ಬೆಂಗಳೂರಿನ ನಾಗರಿಕರು ಎದುರಿಸುವ ಬಹುದೊಡ್ಡ ಸಮಸ್ಯೆ ಎಂದರೆ ಅದು ವಾಹನ ನಿಲುಗಡೆ. ಈ ಕಾರಣಕ್ಕಾಗಿ ಹಲವಾರು ಬಾರಿ ನೋ ಪಾರ್ಕಿಂಗ್ ಜೋನ್ ನಲ್ಲಿ ವಾಹನ ನಿಲ್ಲಿಸಿ ದಂಡ ಪಾವತಿಸುವ ಸಮಸ್ಯೆಯನ್ನು ಅವರು ಎದುರಿಸುತ್ತಾರೆ. ಜೊತೆಗೆ ಒನ್ ವೇ, ಸಿಗ್ನಲ್ ಜಂಪ್ ಹೀಗೆ ನಾನಾ ಕಾರಣಗಳಿಗಾಗಿ ದಂಡ ವಿಧಿಸಲಾಗುತ್ತದೆ. ದಂಡ ವಿಧಿಸುವಲ್ಲಿ ಎದುರಾಗುವ ಅತಿ ದೊಡ್ಡ ಸಮಸ್ಯೆಯೆಂದರೆ, ಹಣ ಪಾವತಿ. ಈ ಲೇಖನದಲ್ಲಿ ನಾವು ಆನ್ಲೈನ್ ಮೂಲಕ ನೀವು ಹೇಗೆ ದಂಡ ಪಾವತಿಸಬಹುದು ಎಂದು ತಿಳಿಸಿಕೊಡುತ್ತೇವೆ.
- ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದ ದಂಡವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದು
- ಇದಕ್ಕೆ ಸಂಬಂಧಿಸಿದಂತೆ ನಗದು ರಹಿತ ವಹಿವಾಟುಗಳನ್ನು ಪೇಟಿಎಂ ನಂತಹ ಆ್ಯಪ್‌ಗಳ ಮೂಲಕ ಮಾಡಬಹುದು
- ಪುನರಾವರ್ತಿತ ಟ್ರಾಫಿಕ್ ಅಪರಾಧಗಳಿಗೆ ಮೊದಲ ಅಪರಾಧಗಳಿಗಿಂತ ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ
ಇಂದು ನೀವು ಸಂಚಾರ ನಿಯಮ ಉಲ್ಲಂಘಿಸಿದರೆ, ದಂಡ ಪಾವತಿಸಲು ಅನೇಕ ಮಾರ್ಗಗಳಿವೆ. ಇದನ್ನು ಸ್ಥಳದಲ್ಲೇ ನಗದುರಹಿತ ವಹಿವಾಟಿನ ರೂಪದಲ್ಲಿ ಮಾಡಬಹುದು ಅಥವಾ ನಿಮ್ಮ ಮನೆಯಿಂದಲೇ ಆನ್‌ಲೈನ್‌ನಲ್ಲಿ ಪಾವತಿಸಬಹುದು. ಇದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.
ಟ್ರಾಫಿಕ್ ದಂಡ ಪಾವತಿಸುವುದನ್ನು ಯಾರೂ ಇಷ್ಟಪಡುವುದಿಲ್ಲ. ಆದರೂ, ಕೆಲವೊಮ್ಮೆ ಇದನ್ನು ಪಾವತಿಸಬೇಕಾಗಬಹುದು. ಮೀಟಿಂಗ್‌ಗೆ ಹೋಗುವ ಅವಸರದಲ್ಲಿ ನೀವು ವೇಗವಾಗಿ ವಾಹನ ಚಾಲನೆ ಮಾಡಿ ಅಥವಾ ಕೆಂಪು ಟ್ರಾಫಿಕ್ ದೀಪ ದಾಟಿ ಅಥವಾ ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿ ಸಿಕ್ಕಿಬಿದ್ದಿರಬಹುದು. ಕೆಲವೊಂದು ಸಂದರ್ಭಗಳಲ್ಲಿ ನಿಮ್ಮ ಚಾಲಕ ತಪ್ಪೆಸಗಬಹುದು. . ಅಂತಹ ಸಂದರ್ಭಗಳಲ್ಲಿ, ನೀವು ಆ ದಂಡವನ್ನು ಹೇಗೆ ಪಾವತಿಸಬಹುದು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಸಂಚಾರ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದ ದಂಡವನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಪಾವತಿಸಬಹುದು. ನೀವು ಇದಕ್ಕೆ ರಶೀತಿ ಪಡೆಯುವ ಸಂದರ್ಭದಲ್ಲಿ ನಗದು ರೂಪದಲ್ಲಿ ಆಫ್‌ಲೈನ್ ಪಾವತಿಗಳನ್ನು ಮಾಡಬಹುದು. ಕೆಲವು ಸಂಚಾರಿ ಪೊಲೀಸ್ ಠಾಣೆ ಕಾರ್ಡ್ ಮೂಲಕವೂ ಪಾವತಿಯನ್ನು ಸ್ವೀಕರಿಸುತ್ತದೆ. ಆನ್‌ಲೈನ್ ಪಾವತಿಗಳನ್ನು ಮೂರು ವಿಧಗಳಲ್ಲಿ ಮಾಡಬಹುದು.
