ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ, ಜನಪ್ರಿಯ ಯೋಜನೆಯೆಂದರೆ, ಅದು ಪಿಎಂ ಕಿಸಾನ್. ಕರ್ನಾಟಕದಲ್ಲಿ, ಈ ಯೋಜನೆಯನ್ನು ನಾನಾ ಇಲಾಖೆಗಳ ಸಹಯೋಗದಲ್ಲಿ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ, ಜಾರಿಗೊಳಿಸಲಾಗಿದೆ. ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿಯ ರೈತರನ್ನು ಈ ಯೋಜನೆಯಡಿ ತರಲಾಗಿದೆ. ಈ ಯೋಜನೆಯ ಧ್ಯೇಯವೆಂದರೆ, ರೈತರಿಗೆ ಹಣಕಾಸಿನ ನೆರವು ನೀಡುವುದು. ಈ ಯೋಜನೆಯನ್ನು 2019ರ ಸಾರ್ವತ್ರಿಕ ಚುನಾವಣೆಯ ಕೆಲವೇ ಸಮಯದ ಮೊದಲು ಪ್ರಧಾನ ಮಂತ್ರಿಗಳು ಘೋಷಿಸಿದರು. ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ, ಸಣ್ಣ ಹಾಗೂ […]
ಕರ್ನಾಟಕ ಸರ್ಕಾರ
ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಕರ್ನಾಟಕ ಸರ್ಕಾರ, ರಾಜ್ಯದ 30 ಜಿಲ್ಲೆಗಳ ಆಡಳಿತವನ್ನು ನಡೆಸುತ್ತಿದೆ. ಮುಖ್ಯಮಂತ್ರಿ ಮತ್ತು ಅವರ / ಅವಳ ಸಚಿವ ಸಂಪುಟವನ್ನು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ, ರಾಜ್ಯಪಾಲರು ನೇಮಿಸುತ್ತಾರೆ. ಕರ್ನಾಟಕದ ಶಾಸಕಾಂಗ ದ್ವಿ ಸದನ ಮಾದರಿ ಹೊಂದಿದೆ . ಅವುಗಳೆಂದರೆ ವಿಧಾನಸಭೆ ಮತ್ತು ವಿಧಾನ ಪರಿಷತ್ತು.
ಕರ್ನಾಟಕ ಶಾಸಕಾಂಗವು ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ವಿಧಾನ ಸೌಧದಿಂದ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಈಗ ಮೂರು ಪ್ರಮುಖ ರಾಜಕೀಯ ಪಕ್ಷಗಳಿವೆ. ಅವುಗಳೆಂದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಭಾರತೀಯ ಜನತಾ ಪಕ್ಷ ಮತ್ತು ಜಾತ್ಯತೀತ ಜನತಾದಳ.
ಪ್ರಸ್ತುತ, ಭಾರತೀಯ ಜನತಾ ಪಕ್ಷ ಕರ್ನಾಟಕದ ಆಡಳಿತ ಪಕ್ಷವಾಗಿದ್ದು, ಬಿ ಎಸ್ ಯಡಿಯೂರಪ್ಪ ಅವರು ರಾಜ್ಯದ ಚುನಾಯಿತ ಮುಖ್ಯಮಂತ್ರಿಯಾಗಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಅನ್ನ ಭಾಗ್ಯ, ಕ್ಷೀರ ಭಾಗ್ಯ, ಋಣಮುಕ್ತ ಭಾಗ್ಯ ಮತ್ತು ವಿದ್ಯಾ ಸಿರಿ ಮುಂತಾದ ಅನೇಕ ಜನ ಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿದೆ. ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಯೋಜನೆಯನ್ನು ಪ್ರಕಟಿಸಿದ್ದು, ಇದರ ಅಡಿಯಲ್ಲಿ 2017-18ನೇ ಸಾಲಿನಲ್ಲಿ ಸರ್ಕಾರಿ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ದಾಖಲಾಗುವ ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್ ಪಡೆಯುತ್ತಾರೆ.
ಕರ್ನಾಟಕ ಸರಕಾರದ ಬಗ್ಗೆ ಹೆಚ್ಚಿನ ಮಾಹಿತಿ - ಓದು ಇಲ್ಲಿದೆ
ಕರ್ನಾಟಕದಲ್ಲಿ ಚುನಾವಣಾ ಗುರುತಿನ ಚೀಟಿಗೆ ಅರ್ಜಿ ಸಲ್ಲಿಕೆ ಹೇಗೆ?
