X

ಕರ್ನಾಟಕದಲ್ಲಿ ಮರಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕದಲ್ಲಿ ಮರಣ ನೋಂದಾಣಿ ಪತ್ರಕ್ಕೆ ಅರ್ಜಿ ಸಲ್ಲಿಕೆ ಹೇಗೆ? ಕರ್ನಾಟಕದಲ್ಲಿ ಮರಣವನ್ನು ಏಕೆ ನೋಂದಾಯಿಸಿಕೊಳ್ಳಬೇಕು? ಕರ್ನಾಟಕದಲ್ಲಿ ಮರಣ ನೋಂದಾವಣೆ ಹೇಗೆ ಹಾಗೂ ನೋಂದಣಿ ಪ್ರಮಾಣ ಪತ್ರ ಪಡೆಯುವುದು ಹೇಗೆ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಕರ್ನಾಟಕ ಜನನ ಹಾಗೂ ಮರಣ ನೋಂದಣೆ ಕಾಯ್ದೆ 1969ರ ಪ್ರಕಾರ, ಕರ್ನಾಟಕದಲ್ಲಿ ಸಂಭವಿಸುವ ಎಲ್ಲಾ ಮರಣಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು. ಕರ್ನಾಟಕದಲ್ಲಿ ಈಗ ಮರಣಪಟ್ಟ ವ್ಯಕ್ತಿಗಳ ಡಿಜಿಟಲ್ ದತ್ತಾಂಶ ದೊರೆಯುತ್ತದೆ. ಇದಕ್ಕಾಗಿ ನಾವು ಡಿಜಿಟಲ್ ತಂತ್ರಜ್ಞಾನಕ್ಕೆ ವಂದನೆ ಹೇಳಲೇಬೇಕು. ಕರ್ನಾಟಕದಲ್ಲಿ ಈಗ ಶತಮಾನಗಳಷ್ಟು ಹಳೆಯದಾದ ಸಾವಿನ ದಾಖಲೆಗಳು ಡಿಜಿಟಲ್ ಮಾದರಿಯಲ್ಲಿ ಲಭ್ಯವಿದೆ.

ಆಸ್ತಿ ವಿವಾದಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು, ರಾಜ್ಯದಲ್ಲಿ ಮರಣಪತ್ರಗಳ ಕೋರಿಕೆ ಇಡಲಾಗುತ್ತದೆ. ಡಿಜಿಟಲ್ ನೋಂದಾವಣಿ ಆರಂಭವಾಗುವ ಮುನ್ನ ಕೂಡಾ, 2010ರ ಬಳಿಕ ತೀರಿಕೊಂಡ ವ್ಯಕ್ತಿಗಳ ದಾಖಲೆಗಳು ಈಗ ಆನ್‍ಲೈನ್‍ನಲ್ಲಿ ಲಭ್ಯವಿದೆ.

ಕರ್ನಾಟಕದಲ್ಲಿ ಮರಣಗಳ ನೋಂದಣಿ ಏಕೆ?

* ನೋಂದಣಿ ಮೂಲಕ, ಓರ್ವ ವ್ಯಕ್ತಿಯ ಸಾವಿನ ಸ್ಥಳದ ದಾಖಲೆ ಪಡೆಯಬಹುದು. ಇದನ್ನು ಸಾಕ್ಷ್ಯವಾಗಿ ಬಳಸಬಹುದು.

* ಒಂದು ನಿರ್ದಿಷ್ಟ ಸ್ಥಳದಲ್ಲಿ, ಸಂಭವಿಸುವ ಸಾವಿನ ಬಗ್ಗೆ ಕಾನೂನು ಬದ್ದ ದಾಖಲೆಯಾಗುತ್ತದೆ.

