ಹಂಪಿಯ ಬಹು ಪುರಾತನ ಹಾಗು ಪ್ರಸಿದ್ಧ ದೇವಾಲಯಗಳಲ್ಲೊಂದು ಬಡವಿಲಿಂಗ ದೇವಸ್ಥಾ. ಇದು ಹಂಪಿಯಲ್ಲಿ ಶಿವನಿಗೆ ಅರ್ಪಿತವಾದ ಒಂದು ಅದ್ಭುತ ಕುಸುರಿ ಕಲೆಯ ದೇವಾಲಯವಾಗಿದೆ. ಈ ದೇವಸ್ಥಾನದಲ್ಲಿ ಹಿಂದೂಗಳ ಆರಾಧ್ಯ ದೈವ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಬೃಹದಾಕಾರದ ಶಿವಲಿಂಗ ಇಲ್ಲಿಯ ಪ್ರಧಾನ ಆಕರ್ಷಣೆ. ಬಡವಿಲಿಂಗ ದೇವಸ್ಥಾನವು ಹಂಪಿಯ ಲಕ್ಷ್ಮಿ ನರಸಿಂಹ ದೇವಾಲಯದ ಬಳಿ ಇದೆ. ವರ್ಷದ ಎಲ್ಲ ದಿನಗಳಲ್ಲೂ ಪ್ರವಾಸಿಗರು ಮತ್ತು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿ ಪುನೀತರಾಗುತ್ತಾರೆ.
ಕೆಲವು ಮಹತ್ವದ ಮಾಹಿತಿಗಳು
- ಭೇಟಿಯ ವೇಳೆ: ಬೆಳಗ್ಗೆ ೫ರಿಂದ ರಾತ್ರಿ ೯ರವರೆಗೆ
- ಪ್ರವೇಶ ಶುಲ್ಕ: ಈ ದೇಗುಲ ಪ್ರವೇಶಕ್ಕೆ ಯಾವುದೇ ಶುಲ್ಕ ಇಲ್ಲ
- ಛಾಯಾಚಿತ್ರ ಗ್ರಹಣ: ಅನುಮತಿಸಲಾಗಿದೆ.
- ಭೇಟಿಗೆ ಅಗತ್ಯವಾದ ಸಮಯ : ಸುಮಾರು ಒಂದೂವರೆ ತಾಸು
- ಭೇಟಿಗೆ ಪ್ರಶಸ್ತ ಅವಧಿ: ನವೆಂಬರ್ ನಿಂದ ಫೆಬ್ರವರಿ
ಹಂಪಿಯ ಬಡವಿಲಿಂಗ ದೇಗುಲದ ಮಹತ್ವ
ಹಂಪಿಯ ಈ ಬಡವಿ ಲಿಂಗ ದೇವಸ್ಥಾನವು ಇಲ್ಲಿನ ಅತಿದೊಡ್ಡ ಏಕಶಿಲೆಯ ಶಿವಲಿಂಗ ಹೊಂದಿರುವ ದೇಗುಲವಾಗಿದೆ. ಈ ಶಿವ ಲಿಂಗದ ಮೇಲೆ ಮೂರು ಕಣ್ಣುಗಳನ್ನು ಕೆತ್ತಲಾಗಿದೆ. ಈ ಮೂರು ಕಣ್ಣುಗಳು ಶಿವನ ಮೂರು ಕಣ್ಣುಗಳನ್ನು ಪ್ರತಿನಿಧಿಸುತ್ತವೆ. ಈ ಸುಂದರವಾದ ಶಿವ ಲಿಂಗವನ್ನು ಕಪ್ಪು ಕಲ್ಲಿನಿಂದ ಕೆತ್ತಲಾಗಿದೆ. ಇದು ಸುಮಾರು 3 ಮೀಟರ್ ಎತ್ತರದ್ದಾಗಿದೆ. ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಈ ದೇವಾಲಯ ಅಸ್ತಿತ್ವದಲ್ಲಿದೆ ಎಂದು ಹೇಳಲಾಗುತ್ತದೆ. ಈ . ಶಿವಲಿಂಗವನ್ನು ಪೂಜಿಸಲು ಭಕ್ತರು ದೇಶದ ಎಲ್ಲ ಕಡೆಗಳಿಂದ ಇಲ್ಲಿಗೆ ಆಗಮಿಸುತ್ತಾರೆ.
ಈ ದೇಗುಲದ ಹಿಂದಿನ ಕಥೆ
ಈ ದೇಗುಲದ ಹೆಸರಿನ ಹಿಂದೆ ಒಂದು ಸುಂದರವಾದ ಕಥೆ ಇದೆ. ಈ ದೇಗುಲದ ಹೆಸರು ಬಡವಿ + ಲಿಂಗ ಎಂಬ ಶಬ್ದಗಳು ಕೂಡಿ ಬಂದಿವೆ. ಸ್ಥಳೀಯ ಭಾಷೆಯಲ್ಲಿ ಬಡವಿ ಎಂದರೆ ಬಡವ ಮತ್ತು ಲಿಂಗ ಶಿವನನ್ನು ಪ್ರತಿನಿಧಿಸುತ್ತದೆ. ದೇವಾಲಯದ ಒಳಗೆ ಇರಿಸಲಾಗಿರುವ ಶಿವಲಿಂಗವನ್ನು ಅಲ್ಲಿ ಇಟ್ಟದ್ದು ಓರ್ವ ಬಡ ರೈತ ಮಹಿಳೆ. ಈ ಕಾರಣಕ್ಕೆ ಈ ದೇಗುಲಕ್ಕೆ ಬಡವಿ ಲಿಂಗ ದೇಗುಲ ಎಂಬ ಹೆಸರು ಬಂದಿತು ಎಂಬ ಐತಿಹ್ಯವಿದೆ.
