ಚುನಾವಣಾ ಆಯೋಗ ನೀಡುವ, ಚುನಾವಣಾ ಗುರುತಿನ ಚೀಟಿ (ಮತದಾರರ ಗುರುತಿನ ಚೀಟಿ), ನಮ್ಮ ನಾಗರಿಕತ್ವ ಹಾಗೂ ರಾಷ್ಟ್ರೀಯತೆ ನಿರ್ಧರಿಸಲು ನೆರವು ನೀಡುವ ಅತ್ಯಂತ ಪ್ರಮುಖ ದಾಖಲೆ. ಈ ಗುರುತಿನ ಚೀಟಿ, ಪ್ರಾಥಮಿಕವಾಗಿ, ನಾವು ಚುನಾವಣೆಯಲ್ಲಿ ಮತ ಚಲಾಯಿಸಲು, ದಾಖಲೆಯಾಗಿ ಗುರುತಿಸಲ್ಪಟ್ಟಿದೆ. ಇದರ ಜೊತೆಗೆ, ಸರಕಾರದ ಹಾಗೂ ಇತರ ಸಂಸ್ಥೆಗಳ ನಾನಾ ಸೌಲಭ್ಯ, ಪಡೆಯಲು ಇದನ್ನು ಗುರುತಿನ ದಾಖಲೆಯಾಗಿ ಬಳಸಬಹುದು. ಇಲ್ಲಿ, ಈ ಗುರುತಿನ ಚೀಟಿಗೆ ಕರ್ನಾಟಕದಲ್ಲಿ ಅರ್ಜಿ ಸಲ್ಲಿಸಿ, ಪಡೆಯುವುದು ಹೇಗೆ ಎಂಬುದರ ಬಗ್ಗೆ ಉಪಯುಕ್ತ ಮಾಹಿತಿ ಇದೆ.
ಈ ಮತದಾರರ ಗುರುತಿನ ಚೀಟಿಯನ್ನು ನಿಮ್ಮ ವಿಳಾಸ, ವಯಸ್ಸಿನ ದೃಢೀಕರಣಕ್ಕಾಗಿ ಕೂಡಾ ಬಳಸಬಹುದು. ಪಾಸ್‍ಪೋರ್ಟ್, ಮೊಬೈಲ್ ಸಿಮ್‍ಕಾರ್ಡ್, ಹೊಸ ವಿದ್ಯುತ್ ಸಂಪರ್ಕ, ಹೀಗೆ ನಾನಾ ಸೌಲಭ್ಯ ಪಡೆಯಲು, ಇದನ್ನು ಗುರುತಿನ ಚೀಟಿಯಾಗಿ ಬಳಸಬಹುದು. ಈ ಚುನಾವಣಾ ಗುರುತಿನ ಚೀಟಿಯನ್ನು ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ (ಇಪಿಐಸಿ) ಎಂದೂ ಕರೆಯುತ್ತಾರೆ. ಈ ಗುರುತಿನ ಚೀಟಿಯಲ್ಲಿ ಒಂದು ಮತದಾರರ ಗುರುತಿನ ಸಂಖ್ಯೆ ಇರುತ್ತದೆ. ಇದು ಪ್ರತಿ ಗುರುತಿನ ಚೀಟಿಗೂ ವಿಭಿನ್ನ ಹಾಗೂ ಅನನ್ಯವಾಗಿರುತ್ತದೆ.
ಕರ್ನಾಟಕದಲ್ಲಿ ಮತದಾರರ ಗುರುತಿನ ಚೀಟಿಗೆ ಎರಡು ವಿಧಾನಗಳಲ್ಲಿ ಅರ್ಜಿ ಸಲ್ಲಿಸಬಹುದು
- ಆನ್‍ಲೈನ್ ವಿಧಾನ: ಮತದಾರರ ಗುರುತಿನ ಚೀಟಿಗೆ ಆನ್‍ಲೈನ್ ನೋಂದಣಿ
- ಆಫ್‍ಲೈನ್ ವಿಧಾನ: ತುಂಬಿದ ಅರ್ಜಿಯನ್ನು ಚುನಾವಣಾ ಆಯೋಗ ನಿರ್ಧರಿಸಿದ ಕಚೇರಿಯಲ್ಲಿ ಸಲ್ಲಿಸುವುದು.
