ಹಂಪಿ, ಈ ಶಬ್ದ ಕೇಳಿದೊಡನೆ ನಮ್ಮೆಲ್ಲ ಕಣ್ಣರಳುತ್ತದೆ- ಕಿವಿ ಚುರುಕಾಗುತ್ತದೆ. ಇಂತಹ ಇನ್ನೊಂದು ಐತಿಹಾಸಿಕ ತಾಣ ಇನ್ನೊಂದಿಲ್ಲ. ಇದು ಧರ್ಮ -ಕಲೆ- ಸಂಸ್ಕೃತಿಗಳ ಸಮ್ಮಿಲನಗೊಂಡ ನೆಲ. ಈ ಹಂಪಿ ನಮ್ಮ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿದೆ. ತುಂಗಾ ಭದ್ರ ನದಿಯ ತಟದಲ್ಲಿ ಈ ಐತಿಹಾಸಿಕ ನಗರಿ ಅರಳಿ ನಿಂತಿದೆ. ನಮ್ಮ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ಬಳ್ಳಾರಿಯಿಂದ ೭೪ ಕಿಮೀ ದೂರದಲ್ಲಿದೆ. ನಮ್ಮ ದೇಶದ ಬಹು ಮುಖ್ಯ ರಾಜಮನೆತನಗಳಲ್ಲಿ ಒಂದಾದ, ವಿಜಯನಗರ ಅರಸರ ಕಾಲ ಘಟ್ಟದಲ್ಲಿ (೧೩೪೩-೧೫೬೫) ಹಂಪಿ […]
ಹಂಪಿ
ಈ ಶಬ್ದ ಭಾರತೀಯರೆಲ್ಲರ ಕಿವಿಗೆ ಬಿದ್ದರೆ, ಅವರ ಮನಸ್ಸು ಅರಳುತ್ತದೆ. ಕರ್ನಾಟಕದ ಪ್ರಸಿದ್ಧ ದೇಗುಲ ನಗರವಾದ ಈ ಸುಂದರ ಪ್ರವಾಸಿ ತಾಣ ಒಂದು ಕಾಲದಲ್ಲಿ ಐತಿಹಾಸಿಕ ವಿಜಯನಗರ ರಾಜವಂಶದ ರಾಜಧಾನಿಯಾಗಿತ್ತು. ಹಂಪಿಗೆ ಹಾಳು ಹಂಪಿ ಎಂದೇ ಈಗ ಕರೆಯಲಾಗುತ್ತದೆ. ಏಕೆಂದರೆ ಈಗ ಇಲ್ಲಿರುವುದು ಬರಿ ಹಿಂದಿನ ಕಾಲದ ಕೆತ್ತನೆಗಳ ಭಗ್ನಾವಶೇಷಗಳು ಮಾತ್ರ. ಆದರೆ ಈ ಭಗ್ನಾವಶೇಷಗಳು ಕೂಡ ವಿಶ್ವದ ಮೂಲೆ ಮೂಲೆಗಳಿಂದ ಪ್ರವಾಸಿಗರನ್ನು, ಇತಿಹಾಸ ಪ್ರಿಯರನ್ನು ಆಕರ್ಷಿಸುತ್ತಿದೆ.
ಕ್ರಿ.ಶ 1500 ರ ಹಿಂದಿನ ವಿಜಯನಗರದ ದೇವಾಲಯಗಳು ಮತ್ತು ಇತರ ಶಿಲಾರಚನೆಗಳ ಅವಶೇಷಗಳ ಭವ್ಯತೆಯು ಹಂಪಿಯ ಪ್ರಮುಖ ಆಕರ್ಷಣೆಯಾಗಿದೆ. ಹಲವು ತಜ್ಞರ ಪ್ರಕಾರ, ಅಂದಿನ ಕಾಲದಲ್ಲಿ ಹಂಪಿ ವಿಶ್ವದ ಎರಡನೇ ಅತಿದೊಡ್ಡ ನಗರವಾಗಿತ್ತು.
