ಕೋವಿಡ್ 19 ಕಾರಣಕ್ಕಾಗಿ ಈ ಬಾರಿ ಮೈಸೂರು ದಸರಾ ತನ್ನ ಮೆರುಗು ಕಳೆದುಕೊಂಡಿದೆ. 1,610ರಲ್ಲಿ ಆರಂಭವಾದ ದಸರಾ ಸಂಭ್ರಮಾಚರಣೆಗೆ ಈ ವರ್ಷ 410 ವರ್ಷಗಳ ಸಂಭ್ರಮ.
ಆದರೆ ಈ ಬಾರಿ, ದಸರಾ ಹಬ್ಬ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿಲ್ಲ. ಏಕೆಂದರೆ, ಈ ಬಾರಿ ದಸರಾದ ಮಹತ್ವದ ಆಚರಣೆಗಳನ್ನು ಆಚರಿಸುತ್ತಿಲ್ಲ. ಈ ಭಾರಿ ಕೇವಲ ನಾಲ್ಕೇ ನಾಲ್ಕು ಉತ್ಸವಗಳನ್ನು ಆಚರಿಸಲಾಗುತ್ತದೆ.

ಎಲ್ಲಾ ಪ್ರವಾಸಿ ತಾಣಗಳೂ ಮುಕ್ತ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆದೇಶದ ಮೇರೆಗೆ ದಸರಾ ಅವಧಿಯಲ್ಲಿ, ಚಾಮುಂಡೇಶ್ವರಿ ದೇಗುಲ, ಶ್ರೀಕಂಠೇಶ್ವರ ಸ್ವಾಮಿ ದೇವಾಲಯ, ನಂಜನಗೂಡು, ಕೃಷ್ಣರಾಜ ಸಾಗರ ಆಣೆಕಟ್ಟು ಸೇರಿದಂತೆ, ಎಲ್ಲಾ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಲು ಅವಕಾಶ ನೀಡಲಾಗುವುದು.
ಅವುಗಳೆಂದರೆ
1. ದಸರಾ ಉದ್ಘಾಟನೆ: ಅಕ್ಟೋಬರ್ 17
ಒಟ್ಟು ಪಾಲ್ಗೊಳ್ಳಬಹುದಾದದ ಜನರ ಸಂಖ್ಯೆ: 200
2. ಅರಮನೆ ಸಾಂಸ್ಕøತಿಕ ಕಾರ್ಯಕ್ರಮ
ಅಕ್ಟೋಬರ್ 17ರಿಂದ 24
ಪ್ರತಿ ದಿನ 2 ಗಂಟೆ
50ಕ್ಕಿಂತ ಹೆಚ್ಚು ಕಲಾವಿದರು ಪಾಲ್ಗೊಳ್ಳುವಂತಿಲ್ಲ.
3. ನಗರ ವಿದ್ಯುತ್ ಅಲಂಕಾರ
10 ದಿನಗಳ ಕಾಲ: ಪ್ರತಿ ದಿನ ಸಂಜೆ 7ರಿಂದ 9.
4. ಜಂಬೂ ಸವಾರಿ
ಅಕ್ಟೋಬರ್ 24 ಅರಮನೆ ಆವರಣ
ಕೇವಲ 300 ಜನಕ್ಕೆ ಅವಕಾಶ.
ಈ ಬಾರಿ ಕೇವಲ ಐದು ಆನೆಗಳು ಮಾತ್ರ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿವೆ. ಅಭಿಮನ್ಯು ಆನೆ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಕಾವೇರಿ, ವಿಜಯಾ, ವಿಕ್ರಮ ಹಾಗೂ ಗೋಪಿ ಅಭಿಮನ್ಯು ಜೊತೆಗೆ ಹೆಜ್ಜೆ ಹಾಕಲಿದ್ದಾರೆ.
ಮೈಸೂರು ದಸರಾ ಎಂದರೆ, ಯುವ ದಸರಾ, ಯೋಗ ದಸರಾ, ರೈತ ದಸರಾ, ಹೆಲಿರೈಡ್ ಹೀಗೆ ನಾನಾ ಆಕರ್ಷಣೆಗಳಿರುತ್ತವೆ. ಆದರೆ ಕೋವಿಡ್19 ಕಾರಣಕ್ಕಾಗಿ ಈ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ಅರಮನೆಯಲ್ಲೂ ಸರಳ ಆಚರಣೆ
ಮೈಸೂರಿಯ ಯದು ವಂಶದ ಅರಮನೆಯಲ್ಲೂ ಈ ಬಾರಿ ದಸರಾ ಆಚರಣೆ ಸರಳವಾಗಿರಲಿದೆ. ಒಡೆಯರ್ ಕುಟುಂಬ ಸದಸ್ಯರ ಹೊರತಾಗಿ ಇತರರಿಗೆ ದಸರಾ ಆಚರಣೆಗೆ ಈ ಬಾರಿ ಪ್ರವೇಶವಿಲ್ಲ. ಪ್ರಸಿದ್ಧ ವಜ್ರಮುಷ್ಠಿ ಕಾಳಗದ ಸೊಬಗೂ ಇರುವುದಿಲ್ಲ.

ಮುಖ್ಯಾಂಶಗಳು
- ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ದಸರಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಎಲ್ಲಾ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ಕಲಾವಿದರಿಗೆ ಕೋವಿಡ್ 19 ಪರೀಕ್ಷೆ ಕಡ್ಡಾಯ.
- ಸಾರ್ವಜನಿಕರಿಗೆ, ಆನ್‍ಲೈನ್ ಮುಖಾಂತರ ದಸರಾ ಹಬ್ಬದ ಆಚರಣೆಗಳ ನೇರ ಪ್ರಸಾರ.
- ಈ ಬಾರಿ, ಮೈಸೂರು ದಸರಾವನ್ನು ಜಯದೇವ ಆಸ್ಪತ್ರೆ ಮುಖ್ಯಸ್ಥರಾದ ಡಾ. ಸಿ.ಎನ್.ಮಂಜುನಾಥ್ ಉದ್ಘಾಟಿಸಲಿದ್ದಾರೆ.
- ಮೈಸೂರಿನ ಪೌರ ಕಾರ್ಮಿಕರಾದ ಮರಗಮ್ಮ, ವೈದ್ಯಕೀಯ ಅಧಿಕಾರಿ ಡಾ. ನವೀನ್ ಕುಮಾರ್, ದಾದಿ ರುಕ್ಮಿಣಿ, ಆಶಾ ಕಾರ್ಯಕರ್ತೆಯಾದ ನೂರ್ ಜಾನ್, ಪೆÇಲೀಸ್ ಕಾನ್ಸ್ ಟೇಬಲ್ ೀ ಕುಮಾರ್ ಪಿ., ಸಾಮಾಜಿಕ ಕಾರ್ಯಕರ್ತರಾದ ಆಯೂಬ್ ಅಹಮದ್ ಅವರನ್ನು ದಸರಾ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.
- ಕೇವಲ 50 ಕಿಲೋ ಮೀಟರ್ ವಿದ್ಯುತ್ ಅಲಂಕಾರ.
Related Articles
- In English: Mysore Dasara Events 2020