ಕರ್ನಾಟಕದಲ್ಲಿ ಮತದಾರರರ ಗುರುತಿನ ಚೀಟಿ ಪಡೆಯಲು ಈ ಕೆಳಗಿನ ವಿಧಾನ ಅನುಸರಿಸಬೇಕು
ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು
- ಅರ್ಜಿದಾರರಿಗೆ ಕನಿಷ್ಠ 18 ವಯಸ್ಸು ತುಂಬಿರಬೇಕು
- ಕರ್ನಾಟಕದಲ್ಲಿ ಅರ್ಜಿದಾರರಿಗೆ ಶಾಶ್ವತ ವಿಳಾಸದ ದಾಖಲೆ ಇರಬೇಕು
- ಅರ್ಜಿದಾರರ ಹೆಸರು ಕರ್ನಾಟಕದ ಮತದಾರರ ಪಟ್ಟಿಯಲ್ಲಿರಬೇಕು.
ಚುನಾವಣಾ ಗುರುತಿನ ಚೀಟಿ ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ದಾಖಲೆಗಳು
- ಇತ್ತೀಚಿನ ಪಾಸ್‍ಪೋರ್ಟ್ ಮಾದರಿಯ ಭಾವಚಿತ್ರ
- ವಯಸ್ಸು ದೃಡೀಕರಣ ದಾಖಲೆ
ಈ ಕೆಳಗಿನ ಯಾವುದಾದರೂ ದಾಖಲೆಯನ್ನು ವಯಸ್ಸಿನ ದೃಢೀಕರಣಕ್ಕೆ ದಾಖಲೆಯಾಗಿ ಬಳಸಬಹುದು.
- ಪ್ರೌಢಶಾಲೆಯ ದಾಖಲೆ/ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ.
- ಜನನ ಪ್ರಮಾಣ ಪತ್ರ
- ಪಾಸ್‍ಪೋರ್ಟ್/ ಪಾನ್ ಕಾರ್ಡ್
- ಚಾಲನಾ ಪರವಾನಗಿ ಪತ್ರ
- ವಿಳಾಸ ದೃಢೀಕರಣ ದಾಖಲೆ
ಈ ಕೆಳಗಿನ ಯಾವುದಾದದರೂ ದಾಖಲೆಯನ್ನು ವಿಳಾಸ ದೃಢೀಕರಣಕ್ಕೆ ಬಳಸಬಹುದು.
- ಪಡಿತರ ಚೀಟಿ
- ಪಾಸ್‍ಪೋರ್ಟ್
- ಚಾಲನಾ ಪರವಾನಗಿ ಪತ್ರ
- ದೂರವಾಣಿ ಬಿಲ್/ ವಿದ್ಯುಚ್ಛಕ್ತಿ ಬಿಲ್
ಕರ್ನಾಟಕದಲ್ಲಿ ಚುನಾವಣಾ ಗುರುತಿನ ಚೀಟಿಗೆ ಅರ್ಜಿ ಸಲ್ಲಿಕೆಯ ವಿವಿಧ ಹಂತಗಳು
ಆನ್‍ಲೈನ್ ಅರ್ಜಿ ಸಲ್ಲಿಕೆಯ ಹಂತಗಳು
ಮೊದಲ ಪ್ರಕ್ರಿಯೆ
- ಕರ್ನಾಟಕ ಮುಖ್ಯ ಚುನಾವಣಾಧಿಕಾರಿಯವರ ಅಂತರ್ಜಾಲ ತಾಣಕ್ಕೆ ಭೇಟಿ ನೀಡುವುದು https://www.nvsp.in/
- ಹೊಸ ಮತದಾರ ನೋಂದಣಿ/ ವಿಧಾನಸಭಾ ಕ್ಷೇತ್ರದಿಂದ ವಿಳಾಸ ಬದಲಾವಣೆಯ ಅವಕಾಶವನ್ನು ಆಯ್ಕೆ ಮಾಡಿ.
- ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಹಾಗೂ ಈಗಿನ ಮಿಂಚಂಚೆ (ಇ ಮೇಲ್) ನಮೂದಿಸಿ, ಸೈನ್ ಇನ್ ಆಗಿ.
- ಈ ಆಯ್ಕೆಯಲ್ಲಿಯೇ ಮುಂದುವರಿಯಲು ನಿಮಗೆ, ತಾತ್ಕಾಲಿಕ ಯೂಸರ್ ನೇಮ್ ಹಾಗೂ ಪಾಸ್‍ಪರ್ಡ್ ನಿಮಗೆ ದೊರೆಯುತ್ತದೆ.
ದ್ವಿತೀಯ ಹಂತ: ಫಾರ್ಮ್ ಸಂಖ್ಯೆ 6ನ್ನು ಭರ್ತಿ ಮಾಡಿ
- https://www.nvsp.in/ ಭೇಟಿ ನೀಡಿ ನಿಮಗೆ ಕಳುಹಿಸಲಾಗಿರುವ ತಾತ್ಕಾಲಿಕ ಯೂಸರ್ ನೇಮ್ ಹಾಗೂ ಫಾಸ್‍ವರ್ಡ್ ಬಳಸಿ, ಮತ್ತೆ ಲಾಗ್‍ಇನ್ ಆಗಿ
- ಹೊಸ ಮತದಾರನಾಗಿ ನೋಂದಾಯಿಸಲು ನಮೂನೆ ಸಂಖ್ಯೆ 6ನ್ನು ಆಯ್ಕೆ ಮಾಡಿ. ಈ ನಮೂನೆಗಾಗಿ ಇಲ್ಲಿ ಕ್ಲಿಕ್ ಮಾಡಿ
- ನಮೂನೆ ಸಂಖ್ಯೆ 6ನ್ನು, ಎಲ್ಲಾ ಮಾಹಿತಿಗಳನ್ನು ನೀಡಿ (ನಿಮ್ಮ ಹೆಸರು, ವಯಸ್ಸು, ವಿಳಾಸ, ಮತ್ತಿತರ ಮಾಹಿತಿಗಳು) ತುಂಬಿಸಿ. ನೆನಪಿಡಿ: ನೀವು ನೀಡುವ ಮಾಹಿತಿಗಳೆಲ್ಲವೂ ನಿಮ್ಮ ದಾಖಲೆಗಳಿಗೆ ಅನುಗುಣವಾಗಿಯೇ ಇರಬೇಕು.
- ನಿಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಇತರ ದಾಖಲೆಗಳನ್ನು ಲಗತ್ತಿಸಿ.
ಹಂತ 3: ನಮೂನೆ ಸಂಖ್ಯೆ 6 ಸಲ್ಲಿಕೆ
- ಸಂಪೂರ್ಣ ತುಂಬಲಾದ, ನಮೂನೆ ಸಂಖ್ಯೆ 6ನ್ನು ಸಲ್ಲಿಸಿ.
ಮತದಾರರ ಗುರುತಿನ ಚೀಟಿ ಪಡೆಯಲು ಆಫ್‍ಲೈನ್ ಅರ್ಜಿ ಸಲ್ಲಿಕೆ
ಹಂತ 1: ಅರ್ಜಿ ನಮೂನೆ 6 ಪಡೆಯುವುದು
- ನಿಮ್ಮ ನೆರೆಹೊರೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ. ಅಲ್ಲಿ ಅರ್ಜಿ ನಮೂನೆ 6ರ ಮುದ್ರಿತ ಅರ್ಜಿ ನಮೂನೆ ಸಿಗುತ್ತದೆ.
ಹಂತ 2: ಅರ್ಜಿ ನಮೂನೆಯನ್ನು ಭರ್ತಿ ಮಾಡುವುದು.
- ಅತ್ಯಂತ ಜಾಗರೂಕವಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಅಲ್ಲಿ ಕೇಳಲಾಗಿರುವ, ನಿಮ್ಮ ಹೆಸರು, ವಯಸ್ಸು, ವಿಳಾಸ ಮತ್ತಿತರ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ.
