X

ಕರ್ನಾಟಕದಲ್ಲಿ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡುವುದು ಹೇಗೆ?

ನೀವು ಆಧಾರ್‌ ಕಾರ್ಡ್‌ ಹೊಂದಿದ್ದರೆ, ಕರ್ನಾಟಕದಲ್ಲಿ  ಅದನ್ನು  ಹೇಗೆ ಅಪ್‌ಡೇಟ್‌ ಮಾಡುವುದು ಎಂದು ಯೋಚಿಸುತ್ತಿದ್ದರೆ ಈ ಲೇಖನವನ್ನು ಓದುವುದು ಅವಶ್ಯಕ. ಏಕೆಂದರೆ, ಈ ಲೇಖನದಲ್ಲಿ ನಾವು, ಇಡೀ ಪ್ರಕ್ರಿಯೆಯ ವಿವರಗಳನ್ನು ಹಂತಗಳಲ್ಲಿ ದಾಖಲಿಸಿದ್ದೇವೆ.  . ಪರಿಷ್ಕರಿಸಲಾದ ನಿಯಮಗಳ ಪ್ರಕಾರ, ಆಧಾರ್‌ ಕಾರ್ಡ್‌ನಲ್ಲಿ ಹುಟ್ಟಿದ ದಿನಾಂಕ, ಮೊಬೈಲ್‌ ನಂಬರ್‌ ಮತ್ತು ಇ-ಮೇಲ್‌ ಐಡಿ ನಮೂದಿಸುವುದು ಕಡ್ಡಾಯ. 

ಸರಕಾರದ  ನಿರ್ದೆಶನದ ಪ್ರಕಾರ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವಿವರಗಳನ್ನು ಅಪ್‌ಡೇಟ್‌ ಮಾಡುವ ಅಗತ್ಯವಿಲ್ಲ. ಆದರೆ, ಅವನು/ಅವಳು 15 ವರ್ಷ ತಲುಪಿದಾಗ ಮರು ದಾಖಲಾತಿ ಮತ್ತು ಎಲ್ಲಾ ಬಯೋಮೆಟ್ರಿಕ್‌   ದತ್ತಾಂಶವನ್ನು ಅಪ್ ಡೇಟ್ ಮಾಡುವುದು ಅತ್ಯಗತ್ಯ . 

ಸರಕಾರದ ನಿರ್ದೇಶನದ ಪ್ರಕಾರ, ಈಗ ಎಲ್ಲ ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಲಾಗಿದೆ. ಈ ಯೋಜನೆಗಳ ಲಾಭ ಪಡೆಯಲು, ಇತ್ತೀಚಿನ ಸರಿಯಾದ ಮಾಹಿತಿಯನ್ನು ಆಧಾರ್ ಸಂಖ್ಯೆಯೊಂದಿಗೆ ನಮೂದಿಸಬೇಕಿದೆ.  

ಕರ್ನಾಟಕದಲ್ಲಿ ಆಧಾರ್‌ ಅನ್ನು ಅಪ್‌ಡೇಟ್‌  ಮಾಡುವ ವಿಧಾನ  

ಹಳೆಯ ಆಧಾರ್‌ ಕಾರ್ಡ್‌ ಹೊಂದಿರುವವರು  ಹೊಸ  ನಿಯಮಗಳಿಗೆ ಅನುಗುಣವಾಗಿ ತಮ್ಮ ಹೆಸರು, ವಿಳಾಸ, ಹುಟ್ಟಿದ ದಿನ, ಲಿಂಗ, ಮೊಬೈಲ್‌ ಸಂಖ್ಯೆ ಮತ್ತು ಇ-ಮೇಲ್‌ ಮೊದಲಾದ ವಿವರಗಳನ್ನು ತಮ್ಮ ಬಯೋಮೆಟ್ರಿಕ್‌ ದತ್ತಾಂಶಗಳ ಜೊತೆಗೆ ಅಪ್‌ಡೇಟ್‌ ಮಾಡಬೇಕು. ಪ್ರತಿಯೊಬ್ಬರು ಇದಕ್ಕಾಗಿ ಸೂಕ್ತ ವಿಳಾಸ ಪುರಾವೆ ಮತ್ತು ಜನ್ಮದಿನಾಂಕಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರಬೇಕು. ಕೇವಲ ವಿಳಾಸದ ಅಪ್‌ಡೇಟ್‌ ಆದರೆ ಆನ್‌ಲೈನ್‌ನಲ್ಲಿ ಮಾಡಬಹುದು. 

