ನಿಮ್ಮ ಹಂಪಿ ಪ್ರವಾಸ ಲೋಟಸ್ ಮಹಲ್ (ಕಮಲ ಮಹಲ್) ಗೆ ಭೇಟಿ ನೀಡದೆ ಪೂರ್ಣವಾಗುವುದಿಲ್ಲ. ಹಂಪಿಯ ಪ್ರಮುಖ ವಾಸ್ತುಶಿಲ್ಪ ವಿನ್ಯಾಸ -ಅದ್ಭುತಗಳಲ್ಲಿ ಇದು ಒಂದು. ಇದರ ವಿನ್ಯಾಸ ಕಮಲದ ರೀತಿಯಲ್ಲಿದೆ. ಹೀಗಾಗಿ ಇದು ಲೋಟಸ್ ಮಹಲ್ ಎಂದೇ ಪ್ರಸಿದ್ಧ. ಈ ಅದ್ಭುತ ಅರಮನೆ ಹಂಪಿಯ ಜೆನಾನಾ ಭಾಗದಲ್ಲಿದೆ. ಇದು ವಿಜಯನಗರ ಅರಸರ ರಾಣಿಯರ ಹಾಗು ಇತರ ಮಹಿಳಾ ಸದಸ್ಯರ ಬಳಕೆಗೆ ನಿರ್ಮಾಣಗೊಂಡ ಅನನ್ಯ ಅರಮನೆ. ಲೋಟಸ್ ಮಹಲ್ ಗೆ ಇನ್ನೂ ಎರಡು ಹೆಸರುಗಳಿವೆ. ಈ ಅರಮನೆಯನ್ನು ಕಮಲ್ […]
ಹಂಪಿ: ವಿರೂಪಾಕ್ಷ ದೇಗುಲವೆಂಬ ವಿಸ್ಮಯ
ಹಂಪಿಯ ಹೆಮ್ಮೆಗಳಲ್ಲೊಂದು ಇಲ್ಲಿನ ಶ್ರೀ ವಿರೂಪಾಕ್ಷ ದೇವಾಲಯ. ಇದು ಮೂಲತಃ ಶಿವನಿಗೆ ಅರ್ಪಿತವಾಗಿದೆ. ಬೆಂಗಳೂರಿನಿಂದ ಸುಮಾರು ೩೫೦ ಕಿಲೋಮೀಟರ್ ದೂರದಲ್ಲಿರುವ ಹಂಪಿ ದಕ್ಷಿಣ ಭಾರತದ ಅತಿ ವಿಶಿಷ್ಟ ಹಾಗು ಜನಪ್ರಿಯ ದೇವಾಲಯಗಳ ನಗರ. ಇದು ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದೆಂಬ ಖ್ಯಾತಿ ಗಳಿಸಿದೆ. ಶ್ರೀ ವಿರೂಪಾಕ್ಷ ದೇವಾಲಯವು ಮೂಲತಃ ಒಂದು ಶಿವ ಪರಂಪರೆಯ ದೇಗುಲವಾಗಿದ್ದು, ಹಂಪಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆ ಎಂದರೆ ತಪ್ಪಾಗಲಾರದು. ಇದನ್ನು ಕಟ್ಟಿಸಿದ್ದು ರಾಜ ದೇವ ರಾಯ ೨ […]