* ಸಾಮಾಜಿಕ-ಆರ್ಥಿಕ ಯೋಜನೆ ರೂಪಿಸಲು ಅಗತ್ಯವಾದ, ಜನಸಂಖ್ಯಾ ದಾಖಲೆಯಾಗಿ ಇದನ್ನು ಬಳಸಲಾಗುತ್ತದೆ. ಜೊತೆಗೆ ಜನಂಖ್ಯಾ ನಿಯಂತ್ರಣ ಯೋಜನೆ ಹಾಗೂ ಆರೋಗ್ಯ ಯೋಜನೆ ಜಾರಿಗೆ ನೆರವಾಗುತ್ತದೆ.

* ಆಸ್ತಿ ಹಕ್ಕು ಹಾಗೂ, ಪಿತ್ರಾರ್ಜಿತ ಆಸ್ತಿ ಮೇಲಣ ವಾರಸುದಾರಿಕೆ ನಿರ್ಧರಿಸಲು 

* ವಿಮಾ ಮೊತ್ತ ಪಡೆಯಲು

* ಕೌಟುಂಬಿಕ ಪಿಂಚಣಿ ಪಡೆಯಲು

ಮರಣ ನೋಂದಣಿ: ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು

* ಒಬ್ಬ ವ್ಯಕ್ತಿಯ ಮರಣದ 21ನೇ ದಿನದ ಒಳಗೆ, ಮರಣದ ಮಾಹಿತಿ ನೀಡಬೇಕು.

* ಅರ್ಜಿ ನಮೂನೆಯನ್ನು ಉಚಿತವಾಗಿ ಜನನ/ ಮರಣ ನೋಂದಣಿ ಕಚೇರಿಯಿಂದ ಪಡೆಯಬಹುದು.

* ಯಾವುದೇ ವ್ಯಕ್ತಿ ಸಂಬಂಧಪಟ್ಟವರ ಮರಣವನ್ನು ನಿರ್ಲಕ್ಷ್ಯದಿಂದ ವರದಿ ಮಾಡದಿದ್ದರೆ/ ನೋಂದಣಿ ಮಾಡದಿದ್ದರೆ ಅವರ ವಿರುದ್ಧ ದಂಡ/ ಶಿಕ್ಷೆ ವಿಧಿಸುವ ಅವಕಾಶ ಕಾನೂನಿನಲ್ಲಿದೆ.

ಸಂಬಂಧಪಟ್ಟ ಅಧಿಕಾರಿಗಳು, ತಮ್ಮ ವ್ಯಾಪ್ತಿಯಲ್ಲಿ ಸಂಭವಿಸುವ ಸಾವುಗಳು ನಿಗದಿತ ಅವಧಿಯಲ್ಲಿ ನೋಂದಾಯಿತಗೊಂಡು, ಮರಣ ಪತ್ರ ಸಕಾರದಲ್ಲಿ ದೊರೆಯುವಂತೆ ಮಾಡುವ ಜವಾಬ್ದಾರಿ ಹೊಂದಿದ್ದಾರೆ.

ಕರ್ನಾಟಕದಲ್ಲಿ ಮರಣ ನೋಂದಣಿ: ಯಾರು ಮಾಹಿತಿ ನೀಡಬೇಕು.

ಕರ್ನಾಟಕ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಪ್ರಕಾರ, ಈ ಕೆಳಗ್ಗೆ ಉಲ್ಲೇಖಿಸಿದ ವ್ಯಕ್ತಿಗಳು/ ಸಂಸ್ಥೆಗಳು ಮರಣವನ್ನು ಹಾಗೂ ಮರಣ ಸಂಭವಿಸಿದ ಸ್ಥಳದ ಮಾಹಿತಿ ನೀಡಬೇಕು

ಸಂಸ್ಥೆಗಳು: ಆಸ್ಪತ್ರೆಗಳು, ಆರೋಗ್ಯ ವ್ಯವಸ್ಥೆಗಳು, ನಸಿಂಗ್‍ಹೋಮ್ ಇತ್ಯಾದಿಗಳು, ವೈದ್ಯಕೀಯ ಅಧಿಕಾರಿಗಳು, ಅಥವಾ ವೈದ್ಯಕೀಯ ಅಧಿಕಾರಿಗಳಿಂದ ನಿರ್ದೇಶಿಸಲ್ಪಟ್ಟವರು, ಬಂಧಿಖಾನೆ ಅಧಿಕಾರಿಗಳು, ಜೈಲಿನ ಮುಖ್ಯ ಅಧಿಕಾರಿಗಳು, ಹೊಟೆಲ್, ಧರ್ಮಶಾಲೆ, ಚೌಟ್ಟ್ರಿ, ಹಾಸ್ಟೆಲ್‍ನ ಅಧಿಕಾರಿಗಳು ಇತ್ಯಾದಿ.