ವೈಯಕ್ತಿಕವಾಗಿ ವಿಳಾಸ ಬದಲಾವಣೆ ಮಾತ್ರವಾದರೆ https://uidai.gov.in ಗೆ ಭೇಟಿ ನೀಡಿ ಸ್ವಯಂ ಇದನ್ನು ಅಪ್ ಡೇಟ್ ಮಾಡಿಕೊಳ್ಳಬಹುದು.  ಆದರೆ ಇಲ್ಲಿ ಇತರ   ಅಥವಾ ಬಯೋಮೆಟ್ರಿಕ್‌ ವಿವರಗಳನ್ನು ಬದಲಿಸಲು ಆಗುವುದಿಲ್ಲ. ಅದಕ್ಕಾಗಿ ಅವರು ಆಧಾರ್‌ ನೊಂದಣಿ ಕೇಂದ್ರಗಳಿಗೆ ಭೇಟಿ ನೀಡಬೇಕು. 

ಆಧಾರ್‌ ನೋಂದಣಿ/ಅಪ್‌ಡೇಟ್‌ ಫಾರ್ಮ್‌ನ್ನುಇಲ್ಲಿ      ಪಡೆದುಕೊಳ್ಳಬಹುದು.

ಆಧಾರ್‌ ನೋಂದಣಿ/ಅಪ್‌ಡೇಟ್‌ ಮಾಡಲು ನಿಮ್ಮ ಹತ್ತಿರದ ಆಧಾರ್‌ ಕೇಂದ್ರಗಳನ್ನು ಹುಡುಕಲುಇಲ್ಲಿ ಕ್ಲಿಕ್‌ ಮಾಡಿ. ಅಲ್ಲಿ ಈ ಕೆಳಗಿನ ದಾಖಲೆಗಳನ್ನು ಒದಗಿಸಬೇಕು. 

  • ಜನಸಂಖ್ಯಾಧಾರಿತ ಮಾಹಿತಿ: ಹೆಸರು, ವಿಳಾಸ, ಜನ್ಮ ದಿನಾಂಕ/ವಯಸ್ಸು, ಲಿಂಗ, ಮೊಬೈಲ್‌ ಸಂಖ್ಯೆ, ಇ- ಮೇಲ್‌ ವಿಳಾಸ, ಸಂಬಂಧದ ಸ್ಥಿತಿಗತಿ 
  • ಬಯೋಮೆಟ್ರಿಕ್‌ ಮಾಹಿತಿ: ಐರಿಸ್‌, ಫಿಂಗರ್‌ ಪ್ರಿಂಟ್‌ ಮತ್ತು ಮುಖದ ಛಾಯಾಚಿತ್ರ