ಹಂಪಿಯ ಸುತ್ತಲೂ ಅತಿ ದೊಡ್ಡ ಬಂಡೆಗಳಿವೆ. ಈ ಬಂಡೆಗಳನ್ನು ಏರಲು ಸಾಧ್ಯವಿದೆ. ಅವುಗಳ ಮೇಲಿಂದ ಹಂಪಿಯ ಗತ ಇತಿಹಾಸದ ಭಗ್ನಾವಶೇಷಗಳನ್ನು ನೋಡುವುದು ಒಂದು ಮರೆಯಲಾರದ ಅನುಭವ ನೀಡುತ್ತದೆ. ಇಲ್ಲಿನ ಹಾಳಾದ ಶಿಲ್ಪಕಲೆಗಳ ಹಿಂದೆ ಒಂದೊಂದು ಕಥೆ ಇದೆ. ತುಂಗಭದ್ರಾ ನದಿಯ ದಂಡೆಯಲ್ಲಿ ಅರಳಿರುವ ಈ ಹಂಪಿಯಲ್ಲಿ ವಿರೂಪಾಕ್ಷ ದೇವಸ್ಥಾನ, ವಿಜಯ ವಿಠಲ ದೇವಸ್ಥಾನ, ನಂದಿ ಪ್ರತಿಮೆ ಹೀಗೆ ಅಸಂಖ್ಯಾತ ಪ್ರವಾಸಿ ಆಕರ್ಷಣೆಗಳಿವೆ.
ಪ್ರತಿವರ್ಷ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯುವ ಮೂರು ದಿನಗಳ ಹಂಪಿ ಉತ್ಸವದ ಸಂದರ್ಭದಲ್ಲಿ ಇಲ್ಲಿನ ಇತಿಹಾಸವನ್ನು ಮರು ಸೃಷ್ಟಿಸಲಾಗುತ್ತದೆ. ಈ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಬಹುದು.
ಹಂಪಿಯ ನೆಲದ ಕಣಕಣಗಳೂ ಒಂದೊಂದು ಕಥೆ ಹೇಳುತ್ತವೆ. ಇಂತಹ ಹಂಪಿಯ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Read more about Hampi
ಬಡವಿಲಿಂಗ ಶಿವ ದೇವಸ್ಥಾನದ ಆಕರ್ಷಣೆ
ಹಂಪಿಯ ಬಹು ಪುರಾತನ ಹಾಗು ಪ್ರಸಿದ್ಧ ದೇವಾಲಯಗಳಲ್ಲೊಂದು ಬಡವಿಲಿಂಗ ದೇವಸ್ಥಾ. ಇದು ಹಂಪಿಯಲ್ಲಿ ಶಿವನಿಗೆ ಅರ್ಪಿತವಾದ ಒಂದು ಅದ್ಭುತ ಕುಸುರಿ ಕಲೆಯ ದೇವಾಲಯವಾಗಿದೆ. ಈ ದೇವಸ್ಥಾನದಲ್ಲಿ ಹಿಂದೂಗಳ ಆರಾಧ್ಯ ದೈವ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಬೃಹದಾಕಾರದ ಶಿವಲಿಂಗ ಇಲ್ಲಿಯ ಪ್ರಧಾನ ಆಕರ್ಷಣೆ. ಬಡವಿಲಿಂಗ ದೇವಸ್ಥಾನವು ಹಂಪಿಯ ಲಕ್ಷ್ಮಿ ನರಸಿಂಹ ದೇವಾಲಯದ ಬಳಿ ಇದೆ. ವರ್ಷದ ಎಲ್ಲ ದಿನಗಳಲ್ಲೂ ಪ್ರವಾಸಿಗರು ಮತ್ತು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿ ಪುನೀತರಾಗುತ್ತಾರೆ. ಕೆಲವು ಮಹತ್ವದ ಮಾಹಿತಿಗಳು ಭೇಟಿಯ […]
ಹಂಪಿಯ ಬಗ್ಗೆ ನಿಮಗೆ ತಿಳಿದಿರದ ೧೦ ಸಂಗತಿಗಳು!
