X

ಕರ್ನಾಟಕದಲ್ಲಿ ಕೋವಿಡ್ ೧೯ ಲಸಿಕೆ ಹಂಚಲು ತಯಾರಿ ಹೇಗಿದೆ ಗೊತ್ತಾ?

ಕೋವಿಡ್ ೧೯ ನಿಂದ ಬಾಧಿತವಾಗಿರುವ ಕರ್ನಾಟಕದಲ್ಲಿ  ಕೋವಿಡ್ ೧೯  ಲಸಿಕೆ ಹಂಚಿಕೆ  ಸಂಬಂಧ ಸರಕಾರ ನಡೆಸಿರುವ ಸಿದ್ಧತೆಗಳೇನು? ಕೇಂದ್ರ ಸರಕಾರದಿಂದ ಅನುಮೋದನೆಗೊಂಡ  ಲಸಿಕೆಗಳನ್ನು ಆ ಬಳಿಕ  ಕರ್ನಾಟಕದಲ್ಲಿ  ಹಂಚುವಿಕೆ ಸಂಬಂಧ    ಮೇಲ್ವಿಚಾರಣೆಗೆ ಒಂದು

ಹೈ ಪವರ್  ಸಮಿತಿಯನ್ನು  ರಚಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.

ಕೋವಿಡ್ ೧೯ ಲಸಿಕೆ ಕಾರ್ಯಕ್ರಮದ  ಸಿದ್ಧತೆಗಳು:  ಕರ್ನಾಟಕದಲ್ಲಿ ಮೇಲ್ವಿಚಾರಣಾ   ಸಮಿತಿ ರಚನೆ

ರಾಜ್ಯದ ಕೋವಿಡ್ ೧೯ ಲಸಿಕೆ ಮೇಲ್ವಿಚಾರಣೆ ಸಮಿತಿಯ ಅಧ್ಯಕ್ಷರಾಗಿ  ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಅವರು ಕೋವಿಡ್ ೧೯ ವಿರುದ್ಧದ ಹೋರಾಟದ  ನೇತೃತ್ವ ವಹಿಸಿದ್ದಾರೆ.  ರಾಜ್ಯದ ಸುಮಾರು ೬.೫ ಕೋಟಿಗೂ ಅಧಿಕ ಜನಸಂಖ್ಯೆಗೆ ಲಸಿಕೆ ಹಾಕುವ ಮಹತ್ವದ ಜವಾಬ್ದಾರಿಯನ್ನು ಈ ಸಮಿತಿ ಹೊಂದಿದೆ.

ಈ  ಮೇಲ್ವಿಚಾರಣಾ ಸಮಿತಿಯನ್ನು ನವೆಂಬರ್  ೨೪ರ

ಪ್ರಧಾನಿ ನರೇಂದ್ರ ಮೋದಿಯವರ ಜೊತೆಗಿನ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗಿನ  ವಿಡಿಯೋ ಸಂವಾದದ ನಂತರ ರಚಿಸಲಾಯಿತು.  ಈ ಸಂವಾದ ಕಾರ್ಯಕ್ರಮದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡ ಪಾಲ್ಗೊಂಡಿದ್ದರು.

ಈ ಸಂವಾದ ಬಳಿಕ ತೆಗೆದುಕೊಂಡ ಮಹತ್ವದ ನಿರ್ಧಾರಗಳು

  • ರಾಜ್ಯದಲ್ಲಿ ಕೋವಿಡ್ ೧೯  ಲಸಿಕೆ ಹಾಕಿಸಲು,  ಮೇಲ್ವಿಚಾರಣಾ ಸಮಿತಿ ರಚನೆ.
  • ಸಮಿತಿಯ ಮುಖ್ಯಸ್ಥರಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ.
  • ಕರ್ನಾಟಕದ ಎಲ್ಲಾ ಜನರಿಗೆ  ಲಸಿಕೆ  ನೀಡುವ ಜವಾಬ್ದಾರಿ
  • ಕರ್ನಾಟಕದ ಒಟ್ಟು ಜನಸಂಖ್ಯೆ ಸುಮಾರು 6.5 ಕೋಟಿ.

ಕರ್ನಾಟಕದಲ್ಲಿ  ಕೋವಿಡ್ ೧೯  ಲಸಿಕೆ ಸಿದ್ಧತೆಗಳು:  ಸುಗಮವಾಗಿ ಈ ಲಸಿಕಾ ಕಾರ್ಯಕ್ರಮ ಕೈಗೊಳ್ಳಲು  ರಾಜ್ಯ ಸರಕಾರದ ಉಪಕ್ರಮಗಳು

ಕರ್ನಾಟಕದ ಆರೋಗ್ಯ  ಹಾಗು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರು, ಈ ಕೋವಿಡ್ ೧೯ ಲಸಿಕಾ ಹಂಚಿಕೆ ಹಾಗು ಲಸಿಕಾ ಕಾರ್ಯಕ್ರಮದ ಬಗ್ಗೆ, ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಸರಕಾರದ ಮುಂದಿನ ಉಪಕ್ರಮಗಳ ಬಗ್ಗೆ  ತಿಳಿಸಿದ್ದಾರೆ.

