X

ಕಲ್ಲಿನಲ್ಲಿ ಮೂಡಿದೆ ಹಜಾರ ರಾಮ ದೇಗುಲದ ಕಥೆ

    Categories: Hampi

ಹಂಪಿಯ  ಇನ್ನೊಂದು ಪ್ರಮುಖ ದೇಗುಲವೆಂದರೆ ಅದು ಹಜಾರ ರಾಮ ದೇವಸ್ಥಾನ. ಸಣ್ಣ ದೇಗುಲವಾದರೂ ಇದು  ಅತ್ಯಂತ ನಯನ ಮನೋಹರವಾದ   ಸುಂದರ ದೇಗುಲ. ಇದು ಹಂಪಿಯ ಮುಕುಟ ಮಣಿಯಂತಹ ರಾಜ ಆಡಳಿತ ಅರಮನೆ ಪ್ರದೇಶದ ಮಧ್ಯದಲ್ಲಿದೆ.  ಈ ದೇವಾಲಯವು ಹಿಂದೂ ದೇವತೆಯಾದ ಶ್ರೀ  ರಾಮನಿಗೆ  ಸಮರ್ಪಿತಗೊಂಡ ದೇಗುಲ.

ಇಲ್ಲಿ ಶ್ರೀ ರಾಮನೇ ಆರಾಧ್ಯ ದೈವ.  ವಿಜಯ ನಗರ ಅರಸರ ಆಳ್ವಿಕೆ ಕಾಲದಲ್ಲಿ  ಇದು ರಾಜ ಮನೆತನದ   ಖಾಸಗಿ ದೇವಾಲಯವಾಗಿತ್ತು. ಈ ದೇಗುಲ  ವಿಜಯನಗರ ರಾಜಮನೆತನದ ಪಟ್ಟದ ದೇವರ ದೇವಸ್ಥಾನ. ಶ್ರೀ  ರಾಮಾಯಣ ಮಹಾಕಾವ್ಯದ ಕಥೆಯನ್ನು  ಇಲ್ಲಿ ಚಿತ್ರಗಳಲ್ಲಿ ಹೇಳಲಾಗಿದೆ. ಇಲ್ಲಿರುವ ಕೆತ್ತನೆಗಳು, ಲೋಹದ ಫಲಕಗಳು ಜಗತ್ಪ್ರಸಿದ್ದ.

ಹಜಾರ ರಾಮ ದೇವಾಲಯದ ಅವಶೇಷಗಳ ಹಿಂದಿನ ಭಾಗದ ಚಿತ್ರ

ನೀವು ತಿಳಿದುಕೊಂಡಿರಬೇಕು ಮಾಹಿತಿಗಳು

  • ಭೇಟಿ ಸಮಯ: ವಾರದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಈ ದೇಗುಲ ತೆರೆದಿರುತ್ತದೆ
  • ಪ್ರವೇಶ ಶುಲ್ಕ: ಉಚಿತ ಪ್ರವೇಶ 
  • ಛಾಯಾಗ್ರಹಣ:  ಅನುಮತಿಸಲಾಗಿದೆ
  • ನಿರ್ಬಂಧ: ಧೂಮಪಾನ ಅಥವಾ ಗೋಡೆಗಳ ಅಂದ  ಕೆಡಿಸುವುದನ್ನು ನಿರ್ಬಂಧಿಸಲಾಗಿದೆ. 
  • ದೇಗುಲ ವೀಕ್ಷಣೆಗೆ ಅಗತ್ಯ ಸಮಯ:  ಸುಮಾರು ೨ ಗಂಟೆ ಭೇಟಿ ನೀಡಲು ಉತ್ತಮ ಸಮಯ: ವರ್ಷದ  ನವೆಂಬರ್‌ನಿಂದ ಫೆಬ್ರವರಿ ತಿಂಗಳವರೆಗೆ.