ಹಂಪಿಯನ್ನು ಕರ್ನಾಟಕದಲ್ಲಿ ಕೆಲವೊಮ್ಮೆ ಹಾಳು ಹಂಪಿ ಎಂದು ಕೂಡ ಕರೆಯುತ್ತಾರೆ. ಕಾರಣ, ವಿಜಯ ನಗರ ಅರಸರ ರಾಜಧಾನಿಯಾಗಿದ್ದ ಈ ನಗರ ಈಗ ನಾಶಗೊಳಿಸಲ್ಪಟ್ಟ ಅವಶೇಷಗಳ ಒಂದು ಪಟ್ಟಣವಾಗಿ ಉಳಿದಿದೆ. ಆದರೆ ಇಲ್ಲಿನ ಕರಕುಶಲತೆ, ಶಿಲ್ಪಿ ಕಲಾ ಸೌಂದರ್ಯ ಎಷ್ಟೊಂದು ಪ್ರಸಿದ್ಧವಾಗಿದೆಯೆಂದರೆ, ಇದಕ್ಕೆ ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಮಾನ್ಯತೆ ನೀಡಿದೆ. ಹಂಪಿಯು ಭಾರತದ ಅತ್ಯಂತ ಪ್ರಸಿದ್ಧ ಪುರಾತತ್ವ ಕೇಂದ್ರಗಳಲ್ಲಿ ಒಂದಾಗಿದ್ದು ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು, ಇತಿಹಾಸ ಪ್ರಿಯರು ಭೇಟಿ ನೀಡುತ್ತಾರೆ. ಹಂಪಿ ಪಟ್ಟಣ ಅತ್ಯಂತ ದೂರದ […]
ಕಲ್ಲಲ್ಲಿ ಅರಳಿದ ಸೌಂದರ್ಯದ ಖನಿ ಈ ಕಮಲ ಮಹಲ್
ನಿಮ್ಮ ಹಂಪಿ ಪ್ರವಾಸ ಲೋಟಸ್ ಮಹಲ್ (ಕಮಲ ಮಹಲ್) ಗೆ ಭೇಟಿ ನೀಡದೆ ಪೂರ್ಣವಾಗುವುದಿಲ್ಲ. ಹಂಪಿಯ ಪ್ರಮುಖ ವಾಸ್ತುಶಿಲ್ಪ ವಿನ್ಯಾಸ -ಅದ್ಭುತಗಳಲ್ಲಿ ಇದು ಒಂದು. ಇದರ ವಿನ್ಯಾಸ ಕಮಲದ ರೀತಿಯಲ್ಲಿದೆ. ಹೀಗಾಗಿ ಇದು ಲೋಟಸ್ ಮಹಲ್ ಎಂದೇ ಪ್ರಸಿದ್ಧ. ಈ ಅದ್ಭುತ ಅರಮನೆ ಹಂಪಿಯ ಜೆನಾನಾ ಭಾಗದಲ್ಲಿದೆ. ಇದು ವಿಜಯನಗರ ಅರಸರ ರಾಣಿಯರ ಹಾಗು ಇತರ ಮಹಿಳಾ ಸದಸ್ಯರ ಬಳಕೆಗೆ ನಿರ್ಮಾಣಗೊಂಡ ಅನನ್ಯ ಅರಮನೆ. ಲೋಟಸ್ ಮಹಲ್ ಗೆ ಇನ್ನೂ ಎರಡು ಹೆಸರುಗಳಿವೆ. ಈ ಅರಮನೆಯನ್ನು ಕಮಲ್ […]
ಹಂಪಿ: ವಿರೂಪಾಕ್ಷ ದೇಗುಲವೆಂಬ ವಿಸ್ಮಯ