ಇನ್ನು ನಿಮ್ಮ ದಾಖಲೆ ಪತ್ರಗಳನ್ನು ಯಾವ ಆಪ್ ಗಳ ಮೂಲಕ ಜಾತನವಾಗಿಡಬಹುದೆಂಬುದನ್ನು ತಿಳಿದುಕೊಳ್ಳಿ
ಬೆಂಗಳೂರಿನಲ್ಲಿ ಆನ್‌ಲೈನ್‌ನಲ್ಲಿ ಟ್ರಾಫಿಕ್ ದಂಡ ಪಾವತಿಸಿ- ಪೇಟಿಎಂ
ಬೆಂಗಳೂರಿನಲ್ಲಿ ಆನ್‌ಲೈನ್ ಮೂಲಕ ಟ್ರಾಫಿಕ್ ದಂಡ ಪಾವತಿಸಲು ಪೇಟಿಎಂ ಒಂದು ಜನಪ್ರಿಯ ಮಾರ್ಗವಾಗಿದೆ. ಇದು ನಗದು ರಹಿತ ದಂಡ ಪಾವತಿಯ ವ್ಯವಸ್ಥೆಯಾಗಿದ್ದು, ನೀವು ಸ್ಥಳದಲ್ಲೇ ದಂಡ ಪಾವತಿಸಲು ಅವಕಾಶ ಕಲ್ಪಿಸುತ್ತದೆ. ಇದರ ಜೊತೆಗೆ, ನಿಮಗೆ ಇನ್ನು ಹಲವಾರು ಅನುಕೂಲತೆಗಳಿವೆ. ಇದನ್ನು ಮಾಡುವ ಮೂರು ಹಂತಗಳು ಇಂತಿವೆ.
1. ನಿಮ್ಮ ಪೇಟಿಎಂ ಖಾತೆಗೆ ಲಾಗ್‌ಇನ್ ಮಾಡಿ
2. ನಗರ ಹೆಸರು ನಮೂದಿಸಿ
3. ವಾಹನ ಸಂಖ್ಯೆ / ಚಲನ್ ನಮೂದಿಸಿ
4. ಪಾವತಿ ಮಾಡುವ ವಿಧಾನ ಆರಿಸಿ – ನೀವು ಡೆಬಿಟ್/ ಕ್ರೆಡಿಟ್ ಕಾರ್ಡ್, ಪೇಟಿಎಂ ವ್ಯಾಲೆಟ್ ಅಥವಾ ನೆಟ್ ಬ್ಯಾಕಿಂಗ್ ಮೂಲಕ ದಂಡ ಪಾವತಿಸಬಹುದು
ಈ ಸೇವೆ ದಿನದ 24 ಗಂಟೆಯೂ ಲಭ್ಯವಿದೆ. ಪಾವತಿ ಮಾಡಿದ ನಂತರ, ಅದರ ದೃಢೀಕರಣವನ್ನು ನಿಮ್ಮ ನೋಂದಾಯಿತ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ. ಹೀಗಾಗಿ ಇಲ್ಲಿ ಪಾವತಿಯಲ್ಲಿ ಯಾವುದೇ ಗೊಂದಲ ತಲೆದೋರಲು ಸಾಧ್ಯವಿಲ್ಲ.