ದೇಗುಲದ ಇತಿಹಾಸ 

ಹಂಪಿಯ ಕಲ್ಲು ಕಲ್ಲುಗಳಿಗೂ ಒಂದು ಭವ್ಯ ಇತಿಹಾಸವಿದೆ. ಅದೇ ರೀತಿ ಈ ದೇಗುಲಕ್ಕೂ. ಈ 

ಹಜಾರ ರಾಮ ದೇವಾಲಯವನ್ನು ಸುಮಾರು  15 ನೇ ಶತಮಾನದ ಆರಂಭದಲ್ಲಿ ಅಂದಿನ ವಿಜಯನಗರದ   ರಾಜರಾಗಿದ್ದ  ಮುಮ್ಮಡಿ ದೇವರಾಯ (ದೇವರಾಯ ೨ )  ನಿರ್ಮಿಸಿದರು.  ಆರಂಭದಲ್ಲಿ  ಇದು  ಮೂಲತಃ  ಒಂದು ಸರಳ ರಚನೆ. ಇದು ಗರ್ಭಗುಡಿ, ಕಂಬದ  ಚಾವಡಿ   ಮತ್ತು ಅರ್ಧ ಮಂಟಪವನ್ನು ಮಾತ್ರ ಹೊಂದಿತ್ತು. ಆ ಬಳಿಕ   ತೆರೆದ ಮುಖಮಂಟಪ ಮತ್ತು ಸುಂದರವಾದ ಕಂಬಗಳನ್ನು ನಿರ್ಮಿಸಿ, ದೇಗುಲಕ್ಕೆ ಹೊಸ ರೂಪ ನೀಡಲಾಯಿತು. ಇವೆಲ್ಲವು ಈಗ ಪ್ರವಾಸಿಗರ ಪಾಲಿಗೆ ಪ್ರಮುಖ ಆಕರ್ಷಣೆ. 

ಹಜಾರ ರಾಮ ದೇವಾಲಯದ ಅನನ್ಯತೆ

ಹಂಪಿಯ ಎಲ್ಲ ಸ್ಮಾರಕಗಳಂತೆ ಈ ದೇಗುಲಕ್ಕೂ ಅದರದೇ ಆದ ಹಲವು ಅನನ್ಯತೆಗಳಿವೆ. ಅದರಲ್ಲಿ ಮುಖ್ಯವಾದುವು ಎಂದರೆ,  ದೇಗುಲದ ಹೆಸರಾದ  ‘ಹಜಾರ ರಾಮ’ ಎಂಬ ಪದದ ಅರ್ಥ ಅಕ್ಷರಶಃ ಸಾವಿರ ರಾಮ.  ಇದರ ಜೊತೆಗೆ, ಇಲ್ಲಿನ ಒಟ್ಟು ಕಲಾಕೃತಿಗಳ ಸಂಖ್ಯೆ. ಈ ದೇಗುಲದ ಒಟ್ಟು ಅಧಿದೇವತೆಗಳ ಸಂಖ್ಯೆ ಸಾವಿರ ಎಂದು 

ಇನ್ನು, ಈ ದೇವಾಲಯದ ಗೋಡೆಗಳು ಶ್ರೀ   ರಾಮಾಯಣದ ಕಥೆಯನ್ನು ಹೇಳುತ್ತವೆ… ಆಶ್ಚರ್ಯವಾಯಿತೇ? ಇಲ್ಲಿನ   ಕಲ್ಲಿನ ಗೋಡೆ ಮೇಲೆ  ರಾಮಾಯಣದ ಕತೆಯನ್ನು ಸುಂದರವಾಗಿ  ಕೆತ್ತಲಾಗಿದೆ. ಈ   ದೇವಾಲಯದ ಹೊರ ಗೋಡೆಗಳನ್ನು ರಾಮ ಮತ್ತು ಕೃಷ್ಣನ  ಉಬ್ಬು ಶಿಲ್ಪಗಳಿಂದ ಅಲಂಕರಿಸಲಾಗಿದೆ. 

