ಕರ್ನಾಟಕದಲ್ಲಿ ಮರಣ ನೋಂದಾಣಿ ಪತ್ರಕ್ಕೆ ಅರ್ಜಿ ಸಲ್ಲಿಕೆ ಹೇಗೆ? ಕರ್ನಾಟಕದಲ್ಲಿ ಮರಣವನ್ನು ಏಕೆ ನೋಂದಾಯಿಸಿಕೊಳ್ಳಬೇಕು? ಕರ್ನಾಟಕದಲ್ಲಿ ಮರಣ ನೋಂದಾವಣೆ ಹೇಗೆ ಹಾಗೂ ನೋಂದಣಿ ಪ್ರಮಾಣ ಪತ್ರ ಪಡೆಯುವುದು ಹೇಗೆ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಕರ್ನಾಟಕ ಜನನ ಹಾಗೂ ಮರಣ ನೋಂದಣೆ ಕಾಯ್ದೆ 1969ರ ಪ್ರಕಾರ, ಕರ್ನಾಟಕದಲ್ಲಿ ಸಂಭವಿಸುವ ಎಲ್ಲಾ ಮರಣಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು. ಕರ್ನಾಟಕದಲ್ಲಿ ಈಗ ಮರಣಪಟ್ಟ ವ್ಯಕ್ತಿಗಳ ಡಿಜಿಟಲ್ ದತ್ತಾಂಶ ದೊರೆಯುತ್ತದೆ. ಇದಕ್ಕಾಗಿ ನಾವು ಡಿಜಿಟಲ್ ತಂತ್ರಜ್ಞಾನಕ್ಕೆ ವಂದನೆ ಹೇಳಲೇಬೇಕು. ಕರ್ನಾಟಕದಲ್ಲಿ ಈಗ ಶತಮಾನಗಳಷ್ಟು […]
ಕರ್ನಾಟಕ ಸರ್ಕಾರ
ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಕರ್ನಾಟಕ ಸರ್ಕಾರ, ರಾಜ್ಯದ 30 ಜಿಲ್ಲೆಗಳ ಆಡಳಿತವನ್ನು ನಡೆಸುತ್ತಿದೆ. ಮುಖ್ಯಮಂತ್ರಿ ಮತ್ತು ಅವರ / ಅವಳ ಸಚಿವ ಸಂಪುಟವನ್ನು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ, ರಾಜ್ಯಪಾಲರು ನೇಮಿಸುತ್ತಾರೆ. ಕರ್ನಾಟಕದ ಶಾಸಕಾಂಗ ದ್ವಿ ಸದನ ಮಾದರಿ ಹೊಂದಿದೆ . ಅವುಗಳೆಂದರೆ ವಿಧಾನಸಭೆ ಮತ್ತು ವಿಧಾನ ಪರಿಷತ್ತು.
ಕರ್ನಾಟಕ ಶಾಸಕಾಂಗವು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ವಿಧಾನ ಸೌಧದಿಂದ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಈಗ ಮೂರು ಪ್ರಮುಖ ರಾಜಕೀಯ ಪಕ್ಷಗಳಿವೆ. ಅವುಗಳೆಂದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಭಾರತೀಯ ಜನತಾ ಪಕ್ಷ ಮತ್ತು ಜಾತ್ಯತೀತ ಜನತಾದಳ.
ಪ್ರಸ್ತುತ, ಭಾರತೀಯ ಜನತಾ ಪಕ್ಷ ಕರ್ನಾಟಕದ ಆಡಳಿತ ಪಕ್ಷವಾಗಿದ್ದು, ಬಿ ಎಸ್ ಯಡಿಯೂರಪ್ಪ ಅವರು ರಾಜ್ಯದ ಚುನಾಯಿತ ಮುಖ್ಯಮಂತ್ರಿಯಾಗಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಅನ್ನ ಭಾಗ್ಯ, ಕ್ಷೀರ ಭಾಗ್ಯ, ಋಣಮುಕ್ತ ಭಾಗ್ಯ ಮತ್ತು ವಿದ್ಯಾ ಸಿರಿ ಮುಂತಾದ ಅನೇಕ ಜನ ಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿದೆ. ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆಯನ್ನು ಪ್ರಕಟಿಸಿದ್ದು, ಇದರ ಅಡಿಯಲ್ಲಿ 2017-18ನೇ ಸಾಲಿನಲ್ಲಿ ಸರ್ಕಾರಿ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ದಾಖಲಾಗುವ ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್ ಪಡೆಯುತ್ತಾರೆ.
ಕರ್ನಾಟಕ ಸರಕಾರದ ಬಗ್ಗೆ ಹೆಚ್ಚಿನ ಮಾಹಿತಿ - ಓದು ಇಲ್ಲಿದೆ
