ಈ ಭಜನಾ ಪದ್ಯ ಕೇಳಿ ಬಾರದ ಮನೆಗಳು ಕರ್ನಾಟಕದಲ್ಲಿಲ್ಲ. ಈ ಭಜನೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಸ್ತುತಿ. ಕರ್ನಾಟಕದ ನಾಡದೇವತೆ ಎಂದೇ ಪ್ರಸಿದ್ದವಾಗಿರುವ ಶ್ರೀ ಚಾಮುಂಡೇಶ್ವರಿ ದೇಗುಲದ ಬಗ್ಗೆಗಿನ ವಿವರ ಇಲ್ಲಿದೆ. ಕರ್ನಾಟಕದ ಪ್ರಸಿದ್ಧ ದೇವಾಲಯಗಳ ಸಾಲಿನಲ್ಲಿ ಚಾಮುಂಡಿ ಬೆಟ್ಟ ಎಂದು ಕರೆಯಲ್ಪಡುವ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಮುಂಚೂಣಿಯಲ್ಲಿ ನಿಲ್ಲುತ್ತದೆ. ಮೈಸೂರು ಹಾಗು ಸುತ್ತಮುತ್ತಲಿನ ಭಕ್ತರೊಂದಿಗೆ ಇತರೆ ರಾಜ್ಯಗಳ ಭಕ್ತಸಾಗರವೂ ಇಲ್ಲಿಗೆ ಹರಿದುಬರುತ್ತದೆ. ಕರ್ನಾಟಕದಲ್ಲಿ ಕೊಲ್ಲೂರು, ಕಟೀಲು, ಹೊರನಾಡು, ಶೃಂಗೇರಿ, ಸವದತ್ತಿ, ಬನಶಂಕರಿ ಹೀಗೆ ವಿವಿಧೆಡೆಯಲ್ಲಿ ಅತಿ […]
Temples
ಸಕಲ ಭಾಗ್ಯವಿದಾತೆ ಗೊರವನಹಳ್ಳಿ ಮಹಾಲಕ್ಷ್ಮಿ
ನಮ್ಮ ದೇಶದಲ್ಲಿ ನಮ್ಮ ರಾಜ್ಯ ಪ್ರವಾಸಿಗರ ಆಕರ್ಷಣೆಯಲ್ಲಿ ನಾಲ್ಕನೇ ಅತ್ಯಂತ ಜನಪ್ರಿಯ ತಾಣ ಎಂದೇ ಪ್ರಸಿದ್ದಿಯಾಗಿದೆ. ಇದಕ್ಕೆ ಬಹು ಮುಖ್ಯ ಕಾರಣವೆಂದರೆ, ನಮ್ಮ ರಾಜ್ಯದ ಪ್ರವಾಸಿ ತಾಣಗಳು ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿವೆ. ಅದರಲ್ಲಿಯೂ ಇಲ್ಲಿನ ಆಧ್ಯಾತ್ಹ್ಮಿಕ ಕ್ಷೇತ್ರಗಳಿಗೆ ಎಲ್ಲೆಡೆಯಿಂದ ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ಒಂದು ಪ್ರಸಿದ್ಧ ದೇಗುಲವೆಂದರೆ, ತುಮಕೂರು ಜಿಲ್ಲೆಯ ಕೊರಟಗೆರೆಯ ಗೊರವನಹಳ್ಳಿಯಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನ. ಈ ದೇಗುಲದ ಹೆಸರೇ ಸೂಚಿಸುವಂತೆ, ಈ ದೇವಾಲಯವು ಭಗವಾನ್ ಶ್ರೀ ಮಹಾವಿಷ್ಣುವಿನ ಪತ್ನಿ ಮತ್ತು […]
ಕೊಲ್ಲೂರಿನ ಐತಿಹಾಸಿಕ ಮೂಕಾಂಬಿಕಾ ದೇಗುಲ
ನಮ್ಮ ದೇಶದ ಪ್ರಮುಖ ದುರ್ಗಾ ದೇವಸ್ಥಾನಗಳಲ್ಲಿ ಒಂದು ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ. ಈ ದೇಗುಲ ಶ್ರೀ ಕೃಷ್ಣನ ನಾಡು, ದೇಶದ ಇನ್ನೊಂದು ಪ್ರಸಿದ್ಧ ದೇಗುಲ ನಗರಿ ಉಡುಪಿಯಿಂದ ಸರಿಸುಮಾರು 80 ಕಿಲೋ ಮೀಟರ್ ಮತ್ತು ಕಡಲ ತಡಿ ಮಂಗಳೂರಿನಿಂದ 135 ಕಿಮೀ ದೂರದಲ್ಲಿದೆ. ಈ ದೇವಾಲಯವು ಕೊಡಚಾದ್ರಿ ಶಿಖರದ ತಪ್ಪಲಲ್ಲಿದೆ. ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನವು ದೇಶದ ಎಲ್ಲೆಡೆಗಳಿಂದ ಭಕ್ತಾಧಿಗಳನ್ನು ಆಕರ್ಷಿಸುತ್ತಿದೆ. s ಕೊಲ್ಲೂರು ಮೂಕಾಂಬಿಕಾ ದೇಗುಲ: ಫೋಟೋ ಕೃಪೆ: ಪ್ರೇಮ್ ಕುಡ್ವ […]
ಕೋಲಾರದ ಕೀರ್ತಿ ಕೋಟಿಲಿಂಗೇಶ್ವರ ದೇವಾಲಯ
ನಮ್ಮ ರಾಜ್ಯದ ಪ್ರಖ್ಯಾತ ಶಿವ ದೇಗುಲಗಳಲ್ಲೊಂದು ಕೋಲಾರ ಜಿಲ್ಲೆಯ ಕೋಟಿಲಿಂಗೇಶ್ವರ ದೇಗುಲ. ಇಲ್ಲಿಗೆ ದಕ್ಷಿಣ ಭಾರತದಾದ್ಯಂತದಿಂದ ಭಕ್ತಾದಿಗಳು ಭೇಟಿ ನೀಡುತ್ತಾರೆ. ಇದು ಜಿಲ್ಲೆಯ ಕಮ್ಮಸಂದ್ರ ಎಂಬ ಸಣ್ಣ ಹಳ್ಳಿಯಲ್ಲಿದೆ. ಈ ದೇಗುಲದ ವಿಶೇಷತೆ ಎಂದರೆ, ಇಲ್ಲಿ, ವಿಶ್ವದ ಅತಿದೊಡ್ಡ ಮತ್ತು ಎತ್ತರದ ಶಿವಲಿಂಗವಿದೆ. ಈ ದೇವಾಲಯಕ್ಕೆ ಪ್ರತಿ ವರ್ಷ ೨ ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿ ಕೃತಾರ್ಥರಾಗುತ್ತಿದ್ದರೆ. ಇದು ಈ ದೇಗುಲದ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಈ ದೇಗುಲ ಮಹಾ ಶಿವರಾತ್ರಿ ಸಂಭ್ರಮಾಚರಣೆಗೆ ಬಲು […]
ಹಂಪಿ: ವಿರೂಪಾಕ್ಷ ದೇಗುಲವೆಂಬ ವಿಸ್ಮಯ
ಹಂಪಿಯ ಹೆಮ್ಮೆಗಳಲ್ಲೊಂದು ಇಲ್ಲಿನ ಶ್ರೀ ವಿರೂಪಾಕ್ಷ ದೇವಾಲಯ. ಇದು ಮೂಲತಃ ಶಿವನಿಗೆ ಅರ್ಪಿತವಾಗಿದೆ. ಬೆಂಗಳೂರಿನಿಂದ ಸುಮಾರು ೩೫೦ ಕಿಲೋಮೀಟರ್ ದೂರದಲ್ಲಿರುವ ಹಂಪಿ ದಕ್ಷಿಣ ಭಾರತದ ಅತಿ ವಿಶಿಷ್ಟ ಹಾಗು ಜನಪ್ರಿಯ ದೇವಾಲಯಗಳ ನಗರ. ಇದು ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದೆಂಬ ಖ್ಯಾತಿ ಗಳಿಸಿದೆ. ಶ್ರೀ ವಿರೂಪಾಕ್ಷ ದೇವಾಲಯವು ಮೂಲತಃ ಒಂದು ಶಿವ ಪರಂಪರೆಯ ದೇಗುಲವಾಗಿದ್ದು, ಹಂಪಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆ ಎಂದರೆ ತಪ್ಪಾಗಲಾರದು. ಇದನ್ನು ಕಟ್ಟಿಸಿದ್ದು ರಾಜ ದೇವ ರಾಯ ೨ […]
ಕಲ್ಲಿನಲ್ಲಿ ಮೂಡಿದೆ ಹಜಾರ ರಾಮ ದೇಗುಲದ ಕಥೆ
