ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಒಂದು ಶಿವರಾತ್ರಿ. ಪ್ರತಿ ವರ್ಷ ಶಿಶಿರ ಋತುವಿನ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ಫೆಬ್ರವರಿ -ಮಾರ್ಚ್ ತಿಂಗಳಿನಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕ ಶಿವನ ದೇಗುಲಗಳಿಗೆ ಪ್ರಸಿದ್ಧ. ಈ ಹಬ್ಬವನ್ನು ಶಿವನ ದೇಗುಲಗಳಲ್ಲಿ ಜಾತಿ- ಮತ- ಪಂಥ ಬೇಧವಿಲ್ಲದೆ ಆಚರಿಸಲಾಗುತ್ತದೆ. ಈ ಹಬ್ಬದ ಪ್ರಮುಖ ಆಚರಣೆಯೆಂದರೆ ಶಿವನಾಮ ಸ್ಮರಣೆ (ಪಂಚಾಕ್ಷರಿ ಮಂತ್ರ) ಹಾಗು ರಾತ್ರಿ ಜಾಗರಣೆ. ಮರುದಿನ ಪವಿತ್ರ ಸ್ನಾನದೊಂದಿಗೆ ಈ ಹಬ್ಬದ ಆಚರಣೆ ಮುಕ್ತಾಯಗೊಳ್ಳುತ್ತದೆ. […]
Home » Mahashivaratri