  •  ರಾಜ್ಯಾದ್ಯಂತ  ಲಸಿಕೆ ನೀಡಲು,  ೨೯,೪೫೧  ಕೇಂದ್ರಗಳನ್ನು ಗುರುತಿಸಲಾಗಿದೆ. 
  •  ರಾಜ್ಯದಲ್ಲಿ, ಈ ಲಸಿಕೆ ನೀಡಬಲ್ಲ  ೧೦,೦೦೦  ಹೆಚ್ಚು ಅನುಭವಿ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಯನ್ನು ಸರಕಾರ    ಗುರುತಿಸಿದೆ
  • ಈಗ ಜಾರಿಯಲ್ಲಿರುವ ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ, ಈ ಲಸಿಕೆ ಕಾರ್ಯಕ್ರಮ ಕೂಡ ನಡೆಯಲಿದೆ.

ರಾಜ್ಯದ ಗೃಹ ಸಚಿವರಾದ ಬಸವರಾಜ್ ಬೊಮ್ಮಾಯಿ ಒಮ್ಮೆ ಭಾರತದಲ್ಲಿ  ಕೋವಿಡ್ ೧೯ ಲಸಿಕೆ ಲಭ್ಯವಾಗುತ್ತಿದ್ದಂತೆ,  ಅವುಗಳ  ಸಂಗ್ರಹಣೆ, ಹಂಚಿಕೆ  ಮತ್ತು ವಿತರಣೆಗೆ ಸರಕಾರ ಸಜ್ಜಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ  ಸಂಭಾವ್ಯ ಲಸಿಕಾ ಕೇಂದ್ರಗಳು

ಅಕ್ಟೋಬರ್ 2020 ರಲ್ಲೆ  ಕರ್ನಾಟಕ ಸರ್ಕಾರದ  ಅರೋಗ್ಯ ಇಲಾಖೆ, ಲಸಿಕಾ ಕೇಂದ್ರಗಳನ್ನು ಗುರುತಿಸಲು ಪ್ರಾರಂಭಿಸಿತು. ಈ ಸಂಬಂಧ ರಾಜ್ಯ ಸರಕಾರ, ಆರೋಗ್ಯ ಇಲಾಖೆಗೆ ಸರ್ಕಾರ ನಿರ್ದೇಶನ ನೀಡಿತು. ಈ ಕೇಂದ್ರಗಳನ್ನು ಮ್ಯಾಪ್ ಮಾಡಲಾಗಿದ್ದು, ಇಲ್ಲೆಲ್ಲಾ, ಕೋವಿಡ್ ೧೯ ಲಸಿಕೆ ಲಭ್ಯವಾಗಲಿದೆ. ಆದರೆ ಯಾವ ತೆರನಾಗಿ, ಲಸಿಕೆಗಳನ್ನು, ನೀಡಲಾಗುವುದು ಎಂಬುದನ್ನು ಇನ್ನು ತಿಳಿಸಲಾಗಿಲ್ಲ.

  • ಅಂಗನವಾಡಿ
  • ಸಮುದಾಯ ಅರೋಗ್ಯ ಕೇಂದ್ರಗಳು
  • ಪ್ರಾಥಮಿಕ ಅರೋಗ್ಯ ಕೇಂದ್ರಗಳು

ಇಲ್ಲೆಲ್ಲಾ    ಕೋವಿಡ್ ೧೯   ಸಾಮೂಹಿಕ ಲಸಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಸರಕಾರದ ಯೋಜನೆ ಪ್ರಕಾರ, ಈ ಪ್ರತಿಯೊಂದು ಲಸಿಕಾ  ಕೇಂದ್ರಗಳನ್ನು,  ಒಂದು ನಿರ್ದಿಷ್ಟ   ಪ್ರದೇಶದ ಸುತ್ತಮುತ್ತಲಿನ  ಹಳ್ಳಿಗಳು / ಪಟ್ಟಣಗಳಿಗೆ ಲಸಿಕೆ ನೀಡುವ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತದೆ.  ಕೋವಿಡ್ ೧೯  ಲಸಿಕೆ ರಾಜ್ಯದ ಪ್ರತಿ ನಾಗರಿಕರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಸಂಚಾರಿ  ಲಸಿಕಾ ಘಟಕಗಳನ್ನು ಕೂಡ ಆರಂಭಿಸಲಾಗುವುದು.

ಕೋವಿಡ್ ೧೯  ಪ್ರಕರಣಗಳು ನಮ್ಮ  ರಾಜ್ಯದಲ್ಲಿ ಹೆಚ್ಚುತ್ತಿವೆ.  ಕೇಂದ್ರ ಸರಕಾರ  ಅನುಮೋದನೆ ನೀಡಿದ ಕೂಡಲೇ ಕೋವಿಡ್ ನಿರೋಧಕ  ಲಸಿಕೆಗಳು  ಎಲ್ಲರಿಗೂ ತ್ವರಿತವಾಗಿ ತಲುಪುವುದನ್ನು  ಖಚಿತಪಡಿಸಿಕೊಳ್ಳಲು ನಮ್ಮ  ಸರ್ಕಾರವು ಸಾಕಷ್ಟು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Jolad Rotti:
Related Post