ಬೆಂಗಳೂರಿನಲ್ಲಿ ಆನ್‌ಲೈನ್‌ನಲ್ಲಿ ಟ್ರಾಫಿಕ್ ದಂಡ ಪಾವತಿಸಿ- ಕರ್ನಾಟಕ ವನ್
ಇನ್ನು ನಿಮಗೆ ಸುಲಭದಲ್ಲಿ ಈ ಸೇವೆ ಸಿಗುವ ಸ್ಥಳವೆಂದರೆ ಬೆಂಗಳೂರು ಒನ್ – ಕರ್ನಾಟಕ ಒನ್ ಕೇಂದ್ರಗಳು. ಸಂಚಾರ ನಿಯಮ ಉಲ್ಲಂಘನೆಗಳ ಆನ್‌ಲೈನ್ ಪಾವತಿ ಕರ್ನಾಟಕ ವನ್ ವೆಬ್‌ಸೈಟಿನಲ್ಲಿ ಲಭ್ಯವಿರುವ ಹಲವು ಸೇವೆಗಳಲ್ಲಿ ಒಂದಾಗಿದೆ. ಆನ್‌ಲೈನ್ ಪಾವತಿ ಸೇವೆಗಳು ಸಂಚಾರ ನಿಯಮ ಉಲ್ಲಂಘನೆಗಳು ಮತ್ತು ಪಾರ್ಕಿಂಗ್ ದಂಡಕ್ಕಾಗಿ ಲಭ್ಯವಿದೆ.
ಮೊದಲಿಗೆ, ನೀವು ನಿಮ್ಮ ಖಾತೆಗೆ ಲಾಗ್‌ಇನ್ ಆಗಬೇಕು ಮತ್ತು ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿದ ನಂತರ, ನಿಮ್ಮ ಸಂಚಾರ ನಿಯಮ ಉಲ್ಲಂಘನೆಗಳನ್ನು ವೆಬ್‌ಸೈಟಿನಲ್ಲಿ ತೋರಿಸಲಾಗುತ್ತದೆ. ನಂತರ ನೀವು ವೆಬ್‌ಸೈಟಿನಲ್ಲಿ ದಂಡ ಪಾವತಿಸಬಹುದು.
ಬೆಂಗಳೂರಿನಲ್ಲಿ ಆನ್‌ಲೈನ್‌ನಲ್ಲಿ ಟ್ರಾಫಿಕ್ ದಂಡ ಪಾವತಿಸಿ – ಬೆಂಗಳೂರು ಟ್ರಾಫಿಕ್ ಪೊಲೀಸ್ ವೆಬ್‌ಸೈಟ್
ಬೆಂಗಳೂರು ಟ್ರಾಫಿಕ್ ಪೊಲೀಸ್ ಎಂಬ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ತಪ್ಪಿಸ್ಥರು ಆನ್‌ಲೈನ್‌ನಲ್ಲಿ ತಮ್ಮ ದಂಡ ಪಾವತಿಸಬಹುದಾದ ವಿಭಾಗವಿದೆ. ಇದು ಸ್ಥಳದಲ್ಲೇ ದಂಡಗಳು, ಪಾರ್ಕಿಂಗ್ ಉಲ್ಲಂಘನೆಗಳು ಮತ್ತು ಸಂಚಾರ ಉಲ್ಲಂಘನೆಯ ಇತರೆ ಸೂಚನೆಗಳನ್ನು ಒಳಗೊಂಡಿದೆ.
- ನೀವು ಹೀಗೆ ನೇರವಾಗಿ ದಂಡ ಪಾವತಿಸಬೇಕಾದರೆ, ಇಲಾಖೆಯ ವೆಬ್ಸೈಟ್ ಇಲ್ಲಿ ಪ್ರವೇಶಿಸಿ. ನಿಮಗೆ ಇಲ್ಲಿ ಎಲ್ಲಾ ಮಾಹಿತಿಗಳು ಸಿಗುತ್ತವೆ
- ಸೂಕ್ತ ಲಿಂಕ್ ಕ್ಲಿಕ್ ಮಾಡಿ ಮತ್ತು ಉಲ್ಲಂಘನೆಯ ದಿನಾಂಕ, ಕಾರು ನೋಂದಣಿ ಸಂಖ್ಯೆ, ಉಲ್ಲಂಘನೆ ಟ್ಯಾಗ್ ಸಂಖ್ಯೆ ಮತ್ತು ನಿಮ್ಮ ಇಮೇಲ್ ಐಡಿಯಂತಹ ವೈಯಕ್ತಿಕ ಮಾಹಿತಿಗಳಂತಹ ವಿವರಗಳನ್ನು ನಮೂದಿಸಿ. ಮೊತ್ತ ತೋರಿಸಿದ ನಂತರ, ನೀವು ನೆಟ್ ಬ್ಯಾಂಕಿಂಗ್, ಡೆಬಿಟ್/ ಕ್ರೆಡಿಟ್ ಕಾರ್ಡ್, ಪೇಟಿಎಂ, ಅಮೆಕ್ಸ್ ಕಾರ್ಡ್ ಅಥವಾ ಯುಪಿಐ ಮೂಲಕ ಪಾವತಿಸಬಹುದು.