- ನೀಡಲಾಗಿರುವ ಜಾಗದಲ್ಲಿ ನಿಮ್ಮ ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಿ. ಸಂಪೂರ್ಣ ತುಂಬಲಾದ ನಿಮ್ಮ ಅರ್ಜಿ ನಮೂನೆಗೆ ನಿಮ್ಮ ಸಹಿ ಹಾಕಿರಿ.
- ಅರ್ಜಿ ಜೊತೆಗೆ ಸಲ್ಲಿಸಬೇಕಾದ ಎಲ್ಲಾ ದಾಖಲೆಗಳನ್ನು ಒಂದುಗೂಡಿಸಿ.
ಹಂತ 3: ನಮೂನೆ ಸಂಖ್ಯೆ 6 ಸಲ್ಲಿಕೆ
- ನಿಗದಿತ ಕಚೇರಿಯಲ್ಲಿ ಹೀಗೆ ತುಂಬಲಾದ ಅರ್ಜಿ ನಮೂನೆಯನ್ನು ದಾಖಲೆಗಳೊಂದಿಗೆ ಸಲ್ಲಿಸಿ.
ಚುನಾವಣಾ ಗುರುತಿನ ಚೀಟಿಯನ್ನು ಪಡೆಯುವುದು ಹೇಗೆ?
ಅರ್ಜಿ ನಮೂನೆ 6 ಸಲ್ಲಿಕೆ ಬಳಿಕ, ನೀವು ಸಲ್ಲಿಸಿದ ಅರ್ಜಿಯನ್ನು ಚುನಾವಣಾ ಆಯೋಗದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಈ ಸಂದರ್ಭದಲ್ಲಿ ಆಯೋಗದ ಅಧಿಕಾರಿಗಳು ನೀವು ನೀಡಿದ ಮಾಹಿತಿಗೆ ಅನುಗುಣವಾಗಿ ನಿಮ್ಮ ವಾಸಸ್ಥಳಕ್ಕೆ ಭೇಟಿ ನೀಡುತ್ತಾರೆ. ಅವರು ನಿಮ್ಮ ಅರ್ಜಿ ಹಾಗೂ ಅದರಲ್ಲಿ ನೀಡಿದ ಮಾಹಿತಿಯನ್ನು ಪರಾಮರ್ಶೆ ನಡೆಸಿದ ಬಳಿಕ, ನಿಮ್ಮ ಅರ್ಜಿಯನ್ನು ಸ್ವೀಕರಿಸುತ್ತಾರೆ. ಹಾಗೂ ನಿಮಗೆ ಮತದಾರರ ಗುರುತಿನ ಚೀಟಿಯನ್ನು ನೀಡುತ್ತಾರೆ. ನಿಮ್ಮ ಮತದಾರರ ಗುರುತಿಯನ್ನು ನಿಮಗೆ ನಂತರ ನೀಡಲಾಗುತ್ತದೆ. ನಿಮ್ಮ ಸಂಬಂಧಿತ ವಾರ್ಡ್/ ಪಂಚಾಯತ್ ಕಚೇರಿಯಲ್ಲಿ ನೀವು ಅದನ್ನು ಸ್ವೀಕರಿಸಬಹುದಾಗಿದೆ.
ಗಮನಿಸಿ
- ಓರ್ವ ಅರ್ಜಿದಾರ, ಮತದಾರರ ಗುರುತಿನ ಚೀಟಿಗೆ ಒಂದೇ ಅರ್ಜಿ ಸಲ್ಲಿಸಬಹುದು.
- ನಿಮಗೆ ಅರ್ಜಿ ನಮೂನೆ ಸಂಖ್ಯೆ 6ನ್ನು ಆನ್‍ಲೈನ್‍ನಲ್ಲಿ ಸಲ್ಲಿಸಲು ಸಮಸ್ಯೆಯಾದರೆ, ಭರ್ತಿ ಮಾಡಿದ ಅರ್ಜಿಯ ಪ್ರಿಂಟ್‍ಔಟ್ ತೆಗೆದು, ಸಂಬಂಧಿಸಿದ ಕಚೇರಿಗೆ ಸಲ್ಲಿಸಬಹುದು.