ಕರ್ನಾಟಕದಲ್ಲಿ ಆಧಾರ್‌ ಕಾರ್ಡ್‌ ಅಪ್‌ಡೇಟ್‌ – ಶುಲ್ಕ 

ಸೇವೆ ಶುಲ್ಕ
ಆಧಾರ್‌ ನೋಂದಣಿ ಉಚಿತ
ಅತ್ಯಗತ್ಯ ಬಯೋಮೆಟ್ರಿಕ್‌ ವಿವರಗಳುಉಚಿತ
ಡೆಮೋಗ್ರೆಟಿಕ್‌ ವಿವರಗಳುರೂ.50 (ಜಿಎಸ್‌ಟಿ ಸೇರಿ)
ಇ-ಕೆವೈಸಿ ಬಳಸಿ ಆಧಾರ್‌ ಹುಡುಕಾಟ/ ಆಧಾರ್‌ ಪತ್ತೆ/ಬೇರೆ ಯಾವುದಾದರೂ ಸಾಧನ ಮತ್ತು A4 ಶೀಟ್‌ನಲ್ಲಿ ಕಲರ್‌ ಪ್ರಿಂಟೌಟ್‌ ಪ್ರತಿ ಆಧಾರ್‌ಗೆ ರೂ.30 (ಜಿಎಸ್‌ಟಿ ಸೇರಿ)

ಕರ್ನಾಟಕದಲ್ಲಿ ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ನಲ್ಲಿ ವಿಳಾಸ ಮಾತ್ರ ಬದಲಾವಣೆ 

  • ವ್ಯಕ್ತಿಯೊಬ್ಬ ಪೋರ್ಟಲ್‌ನಲ್ಲಿ ಅಪ್‌ಡೇಟ್‌ಗಾಗಿ ನೇರವಾಗಿ ತನ್ನ ಮನವಿಯನ್ನು ಸಲ್ಲಿಸಬಹುದು- ಆನ್‌ಲೈನ್‌ ಮೂಲಕ 
  • ಪೋರ್ಟಲ್‌ಗೆ ಲಾಗಿನ್‌ ಆಗಲು ವ್ಯಕ್ತಿಯು ತನ್ನ ನೋಂದಾಯಿತ ಮೊಬೈಲ್‌ ಸಂಖ್ಯೆ ಅಥವಾ ಆಧಾರ ಸಂಖ್ಯೆಯನ್ನು ಬಳಸಬಹುದು. 
  • ಹಂತ 1- ಎಸ್‌ಎಸ್‌ಯುಪಿ ಪೋರ್ಟಲ್‌ಗೆ ಲಾಗಿನ್‌ ಆಗಿ (ಆಧಾರ್‌ ಮತ್ತು ಒಟಿಪಿ ಬಳಸಿಕೊಂಡು) 
  • ನಿಗದಿತ  ಆಯ್ಕೆಗಳನ್ನು  ಆಯ್ದುಕೊಳ್ಳಿ (ಅಪ್‌ಡೇಟ್‌ ಮಾಡಬೇಕಾದವುಗಳನ್ನು)
  • ದತ್ತಾಂಶವನ್ನು ಭರ್ತಿ ಮಾಡಿ 
  • ಪೂರಕ ದಾಖಲೆಗಳ ಮೂಲ   ಸ್ಕ್ಯಾನ್‌ ಪ್ರತಿಯನ್ನು ಜೊತೆಗಿರಿಸಿ
  • ಅಪ್‌ಡೇಟ್‌ ಅನ್ನು ಪರೀಕ್ಷಿಸಲು ಬಿಪಿಒ ವನ್ನು ಆಯ್ಕೆ ಮಾಡಿ 
  • ಫಾರ್ಮ್‌ ಅನ್ನು ಸಲ್ಲಿಸಿ ಮತ್ತು ಯುಆರ್‌ಎನ್‌ (ಅಪ್‌ಡೇಟ್‌ ರಿಕ್ವೆಸ್ಟ್‌ ನಂಬರ್‌) ಜನರೇಟ್‌ ಆಗುತ್ತದೆ
  • ಯುಆರ್‌ಎನ್‌ ಬಳಸಿ ಆಧಾರ್‌ ಅಪ್ಡೇಟ್‌ ಸ್ಥಿತಿಗತಿಯನ್ನು ಪರೀಕ್ಷಿಸಿ 

ಫಾರ್ಮ್‌ ಸಲ್ಲಿಕೆಯಾದ ಬಳಿಕ ಯುಎನ್‌ಆರ್‌ ನಂಬರ್‌ ಜನರೇಟ್‌ ಆಗುತ್ತದೆ. 