- ಪಾವತಿ ವಿವರಗಳನ್ನು ನಮೂದಿಸಿದ ನಂತರ, ಕ್ಯಾಪ್ಚಾವನ್ನು ನಮೂದಿಸಲು ಮರೆಯದಿರಿ ಮತ್ತು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ಪಾವತಿಯನ್ನು ಪೂರ್ಣಗೊಳಿಸಲು ನಿಮ್ಮನ್ನು ಸುರಕ್ಷಿತ ಪುಟಕ್ಕೆ ನಿರ್ದೇಶಿಸಲಾಗುತ್ತದೆ.
- ಈ ಸೈಟ್‌ನಲ್ಲಿ ನಿಮ್ಮ ಉಲ್ಲಂಘನೆಯ ವಿವರಗಳನ್ನು ನೀವು ಪರಿಶೀಲಿಸಬಹುದು.
ಟ್ರಾಫಿಕ್ ಉಲ್ಲಂಘನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಶುಲ್ಕಗಳು
ವಾಹನದೊಂದಿಗೆ ನಿಮ್ಮ ದಾಖಲೆಗಳನ್ನು ನೀವು ತೆಗೆದುಕೊಂಡು ಹೋಗುವ ಅಗತ್ಯವಿದೆ. ಅಂತಹ ದಾಖಲೆಗಳನ್ನು ಕೊಂಡೊಯ್ಯಲು ಡಿಜಿಲಾಕರ್ ಅತ್ಯುತ್ತಮ ಆ್ಯಪ್. ಹಲವು ವಿಧದ ಸಂಚಾರ ನಿಯಮ ಉಲ್ಲಂಘನೆಗಳಿವೆ ಮತ್ತು ಅವುಗಳಲ್ಲಿ ಪ್ರತಿಯೊಂದಕ್ಕೂ ಸಂಬಂಧಿಸಿದ ಶುಲ್ಕಗಳು ವಿಭಿನ್ನವಾಗಿವೆ. ಕೆಲವು ಸಾಮಾನ್ಯ ಸಂಚಾರ ನಿಯಮ ಉಲ್ಲಂಘನೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಶುಲ್ಕಗಳು ಇಂತಿವೆ:
ಅಪರಾಧ | ದಂಡ ರೂ. ಗಳಲ್ಲಿ |
---|---|
ಸಾಮಾನ್ಯ | 500 |
ರಸ್ತೆ ನಿಯಮ ಉಲ್ಲಂಘನೆ | 500 |
ಅಧಿಕಾರಿಗಳ ಆದೇಶಗಳನ್ನು ಪಾಲಿಸದಿರುವುದು | 1000 |
ಲೈಸೆನ್ಸ್ ಇಲ್ಲದೆ ವಾಹನ ಚಾಲನೆ | 5,000 ಅಥವಾ 3 ತಿಂಗಳು ಜೈಲು |
ಅರ್ಹತೆ ಇಲ್ಲದೆ ವಾಹನ ಚಾಲನೆ | 10000 |
ಅತಿ ಗಾತ್ರದ ವಾಹನಗಳು | 5000 |
ಅತಿ ವೇಗದಲ್ಲಿ ವಾಹನ ಚಾಲನೆ | ಲಘು ಮೋಟಾರು ವಾಹನಗಳಿಗೆ 1,000 ಮತ್ತು ಮಧ್ಯಮ ಪ್ರಯಾಣಿಕರ ವಾಹನಗಳಿಗೆ 2,000 |
ಅಪಾಯಕಾರಿ ವಾಹನ ಚಾಲನೆ | 5,000 ದವರೆಗೆ |
ಕುಡಿದು ವಾಹನ ಚಾಲನೆ | 10000 |
ಅತಿವೇಗ / ರೇಸಿಂಗ್ | 5,000 ಅಥವಾ 3 ತಿಂಗಳು ಜೈಲು |
ಅನುಮತಿ ಇಲ್ಲದ ವಾಹನ | 10,000 ದವರೆಗೆ |
ಒಟ್ಟಾರೆ ತಪ್ಪಿತಸ್ಥರು (ಪರವಾನಗಿ ನಿಯಮಗಳ ಉಲ್ಲಂಘನೆ) | 25,000 ದಿಂದ 1,00,000 |
ಅತಿಯಾದ ಭಾರ ಹೊರಿಸುವುದು | 20,000 ಮತ್ತು ಪ್ರತಿ ಹೆಚ್ಚುವರಿ ಟನ್‌ಗೆ 2,000 |