ಈ ದೇಗುಲದ ಬಗ್ಗೆಗಿನ ಆಸಕ್ತಿದಾಯಕ ಸಂಗತಿಗಳು
ಈ ಬಡವಿ ಲಿಂಗ ದೇವಾಲಯದ ಬೃಹತ್ ಶಿವಲಿಂಗವು ಒಂದು ಸಣ್ಣ ಕಲ್ಲಿನ ಕೋಣೆಯೊಳಗೆ ಇದೆ. ಕೋಣೆಯ ಮುಂದೆ ಒಂದೇ ಬಾಗಿಲು ಇದೆ. ಈ ಬಾಗಿಲಿನ ಮೂಲಕ ಮಾತ್ರ ಭಕ್ತರು ಈ ಶಿವ ಲಿಂಗ ದರ್ಶನಕ್ಕೆ ಪ್ರವೇಶಿಸಬಹುದು. ಈ ಲ್ಲಿನ ಕೋಣೆಯ ವಿನ್ಯಾಸ ಕೂಡ ಕುತೂಹಲಕಾರಿಯಾಗಿದೆ. ಏಕೆಂದರೆ ಈ ಕಟ್ಟಡದಲ್ಲಿ ಚಾವಣಿ ಇಲ್ಲ. ಹಗಲಿನ ವೇಳೆಯಲ್ಲಿ, ಸೂರ್ಯನ ಬೆಳಕು ಚಾವಣಿಯ ಕಿಟಕಿಯ ಮೂಲಕ ಪ್ರವೇಶಿಸುತ್ತದೆ ಮತ್ತು ಶಿವಲಿಂಗಕ್ಕೆ ಬೆಳಕಿನ ಅಭಿಷೇಕ ಮಾಡುತ್ತದೆ.
ಈ ಶಿವಲಿಂಗವು ವೃತ್ತಾಕಾರದ ಆಕಾರದಲ್ಲಿರುವ ದೊಡ್ಡ ಪೀಠದಲ್ಲಿ ನಿಂತಿದೆ. ಈ ವೃತ್ತಾಕಾರದ ಪೀಠವು ಪ್ರಾಣಾಲಾ ಎಂದೂ ಕರೆಯಲ್ಪಡುತ್ತದೆ. ಈ ಶಿವಲಿಂಗದ ಪೀಠವು ನೀರಿನ ಮೇಲೆ ನಿಂತಿದೆ.ಈ ಶಿವ ಲಿಂಗದ ಕೆಳಗೆ ನೀರಿನ ಕಾಲುವೆಯೊಂದು ಹರಿಯುತ್ತಿರುವುದರಿಂದ ಅಲ್ಲಿ ಸದಾ ನೀರಿರುತ್ತದೆ.
ಭಕ್ತರ ಪ್ರಕಾರ, ಭೂಮಿಯ ಮೇಲೆ ಪವಿತ್ರ ಗಂಗಾ ನದಿಯ ಆಗಮನವನ್ನು ಈ ಶಿವ ಲಿಂಗ ಚಿತ್ರಿಸುತ್ತದೆ. ಇಲ್ಲಿ ಸಾಕ್ಷಾತ್ ಗಂಗಾ ನದಿಯೇ ಶಿವಲಿಂಗದ ಬುಡದಲ್ಲಿ ಹರಿಯುತ್ತದೆ. ಅದರ ಹರಿವನ್ನು ಸ್ವಯಂ ಶಿವನು ನಿಯಂತ್ರಿಸುತ್ತಾನೆ
ಹಂಪಿಯ ಬಡವಿಲಿಂಗ ದೇವಸ್ಥಾನದ ಪ್ರಸ್ತುತ ಸ್ಥಿತಿ
ಹಂಪಿಯೆಂದರೆ ನಮ್ಮ ಮನಸ್ಸನು ಆವರಿಸುವುದು ವಿಷಾದದ ಛಾಯೆ. ಏಕೆಂದರೆ ಇಲ್ಲಿನ ಬಹುತೇಕ ವಾಸ್ತು ವೈಭವದ ಸ್ಮಾರಕಗಳು ಆಕ್ರಮಣಕ್ಕೆ ತುತ್ತಾಗಿವೆ. ಈ ದೇವಾಲಯವು ಕೂಡ ಆಕ್ರಮಣಕ್ಕೆ ತುತ್ತಾಗಿದೆ. ಆದರೆ ಶಿವ ಲಿಂಗವು ಇಂದಿಗೂ ಹಾಗೇ ನಿಂತಿದೆ. ಶಿವಲಿಂಗವನ್ನು ಸುತ್ತುವರೆದಿರುವ ದೇವಾಲಯದ ಒಳ ಗೋಡೆಗಳು ಸಹ ಹೆಚ್ಚಿನ ಹಾನಿಗೆ ಒಳಗಾಗಿಲ್ಲ. ಈ ದೇವಾಲಯವು ಸಣ್ಣ ಮತ್ತು ಸರಳವಾದ ರಚನೆ. ಆದರೆ ಇಲ್ಲಿನ ದೊಡ್ಡ ಶಿವಲಿಂಗ ಎಲ್ಲರ ಆಕರ್ಷಣೆ. ಹಾಗಾಗಿ ಈ ಶಿವ ಲಿಂಗದ ದರ್ಶನಕ್ಕೆ ಜನರು ದೊಡ್ಡ ಪ್ರಮಾಣದಲ್ಲಿ ಆಗಮಿಸುತ್ತಾರೆ.