ಸಾರ್ವಜನಿಕ ಸ್ಥಳ: ಓರ್ವ ವ್ಯಕ್ತಿಯ ಮೃತದೇಹ ಸಾರ್ವಜನಿಕ ಸ್ಥಳದಲ್ಲಿ ಪತ್ತೆಯಾದರೆ (ಶವ ಅನಾಥವಾಗಿದ್ದರೆ), ಸ್ಥಳೀಯ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ.

ಸಾವು ಚಲಿಸುತ್ತಿರುವ ವಾಹನದಲ್ಲಿ ಸಂಭವಿಸಿದರೆ, ವಾಹನದ ಕಾನೂನು ಬದ್ಧ ಮಾಲೀಕ.

ತೋಟ: ಸ್ಥಳದ ಮುಖ್ಯಾಧಿಕಾರಿ.

ಮರಣ ನೋಂದಣೆಗೆ ಆಧಾರ್ ಕಡ್ಡಾಯ

ಕರ್ನಾಟಕದಲ್ಲಿ ಮರಣ ನೋಂದಾವಣೆಗೆ ಆಧಾರ್ ಕಡ್ಡಾಯ. ಸ್ಥಳೀಯ ಸಂಸ್ಥೆಗೆ ಮೃತರ ಮಾಹಿತಿ ನೀಡುವಾಗ ಯಾವುದೇ ಮಾಹಿತಿ ತಪ್ಪಾಗಬಾರದು ಎಂಬ ಕಾರಣಕ್ಕೆ ಅಂತ್ಯಕ್ರಿಯೆಯ ಸಂದರ್ಭದಲ್ಲೂ ಆಧಾರ್ ಮಾಹಿತಿ ನೀಡುವುದು ಕಡ್ಡಾಯ.

ವೈದ್ಯರು ಯಾವಾಗ ಸಾವನ್ನು ದೃಢೀಕರಿಸಬೇಕು?

ಯಾವುದಾದರೂ ವ್ಯಕ್ತಿಯ ಅನಾರಾಗ್ಯದ ಕಾರಣಕ್ಕಾಗಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾಗಲೆ ತೀರಿಕೊಂಡರೆ, ವೈದ್ಯರು, ಆ ವ್ಯಕ್ತಿಯ ಸಾವಿನ ಕಾರಣವನ್ನು ತಿಳಿಸಿ, ಮರಣ ನೋಂದಣೆ ಪತ್ರದಲ್ಲಿ  ಸಹಿ ಮಾಡಬೇಕು ಇದನ್ನು ಮರಣ ಪತ್ರಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗೆ ಸಾವಿನ ವರದಿ ಜೊತೆಗೆ ಕಳುಹಿಸಬೇಕು.

ಹಿಂಸಾತ್ಮಕ ಸಾವು ಹಾಗೂ ಇತರ ವೈದ್ಕಕೀಯ ಕಾನೂನು ಪ್ರಕರಣಗಳಲ್ಲಿ, ವೈದ್ಯಕೀಯ ಪರೀಕ್ಷಕರು ಈ ನಮೂನೆಯನ್ನು ದೃಡಪಡಿಸಬೇಕು.