ಸ್ಥಿರ ನೋಂದಾವಣಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಕರ್ನಾಟಕದಲ್ಲಿ ಆಧಾರ್‌ ಸಂಖ್ಯೆಯನ್ನು ಅಪ್‌ಡೇಟ್‌ ಮಾಡುವುದು

ಪ್ರತಿಯೊಬ್ಬರೂ ತಮ್ಮ ಮನೆ  ಸಮೀಪದ ಅಂಚೆ ಕಚೇರಿ,  ಕರ್ನಾಟಕ ಒನ್   ಮೊದಲಾದ ನೋಂದಾವಣಿ ಕೇಂದ್ರದಲ್ಲಿ ಆಧಾರ್‌ ಕಾರ್ಡ್‌ ಅಪ್‌ಡೇಟ್‌ಗೆ ತನ್ನ ಕೋರಿಕೆಯನ್ನು ಸಲ್ಲಿಸಬಹುದು. ತನ್ನ ಆಧಾರ್‌ ಅಪ್‌ಡೇಟ್‌ಗಾಗಿ ಆತ ಪೂರಕ ದಾಖಲೆಗಳನ್ನು ಒದಗಿಸಬೇಕು. 

ಕರ್ನಾಟಕದಲ್ಲಿ ಆಧಾರ್‌ ಕಾರ್ಡ್‌ ಅಪ್‌ಡೇಟ್‌- ಬೇಕಿರುವ ದಾಖಲೆಗಳು 

  • ಪಾನ್‌ ಕಾರ್ಡ್‌
  • ಮತದಾರರ ಗುರುತಿನ ಚೀಟಿ  
  • ಪಾಸ್‌ಪೋರ್ಟ್‌
  • ಪಡಿತರ ಚೀಟಿ 
  • ಚಾಲನಾ ಪರವಾನಗಿ
  • ಉದ್ಯೋಗ ಖಾತರಿ ಯೋಜನೆ ಗುರುತಿನ ಪತ್ರ 
  • ಸರ್ಕಾರಿ ಇಲಾಖೆಗಳು ನೀಡಿರುವ ಗುರುತಿನ ಚೀಟಿ  
  • ಫೋಟೋ ಇರುವ ಬ್ಯಾಂಕ್‌ ಎಟಿಎಂ ಕಾರ್ಡ್‌
  • ಮಾನ್ಯತೆ ಪಡೆದ  ಶಿಕ್ಷಣ ಸಂಸ್ಥೆಯಿಂದ ನೀಡಲಾದ ಫೋಟೋ ಗುರುತಿನ ಚೀಟಿ 
  • ಫೋಟೋ ಕ್ರೆಡಿಟ್‌ ಕಾರ್ಡ್‌
  • ಅಂಗವಿಕಲರ ಗುರುತಿನ ಚೀಟಿ 
  • ತಹಶೀಲ್ದಾರ್‌ ತಮ್ಮ ಲೆಟರ್‌ ಹೆಡ್‌ನಲ್ಲಿ ನೀಡುವ ಫೋಟೋ ಸಹಿತ ಗುರುತಿನ ಪ್ರಮಾಣ ಪತ್ರ 
  • ಫೋಟೋ ಸಹಿತ ಎಸ್‌ಸಿ/ಎಸ್‌ಟಿ/ಒಬಿಸಿ ಪ್ರಮಾಣಪತ್ರ 
  • ಪೋಟೋ ಸಹಿತ ವಿವಾಹ ಪ್ರಮಾಣಪತ್ರ
  • ಪೋಸ್ಟ್‌ ಆಫೀಸ್‌ ಮತ್ತು ಬ್ಯಾಂಕ್‌ ಪಾಸ್‌ ಪುಸ್ತಕ 
  • ನೀರಿನ ಬಿಲ್‌ಗಳು (ಮೂರು ತಿಂಗಳಿಗಿಂತ ಹಳೆಯದ್ದಾಗಿರಬಾರದು) 
  • ವಿದ್ಯುತ್‌ ಬಿಲ್‌ ( ಮೂರು ತಿಂಗಳಿಗಿಂತ ಹಳೆಯದ್ದಾಗಿರಬಾರದು)
  • ಸ್ಥಿರ ದೂರವಾಣಿ  ಬಿಲ್‌ (ಮೂರು ತಿಂಗಳಿಗಿಂತ ಹಳೆಯದ್ದಾಗಿರಬಾರದು)
  • ಕ್ರೆಡಿಟ್‌ ಕಾರ್ಡ್‌  ರಿಪೋರ್ಟ್  
  • ಆಸ್ತಿ ತೆರಿಗೆ ರಶೀದಿ 
  • ವಿಮೆ ಪಾಲಿಸಿ 
  • ವಾಹನ ನೋಂದಣಿ ಪ್ರಮಾಣಪತ್ರ 
  • ಪಿಂಚಣಿದಾರರ ಕಾರ್ಡ್‌ 
  • ರಾಜ್ಯ ಸರ್ಕಾರದಿಂದ ನೀಡಲಾದ ಪೋಟೋ ಸಹಿತ ಜಾತಿ ಮತ್ತು ವಿಳಾಸದ  ಪ್ರಮಾಣಪತ್ರ 
  • ನೋಂದಾಯಿತ ಮಾರಾಟ / ಗುತ್ತಿಗೆ / ಬಾಡಿಗೆ ಒಪ್ಪಂದ ಪತ್ರ
  • ಗ್ಯಾಸ್‌ ಸಂಪರ್ಕದ ಬಿಲ್‌ 