ಇವಿಷ್ಟೇ ಅಲ್ಲ, ವಿಜಯನಗರ ಕಾಲದ ಜೀವನ ಶೈಲಿಯ ಉಬ್ಬು ಶಿಲ್ಪನೆ ಕಥೆಗಳನ್ನು ಈ ದೇಗುಲ ಹೇಳುತ್ತದೆ. ಆ  ಸಮಯದಲ್ಲಿ ನಡೆಯುತ್ತಿದ್ದ  ದಾಸರ ಉತ್ಸವದಲ್ಲಿ  ಭಾಗವಹಿಸುತ್ತಿದ್ದ  ಕುದುರೆಗಳು, ಆನೆಗಳು, ಪರಿಚಾರಕರು, ಸೈನಿಕರು ಮತ್ತು  ಮಹಿಳೆಯರ  ನೃತ್ಯಗಳನ್ನು  ಇಲ್ಲಿ ಕಲ್ಲಿನಲ್ಲಿ ಕೆತ್ತಲಾಗಿದೆ.  ಭಾರತದ ಯಾವುದೇ ಭಾಗದಲ್ಲಿ ಕಂಡು ಬರುವ ಕೆತ್ತನೆಗಳಿಗಿಂತ ಇವು ಹೆಚ್ಚು ವಿಸ್ತಾರವಾಗಿವೆ. 

ಹಜಾರ ರಾಮ ದೇಗುಲದ ಹೊರ ಪೌಳಿಯ ಕೆತ್ತನೆಯ ಚಿತ್ರ

ಹಜಾರ ರಾಮ ದೇವಾಲಯದ ಸುಂದರ ಕೆತ್ತನೆ

ಈ ದೇಗುಲದ ಕೆತ್ತನೆ ಹಾಗು ವಾಸ್ತು ಕೂಡ ವಿಶಿಷ್ಟವಾಗಿದೆ. ಈ  ದೇವಾಲಯದ   ಉತ್ತರ ಭಾಗದಲ್ಲಿ ವಿಸ್ತಾರವಾದ ಹುಲ್ಲುಹಾಸನ್ನು ಹೊಂದಿದೆ. ಈ  ದೇವಾಲಯಕ್ಕೆ  ಎರಡು ಬೃಹತ್ ಗೇಟ್‌ವೇಗಳ ಮೂಲಕ ಪ್ರವೇಶಿಸ ಬಹುದು.  

ಈ ದೇವಾಲಯದ ಒಳಭಾಗದಲ್ಲಿ ಅಲಂಕಾರಿಕವಾಗಿ ಕೆತ್ತಿದ  ಕಂಬಗಳಿವೆ. ಈ ದೇಗುಲದಲ್ಲಿ ಇರುವ   ಮೂರು   ಶೂನ್ಯತೆಗಳನ್ನು ಹೊಂದಿರುವ ಖಾಲಿ ಪೀಠವು ಹಿಂದೆ ಈ  ದೇವಾಲಯದಲ್ಲಿ  ಶ್ರೀ  ರಾಮ, ಶ್ರೀ  ಲಕ್ಷ್ಮಣ ಮತ್ತು ಸೀತಾ ಮಾತೆಯ ವಿಗ್ರಹಗಳನ್ನು ಪೂಜಿಸಲಾಗುತ್ತಿದ್ದನ್ನು ನೆನಪಿಸುತ್ತವೆ. ಈ  ಸುಂದರ   ದೇವಾಲಯದ ಸಂಕೀರ್ಣದ ಒಳಗೆ ಒಂದು ಸಣ್ಣ ದೇವಾಲಯವಿದೆ, ಅದೇ ರೀತಿಯ ಮಹಾಕಾವ್ಯದ ಗೋಡೆ ಕೆತ್ತನೆಗಳಿವೆ.

ಈ ಸಣ್ಣ ದೇಗುಲದ ವಿಶೇಷತೆ ಎಂದರೆ,  ವಿಷ್ಣುವಿನ ಚಿತ್ರಣಗಳು.  ಈ ದೇವಾಲಯವು ವಿಜಯನಗರ ಕಾಲದ  ಶಿಲ್ಪಿಗಳ  ಕರಕುಶಲತೆಯ ಪ್ರೌಢಿಮೆಗೆ ಒಂದು ಜೀವಂತ ಉದಾಹರಣೆ 

ಈ ದೇಗುಲ ತಲುಪುವುದು ಹೇಗೆ? 