ನೈಸರ್ಗಿಕ ವಿಪತ್ತಿನ ಸಂದರ್ಭಗಳಲ್ಲಿ ಕಂದಾಯ ಇಲಾಖೆ, ಮನೆ ಮನೆ ಹಂತದಲ್ಲಿ ಸಾವನ್ನು ನೋಂದಣಿ ಮಾಡಿ, ಮರಣ ಪತ್ರವನ್ನು ವಿತರಿಸುತ್ತದೆ.

ವಿದೇಶಗಳಲ್ಲಿ ಸಂಭವಿಸುವ ಸಾವು

ದೇಶದ ಹೊರಕ್ಕೆ ಸಂಭವಿಸುವ ಸ್ಥಳೀಯರ  ಸಾವನ್ನು ಕರ್ನಾಟಕದಲ್ಲಿ ನೋಂದಣಿ ಮಾಡಲು ಸಾಧ್ಯವಿಲ್ಲ. ಅದನ್ನು ವಿದೇಶಗಳಲ್ಲಿರುವ ಭಾರತೀಯ ಕಾನ್ಸುಲೇಟ್ ಕಚೇರಿಗಳಲ್ಲಿ ನಾಗರಿಕತ್ವ ಕಾಯ್ದೆ 1955ರ ಅನುಸಾರ ಮಾಡಬೇಕಿದೆ. ಕಾನ್ಸುಲೇಟ್ ಕಚೇರಿ ಮರಣ ನೋಂದಣಿ ಪತ್ರ ನೀಡುತ್ತದೆ.

ಕರ್ನಾಟಕದಲ್ಲಿ ಮರಣ ನೋಂದಣಿ ಪತ್ರಕ್ಕೆ ಅರ್ಜಿ ಸಲ್ಲಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಥವಾ ಇತರ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಆನ್‍ಲೈನ್ ಮೂಲಕ ಮರಣ ನೋಂದಣಿ ಪತ್ರಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಮರಣವನ್ನು ಸ್ಥಳೀಯ ಸಂಸ್ಥೆಗಳಲ್ಲಿ ಸಾವು ಸಂಭವಿಸಿದ 21 ದಿನಗಳ ಒಳಗೆ ನೋಂದಾಯಿಸಬೇಕು.

  • ಮರಣ ನೋಂದಣೆ ಪತ್ರಕ್ಕೆ ಇಲ್ಲಿಗೆ ಭೇಟಿ ನೀಡಬೇಕು
  • ಮರಣ ಪತ್ರಗಳ ಆನ್‍ಲೈನ್ ದೃಡೀಕರಣಕ್ಕೆ ಕೂಡಾ ಬಿಬಿಎಂಪಿ ವೆಬ್‍ಸೈಟ್ ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳ ವೆಬ್‍ಸೈಟ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ.
  • ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮರಣ ನೋಂದಣಿ ಪತ್ರದ ಡೌನ್‍ಲೋಡ್ ಮಾಡಲು ಇಲ್ಲಿಗೆ ಭೇಟಿ ನೀಡಿ
  • ಗ್ರಾಮೀಣ ಪ್ರದೇಶಗಳಲ್ಲಿ ಈ ವೆಬ್‍ಸೈಟ್ ಎಲ್ಲಾ ಮರಣಗಳ ಕುರಿತ ಮಾಹಿತಿ ನೀಡುತ್ತದೆ.
  • ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ನೋಂದಣಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತಿತರ ಸರಕಾರಿ ವೈದ್ಯಕೀಯ ಸಂಸ್ಥೆಗಳ ಅಧಿಕಾರಿಗಳು ಈ ನೋಂದಣಿ ಪತ್ರವನ್ನು ಭರ್ತಿ ಮಾಡಿ, ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡುತ್ತಾರೆ.
  • ನಾಡ ಕಚೇರಿಗಳಲ್ಲಿ ಮರಣ ನೋಂದಣಿ ಪತ್ರದ ಹೆಚ್ಚುವರಿ ಪ್ರತಿಗಳು ಹಾಗೂ ತಿದ್ದುಪಡಿಗಳನ್ನು ಮಾಡಲು ಅವಕಾಶವಿದೆ.
Jolad Rotti:
Related Post