ನಿಮ್ಮ ಚುನಾವಣಾ ಗುರುತಿನ ಚೀಟಿಯ ಮಾಹಿತಿ ಪರಿಷ್ಕರಣೆ ಹೇಗೆ?
ನಿಮ್ಮ ಚುನಾವಣಾ ಗುರುತಿನ ಚೀಟಿಯಲ್ಲಿನ ಮಾಹಿತಿಯನ್ನು ಆನ್‍ಲೈನ್ ಹಾಗೂ ಆಫ್‍ಲೈನ್ ಮಾದರಿಗಳೆರಡರಲ್ಲೂ ಬದಲಾಯಿಸಬಹುದು. ನಿಮ್ಮ ಚುನಾವಣಾ ಗುರುತಿನ ಚೀಟಿಯಲ್ಲಿ ತಪ್ಪು ಮಾಹಿತಿ ಮುದ್ರಣಗೊಂಡಿದ್ದರೆ, ಮದುವೆ, ನಿಮ್ ಹೆಸರಿನ ಕೊನೆಯಲ್ಲಿ ಬದಲಾವಣೆ, ನಿಮ್ಮ ವಿಳಾಸದಲ್ಲಿ ಬದಲಾವಣೆ ಹೀಗೆ ನಾನಾ ಕಾರಣಗಳಿಗೆ ಈ ಪರಿಷ್ಕರಣೆ ಮಾಡಬೇಕಾಗಬಹುದು. ಈ ಪರಿಷ್ಕರಣೆಯ ಕೆಲಸ ಕೈಗೆತ್ತಿಕೊಳ್ಳುವ ಮುನ್ನ ನೀವು, ಅದಕ್ಕೆ ಪೂರಕವಾದ ದಾಖಲೆಗಳನ್ನು ಹೊಂದಿಸಿಕೊಳ್ಳಬೇಕು. ಇವುಗಳು ಯಾವುದೆಂದರೆ,
- ನಿಮ್ಮ ಹೆಸರಿನ ಪದಗಳಲ್ಲಿ ಬದಲಾವಣೆ: ನಿಮ್ಮ ಜನನ ಪತ್ರ/ ಆಧಾರ್ ಕಾರ್ಡ್/ ವಾಹನ ಚಾಲನಾ ಪತ್ರ/ ಪಾಸ್‍ಪೋರ್ಟ್
- ನಿಮ್ಮ ಹೆಸರಿನ ಸರ್‍ನೇಮ್ ಬದಲಾವಣೆ: ನಿಮ್ಮ ಮದುವೆ ನೋಂದಣಿ ಪತ್ರ
- ನಿಮ್ಮ ವಿಳಾಸ ಬದಲಾವಣೆ: ನಾನಾ ಸೇವೆಗಳ ಬಿಲ್‍ಗಳು/ ಚಾಲನಾ ಪತ್ರ/ ಪಾರ್ಸ್‍ಪೋರ್ಟ್
ಕರ್ನಾಟಕದಲ್ಲಿ ಮತದಾರರ ಚುನಾವಣಾ ಗುರುತಿನ ಪತ್ರದ ಮಾಹಿತಿಗಳ ಆನ್‍ಲೈನ್ ಮೂಲಕ ಪರಿಷ್ಕರಿಸುವುದು ಹೇಗೆ?
ನಿಮ್ಮ ಮಾಹಿತಿಗಳನ್ನು ಬಳಸಿಕೊಂಡು https://www.nvsp.in/ ವೆಬ್‍ಸೈಟ್‍ಗೆ ಭೇಟಿ ನೀಡಿ
ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆ
- ನಿಮ್ಮ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿ. ನಿಮ್ಮ ವಿಧಾನಸಭಾ ಕ್ಷೇತ್ರ ಯಾವುದು ಎಂಬುದು ನಿಮಗೆ ಸ್ಪಷ್ಟತೆ ಇಲ್ಲದಿದ್ದಲ್ಲಿ, ನಿಮ್ಮ ವಾರ್ಡ್ ಆಯ್ಕೆ ಮಾಡಿ.