ಈ ಹಜಾರ ರಾಮ ದೇವಾಲಯವು ಹಂಪಿಯ ರಾಯಲ್ ಎನ್‌ಕ್ಲೋಸರ್‌ನಲ್ಲಿದೆ. ಹಾಗಾಗಿ  ಪ್ರವಾಸಿಗರು, ಯಾವುದೇ  ರಸ್ತೆಯಲ್ಲಿ ಸಾಗಿದರೂ ಈ ದೇವಾಲಯ ಸಿಗುತ್ತದೆ. ಇದನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ 

ಹಂಪಿ ತಲುಪುವುದು ಹೇಗೆ?

ವಿಮಾನ ಸಂಪರ್ಕ: ಹಂಪಿಯಲ್ಲಿ ವಿಮಾನ ನಿಲ್ದಾಣವಿಲ್ಲ. ಹಾಗಾಗಿ  ಹಂಪಿಯನ್ನು ನೇರವಾಗಿ ವಿಮಾನದ ಮೂಲಕ ತಲುಪಲು ಸಾಧ್ಯವಿಲ್ಲ.  ಬಳ್ಳಾರಿ  ವಿಮಾನ ನಿಲ್ದಾಣವನ್ನು ಹೊಂದಿರುವ ಹತ್ತಿರದ ಪಟ್ಟಣವಾಗಿದೆ.  ಇಲ್ಲಿಂದ ಹಂಪಿಗೆ ಸುಮಾರು 64 ಕಿಲೋ ಮೀಟರ್‌ ದೂರವಿದೆ. ಪ್ರವಾಸಿಗರು ವಿಮಾನ ಮೂಲಕ ಬಳ್ಳಾರಿ ತಲುಪಿ, ಅಲ್ಲಿಂದ ರಸ್ತೆ ಮಾರ್ಗ ಮೂಲಕ ಹಂಪಿ ತಲುಪಬಹುದು.

ರೈಲು ಸಂಪರ್ಕ: ಹಂಪಿಗೆ ನೇರ   ರೈಲ್ವೆ  ಸಂಪರ್ಕವಿಲ್ಲ. ಇಲ್ಲಿಗೆ ಅತಿ .  ಹತ್ತಿರದ ರೈಲ್ವೆ  ನಿಲ್ದಾಣವೆಂದರೆ  ಹೊಸಪೇಟೆ.  ಹೊಸಪೇಟೆ, ಹಂಪಿಯಿಂದ ೧೩ ಕಿಲೋ ಮೀಟರ್‌ ದೂರದಲ್ಲಿದೆ. ಈ ನಗರಕ್ಕೆ ಕರ್ನಾಟಕದ ಪ್ರಮುಖ ನಗರಗಳಿಂದ ನೇರ ರೈಲು ಸಂಪರ್ಕವಿದೆ.  ಹೊಸಪೇಟೆಯಿಂದ ಹಂಪಿಗೆ ಸಾಕಷ್ಟು ವಾಹನ ಸಂಪರ್ಕವಿದೆ.

ರಸ್ತೆ ಮಾರ್ಗ: ಹಂಪಿ ಉತ್ತಮ ರಸ್ತೆ ಸಂಪರ್ಕ ಜಾಲವನ್ನು ಹೊಂದಿದೆ.   ಇಲ್ಲಿಂದ ಕರ್ನಾಟಕ, ಆಂಧ್ರ,

ತೆಲಂಗಾಣ, ಮಹಾರಾಷ್ಟ್ರಕ್ಕೆ ಸಾಕಷ್ಟು ಬಸ್ಸುಗಳು ದೊರೆಯುತ್ತವೆ. ಜೊತೆಗೆ, ಮೈಸೂರು,

ಬೆಂಗಳೂರಿನಿಂದ ಸಾಕಷ್ಟು ಕ್ಯಾಬ್‌ಗಳ ಸೇವೆ ಕೂಡಾ ಲಭ್ಯವಿದೆ. 

Jolad Rotti:
Related Post