ಹೆಚ್ಚುವರಿ ಭಾರ- ಪ್ರಯಾಣಿಕರು | ಪ್ರತಿ ಹೆಚ್ಚುವರಿ ಪ್ರಯಾಣಿಕರಿಗೆ 1,000 |
ಸೀಟ್ ಬೆಲ್ಟ್ ಅಥವಾ ಹೆಲ್ಮೆಟ್ ಧರಿಸದಿರುವುದು | 500 |
ದ್ವಿಚಕ್ರ ವಾಹನಗಳ ಅತಿಯಾದ ಭಾರ | 2.000 ಮತ್ತು 3 ತಿಂಗಳು ಲೈಸೆನ್ಸ್ ಅನರ್ಹತೆ |
ತುರ್ತು ಸೇವೆಯ ವಾಹನಗಳಿಗೆ ದಾರಿ ಬಿಡದಿರುವುದು | 10000 |
ವಿಮೆ ಇಲ್ಲದೆ ವಾಹನ ಚಾಲನೆ | ದ್ವಿಚಕ್ರ ವಾಹನಗಳಿಗೆ 1,000, ಚತುಷ್ಚಕ್ರ ವಾಹನಗಳಿಗೆ 2,000 ಮತ್ತು ಘನ ಸರಕು ವಾಹನಗಳಿಗೆ 4,000 |
ಬಾಲಪರಾಧಿಗಳ ಅಪರಾಧಗಳು | 3 ತಿಂಗಳು ಜೈಲಿನೊಂದಿಗೆ 25,000. |
ರಕ್ಷಕರು / ಮಾಲೀಕರು ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ. | |
ಬಾಲಾಪರಾಧಿಗಳನ್ನು ಕಾಯ್ದೆಯಡಿ ತನಿಖೆ ನಡೆಯುತ್ತದೆ. | |
ವಾಹನದ ನೋಂದಣಿ ರದ್ದುಗೊಳಿಸಲಾಗುವುದು. | |
ದಾಖಲೆಗಳನ್ನು ವಶಪಡಿಸಿಕೊಳ್ಳಲು ಅಧಿಕಾರಿಗಳ ಅಧಿಕಾರ | 183,184,185,189,190, 194C, 194D, 194E ಅಡಿಯಲ್ಲಿ ಚಾಲನಾ ಪರವಾನಗಿಯ ಅಮಾನತು |
ಜಾರಿಗೊಳಿಸುವ ಅಧಿಕಾರಿಗಳಿಂದ ಅಪರಾಧ | ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಎರಡು ಪಟ್ಟು ದಂಡ |
ಟಿಕೆಟ್ ಇಲ್ಲದೆ ಪ್ರಯಾಣಿಸುವುದು | 500 |
ಟ್ರಾಫಿಕ್ ಲೈಟ್ ದಾಟುವುದು | 1,000 ದಿಂದ 5,000 ದವರೆಗೆ ಅಥವಾ 6 ರಿಂದ 12 ತಿಂಗಳು ಜೈಲು ಅಥವಾ ಎರಡೂ |
ಮೊಬೈಲ್ ಫೋನ್ ಬಳಕೆ / ತಪ್ಪಾದ ರೀತಿಯಲ್ಲಿ ಓವರ್ ಟೇಕ್ ಮಾಡುವುದು / ಟ್ರಾಫಿಕ್ ಸಂಚಾರದ ವಿರುದ್ಧ ಚಾಲನೆ | 1,000 ದಿಂದ 5,000 ದವರೆಗೆ ಅಥವಾ 6 ರಿಂದ 12 ತಿಂಗಳು ಜೈಲು ಅಥವಾ ಎರಡೂ |
ಅನಧಿಕೃತ ವ್ಯಕ್ತಿ ಚಲಾಯಿಸುವುದು | ದ್ವಿಚಕ್ರ ಮತ್ತು ಚತುಷ್ಚಕ್ರಗಳಿಗೆ 1,000. ಲಘು ಮೋಟಾರು ವಾಹನಗಳಿಗೆ 2,000 ಮತ್ತು ಇತರೆ ವಾಹನಗಳಿಗೆ 5,000 |
Related Readings
- In English: How to Pay Traffic Fines Online in Bangalore