ಚುನಾವಣಾ ಆಯೋಗ ನೀಡುವ, ಚುನಾವಣಾ ಗುರುತಿನ ಚೀಟಿ (ಮತದಾರರ ಗುರುತಿನ ಚೀಟಿ), ನಮ್ಮ ನಾಗರಿಕತ್ವ ಹಾಗೂ ರಾಷ್ಟ್ರೀಯತೆ ನಿರ್ಧರಿಸಲು ನೆರವು ನೀಡುವ ಅತ್ಯಂತ ಪ್ರಮುಖ ದಾಖಲೆ. ಈ ಗುರುತಿನ ಚೀಟಿ, ಪ್ರಾಥಮಿಕವಾಗಿ, ನಾವು ಚುನಾವಣೆಯಲ್ಲಿ ಮತ ಚಲಾಯಿಸಲು, ದಾಖಲೆಯಾಗಿ ಗುರುತಿಸಲ್ಪಟ್ಟಿದೆ. ಇದರ ಜೊತೆಗೆ, ಸರಕಾರದ ಹಾಗೂ ಇತರ ಸಂಸ್ಥೆಗಳ ನಾನಾ ಸೌಲಭ್ಯ, ಪಡೆಯಲು ಇದನ್ನು ಗುರುತಿನ ದಾಖಲೆಯಾಗಿ ಬಳಸಬಹುದು. ಇಲ್ಲಿ, ಈ ಗುರುತಿನ ಚೀಟಿಗೆ ಕರ್ನಾಟಕದಲ್ಲಿ ಅರ್ಜಿ ಸಲ್ಲಿಸಿ, ಪಡೆಯುವುದು ಹೇಗೆ ಎಂಬುದರ ಬಗ್ಗೆ ಉಪಯುಕ್ತ ಮಾಹಿತಿ […]
ಕರ್ನಾಟಕದಲ್ಲಿ ಮರಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಕರ್ನಾಟಕದಲ್ಲಿ ಮರಣ ನೋಂದಾಣಿ ಪತ್ರಕ್ಕೆ ಅರ್ಜಿ ಸಲ್ಲಿಕೆ ಹೇಗೆ? ಕರ್ನಾಟಕದಲ್ಲಿ ಮರಣವನ್ನು ಏಕೆ ನೋಂದಾಯಿಸಿಕೊಳ್ಳಬೇಕು? ಕರ್ನಾಟಕದಲ್ಲಿ ಮರಣ ನೋಂದಾವಣೆ ಹೇಗೆ ಹಾಗೂ ನೋಂದಣಿ ಪ್ರಮಾಣ ಪತ್ರ ಪಡೆಯುವುದು ಹೇಗೆ? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಕರ್ನಾಟಕ ಜನನ ಹಾಗೂ ಮರಣ ನೋಂದಣೆ ಕಾಯ್ದೆ 1969ರ ಪ್ರಕಾರ, ಕರ್ನಾಟಕದಲ್ಲಿ ಸಂಭವಿಸುವ ಎಲ್ಲಾ ಮರಣಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು. ಕರ್ನಾಟಕದಲ್ಲಿ ಈಗ ಮರಣಪಟ್ಟ ವ್ಯಕ್ತಿಗಳ ಡಿಜಿಟಲ್ ದತ್ತಾಂಶ ದೊರೆಯುತ್ತದೆ. ಇದಕ್ಕಾಗಿ ನಾವು ಡಿಜಿಟಲ್ ತಂತ್ರಜ್ಞಾನಕ್ಕೆ ವಂದನೆ ಹೇಳಲೇಬೇಕು. ಕರ್ನಾಟಕದಲ್ಲಿ ಈಗ ಶತಮಾನಗಳಷ್ಟು […]
ಕರ್ನಾಟಕ ಕೋವಿಡ್ ಪ್ರಕರಣಗಳ ಜಿಲ್ಲಾವಾರು ವಿವರ
ಕರ್ನಾಟಕದಲ್ಲಿ ದಿನೇ ದಿನೇ ಕೋವಿಡ್ 19 ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಶುಕ್ರವಾರ ಕೇವಲ 2,960 ಮಂದಿಯಲ್ಲಿ ಕೋವಿಡ್ 19 ಪತ್ತೆಯಾಗಿದೆ. 2,701 ಕೋವಿಡ್ 19 ರೋಗಿಗಳು ಗುಣಮುಖರಾಗಿದ್ದರೆ. 19 ಮಂದಿ ಕೋವಿಡ್ ಗೆ ಸಾವನ್ನಪ್ಪಿದ್ದಾರೆ. ಇದರೊಂದಿಗೆ, ರಾಜ್ಯದಲ್ಲಿ ಕೋವಿಡ್ 19 ಸಕ್ರಿಯ ಪ್ರಕರಣಗಳ ಸಂಖ್ಯೆ 33,319ಕ್ಕೆ ಕುಸಿದಿದೆ. ಈವರೆಗೆ, 7,97,204 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ.11,347 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಈವರೆಗೆ ಕರ್ನಾಕದಲ್ಲಿ 8,41,889 ಮಂದಿ ಕೋವಿಡ್ ತುತ್ತಾಗಿದ್ದಾರೆ. Also see, In English: […]