ಈ ದೇವಸ್ಥಾನವನ್ನು ತಲುಪುವುದು ಹೇಗೆ?
ಹಂಪಿ ದೇಶದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಕರ್ನಾಟಕದ ವಿವಿಧ ಭಾಗಗಳಿಂದ ಮತ್ತು ದೇಶದೆಲ್ಲೆಡೆಯಿಂದ ಹಂಪಿಯನ್ನು ತಲುಪಲು ಹಲವಾರು ಮಾರ್ಗಗಳಿವೆ. ಹಂಪಿಯಲ್ಲಿ ಈ ದೇಗುಲ ಬಹಳ ಪ್ರಸಿದ್ಧವಾಗಿದ್ದು ಇದನ್ನು ನಗರದ ಎಲ್ಲ ಕಡೆಗಳಿಂದಲೂ ತಲುಪಬಹುದಾಗಿದೆ.
ವಿಮಾನ ಸಂಪರ್ಕ: ಹಂಪಿಯಲ್ಲಿ ವಿಮಾನ ನಿಲ್ದಾಣವಿಲ್ಲ. ಹಾಗಾಗಿ ಹಂಪಿಯನ್ನು ನೇರವಾಗಿ ವಿಮಾನದ ಮೂಲಕ ತಲುಪಲು ಸಾಧ್ಯವಿಲ್ಲ. ಬಳ್ಳಾರಿ ವಿಮಾನ ನಿಲ್ದಾಣವನ್ನು ಹೊಂದಿರುವ ಹತ್ತಿರದ ಪಟ್ಟಣವಾಗಿದೆ. ಇಲ್ಲಿಂದ ಹಂಪಿಗೆ ಸುಮಾರು 64 ಕಿಲೋ ಮೀಟರ್ ದೂರವಿದೆ.
ಪ್ರವಾಸಿಗರು ವಿಮಾನ ಮೂಲಕ ಬಳ್ಳಾರಿ ತಲುಪಿ, ಅಲ್ಲಿಂದ ರಸ್ತೆ ಮಾರ್ಗ ಮೂಲಕ ಹಂಪಿ
ತಲುಪಬಹುದು.
ರೈಲು ಸಂಪರ್ಕ : ಹಂಪಿಗೆ ನೇರ ರೈಲ್ವೆ ಸಂಪರ್ಕವಿಲ್ಲ. ಇಲ್ಲಿಗೆ ಅತಿ . ಹತ್ತಿರದ ರೈಲ್ವೆ
ನಿಲ್ದಾಣವೆಂದರೆ ಹೊಸಪೇಟೆ. ಹೊಸಪೇಟೆ, ಹಂಪಿಯಿಂದ ೧೩ ಕಿಲೋ ಮೀಟರ್ ದೂರದಲ್ಲಿದೆ.
ಈ ನಗರಕ್ಕೆ ಕರ್ನಾಟಕದ ಪ್ರಮುಖ ನಗರಗಳಿಂದ ನೇರ ರೈಲು ಸಂಪರ್ಕವಿದೆ. ಹೊಸಪೇಟೆಯಿಂದ
ಹಂಪಿಗೆ ಸಾಕಷ್ಟು ವಾಹನ ಸಂಪರ್ಕವಿದೆ.
ರಸ್ತೆ ಮಾರ್ಗ: ಹಂಪಿ ಉತ್ತಮ ರಸ್ತೆ ಸಂಪರ್ಕ ಜಾಲವನ್ನು ಹೊಂದಿದೆ. ಇಲ್ಲಿಂದ ಕರ್ನಾಟಕ, ಆಂಧ್ರ,
ತೆಲಂಗಾಣ, ಮಹಾರಾಷ್ಟ್ರಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಜೊತೆಗೆ, ಮೈಸೂರು,
ಬೆಂಗಳೂರಿನಿಂದ ಸಾಕಷ್ಟು ಕ್ಯಾಬ್‌ಗಳ ಸೇವೆ ಕೂಡಾ ಲಭ್ಯವಿದೆ.
Related Readings
- In English: Badavilinga Temple, Hampi – A Shrine for Shiva