ಕೇಳಿಸದೆ ಕಲ್ಲು ಕಲ್ಲಿನಲಿ….ಈ ಗೀತೆಯನ್ನು ಕೇಳಿದಾಗಲೆಲ್ಲಾ ಕನ್ನಡಿಗರ ಮೈ ರೋಮಾಂಚನಗೊಳ್ಳುತ್ತದೆ. ಹಂಪಿಯ ಕಲ್ಲಿನ ಕಲಾಕೆತ್ತನೆಗಳು ಕಲಾ ಕುಸುರಿಗಳು ನಮ್ಮ ಕಣ್ಮುಂದೆ ಸುಳಿಯುತ್ತವೆ. ನಮ್ಮಲ್ಲಿನ ಪ್ರವಾಸಿ ತಾಣಗಳ ವೈಶಿಷ್ಟ್ಯತೆ ಎಂದರೆ, ಪ್ರತಿಯೊಂದು ಪ್ರವಾಸಿ ತಾಣವೂ, ಒಂದೊಂದು ವಿಶಿಷ್ಟ ಆಕರ್ಷಣೆಯನ್ನು ಹೊಂದಿರುತ್ತದೆ. ಅದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುತ್ತದೆ. ಅದು ಆ ಸ್ಥಳದ ಪ್ರಮುಖ ಆಕರ್ಷಣೆಯಾಗಿರುತ್ತದೆ. ಈ ಮಾತಿಗೆ ಹಂಪಿ ಕೂಡಾ ಹೊರತಲ್ಲ. ಒಂದು ಪುಟ್ಟ ಹಳ್ಳಿಯಾದ ಹಂಪಿ ಇಂದು ವಿಶ್ವದೆಲ್ಲೆಡೆ ಪ್ರಸಿದ್ಧ. ಈ ಪ್ರಖ್ಯಾತಿಗೆ ಪ್ರಮುಖ ಕಾರಣ, ಇಲ್ಲಿನ ಕಲ್ಲಿನ […]
ಶಿಲ್ಪಕಲೆಯ ಮಹಾ ಅನುಭೂತಿ: ಹಂಪಿ ವಿಜಯ ವಿಠಲ ದೇವಸ್ಥಾನ
ಹಂಪಿ ಎಂದರೆ ನಮ್ಮ ಕಣ್ಮುಂದೆ ಸುಳಿಯುವುದು ಪುರಾತನ ದೇಗುಲಗಳ ಮಹಾಗುಚ್ಛ. ಪ್ರಾಚೀನಭಾರತೀಯ ಶಿಲ್ಪಕಲೆಯ ಸೊಬಗು-ಸೊಗಸು ಇಲ್ಲಿ ಮೇಳೈಸಿದೆ. ಈ ಎಲ್ಲಾ ದೇಗುಲಗಳಿಗೆಕಲಶವಿಟ್ಟಂತೆ ಇರುವುದು ಸದಾ ಜುಳುಜುಳುಯೆಂದು ಹರಿಯುವ ತುಂಗಭದ್ರ ನದಿ ತಟದದಲ್ಲಿರುವವಿಟಲಾ ಅಥವಾ ವಿಠ್ಠಲ ದೇವಾಲಯ. ಇದೊಂದು ಅತ್ಯಂತ ಪುರಾತನ ದೇಗುಲವಾಗಿದ್ದು, ಇದುಅನನ್ಯ, ಅಸಾಧಾರಣ, ವಿಶಿಷ್ಟ ಬಗೆಯ ವಾಸ್ತುಶಿಲ್ಪ ಮತ್ತು ಸರಿಸಾಟಿಯಿಲ್ಲದಕರಕುಶಲತೆಯ ಶಿಲ್ಪಕಲಾ ವೈಭವಕ್ಕೆ ಜಗತ್ಪ್ರಸಿದ್ಧವಾಗಿದೆ. ಇದು ಹಂಪಿಯ ಅತಿ ದೊಡ್ಡಮತ್ತು ಅತ್ಯಂತ ಜನಪ್ರಿಯ ದೇವಾಲಯ. ಇದು ಹಂಪಿಯ ಈಶಾನ್ಯ ಭಾಗದಲ್ಲಿದೆ. ಈ ದೇಗುಲದ ಶಿಲ್ಪಕಲೆ, ಸೌಂದರ್ಯವನ್ನು […]