ಹಂಪಿಯ ಹೆಮ್ಮೆಗಳಲ್ಲೊಂದು ಇಲ್ಲಿನ ಶ್ರೀ ವಿರೂಪಾಕ್ಷ ದೇವಾಲಯ. ಇದು ಮೂಲತಃ ಶಿವನಿಗೆ ಅರ್ಪಿತವಾಗಿದೆ. ಬೆಂಗಳೂರಿನಿಂದ ಸುಮಾರು ೩೫೦ ಕಿಲೋಮೀಟರ್ ದೂರದಲ್ಲಿರುವ ಹಂಪಿ ದಕ್ಷಿಣ ಭಾರತದ ಅತಿ ವಿಶಿಷ್ಟ ಹಾಗು ಜನಪ್ರಿಯ ದೇವಾಲಯಗಳ ನಗರ. ಇದು ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದೆಂಬ ಖ್ಯಾತಿ ಗಳಿಸಿದೆ. ಶ್ರೀ ವಿರೂಪಾಕ್ಷ ದೇವಾಲಯವು ಮೂಲತಃ ಒಂದು ಶಿವ ಪರಂಪರೆಯ ದೇಗುಲವಾಗಿದ್ದು, ಹಂಪಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆ ಎಂದರೆ ತಪ್ಪಾಗಲಾರದು. ಇದನ್ನು ಕಟ್ಟಿಸಿದ್ದು ರಾಜ ದೇವ ರಾಯ ೨ […]
ಕಲ್ಲಿನಲ್ಲಿ ಮೂಡಿದೆ ಹಜಾರ ರಾಮ ದೇಗುಲದ ಕಥೆ
ಹಂಪಿಯ ಇನ್ನೊಂದು ಪ್ರಮುಖ ದೇಗುಲವೆಂದರೆ ಅದು ಹಜಾರ ರಾಮ ದೇವಸ್ಥಾನ. ಸಣ್ಣ ದೇಗುಲವಾದರೂ ಇದು ಅತ್ಯಂತ ನಯನ ಮನೋಹರವಾದ ಸುಂದರ ದೇಗುಲ. ಇದು ಹಂಪಿಯ ಮುಕುಟ ಮಣಿಯಂತಹ ರಾಜ ಆಡಳಿತ ಅರಮನೆ ಪ್ರದೇಶದ ಮಧ್ಯದಲ್ಲಿದೆ. ಈ ದೇವಾಲಯವು ಹಿಂದೂ ದೇವತೆಯಾದ ಶ್ರೀ ರಾಮನಿಗೆ ಸಮರ್ಪಿತಗೊಂಡ ದೇಗುಲ. ಇಲ್ಲಿ ಶ್ರೀ ರಾಮನೇ ಆರಾಧ್ಯ ದೈವ. ವಿಜಯ ನಗರ ಅರಸರ ಆಳ್ವಿಕೆ ಕಾಲದಲ್ಲಿ ಇದು ರಾಜ ಮನೆತನದ ಖಾಸಗಿ ದೇವಾಲಯವಾಗಿತ್ತು. ಈ ದೇಗುಲ ವಿಜಯನಗರ ರಾಜಮನೆತನದ ಪಟ್ಟದ […]
ಹಂಪಿಯ ಮುಕುಟಮಣಿ: ಸೌಂದರ್ಯದ ಖನಿ ಈ ಕಲ್ಲಿನ ಕಥ