- ಅರ್ಜಿ ನಮೂನೆ8 ರಲ್ಲಿರುವ ಮಾಹಿತಿಗಳನ್ನು ಮತ್ತೆ ನಮೂದಿಸಿ. ನಿಮ್ಮ ಚುನಾವಣಾ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಿ.
- ಅಗತ್ಯವಾದ ಪೂರಕ ದಾಖಲೆಗಳನ್ನು ಅಪ್‍ಲೋಡ್ ಮಾಡಿ.
- ಅರ್ಜಿಯನ್ನು ಆನ್‍ಲೈನ್ ಮೂಲಕ ಸಲ್ಲಿಸಿ.
ಅರ್ಜಿ ನಮೂನೆ 8ರನ್ನು ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ.
ಕರ್ನಾಟಕದಲ್ಲಿ ಚುನಾವಣಾ ಗುರುತಿನ ಚೀಟಿಯನ್ನು ಆಫ್‍ಲೈನ್ ಮೂಲಕ ಪರಿಷ್ಕರಣೆ
ಅರ್ಜಿ ನಮೂನೆ8ರಲ್ಲಿ ಸರಿಯಾದ ಮಾಹಿತಿಯನ್ನು ತುಂಬಿರಿ (ಅರ್ಜಿ ನಮೂನೆ 8ರನ್ನು ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ಕಿಸಿ)
- ಪೂರಕ ದಾಖಲೆಗಳನ್ನು ಲಗತ್ತಿಸಿ.
- ನಿಮ್ಮ ಈಗಿನ ಚುನಾವಣಾ ಗುರುತಿನ ಚೀಟಿಯ ನಕಲನ್ನು ಜೊತೆಗಿಡಿ.
- ಈ ಅರ್ಜಿಯನ್ನು ನಿಮ್ಮ ಸಮೀಪದ ಚುನಾವಣಾ ಆಯೋಗದ ಕಚೇರಿಗೆ ಸಲ್ಲಿಸಿ.
ಕರ್ನಾಟಕದಲ್ಲಿ ಚುನಾವಣಾ ಗುರುತಿನ ಚೀಟಿಯ ವಿಳಾಸವನ್ನು ಆನ್‍ಲೈನ್ ಮೂಲಕ ಪರಿಷ್ಕರಣೆ
- ನಿಮ್ಮ ಮಾಹಿತಿಯೊಂದಿಗೆ https://www.nvsp.in/ ವೆಬ್‍ಸೈಟ್‍ಗೆ ಭೇಟಿ ನೀಡಿ
- ಹೊಸ ಮತದಾರರ ನೋಂದಣೆ/ ವಿಧಾನಸಭಾ ಕ್ಷೇತ್ರದಿಂದ ಬದಲಾವಣೆ ಅವಕಾಶವನ್ನು ಆಯ್ಕೆ ಮಾಡಿ.
- 8ಎ ಅರ್ಜಿ ನಮೂನೆಯನ್ನು ಇಲ್ಲಿ ಡೌನ್‍ಲೋಡ್ ಮಾಡಬಹುದು.
- ನಿಮ್ಮ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರದ ಮಾಹಿತಿಯನ್ನು ತುಂಬಿರಿ.
- 8ಎ ಅರ್ಜಿ ನಮೂನೆಯನ್ನು ಪರಿಷ್ಕøತ ಸರಿಯಾದ ಮಾಹಿತಿಯೊಂದಿಗೆ ತುಂಬಿರಿ. ನೀವು ನಿಮ್ಮ ಹಳೆ ಹಾಗೂ ಹೊಸ ವಿಳಾಸಗಳೆರಡನ್ನೂ ತುಂಬ ಬೇಕಾಗುತ್ತದೆ.
- ಹೊಸ ವಿಳಾಸದ ದಾಖಲೆಗಳನ್ನು ಅಪ್‍ಲೋಡ್ ಮಾಡಿ.