ಹಂಪಿಯ ಇನ್ನೊಂದು ಪ್ರಮುಖ ದೇಗುಲವೆಂದರೆ ಅದು ಹಜಾರ ರಾಮ ದೇವಸ್ಥಾನ. ಸಣ್ಣ ದೇಗುಲವಾದರೂ ಇದು ಅತ್ಯಂತ ನಯನ ಮನೋಹರವಾದ ಸುಂದರ ದೇಗುಲ. ಇದು ಹಂಪಿಯ ಮುಕುಟ ಮಣಿಯಂತಹ ರಾಜ ಆಡಳಿತ ಅರಮನೆ ಪ್ರದೇಶದ ಮಧ್ಯದಲ್ಲಿದೆ. ಈ ದೇವಾಲಯವು ಹಿಂದೂ ದೇವತೆಯಾದ ಶ್ರೀ ರಾಮನಿಗೆ ಸಮರ್ಪಿತಗೊಂಡ ದೇಗುಲ. ಇಲ್ಲಿ ಶ್ರೀ ರಾಮನೇ ಆರಾಧ್ಯ ದೈವ. ವಿಜಯ ನಗರ ಅರಸರ ಆಳ್ವಿಕೆ ಕಾಲದಲ್ಲಿ ಇದು ರಾಜ ಮನೆತನದ ಖಾಸಗಿ ದೇವಾಲಯವಾಗಿತ್ತು. ಈ ದೇಗುಲ ವಿಜಯನಗರ ರಾಜಮನೆತನದ ಪಟ್ಟದ […]
ಹಂಪಿಯ ಮುಕುಟಮಣಿ: ಸೌಂದರ್ಯದ ಖನಿ ಈ ಕಲ್ಲಿನ ಕಥ
ಕೇಳಿಸದೆ ಕಲ್ಲು ಕಲ್ಲಿನಲಿ….ಈ ಗೀತೆಯನ್ನು ಕೇಳಿದಾಗಲೆಲ್ಲಾ ಕನ್ನಡಿಗರ ಮೈ ರೋಮಾಂಚನಗೊಳ್ಳುತ್ತದೆ. ಹಂಪಿಯ ಕಲ್ಲಿನ ಕಲಾಕೆತ್ತನೆಗಳು ಕಲಾ ಕುಸುರಿಗಳು ನಮ್ಮ ಕಣ್ಮುಂದೆ ಸುಳಿಯುತ್ತವೆ. ನಮ್ಮಲ್ಲಿನ ಪ್ರವಾಸಿ ತಾಣಗಳ ವೈಶಿಷ್ಟ್ಯತೆ ಎಂದರೆ, ಪ್ರತಿಯೊಂದು ಪ್ರವಾಸಿ ತಾಣವೂ, ಒಂದೊಂದು ವಿಶಿಷ್ಟ ಆಕರ್ಷಣೆಯನ್ನು ಹೊಂದಿರುತ್ತದೆ. ಅದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುತ್ತದೆ. ಅದು ಆ ಸ್ಥಳದ ಪ್ರಮುಖ ಆಕರ್ಷಣೆಯಾಗಿರುತ್ತದೆ. ಈ ಮಾತಿಗೆ ಹಂಪಿ ಕೂಡಾ ಹೊರತಲ್ಲ. ಒಂದು ಪುಟ್ಟ ಹಳ್ಳಿಯಾದ ಹಂಪಿ ಇಂದು ವಿಶ್ವದೆಲ್ಲೆಡೆ ಪ್ರಸಿದ್ಧ. ಈ ಪ್ರಖ್ಯಾತಿಗೆ ಪ್ರಮುಖ ಕಾರಣ, ಇಲ್ಲಿನ ಕಲ್ಲಿನ […]
ಶಿಲ್ಪಕಲೆಯ ಮಹಾ ಅನುಭೂತಿ: ಹಂಪಿ ವಿಜಯ ವಿಠಲ ದೇವಸ್ಥಾನ
ಹಂಪಿ ಎಂದರೆ ನಮ್ಮ ಕಣ್ಮುಂದೆ ಸುಳಿಯುವುದು ಪುರಾತನ ದೇಗುಲಗಳ ಮಹಾಗುಚ್ಛ. ಪ್ರಾಚೀನಭಾರತೀಯ ಶಿಲ್ಪಕಲೆಯ ಸೊಬಗು-ಸೊಗಸು ಇಲ್ಲಿ ಮೇಳೈಸಿದೆ. ಈ ಎಲ್ಲಾ ದೇಗುಲಗಳಿಗೆಕಲಶವಿಟ್ಟಂತೆ ಇರುವುದು ಸದಾ ಜುಳುಜುಳುಯೆಂದು ಹರಿಯುವ ತುಂಗಭದ್ರ ನದಿ ತಟದದಲ್ಲಿರುವವಿಟಲಾ ಅಥವಾ ವಿಠ್ಠಲ ದೇವಾಲಯ. ಇದೊಂದು ಅತ್ಯಂತ ಪುರಾತನ ದೇಗುಲವಾಗಿದ್ದು, ಇದುಅನನ್ಯ, ಅಸಾಧಾರಣ, ವಿಶಿಷ್ಟ ಬಗೆಯ ವಾಸ್ತುಶಿಲ್ಪ ಮತ್ತು ಸರಿಸಾಟಿಯಿಲ್ಲದಕರಕುಶಲತೆಯ ಶಿಲ್ಪಕಲಾ ವೈಭವಕ್ಕೆ ಜಗತ್ಪ್ರಸಿದ್ಧವಾಗಿದೆ. ಇದು ಹಂಪಿಯ ಅತಿ ದೊಡ್ಡಮತ್ತು ಅತ್ಯಂತ ಜನಪ್ರಿಯ ದೇವಾಲಯ. ಇದು ಹಂಪಿಯ ಈಶಾನ್ಯ ಭಾಗದಲ್ಲಿದೆ. ಈ ದೇಗುಲದ ಶಿಲ್ಪಕಲೆ, ಸೌಂದರ್ಯವನ್ನು […]