ಪಿಒಐ ಮತ್ತು ಪಿಒಎ ಇಲ್ಲದ ವ್ಯಕ್ತಿಗಳು ಪರಿಚಯಿಸುವವರ/ ಕುಟುಂಬದ ಹಿರಿಯರ ಮೂಲಕ ನೋಂದಾಯಿಸಿಕೊಳ್ಳಬಹುದು. 

ಆಧಾರ್‌ನ ಸ್ಥಿತಿಗತಿಯನ್ನು ಅರಿಯುವುದು ಹೇಗೆ? 

ಯಾರೇ ಆದರೂ ಇಲ್ಲಿ  ನ್ನು ಕ್ಲಿಕ್‌ ಮಾಡುವ ಮೂಲಕ ಆಧಾರ್‌ನ ಸ್ಥಿತಿಗತಿ ಅರಿಯಬಹುದು. ವ್ಯಕ್ತಿ ನೋಂದಣಿಯ ಸಮಯದಲ್ಲಿ ನೀಡಲಾದ ಎನ್‌ರೋಲ್‌ಮೆಂಟ್‌ ಐಡಿ (ಇಐಡಿ)  ನಮೂದಿಸಬೇಕು. 

  • ಸ್ಥಿತಿಗತಿ ಪರೀಕ್ಷಿಸಲು ಕ್ಯಾಪ್ಚಾ ಪರಿಶೀಲನಾ ಕೋಡ್‌ ಅನ್ನು ನಮೂದಿಸಿ. 
  • ವ್ಯಕ್ತಿ ತನ್ನ ಇಐಡಿ ಕಳೆದುಕೊಂಡ ಪ್ರಕರಣಗಳಲ್ಲಿ ಆತ ಅದನ್ನು ತನ್ನ ಮೊಬೈಲ್‌ ಸಂಖ್ಯೆ ಬಳಸಿ ಮರಳಿ ಪಡೆಯಬಹುದು. 