ಕೇಳಿಸದೆ ಕಲ್ಲು ಕಲ್ಲಿನಲಿ….ಈ ಗೀತೆಯನ್ನು ಕೇಳಿದಾಗಲೆಲ್ಲಾ ಕನ್ನಡಿಗರ ಮೈ ರೋಮಾಂಚನಗೊಳ್ಳುತ್ತದೆ. ಹಂಪಿಯ ಕಲ್ಲಿನ ಕಲಾಕೆತ್ತನೆಗಳು ಕಲಾ ಕುಸುರಿಗಳು ನಮ್ಮ ಕಣ್ಮುಂದೆ ಸುಳಿಯುತ್ತವೆ. ನಮ್ಮಲ್ಲಿನ ಪ್ರವಾಸಿ ತಾಣಗಳ ವೈಶಿಷ್ಟ್ಯತೆ ಎಂದರೆ, ಪ್ರತಿಯೊಂದು ಪ್ರವಾಸಿ ತಾಣವೂ, ಒಂದೊಂದು ವಿಶಿಷ್ಟ ಆಕರ್ಷಣೆಯನ್ನು ಹೊಂದಿರುತ್ತದೆ. ಅದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುತ್ತದೆ. ಅದು ಆ ಸ್ಥಳದ ಪ್ರಮುಖ ಆಕರ್ಷಣೆಯಾಗಿರುತ್ತದೆ. ಈ ಮಾತಿಗೆ ಹಂಪಿ ಕೂಡಾ ಹೊರತಲ್ಲ. ಒಂದು ಪುಟ್ಟ ಹಳ್ಳಿಯಾದ ಹಂಪಿ ಇಂದು ವಿಶ್ವದೆಲ್ಲೆಡೆ ಪ್ರಸಿದ್ಧ. ಈ ಪ್ರಖ್ಯಾತಿಗೆ ಪ್ರಮುಖ ಕಾರಣ, ಇಲ್ಲಿನ ಕಲ್ಲಿನ […]
ಶಿಲ್ಪಕಲೆಯ ಮಹಾ ಅನುಭೂತಿ: ಹಂಪಿ ವಿಜಯ ವಿಠಲ ದೇವಸ್ಥಾನ
ಹಂಪಿ ಎಂದರೆ ನಮ್ಮ ಕಣ್ಮುಂದೆ ಸುಳಿಯುವುದು ಪುರಾತನ ದೇಗುಲಗಳ ಮಹಾಗುಚ್ಛ. ಪ್ರಾಚೀನಭಾರತೀಯ ಶಿಲ್ಪಕಲೆಯ ಸೊಬಗು-ಸೊಗಸು ಇಲ್ಲಿ ಮೇಳೈಸಿದೆ. ಈ ಎಲ್ಲಾ ದೇಗುಲಗಳಿಗೆಕಲಶವಿಟ್ಟಂತೆ ಇರುವುದು ಸದಾ ಜುಳುಜುಳುಯೆಂದು ಹರಿಯುವ ತುಂಗಭದ್ರ ನದಿ ತಟದದಲ್ಲಿರುವವಿಟಲಾ ಅಥವಾ ವಿಠ್ಠಲ ದೇವಾಲಯ. ಇದೊಂದು ಅತ್ಯಂತ ಪುರಾತನ ದೇಗುಲವಾಗಿದ್ದು, ಇದುಅನನ್ಯ, ಅಸಾಧಾರಣ, ವಿಶಿಷ್ಟ ಬಗೆಯ ವಾಸ್ತುಶಿಲ್ಪ ಮತ್ತು ಸರಿಸಾಟಿಯಿಲ್ಲದಕರಕುಶಲತೆಯ ಶಿಲ್ಪಕಲಾ ವೈಭವಕ್ಕೆ ಜಗತ್ಪ್ರಸಿದ್ಧವಾಗಿದೆ. ಇದು ಹಂಪಿಯ ಅತಿ ದೊಡ್ಡಮತ್ತು ಅತ್ಯಂತ ಜನಪ್ರಿಯ ದೇವಾಲಯ. ಇದು ಹಂಪಿಯ ಈಶಾನ್ಯ ಭಾಗದಲ್ಲಿದೆ. ಈ ದೇಗುಲದ ಶಿಲ್ಪಕಲೆ, ಸೌಂದರ್ಯವನ್ನು […]