ಈ ಭಜನಾ ಪದ್ಯ ಕೇಳಿ ಬಾರದ ಮನೆಗಳು ಕರ್ನಾಟಕದಲ್ಲಿಲ್ಲ. ಈ ಭಜನೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಸ್ತುತಿ. ಕರ್ನಾಟಕದ ನಾಡದೇವತೆ ಎಂದೇ ಪ್ರಸಿದ್ದವಾಗಿರುವ ಶ್ರೀ ಚಾಮುಂಡೇಶ್ವರಿ ದೇಗುಲದ ಬಗ್ಗೆಗಿನ ವಿವರ ಇಲ್ಲಿದೆ. ಕರ್ನಾಟಕದ ಪ್ರಸಿದ್ಧ ದೇವಾಲಯಗಳ ಸಾಲಿನಲ್ಲಿ ಚಾಮುಂಡಿ ಬೆಟ್ಟ ಎಂದು ಕರೆಯಲ್ಪಡುವ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಮುಂಚೂಣಿಯಲ್ಲಿ ನಿಲ್ಲುತ್ತದೆ. ಮೈಸೂರು ಹಾಗು ಸುತ್ತಮುತ್ತಲಿನ ಭಕ್ತರೊಂದಿಗೆ ಇತರೆ ರಾಜ್ಯಗಳ ಭಕ್ತಸಾಗರವೂ ಇಲ್ಲಿಗೆ ಹರಿದುಬರುತ್ತದೆ. ಕರ್ನಾಟಕದಲ್ಲಿ ಕೊಲ್ಲೂರು, ಕಟೀಲು, ಹೊರನಾಡು, ಶೃಂಗೇರಿ, ಸವದತ್ತಿ, ಬನಶಂಕರಿ ಹೀಗೆ ವಿವಿಧೆಡೆಯಲ್ಲಿ ಅತಿ […]
ಹಂಪಿ: ಕಲೆ- ಧರ್ಮ -ಸಂಸ್ಕೃತಿಗಳ ಸಮ್ಮಿಲನ
ಹಂಪಿ, ಈ ಶಬ್ದ ಕೇಳಿದೊಡನೆ ನಮ್ಮೆಲ್ಲ ಕಣ್ಣರಳುತ್ತದೆ- ಕಿವಿ ಚುರುಕಾಗುತ್ತದೆ. ಇಂತಹ ಇನ್ನೊಂದು ಐತಿಹಾಸಿಕ ತಾಣ ಇನ್ನೊಂದಿಲ್ಲ. ಇದು ಧರ್ಮ -ಕಲೆ- ಸಂಸ್ಕೃತಿಗಳ ಸಮ್ಮಿಲನಗೊಂಡ ನೆಲ. ಈ ಹಂಪಿ ನಮ್ಮ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿದೆ. ತುಂಗಾ ಭದ್ರ ನದಿಯ ತಟದಲ್ಲಿ ಈ ಐತಿಹಾಸಿಕ ನಗರಿ ಅರಳಿ ನಿಂತಿದೆ. ನಮ್ಮ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾದ ಬಳ್ಳಾರಿಯಿಂದ ೭೪ ಕಿಮೀ ದೂರದಲ್ಲಿದೆ. ನಮ್ಮ ದೇಶದ ಬಹು ಮುಖ್ಯ ರಾಜಮನೆತನಗಳಲ್ಲಿ ಒಂದಾದ, ವಿಜಯನಗರ ಅರಸರ ಕಾಲ ಘಟ್ಟದಲ್ಲಿ (೧೩೪೩-೧೫೬೫) ಹಂಪಿ […]
ಕಲ್ಲಿನಲ್ಲಿ ಮೂಡಿದೆ ಹಜಾರ ರಾಮ ದೇಗುಲದ ಕಥೆ
ಹಂಪಿಯ ಇನ್ನೊಂದು ಪ್ರಮುಖ ದೇಗುಲವೆಂದರೆ ಅದು ಹಜಾರ ರಾಮ ದೇವಸ್ಥಾನ. ಸಣ್ಣ ದೇಗುಲವಾದರೂ ಇದು ಅತ್ಯಂತ ನಯನ ಮನೋಹರವಾದ ಸುಂದರ ದೇಗುಲ. ಇದು ಹಂಪಿಯ ಮುಕುಟ ಮಣಿಯಂತಹ ರಾಜ ಆಡಳಿತ ಅರಮನೆ ಪ್ರದೇಶದ ಮಧ್ಯದಲ್ಲಿದೆ. ಈ ದೇವಾಲಯವು ಹಿಂದೂ ದೇವತೆಯಾದ ಶ್ರೀ ರಾಮನಿಗೆ ಸಮರ್ಪಿತಗೊಂಡ ದೇಗುಲ. ಇಲ್ಲಿ ಶ್ರೀ ರಾಮನೇ ಆರಾಧ್ಯ ದೈವ. ವಿಜಯ ನಗರ ಅರಸರ ಆಳ್ವಿಕೆ ಕಾಲದಲ್ಲಿ ಇದು ರಾಜ ಮನೆತನದ ಖಾಸಗಿ ದೇವಾಲಯವಾಗಿತ್ತು. ಈ ದೇಗುಲ ವಿಜಯನಗರ ರಾಜಮನೆತನದ ಪಟ್ಟದ […]