ಶಾಲಾ ಮಕ್ಕಳಿಗೆ ಆಧಾರ್‌ ಕಾರ್ಡ್‌ ಮಾಡಿಸುವುದು ಕಡ್ಡಾಯ 

ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ (ಡಿಪಿಐ) ತೆಗೆದುಕೊಂಡಿರುವ ನಿರ್ಣಯದ ಪ್ರಕಾರ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಶಾಲಾ ಮಕ್ಕಳಿಗೆ ಆಧಾರ್‌ ಮಾಡಿಸುವುದು ಕಡ್ಡಾಯ. ಸಾರ್ವಜನಿಕ ಶಿಕ್ಷಣ ಇಲಾಖೆ ವಿದ್ಯಾರ್ಥಿ ವೇತನ ಮತ್ತು ಇತರ ಯೋಜನೆಗಳ ಮೊತ್ತವನ್ನು ಫಲಾನುಭವಿ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡಲಿದೆ. 

ಸಾರ್ವಜನಿಕ ಶಿಕ್ಷಣ ಇಲಾಖೆ ಅಂಚೆ ಕಛೇರಿಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗಾಗಿ ಬ್ಯಾಂಕ್‌ ಶಾಖೆಗಳನ್ನು ತೆರೆಯಲು ಆರಂಭಿಸಿದೆ. ಈ ಎಲ್ಲಾ ಬ್ಯಾಂಕ್‌ ಖಾತೆಗಳು ಶೂನ್ಯ  ಮೊತ್ತ  ಖಾತೆಗಳಾಗಿರಲಿವೆ ಮತ್ತು ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲಿದ್ದು, ವಿದ್ಯಾರ್ಥಿ ವೇತನಗಳು ಬ್ಯಾಂಕ್‌ ಖಾತೆಗೆ ಜಮೆಯಾಗಲಿವೆ. 

ನಮ್ಮ ರಾಜ್ಯದ ಬೆಂಗಳೂರು ಹಾಗು ಮೈಸೂರು ನಗರಗಳಲ್ಲಿ, ಎರಡು ಆಧಾರ್ ಸೇವಾ ಕೇಂದ್ರಗಳನ್ನು ಈಗ ಸ್ಥಾಪಿಸಲಾಗಿದೆ.  ಅವುಗಳ ಮಾಹಿತಿ ಇಲ್ಲಿ ದೊರೆಯುತ್ತದೆ. ಇನ್ನು  ಆಧಾರ್ ನೋಂದಣಿ ಸೇವೆ ಲಭ್ಯವಿರುವ  ಕರ್ನಾಟಕ ಒನ್ ಕೇಂದ್ರಗಳ ಪಟ್ಟಿ 

ಇಲ್ಲಿದೆ 

ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗಳು ಕೂಡ ತಪ್ಪಾಗಿದ್ದರು, ಫಲಾನುಭವಿಗೆ ಅದರಿಂದ ದೊಡ್ಡ ಮಟ್ಟದ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ, ಯಾವುದೇ ಅನಧಿಕೃತ ಕೇಂದ್ರಗಳಲ್ಲಿ ಆಧಾರ್ ದಾಖಲೆಗಳನ್ನು ಪರಿಸ್ಕರಿಸದಿರುವುದು ಒಳ್ಳೆಯದು. ಏಕೆಂದರೆ, ಅಲ್ಲಿ ಕೆಲವು ದಾಖಲೆಗಳು ದುರುಪಯೋಗವಾಗುವ ಸಾಧ್ಯತೆ ಇರುತ್ತದೆ. 

ಆಧಾರ್ ಗೆ ಸಂಬಂಧಿಸಿದಂತೆ, ಹೆಚ್ಚಿನ ಮಾಹಿತಿ ಪಡೆಯಲು, ಹಾಗು ಬದಲಾಗುತ್ತಿರುವ ನಿಯಮಗಳನ್ನು ತಿಳಿದುಕೊಳ್ಳಲು  ನಿಯಮಿತವಾಗಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಅಂತರ್ಜಲ ತಾಣಕ್ಕೆ ಭೇಟಿ ನೀಡಿ. 

Jolad Rotti:
Related Post