- ನಿಮ್ಮ ಅರ್ಜಿಯನ್ನು ಆನ್‍ಲೈನ್‍ನಲ್ಲೇ ಸಲ್ಲಿಸಿ.
ಆಫ್‍ಲೈನ್‍ನಲ್ಲಿ ಚುನಾವಣಾ ಗುರುತಿನ ಚೀಟಿಯಲ್ಲಿ ವಿಳಾಸ ಬದಲಾವಣೆ
- ಅರ್ಜಿ ನಮೂನೆ 8ಎ ಪಡೆಯಿರಿ. ಆನ್‍ಲೈನ್ ಮೂಲಕ ಹಾಗೂ ಚುನಾವಣಾ ಆಯೋಗದ ಕಚೇರಿಗಳಲ್ಲಿ ಇದು ಲಭ್ಯವಿರುತ್ತದೆ.
- ಭರ್ತಿ ಮಾಡಿದ ಅರ್ಜಿಯನ್ನು ಪೂರಕ ದಾಖಲೆಗಳೊಂದಿಗೆ ಚುನಾವಣಾ ಆಯೋಗದ ಕಚೇರಿಯಲ್ಲಿ ಸಲ್ಲಿಸಿ.
- ನೀವು ಆನ್‍ಲೈನ್ ಅಥವಾ ಆಫ್‍ಲೈನ್‍ನಲ್ಲಿ ವಿಳಾಸ ಬದಲಾವಣೆ ಹಾಗೂ ಇನ್ನಿತರ ಪರಿಷ್ಕರಣೆಗೆ ಅರ್ಜಿ ಸಲ್ಲಿಸಿದ ಬಳಿಕ, ಅದನ್ನು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಆ ಬಳಿಕ ಅವರು ನಿಮಗೆ ಹೊಸ ಚುನಾವಣಾ ಮತದಾರರ ಹೊಸ ಗುರುತಿನ ಚೀಟಿ ನೀಡುತ್ತಾರೆ. ಅದನ್ನು ನಿಮ್ಮ ಹೊಸ ವಿಳಾಸಕ್ಕೆ ಭಾರತೀಯ ಅಂಚೆ ಮೂಲಕ ಕಳುಹಿಸಿಕೊಡಲಾಗುತ್ತದೆ.
ಮತದಾರರ ಪಟ್ಟಿಯಿಂದ ಹೆಸರು ರದ್ದುಗೊಳಿಸುವುದು ಹೇಗೆ?
ಓರ್ವ ವ್ಯಕ್ತಿಯ ಸಾವು ಅಥವಾ ಆತನ ಹೆಸರು ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿದ್ದರೆ, ಅತನ ಹೆಸರನ್ನು ಮತದಾರರ ಪಟ್ಟಿಯಿಂದ ರದ್ದುಗೊಳಿಸಬೇಕಾಗುತ್ತದೆ.
- ಅದಕ್ಕಾಗಿ https://www.nvsp.in/ ವೆಬ್‍ಸೈಟ್‍ಗೆ ಸಂಪೂರ್ಣ ಮಾಹಿತಿಯೊಂದಿಗೆ ಭೇಟಿ ನೀಡಬೇಕು.
- ಅಲ್ಲಿ ಅರ್ಜಿ ನಮೂನೆ 7ನ್ನು ಭರ್ತಿ ಮಾಡಬೇಕು.
- ಈ ಅರ್ಜಿ ನಮೂನೆಯನ್ನು ಡೌನ್‍ಲೋಡ್ ಮಾಡಿ, ಆಫ್‍ಲೈನ್ ಮೂಲಕ ಸಮೀಪದ ಚುನಾವಣಾ ಆಯೋಗದ ಕಚೇರಿಗೆ ಸಲ್ಲಿಸಬಹುದು.
ಗಮನಿಸಿ: ಈ ಎಲ್ಲಾ ಅರ್ಜಿಗಳನ್ನು ಇಲ್ಲಿ ಢೌನ್‍ಲೋಡ್ ಮಾಡಿಕೊಳ್ಳಬಹುದು.
Also see,
- In English: How to Apply for Voter ID card in Karnataka