ಅರ್ಜಿಯನ್ನು  ಭರ್ತಿ ಮಾಡಿ. 
  • ಬಳಿಕ ವೈಯಕ್ತಿಕ ವಿವರ, ವಿಳಾಸ  ಹಾಗು ಇನ್ನಿತರ ಮಾಹಿತಿಗಳನ್ನು ಭರ್ತಿ ಮಾಡಿ.
  • ಅರ್ಜಿನಮೂನೆಯನ್ನು ಸಲ್ಲಿಸಿ. ಇದನ್ನು ಆನ್ಲೈನ್ ಮೂಲಕ ಮಾಡಬಹುದು. 
  • ಬಳಿಕ, ನಿಮಗೆ ಒಂದು  ಪ್ರತಿಜ್ಞಾ ಚೀಟಿಯನ್ನು ನೀಡಲಾಗುತ್ತದೆ. ಅದನ್ನು ಇದೆ  ಅಂತರ್ಜಾಲ ತಾಣದಿಂದ  ಡೌನ್‌ಲೋಡ್ ಮಾಡಿಕೊಳ್ಳಬಹುದು.

ನೇತ್ರ ದಾನ ಜೊತೆಗೆ ಇತರ ಅಂಗಾಂಗ ದಾನಗಳ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಲು ಇಚ್ಚಿಸಿದರೆ,  ನೀವು ರಾಜ್ಯದ  ನಿಮ್ಮ ವಾಸಸ್ಥಳಕ್ಕೆ ಹತ್ತಿರವಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಪಿಎಚ್‌ಸಿ) ಆಶಾ ಕಾರ್ಮಿಕರನ್ನು ಸಂಪರ್ಕಿಸಬೇಕು.

೧೦೪ ಅನ್ನು ಡಯಲ್ ಮಾಡುವ ಮೂಲಕ ನೀವು ಅಗತ್ಯ ಮಾಹಿತಿಯನ್ನು ಸಹ ಪಡೆಯಬಹುದು.  ೧೦೪  ಆರೋಗ್ಯವಾಣಿ ಉಚಿತ ದೂರವಾಣಿ ಸಂಖ್ಯೆ.  ಇನ್ನೇತಕ ತಡ ಮಾಡುವಿರಿ? ನೇತ್ರ ದಾನ, ನಿಮ್ಮ ಮರಣದ ಬಳಿಕವೂ, ನಿಮ್ಮ ಕಣ್ಣುಗಳ ಮೂಲಕ ಜೀವಂತವಾಗಿರಲು ನೆರವಾಗುತ್ತದೆ. ಬನ್ನಿ ನಾವೆಲ್ಲರೂ, ಅಂಧತ್ವ ನಿವಾರಣಾ ಅಭಿಯಾನದಲ್ಲಿ ಪಾಲ್ಗೊಳ್ಳೋಣ 

Jolad Rotti:
Related Post